ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್

|

Updated on: Nov 16, 2024 | 12:53 PM

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 283 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 18.2 ಓವರ್​ಗಳಲ್ಲಿ 148 ರನ್​ಗಳಿಗೆ ಆಲೌಟ್ ಆಗಿದೆ.

ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 4ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸ್ಪೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸ್ಯಾಮ್ಸನ್ 56 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 109 ರನ್​ ಚಚ್ಚಿದ್ದರು.

ಸಂಜು ಸ್ಯಾಮ್ಸನ್​ ಬಾರಿಸಿದ ಈ ಒಂಭತ್ತು ಸಿಕ್ಸ್​ಗಳಲ್ಲಿ ಒಂದು ಸಿಕ್ಸರ್ ಮಹಿಳೆಯೊಬ್ಬರ ಕಣ್ಣೀರಿಗೆ ಕಾರಣವಾಯಿತು. ಟೀಮ್ ಇನಿಂಗ್ಸ್​ನ 10ನೇ ಓವರ್​ ಅನ್ನು ಟ್ರಿಸ್ಟನ್ ಸ್ಟಬ್ಸ್ ಎಸೆದಿದ್ದರು. ಈ ಓವರ್​ನಲ್ಲಿ ಸ್ಯಾಮ್ಸನ್ ಎರಡು ಸಿಕ್ಸ್ ಸಿಡಿಸಿದ್ದರು. ಅದರಲ್ಲಿ ಒಂದು ಸಿಕ್ಸ್​ ಕ್ರೀಡಾಂಗಣದ ರೇಲಿಂಗ್​ಗೆ ತಗುಲಿ ಪುಟಿಯಿತು. ಪರಿಣಾಮ ಚೆಂಡು ನೇರವಾಗಿ ಹೋಗಿ ಮಹಿಳೆಯೊಬ್ಬರ ಕೆನ್ನೆಗೆ ಬಡಿದಿದೆ.

ಅತ್ತ ಚೆಂಡು ಮಹಿಳೆಯ ಮುಖಕ್ಕೆ ತಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಸಂಜು ಸ್ಯಾಮ್ಸನ್ ಮೈದಾನದಿಂದಲೇ ಕೈ ಎತ್ತಿ ಕ್ಷಮೆ ಕೇಳಿದರು. ಇದೀಗ ಮಹಿಳೆಯೊಬ್ಬರು ಕಣ್ಣೀರಿಗೆ ಕಾರಣವಾದ ಸಿಕ್ಸರ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 283 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 18.2 ಓವರ್​ಗಳಲ್ಲಿ 148 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 135 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿದೆ.