ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ (MI vs GT) ನಡುವಣ ಪಂದ್ಯ ರೋಚಕತೆಯಿಂದ ಕೂಡಿತ್ತು. ಸೂರ್ಯಕುಮಾರ್ ಯಾದವ್ (Suryakumar Yadav) ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದರು. ಕೇವಲ 49 ಎಸೆತಗಳಲ್ಲಿ 11 ಫೋರ್, 6 ಸಿಕ್ಸರ್ ಸಿಡಿಸಿ ಅಜೇಯ 103 ರನ್ ಚಚ್ಚಿದರು. ಇತ್ತ ಗುಜರಾತ್ ಪರ ರಶೀದ್ ಖಾನ್ (Rashid Khan) 32 ಎಸೆತಗಳಲ್ಲಿ 3 ಫೋರ್ ಹಾಗೂ 10 ಸಿಕ್ಸರ್ ಬಾರಿಸಿ ಅಜೇಯ 79 ರನ್ ಸಿಡಿಸಿ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರು. ಆದರೆ, ಮುಂಬೈ 27 ರನ್ಗಳ ಭರ್ಜರಿ ಜಯ ಸಾಧಿಸಿ 14 ಅಂಕ ಸಂಪಾದಿಸಿ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನಕ್ಕೇರಿದೆ.
ಮುಂಬೈ ಗೆಲುವಿನಲ್ಲಿ ಸೂರ್ಯಕುಮಾರ್ ಪ್ರಮುಖ ಪಾತ್ರವಹಿಸಿದರು. ಕ್ರೀಸ್ ಕಚ್ಚಿ ನಿಂತ ಸೂರ್ಯ ಜಿಟಿ ಬೌಲರ್ಗಳ ಬೆಂಡೆತ್ತಿದರು. ಮನಮೋಹಕ ಹೊಡೆತಗಳ ಮೂಲಕ ಗಮನ ಸೆಳೆದ ಇವರು ಫೋರ್-ಸಿಕ್ಸರ್ಗಳ ಮಳೆ ಸುರಿಸಿ ಐಪಿಎಲ್ ಇತಿಹಾಸದಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. 20ನೇ ಓವರ್ ಆರಂಭಕ್ಕೂ ಮುನ್ನ ಸೂರ್ಯ 44 ಎಸೆತಗಳಲ್ಲಿ 87 ರನ್ ಗಳಿಸಿದ್ದರು. ಕೊನೆಯ ಎಸೆತಕ್ಕೂ ಮುನ್ನ 97 ರನ್ಗೆ ಬಂದರು. ಹೀಗಾಗಿ 20ನೇ ಓವರ್ನ 6ನೇ ಎಸೆತದಲ್ಲಿ ಸೂರ್ಯ ಶತಕಕ್ಕೆ 3 ರನ್ಗಳು ಬೇಕಾಗಿದ್ದವು. ಅಲ್ಜರಿ ಜೋಸೆಫ್ ಅವರ ಅಂತಿಮ ಎಸೆತದಲ್ಲಿ ಊಹಿಸಲಾಗದ ರೀತಿ ಸಿಕ್ಸ್ ಸಿಡಿಸಿ ಶತಕ ಪೂರೈಸಿದರು.
IPL 2023: ಸಿಡಿಲಬ್ಬರದ ಸಿಡಿಲಮರಿ ಸೂರ್ಯನ ಬ್ಯಾಟ್ನಿಂದ ತೂಫಾನ್ ಶತಕ
ಸೂರ್ಯಕುಮಾರ್ ಯಾದವ್ ಶತಕ ಬಾರಿಸುತ್ತಿದ್ದಂತೆ ಇಡೀ ವಾಂಖೆಡೆ ಸ್ಟೇಡಿಯಂ ಸೂರ್ಯ, ಸೂರ್ಯ ಹೆಸರುನ್ನು ಕೂಗಿತು. ಅತ್ತ ಪೆವಿಲಿಯನ್ನಲ್ಲಿ ಕೂತಿದ್ದ ಸಚಿನ್ ತೆಂಡೂಲ್ಕರ್ ಎದ್ದು ನಿಂತು ಚಪ್ಪಾಳೆ ತಟ್ಟಿದರೆ ನಾಯಕ ರೋಹಿತ್ ಶರ್ಮಾ ಕೈಮುಗಿದು ಸೂರ್ಯನ ಆಟಕ್ಕೆ ಮನಸೋತರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
— CricDekho (@Hanji_CricDekho) May 12, 2023
ಭರ್ಜರಿ ಶತಕ ಸಿಡಿಸುವ ಮೂಲಕ ಸೂರ್ಯಕುಮಾರ್ ಯಾದವ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕೇವಲ 49 ಎಸೆತಗಳಲ್ಲಿ ಸೆಂಚುರಿ ಸಿಡಿಸುವ ಮೂಲಕ ಮುಂಬೈ ಇಂಡಿಯನ್ಸ್ ಪರ ಅತೀ ವೇಗವಾಗಿ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಹಿಟ್ಮ್ಯಾನ್ 52 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಐಪಿಎಲ್ನಲ್ಲಿ ಅತ್ಯಧಿಕ ಸ್ಕೋರ್ಗಳಿಸಿದ ಬ್ಯಾಟರ್ ಎಂಬ ದಾಖಲೆ ಕೂಡ ಸೂರ್ಯಕುಮಾರ್ ಪಾಲಾಗಿದೆ. ಇದಕ್ಕೂ ಮುನ್ನ ಈ ರೆಕಾರ್ಡ್ 92 ರನ್ ಬಾರಿಸಿದ ಸಿಎಸ್ಕೆ ತಂಡದ ರುತುರಾಜ್ ಗಾಯಕ್ವಾಡ್ ಹೆಸರಿನಲ್ಲಿತ್ತು.
Weather forecast said the SKY was clear; didn’t account for it raining sixes ?
What a BRILLIANT knock from @surya_14kumar ?#MIvGT #IPLonJioCinema #TATAIPL #IPL2023 pic.twitter.com/1hkndMnugw
— JioCinema (@JioCinema) May 12, 2023
ಇಷ್ಟೇ ಅಲ್ಲದೆ ಮುಂಬೈ ಇಂಡಿಯನ್ಸ್ ಪರ ಗರಿಷ್ಠ ಸ್ಕೋರ್ಗಳಿಸಿದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಸೂರ್ಯಕುಮಾರ್ ಪಾತ್ರರಾಗಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಸೆಂಚುರಿ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಕೂಡ ಸೂರ್ಯಕುಮಾರ್ ಪಾಲಾಗಿದೆ. ಮುಂಬೈ ಇಂಡಿಯನ್ಸ್ ಪರ 50 ಎಸೆತಗಳ ಒಳಗೆ ಶತಕ ಸಿಡಿಸಿದ ಮೊದಲ ಭಾರತೀಯ ಹಾಗೂ 2ನೇ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನೂ ಸೂರ್ಯಕುಮಾರ್ ಯಾದವ್ ನಿರ್ಮಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ