Ind vs Aus ಪಂದ್ಯದಲ್ಲಿ ಆಸಿಸ್ ಅಬ್ಬರ ಹೇಗಿತ್ತು? ಇಲ್ಲಿದೆ ಕ್ವಿಕ್ ಡಿಟೇಲ್ಸ್..
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು, 50 ಓವರ್ಗಳಲ್ಲಿ, 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿತು. ಆಸ್ಟ್ರೇಲಿಯಾ ತಂಡದ ಪ್ರದರ್ಶನಕ್ಕೆ ಭಾರತೀಯ ಎಸೆತಗಾರರು ಬಸವಳಿಯುವಂತಾಯಿತು.
ಆಸ್ಟ್ರೇಲಿಯಾದ ಸಿಡ್ನಿ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸಿಸ್ ಭರ್ಜರಿ ಜಯ ಸಾಧಿಸಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಈ ಮೂರೂ ವಿಭಾಗದಲ್ಲಿ ಪರಿಣಾಮಕಾರಿ ಪ್ರದರ್ಶನ ತೋರಿದ ತಂಡ ಸರಣಿಯನ್ನು ತನ್ನ ಪಾಲಾಗಿಸಿಕೊಂಡಿದೆ.
ಸಿಡ್ನಿಯ ಬ್ಯಾಟಿಂಗ್ ಪಿಚ್ನಲ್ಲಿ ಆಸಿಸ್ ಹರಿಸಿತು ರನ್ ಹೊಳೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು, 50 ಓವರ್ಗಳಲ್ಲಿ, 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿತು. ಆಸಿಸ್ ಪರವಾಗಿ ಬ್ಯಾಟಿಂಗ್ಗೆ ಇಳಿದ ನಾಯಕ ಆರೊನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ತಲಾ 60 ಮತ್ತು 83 ರನ್ ಕಲೆಹಾಕಿದರು. ಉತ್ತಮ ಆರಂಭ ಕೊಟ್ಟ ಈ ಆಟಗಾರರು ತಂಡಕ್ಕೆ ಭದ್ರಬುನಾದಿ ಹಾಕಿದರು. ಎರಡೂ ಆಟಗಾರರು ಶತಕದ ಜೊತೆಯಾಟವಾಡಿದರು. ನಂತರ ಬಂದ ಸ್ಟೀವನ್ ಸ್ಮಿತ್ 104 ರನ್ ಕೂಡಿಸಿದರು. ಆಸ್ಟ್ರೇಲಿಯಾ ತಂಡವು 389 ರನ್ಗಳ ದೊಡ್ಡ ಮೊತ್ತ ಕಲೆಹಾಕಲು ಸಹಕರಿಸಿದರು. ಸ್ಮಿತ್ಗೆ ಜೊತೆಯಾದ ಮಾರ್ನಸ್ 70 ರನ್ ಹೊಡೆದರೆ ಗ್ಲೆನ್ ಮ್ಯಾಕ್ಸ್ವೆಲ್ ವೇಗದ 63 ರನ್ ಕೂಡಿದರು. ಬ್ಯಾಟ್ ಬೀಸಿದ ಐದು ಆಟಗಾರರು 60ಕ್ಕಿಂತ ಹೆಚ್ಚು ರನ್ ಕಲೆಹಾಕಿ ತಂಡದ ಮೊತ್ತ ಹೆಚ್ಚಿಸಿದರು.
ಭಾರತೀಯ ಬೌಲರ್ಗಳು ಬಸವಳಿದರು ಆಸ್ಟ್ರೇಲಿಯಾ ತಂಡದ ಪ್ರದರ್ಶನಕ್ಕೆ ಭಾರತೀಯ ಎಸೆತಗಾರರು ಬಸವಳಿಯುವಂತಾಯಿತು. ನವದೀಪ್ ಸೈನಿ, ಮೊಹಮ್ಮದ್ ಶಮಿ, ಬುಮ್ರಾ, ಚಹಾಲ್ ತಲಾ 70ಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟರು. ಮೊದಲ ವಿಕೆಟ್ ಕಬಳಿಸುವಷ್ಟರಲ್ಲಿ ಸುಸ್ತಾಗಿದ್ದ ಭಾರತೀಯ ಬೌಲರ್ಗಳು ಚೇತರಿಸಿಕೊಳ್ಳಲೇ ಇಲ್ಲ. ಆಸಿಸ್ ಬ್ಯಾಟಿಂಗ್ ಬಿರುಸಿಗೆ ಭಾರತ ಕಂಗಾಲಾಯಿತು.
150 ರನ್ಗಳ ಆರಂಭಿಕ ಜೊತೆಯಾಟ ನಾಯಕ ಆರೊನ್ ಫಿಂಚ್ 69 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 60 ರನ್ ಗಳಿಸಿದರೆ, ಡೇವಿಡ್ ವಾರ್ನರ್ 77 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಿತ 83ರನ್ ಕಲೆಹಾಕಿದರು. ಇದು ತಂಡದ ಆತ್ಮವಿಶ್ವಾಸ ಹೆಚ್ಚಿಸತು.
ಸ್ಮಿತ್ ಸತತ ಎರಡನೇ ಸೆಂಚುರಿ! ಕಳೆದ ಏಕದಿನ ಪಂದ್ಯದಲ್ಲಿ 105 ರನ್ಗಳಿಸಿ ಮಿಂಚಿದ್ದ ಸ್ಟೀವನ್ ಸ್ಮಿತ್, ಇಂದು 104 ರನ್ ಪಡೆದರು. ಈ ಮೂಲಕ ಸತತ ಎರಡು ಪಂದ್ಯಗಳಲ್ಲಿ ಸೆಂಚುರಿ ಬಾರಿಸಿ, ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.
ಮ್ಯಾಕ್ಸ್ವೆಲ್ ವೇಗದ ಆಟ ಇನ್ನಿಂಗ್ಸ್ ಕೊನೆಗೆ ಮ್ಯಾಕ್ಸ್ವೆಲ್ ಆಡಿದ ಆಟ, ಆಸಿಸ್ ತಂಡಕ್ಕೆ ದೊಡ್ಡ ಕೊಡುಗೆಯಾಯಿತು. ಫಿಂಚ್-ವಾರ್ನರ್ ಬುನಾದಿಯ ಮೇಲೆ ಮ್ಯಾಕ್ಸ್ವೆಲ್ ರನ್ ಗೋಪುರ ಭರ್ಜರಿಯಾಗಿ ಬೆಳೆಯಿತು. ಮ್ಯಾಕ್ಸ್ವೆಲ್ 29 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಿತ 63 ರನ್ ನೀಡಿದರು.
ಇದನ್ನೂ ಓದಿ: ಭಾರತ ತಂಡದ ಬ್ಯಾಟಿಂಗ್ ಹೇಗಿತ್ತು? ಮ್ಯಾಚ್ ನೋಡೋದು ಮಿಸ್ ಆಗಿದ್ರೆ ಡೋಂಟ್ವರಿ.. ಇಲ್ಲಿದೆ ಕ್ವಿಕ್ ಡಿಟೇಲ್ಸ್
Published On - 7:53 pm, Sun, 29 November 20