AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಯುವತಿಯೊಬ್ಬಳು ಬಾಬರ್ ಆಜಂ ತನ್ನನ್ನು ಲೈಂಗಿಕವಾಗಿ ಶೋಷಿಸಿದ್ದಾನೆ ಎನ್ನುತ್ತಿದ್ದಾಳೆ

ಭಾರತ ಕ್ರಿಕೆಟ್ ಟೀಮಿನ ನಾಯಕ ವಿರಾಟ್ ಕೊಹ್ಲಿಯನ್ನು ತನ್ನ ರೋಲ್ ಮಾಡೆಲ್ ಎಂದು ಹೇಳುವ ಪಾಕಿಸ್ತಾನ ಕ್ರಿಕೆಟ್ ಟೀಮಿನ ನಾಯಕ ಬಾಬರ್ ಆಜಂ ವೈಯಕ್ತಿಕ ಬದುಕಿನಲ್ಲೂ ಕೊಹ್ಲಿಯನ್ನು ಅನುಕರಿಸಿದ್ದರೆ ಪಾಕಿಸ್ತಾನದ ಯುವತಿಯೊಬ್ಬಳು ಮಾಡುತ್ತಿರುವ ಆಪಾದನೆಗಳಿಗೆ ಈಡಾಗುವ ಪರಿಸ್ಥಿತಿ ಎದುರಿಸುತ್ತಿರಲಿಲ್ಲ.

ಪಾಕಿಸ್ತಾನದ ಯುವತಿಯೊಬ್ಬಳು ಬಾಬರ್ ಆಜಂ ತನ್ನನ್ನು ಲೈಂಗಿಕವಾಗಿ ಶೋಷಿಸಿದ್ದಾನೆ ಎನ್ನುತ್ತಿದ್ದಾಳೆ
ಅರುಣ್​ ಕುಮಾರ್​ ಬೆಳ್ಳಿ
|

Updated on:Nov 30, 2020 | 7:43 PM

Share

ಬಾಬರ್ ಆಜಂ

ವಿಶ್ವದ ಅಗ್ರಮಾನ್ಯ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ಪಾಕಿಸ್ತಾನ ಕ್ರಿಕೆಟ್​ ಟೀಮಿನ ನಾಯಕ ಬಾಬರ್ ಆಜಂ ಭಾರಿ ತೊಂದರೆಗೆ ಸಿಕ್ಕಿಕೊಂಡಿದ್ದಾರೆ. ಪಾಕಿಸ್ತಾನದ ಯುವತಿಯೊಬ್ಬಳು ಆತನಿಂದ ತನಗೆ ಮೋಸವಾಗಿದೆ, ತನ್ನನ್ನು 10 ವರ್ಷಗಳ ಕಾಲ, ಮಾನಸಿಕವಾಗಿ, ಲೈಂಗಿಕವಾಗಿ ಶೋಷಿಸಿ, ಗರ್ಭಿಣಿಯಾಗಿಸಿ ಕೈಬಿಟ್ಟಿದ್ದಾನೆ ಎಂದು ಗಂಭೀರವಾದ ಆರೋಪಗಳನ್ನು ಮಾಡಿದ್ದಾಳೆ.

ರವಿವಾರದಂದು 24ನ್ಯೂಸ್ ಹೆಚ್​ಡಿ ಹೆಸರಿನ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೆಸರು ಹೇಳಿಕೊಳ್ಳಲಿಚ್ಛಿಸದ ಲಾಹೋರಿನ ಈ ಯುವತಿ, ‘‘ನನ್ನ ಬದುಕನ್ನು ನರಕವಾಗಿಸಿರುವ ವ್ಯಕ್ತಿ ಬೇರೆ ಯಾರೂ ಅಲ್ಲ, ಪಾಕಿಸ್ತಾನ ಕ್ರಿಕೆಟ್​ ಟೀಮಿನ ಕ್ಯಾಪ್ಟನ್ ಬಾಬರ್ ಆಜಂ. ಕ್ರಿಕೆಟ್​ ಜಗತ್ತಿಗೆ ಅವನು ಗೊತ್ತಾಗುವ ಮೊದಲಿನಿಂದಲೂ ನಾವಿಬ್ಬರು ಪರಿಚಿತರು. ಆದರೆ ಅವನು ನನಗೆ ಮೋಸ ಮಾಡುತ್ತಾನೆ ಅಂತ ನಾನು ಅಂದುಕೊಂಡಿರಲಿಲ್ಲ,’’ ಎಂದು ಅನಾಮಧೇಯ ಯುವತಿ ಹೇಳಿದ್ದಾಳೆ.

‘‘ನಾವಿಬ್ಬರೂ ಶಾಲಾ ದಿಗಳಿಂದಲೇ ಸ್ನೇಹಿತರು ಮತ್ತು ಒಂದೇ ಬಡಾವಣೆಯಲ್ಲಿ ಬೆಳೆದವರು. 2010ರಲ್ಲೇ ಅವನು ನನ್ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಾಗ ನಾನು ಸಂತೋಷದಿಂದ ಒಪ್ಪಿಕೊಂಡೆ. ಸಮಯ ಕಳೆದಂತೆ ನಮ್ಮ ನಡುವೆ ಅನ್ಯೋನ್ಯತೆ ಬೆಳೆಯಿತು ಮತ್ತು ನಾವು ಮದುವೆಯಾಗುವ ಯೋಚನೆಯನ್ನು ಮಾಡಿದೆವು. ಆದರೆ ನಮ್ಮಿಬ್ಬರ ಕುಟಂಬಗಳು ಮದುವೆಯನ್ನು ವಿರೋಧಿಸಿದವು. ಹಾಗಾಗಿ ನಾವು ಕೋರ್ಟ್​ನಲ್ಲಿ ಮದುವೆಯಾಗುವ ನಿರ್ಧಾರಕ್ಕೆ ಬಂದೆವು. 2011ರಲ್ಲಿ ನಾನು ಮನೆಬಿಟ್ಟು ಬರುವಂತೆ ಪುಸಲಾಯಿಸಿ ಅದಕ್ಕೆ ಸಹಾಯವನ್ನೂ ಬಾಬರ್ ಮಾಡಿದ. ಅಲ್ಲಿಂದಾಚೆ ಅವನು ನನ್ನನ್ನು ಬಾಡಿಗೆ ಮನೆಗಳಲ್ಲಿರಿಸಿದ. ನಾನು ಮದುವೆಗೆ ಒತ್ತಾಯಿಸಿದಾಗಲೆಲ್ಲ ಯಾವುದಾದರೂ ನೆಪ ಹೇಳಿ ಅದನ್ನು ಮುಂದೂಡುತ್ತಿದ್ದ,’’ ಅಂತ ಆ ಯುವತಿ ಹೇಳಿದ್ದಾಳೆ.

ಆ ಬಾಡಿಗೆ ಮನೆಗಳಲ್ಲೇ ಆಜಂ ತನ್ನನ್ನು ದೈಹಿಕವಾಗಿ ಹಿಂಸಿಸಿದ ಮತ್ತು ಲೈಂಗಿಕವಾಗಿಯೂ ಬಳಸಿಕೊಂಡ ಎಂದು ಆಕೆ ಗಂಭೀರವಾದ ಆಪಾದನೆ ಮಾಡಿದ್ದಾಳೆ.

ಮಾಧ್ಯಮದವರೊಂದಿಗೆ ಮಾತಾಡುತ್ತಿರುವ ಯುವತಿ

‘‘ಮದುವೆಯಾಗುವ ಭರವಸೆ ನೀಡಿ ಆಜಂ ನನ್ನನ್ನು ಲೈಂಗಿಕವಾಗಿ ಶೋಷಿಸಲಾರಂಭಿಸಿದ, ನಾನು ಮದುವೆ ಮಾತೆತ್ತಿದಾಗ ದೈಹಿಕ ಹಿಂಸೆ ನೀಡಿದ ಮತ್ತು ಬೆದರಿಕೆಗಳನ್ನೂ ಒಡ್ಡಿದ. ನಾನು ಗರ್ಭಿಣಿಯಾದ ವಿಷಯ ಗೊತ್ತಾದ ಮೇಲೆ ಅವನು ನನಗೆ ಹಿಂಸಿಸುವುದನ್ನು ಹೆಚ್ಚಿಸಿದ,’’ ಎಂದು ಆಕೆ ಹೇಳಿದ್ದಾಳೆ.

ಈಗ ಪಾಕಿಸ್ತಾನ ಟೀಮಿನೊಂದಿಗೆ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಬಾಬರ್ ಆಜಂ ಈ ಅನಾಮಧೇಯ ಯುವತಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿಲ್ಲ. ಹಾಗೆಯೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ (ಪಿಸಿಬಿ) ಯುವತಿಯ ಟಿವಿ ಸಂರ್ದಶನವನ್ನು ಕಡೆಗಣಿಸಿದೆ.

Published On - 5:40 pm, Mon, 30 November 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ