ಸೀಮಿತ ಓವರ್​ ಸರಣಿಗಳಿಂದ ವಾರ್ನರ್ ಹೊರಗೆ, ಕಮ್ಮಿನ್ಸ್​ಗೆ ವಿಶ್ರಾಂತಿ

ಎರಡನೆ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ತೊಡೆಸಂದಿ ಗಾಯಕ್ಕೊಳಗಾಗಿರುವ ಆಸ್ಟ್ರೇಲಿಯಾದ ಆರಂಭ ಆಟಗಾರ ಡೇವಿಡ್ ವಾರ್ನರ್ ಚೇತರಿಸಿಕೊಳ್ಳಲು ಕನಿಷ್ಠ 2-3 ವಾರ ಬೇಕು ಎಂದು ಕ್ರಿಕೆಟ್​ ಆಸ್ಟ್ರೇಲಿಯ ತಿಳಿಸಿದೆ.

ಸೀಮಿತ ಓವರ್​ ಸರಣಿಗಳಿಂದ ವಾರ್ನರ್ ಹೊರಗೆ, ಕಮ್ಮಿನ್ಸ್​ಗೆ ವಿಶ್ರಾಂತಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 30, 2020 | 8:32 PM

ಅಸ್ಟ್ರೇಲಿಯ ವಿರುದ್ಧ ಮೊದಲೆರಡು ಪಂದ್ಯಗಳನ್ನು ಹೀನಾಯವಾಗಿ ಸೋತಿರುವ ಭಾರತೀಯ ಟೀಮಿಗೆ ಒಂದು ಸಂತೋಷದ ಸಂಗತಿ ಸಿಕ್ಕಿದೆ. ರವಿವಾರದಂದು ಸಿಡ್ನಿಯಲ್ಲಿ ನಡೆದ ಎರಡನೆ ಒಂದು ದಿನದ ಪಂದ್ಯದಲ್ಲಿ ಫೀಲ್ಡ್ ಮಾಡುವಾಗ ತೊಡೆಸಂದಿ ನೋವಿಗೀಡಾದ ಸ್ಫೋಟಕ ಆರಂಭ ಆಟಗಾರ ಡೇವಿಡ್ ವಾರ್ನರ್ ಬುಧವಾರ ನಡೆಯಬೇಕಿರುವ ಮೂರನೆ ಒಂದು ದಿನದ ಪಂದ್ಯ ಮತ್ತು ಅದಾದ ನಂತರ ನಡೆಯುವ ಮೂರು ಟಿ20 ಪಂದ್ಯಗಳನ್ನು ಆಡಲಾರರು. ಡಿಸೆಂಬರ್ 17ರಂದು ಆರಂಭವಾಗಲಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಅವರು ಭಾಗಿಯಾಗುವುದು ಕೂಡ ಅನುಮಾನಾಸ್ಪದವಾಗಿದೆ ಎಂದು ಕ್ರಿಕೆಟ್​ ಆಸ್ಟ್ರೇಲಿಯ (ಸಿಎ) ತಿಳಿಸಿದೆ.

ಪ್ಯಾಟ್ ಕಮ್ಮಿನ್ಸ್

ಓದುಗರಿಗೆ ಗೊತ್ತಿರುವಂತೆ ರವಿವಾರದಂದು ಭಾರತ ಬ್ಯಾಟ್ ಮಾಡುತ್ತಿದ್ದಾಗ, ನಾಲ್ಕನೆ ಓವರ್​ನಲ್ಲಿ ಶಿಖರ್ ಧವನ್ ಬಾರಿಸಿದ ಚೆಂಡನ್ನು ಫೀಲ್ಡ್ ಮಾಡುವ ಪ್ರಯತ್ನದಲ್ಲಿ ಡೈವ್ ಮಾಡಿದ ವಾರ್ನರ್ ತೊಡೆಸಂದಿ ನೋವಿಗೊಳಗಾಗಿ ಜೊತೆ ಆಟಗಾರರ ಸಹಾಯದಿಂದ ಮೈದಾನದಿಂದಾಚೆ ಬರಬೇಕಾಯಿತು. ಅವರಿಗಾಗಿರುವ ಗಾಯ ತೀವ್ರ ಸ್ವರೂಪದ್ದೆಂದು ಸಿಎ ಹೇಳಿದ್ದು ಅವರ ಗುಣಮುಖರಾಗಲು 2-3 ವಾರ ಬೇಕಾಗಬಹುದೆಂದು ಗೊತ್ತಾಗಿದೆ. ಈ ಪಂದ್ಯದಲ್ಲಿ ಅವರು 77 ಎಸೆತಗಳಲ್ಲಿ 83 ರನ್ ಬಾರಿಸಿ ನಾಯಕ ಆರನ್ ಫಿಂಚ್​ ಅವರೊಂದಿಗೆ ಮತ್ತೊಂದು ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದರು.

ಏತನ್ಮಧ್ಯೆ, ಟೆಸ್ಟ್ ಪಂದ್ಯಗಳು ಶುರುವಾಗುವ ಮೊದಲು ವಿಶ್ರಾಂತಿ ಪಡೆಯುವುದಕ್ಕೋಸ್ಕರ ವೇಗದ ಬೌಲರ್ ಪ್ಯಾಟ್​ ಕಮ್ಮಿನ್ಸ್ ಅವರನ್ನು ತಂಡದಿಂದ ಕೈಬಿಡಲಾಗಿದೆಯೆಂದು ಸಿಎ ತಿಳಿಸಿದೆ. ಟಿ20 ಪಂದ್ಯಗಳಲ್ಲಿ ಆಡಲಿರುವ ಅತಿಥೇಯರ ತಂಡಕ್ಕೆ ಡಾರ್ಸಿ ಶಾರ್ಟ್​ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಭಾರತ ಮತ್ತು ಆಸ್ಟ್ರೇಲಿಯ ನಡುವೆ ಮೂರನೆ ಹಾಗೂ ಕೊನೆಯ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯ ಬುಧವಾರದಂದು ಕ್ಯಾನ್​ಬೆರಾದಲ್ಲಿ ನಡೆಯಲಿದೆ.

ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ