ಅಮೆರಿಕಾಗೂ ವಿಸ್ತರಣೆಯಾದ ಬಾದಶಾಹ ಶಾರುಖ್ ಖಾನ್ ಕ್ರಿಕೆಟ್ ಸಾಮ್ರಾಜ್ಯ

|

Updated on: Dec 01, 2020 | 10:49 PM

ಕ್ರಿಕೆಟನ್ನು ವಿಸ್ತರಿಸುವ ಉದ್ದೇಶವಿದೆಯೆಂದು ಹೇಳುತ್ತಿರುವ ಬಾಲಿವುಡ್​ ನಟ ಶಾರುಖ್ ಖಾನ್ ಅಮೆರಿಕಾದಲ್ಲೂ ಒಂದು ಪ್ರಾಂಚೈಸಿಯನ್ನು ಖರೀದಿಸಿದ್ದಾರೆ. ಐಪಿಎಲ್ ಮಾದರಿಯ ಕ್ರಿಕೆಟ್ ಟೂರ್ನಮೆಂಟ್ ಅಮೆರಿಕಾದಲ್ಲಿ 2022 ರಿಂದ ಶುರುವಾಗಲಿದ್ದು ಮೊದಲ ಆವೃತ್ತಿಯಲ್ಲಿ ಆರು ತಂಡಗಳು ಭಾಗವಹಿಸಲಿವೆ

ಅಮೆರಿಕಾಗೂ ವಿಸ್ತರಣೆಯಾದ ಬಾದಶಾಹ ಶಾರುಖ್ ಖಾನ್ ಕ್ರಿಕೆಟ್ ಸಾಮ್ರಾಜ್ಯ
Follow us on

ಬಾಲಿವುಡ್ ಬಾದಶಾಹ ಶಾರುಖ್ ಖಾನ್ ತನ್ನ ಸಾಮ್ರಾಜ್ಯ ವಿಸ್ತರಿಸುವುದನ್ನು ಮುಂದುವರಿಸಿದ್ದಾರೆ. ಒಬ್ಬ ನಟನಾಗಿ ಅವರು ಈಗಾಗಲೆ ಬಾಲಿವುಡ್​ನಿಂದ ಹಾಲಿವುಡ್​ಗೆ ಲಗ್ಗೆಯಿಟ್ಟಿದ್ದಾರೆ; ಆದರೆ ಅಮೆರಿಕಾದಲ್ಲಿ ಈ ಬಾರಿ ಅವರು ಕಾಲಿಡುತ್ತಿರುವುದು ನಟನಾಗಿ ಅಲ್ಲ, ಬದಲಿಗೆ ಅಲ್ಲಿ ಕೊಲ್ಕತಾ ನೈಟ್ ರೈಡರ್ಸ್ ರೀತಿಯ ಮತ್ತೊಂದು ಫ್ರಾಂಚೈಸಿಯ ಮಾಲೀಕನಾಗಿ.

ಇಂಡಿಯನ್ ಪ್ರಿಮೀಯರ್ ಲೀಗ್ ಮಾದರಿಯಲ್ಲಿ ಇಷ್ಟರಲ್ಲೇ ಲಾಂಚ್ ಆಗಲಿರುವ ಮೇಜರ್ ಲೀಗ್ ಟಿ20 ಕ್ರಿಕೆಟ್ ಟೂರ್ನಮೆಂಟ್ ಅಮೆರಿಕದಲ್ಲಿ ನಡೆಯಲಿದ್ದು ಅದರಲ್ಲಿ ಭಾಗವಹಿಸುವ 6 ಫ್ರಾಂಚೈಸಿಗಳ ಪೈಕಿ ಒಂದನ್ನು ಖಾನ್ ಖರೀದಿಸಿದ್ದಾರೆ ಮತ್ತು ಅದಕ್ಕೆ ‘ಲಾಸ್ ಏಂಜೆಲಿಸ್ ನೈಟ್ ರೈಡರ್ಸ್’ ಎಂದು ಹೆಸರಿಟ್ಟಿದ್ದಾರೆ. ಮೇಜರ್  ಲೀಗ್​  ಕ್ರಿಕೆಟ್ ಮೊಟ್ಟಮೊದಲ ಆವೃತ್ತಿಯು 2022ರ ಐಪಿಎಲ್ ಮುಗಿದ ಕೂಡಲೇ ನಡೆಯಲಿದೆ. ಅಮೆರಿಕಾದಲ್ಲೂ ಆಗ ಬೇಸಿಗೆಯ ಸಮಯವಿರುತ್ತದೆ. ಈ ಟೂರ್ನಮೆಂಟ್​ನಲ್ಲಿ ಭಾಗವಹಿಸಲಿರುವ ಇತರ 5 ಫ್ರಾಂಚೈಸಿಗಳು ನೆಲೆಗೊಂಡಿರುವ ನಗರಗಳೆಂದರೆ ನ್ಯೂ ಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೊ, ಡಲ್ಲಾಸ್, ವಾಷಿಂಗ್ಟನ್ ಡಿಸಿ ಮತ್ತು ಚಿಕ್ಯಾಗೊ.

ಮೂಲಗಳ ಪ್ರಕಾರ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ನ (ಐಸಿಸಿ) ಸದಸ್ಯತ್ವ ಹೊಂದಿರುವ ಕ್ರಿಕೆಟ್ ಯುಎಸ್​ಎನಿಂದ ಮೇಜರ್  ಲೀಗ್ ಕ್ರಿಕೆಟ್ ಆಯೋಜಿಸುವ ಹಕ್ಕುಗಳನ್ನು ಪಡೆದಿರುವ ‘ಅಮೆರಿಕನ್ ಎಂಟರ್​ಪ್ರೈಸಸ್’ ಹೆಸರಿನ ಕಂಪನಿಯಲ್ಲಿ ಖಾನ್ ಒಡೆತನದಲ್ಲಿರುವ ಸಂಸ್ಥೆಯೊಂದು ಸಹಭಾಗಿತ್ವ ಹೊಂದಿದೆ. ಈ ಸಂಸ್ಥೆಯೊಂದಿಗೆ ಬಾಲಿವುಡ್ ನಟ ಒಂದು ಕರಾರನ್ನು ಸಹ ಮಾಡಿಕೊಂಡಿದ್ದಾರೆ. ಆ ಕರಾರಿನ ಪ್ರಕಾರ ಮೇಜರ್ ಕ್ರಿಕೆಟ್ ಲೀಗ್ ಆರಂಭಗೊಂಡ ನಂತರ ಐದು ವರ್ಷಗಳ ಅವಧಿಯವರೆಗೆ ಭಾರತೀಯ ಮೂಲದ ಯಾವುದೇ ಕಂಪನಿ, ಉದ್ಯಮಿ ಅಥವಾ ವ್ಯಕ್ತಿಗೆ ಲೀಗ್​ನಲ್ಲಿ ಭಾಗವಹಿಸುವ ಟೀಮನ್ನು ಖರೀದಿಸುವ ಅವಕಾಶ ನೀಡಬಾರದು. ಸಲ್ಮಾನ್ ಖಾನ್ ಸಹ ಒಂದು ಫ್ರಾಂಚೈಸಿ ಖರೀದಿಸಬಹುದೆಂಬ ಭಯ ಅವರನ್ನು ಕಾಡಿರಬೇಕು.

ಶಾರುಖ್ ಖಾನ್

ಕ್ರಿಕೆಟ್​ನಲ್ಲಿ ಅಪಾರ ಹಣ ಹೂಡುತ್ತಿರುವ ಖಾನ್​ಗೆ ತನ್ನ ಒಡೆತನದ ಮೂರನೆ ಫ್ರಾಂಚೈಸಿ ಲಾಸ್ ಏಂಜೆಲಿಸ್ ನೈಟ್ ರೈಡರ್ಸ್ ಆಗಿದೆ. ಕೊಲ್ಕತಾ ನೈಟ್ ರೈಡರ್ಸ್ ಅಲ್ಲದೆ ಕೆರಿಬೀಯನ್ ಪ್ರಿಮೀಯರ್​ ಲೀಗ್​ನಲ್ಲಿ ಆಡುವ ಟ್ರಿನ್​ಬ್ಯಾಗೊ ನೈಟ್ ರೈಡರ್ಸ್ ಟೀಮನ್ನು ಸಹ ಅವರು ಖರೀದಿಸಿದ್ದು, ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ಗೆ ಆಡುವ ಕೈರನ್ ಪೊಲ್ಲಾರ್ಡ್ ಅದರ ನಾಯಕನಾಗಿದ್ದಾರೆ.

ಕೆಕೆಅರ್ ಲೊಗೊ