ಮತ್ತೆರಡು ದಾಖಲೆಗಳ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ

ಒಂದು ದಿನದ ಪಂದ್ಯಗಳಲ್ಲಿ ಅನಭಿಷಿಕ್ತ ಸಾಮ್ರಾಟನಾಗಿರುವ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನಾಳಿನ ಪಂದ್ಯದಲ್ಲಿ 23 ರನ್ ಗಳಿಸಿದಲ್ಲಿ ಅತ್ಯಂತ ಕಡಿಮೆ ಇನ್ನಿಂಗ್ಸ್​ಗಳಲ್ಲಿ 12,000 ರನ್​ಗಳನ್ನು ಪೂರೈಸಿದ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲಿದ್ದಾರೆ. ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದೆ.

ಮತ್ತೆರಡು ದಾಖಲೆಗಳ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Dec 01, 2020 | 5:38 PM

ಭಾರತ ಒಂದು ದಿನದ ಪಂದ್ಯಗಳ ಸರಣಿಯನ್ನು ಸೋತಾಗಿದೆ, ನಾಳೆ ಕ್ಯಾನ್​ಬೆರಾದಲ್ಲಿ ನಡೆಯಲಿರುವ ಮೂರನೆ ಹಾಗೂ ಕೊನೆಯ ಪಂದ್ಯ ಕೇವಲ ಔಪಚಾರಿಕತೆಗಾಗಿ ನಡೆಯಲಿದೆಯಾದರೂ ಭಾರತ ಸಮಾಧಾನಕರ ಗೆಲುವಿಗಾಗಿ ಶ್ರಮಿಸಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇಂಥ ಸಂದರ್ಭಗಳು ಜರುಗುತ್ತಿರುತ್ತವೆ, ಸರಣಿಯ ಫಲಿತಾಂಶ ಎಲ್ಲ ಪಂದ್ಯಗಳು ಮುಗಿಯುವ ಮೊದಲೇ ಸಿಕ್ಕರೂ ಉಳಿದ ಪಂದ್ಯಗಳನ್ನು ಆಡಲೇಬೇಕಾಗುತ್ತದೆ. ಅದು ನಿಯಮ, ಯಾರೂ ಬದಲಾಯಿಸುವಂತಿಲ್ಲ.

ಭಾರತಕ್ಕೆ ಕೊನೆಯ ನಾಳಿನ ಪಂದ್ಯ ನಿಸ್ಸಂದೇಹವಾಗಿ ಪ್ರತಿಷ್ಠೆಯದ್ದಾಗಿದೆ. ಕ್ಲೀನ್ ಸ್ವೀಪ್​ನಿಂದ ಬಚಾವಾಗಬೇಕಾದರೆ ಅದನ್ನು ಗೆಲ್ಲಲೇಬೇಕು. ಭಾರತಕ್ಕಿರುವ ಮತ್ತೊಂದು ಲಾಭದಾಯಕ ಅಂಶವೆಂದರೆ ನಾಳೆ ನಡೆಯುವ ಅಂತಿಮ ಪಂದ್ಯ ಮತ್ತು ಟಿ20 ಪಂದ್ಯಗಳ ಸರಣಿಗೆ ಅತ್ಯುತ್ತಮ ಫಾರ್ಮ್​ನಲ್ಲಿದ್ದ ಅತಿಥೇಯರ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಲಭ್ಯರಿಲ್ಲ. ಮೊದಲಿನ ಎರಡು ಪಂದ್ಯಗಳಲ್ಲಿ ಅವರು ಭರ್ಜರಿ ಅರ್ಧ ಶತಕಗಳನ್ನು ಬಾರಿಸಿದ್ದು ಓದುಗರಿಗೆ ಗೊತ್ತಿದೆ.

ಒಂದು ದಿನದ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೊಂದಿರುವ ದಾಖಲೆ ದಂಗುಬಡಿಸುತ್ತದೆ. ನಾಳಿನ ಪಂದ್ಯದಲ್ಲಿ ಮತ್ತೊಂದು ದಾಖಲೆ ಅವರ ಮಡಿಲು ಸೇರಲು ಕಾಯುತ್ತಿದೆ. ಈ ಫಾರ್ಮಾಟ್​ನಲ್ಲಿ 12,000 ರನ್​ಗಳನ್ನು ಪೂರೈಸಲು ಅವರಿಗೆ ಕೇವಲ 23 ರನ್​ಗಳ ಅವಶ್ಯಕತೆಯಿದೆ. ನಾಳೆ ಅವರು ಅಷ್ಟು ರನ್​ಗಳನ್ನು ಗಳಿಸಿದರೆ, ಈ ಮೈಲಿಗಲ್ಲನ್ನು ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ ದಾಟಿದ ಆಟಗಾರನೆನಿಸಿಕೊಳ್ಳಲಿದ್ದಾರೆ. ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದೆ. ಸಚಿನ್ ತಮ್ಮ 300 ನೇ ಇನ್ನಿಂಗ್ಸ್​ನಲ್ಲಿ (309 ಪಂದ್ಯಗಳು) 12,000 ರನ್​ಗಳನ್ನು ಪೂರೈಸಿದರು. ಕೊಹ್ಲಿ ನಾಳೆ 23 ರನ್ ಗಳಿಸಿದರೆ ಕೇವಲ ತಮ್ಮ 242 ಇನ್ನಿಂಗ್ಸ್​ನಲ್ಲಿ (251ನೇ ಪಂದ್ಯ) ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ.

ಅಂದಹಾಗೆ, 12,000 ರನ್ ಕ್ಲಬ್​ನಲ್ಲಿ ಸದ್ಯಕ್ಕೆ ಐವರು ಬ್ಯಾಟ್ಸ್​ಮನ್​ಗಳಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕ್ಕಿ ಪಾಂಟಿಂಗ್ ತಮ್ಮ 314ನೇ ಇನ್ನಿಂಗ್ಸ್​ನಲ್ಲಿ (323ನೇ ಪಂದ್ಯ), ಶ್ರೀಲಂಕಾದ ಮಾಜಿ ಕ್ಯಾಪ್ಟನ್ ಕುಮಾರ ಸಂಗಕ್ಕಾರ ತಮ್ಮ 336ನೇ ಇನ್ನಿಂಗ್ಸ್​ನಲ್ಲಿ (359ನೇ ಪಂದ್ಯ), ಶ್ರೀಲಂಕಾದರೇ ಆಗಿರುವ ಸನತ್ ಜಯಸೂರ್ಯ ತಮ್ಮ 379 ನೇ ಇನ್ನಿಂಗ್ಸ್​ನಲ್ಲಿ (390ನೇ ಪಂದ್ಯ) ಹಾಗೂ ಮತ್ತೊಬ್ಬ ಶ್ರೀಲಂಕನ್ ಮಹೇಲ ಜಯವರ್ದೆನೆ ತಮ್ಮ 399 ನೇ ಇನ್ನಿಂಗ್ಸ್​ನಲ್ಲಿ (426ನೇ ಪಂದ್ಯ) 12,000 ರನ್​ಗಳನ್ನು ಪೂರೈಸಿದ್ದಾರೆ.

ಸಚಿನ್ ತೆಂಡೂಲ್ಕರ್

ತೆಂಡೂಲ್ಕರ್ ಅವರ ಮತ್ತೊಂದು ದಾಖಲೆಯನ್ನು ನಾಳೆ ಸರಿಗಟ್ಟುವ ಅವಕಾಶವನ್ನು ಕೊಹ್ಲಿ ಹೊಂದಿದ್ದಾರೆ. ಒಂದು ದಿನದ ಪಂದ್ಯಗಳಲ್ಲಿ ತೆಂಡೂಲ್ಕರ್ ಆಸ್ಟ್ರೇಲಿಯ ವಿರುದ್ಧ ಭಾರತದ ಪರ ಅತ್ಯಧಿಕ 9 ಶತಕಗಳನ್ನು ಬಾರಿಸಿದ್ದಾರೆ. ಈ ದೇಶದ ವಿರುದ್ಧ ಇದುವರೆಗೆ 8 ಶತಕಗಳನ್ನು ದಾಖಲಿಸಿರುವ ಕೊಹ್ಲಿ ನಾಳೆ ಶತಕ ಬಾರಿದ್ದೇಯಾದಲ್ಲಿ ಲಿಟ್ಲ್​ ಮಾಸ್ಟರ್ ಅವರ ರೆಕಾರ್ಡ್ ಅನ್ನು ಸರಿಗಟ್ಟುತ್ತಾರೆ.

ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು