ಗಾಯದಿಂದ ಚೇತರಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಐಪಿಎಲ್ ದ್ವಿತೀಯಾರ್ಧಕ್ಕೆ ವಾಪಸ್ಸಾಗುವ ನಿರೀಕ್ಷೆಯಿದ್ದರೂ ನಾಯಕತ್ವ ಮರಳಿ ಪಡೆವ ಖಾತ್ರಿಯಿಲ್ಲ

|

Updated on: Jul 06, 2021 | 12:07 AM

ಭಾರತದಲ್ಲಿ ಹೆಚ್ಚುತ್ತಿದ್ದ ಕೋವಿಡ್ ಪ್ರಕರಣಗಳು ಮತ್ತು ಕೆಲ ಆಟಗಾರರ ಜೊತೆ ಸಪೋರ್ಟ್  ಸ್ಟಾಫ್​ನವರು ಸಹ ಸೋಂಕಿಗೊಳಗಾಗಿದ್ದರಿಂದ ಐಪಿಎಲ್ 2021 ಸೀಸನ್ ಸ್ಥಗಿತಗೊಳ್ಳುವ ಮೊದಲು ಪಂತ್ ಅವರ ನಾಯಕತ್ವ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನ ಗಳಿಸಿತ್ತು.

ಗಾಯದಿಂದ ಚೇತರಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಐಪಿಎಲ್ ದ್ವಿತೀಯಾರ್ಧಕ್ಕೆ ವಾಪಸ್ಸಾಗುವ ನಿರೀಕ್ಷೆಯಿದ್ದರೂ ನಾಯಕತ್ವ ಮರಳಿ ಪಡೆವ ಖಾತ್ರಿಯಿಲ್ಲ
ಗಾಯದಿಂದ ಚೇತರಿಸಿಕೊಂಡು ತರಬೇತಿಯಲ್ಲಿ ತೊಡಗಿರುವ ಶ್ರೇಯಸ್ ಆಯ್ಯರ್
Follow us on

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆದ ಒಂದು ದಿನದ ಸರಣಿಯಲ್ಲಿ ಆಡುವಾಗ ಭುಜದ ಮೂಳೆಯನ್ನು ಡಿಸ್ಲೊಕೇಟ್ ಮಾಡಿಕೊಂಡು ಇಂಡಿಯನ್ ಪ್ರಿಮೀಯರ್ ಲೀಗ್ 14ನೇ ಸೀಸನ್ನ ಮೊದಲ ಭಾಗವನ್ನು ಮಿಸ್ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅವರ ಸ್ಥಾನದಲ್ಲಿ ಡಿಸಿ ಟೀಮಿನ ನಾಯಕತ್ವ ವಹಿಸಿಕೊಂಡ ರಿಷಭ್ ಪಂತ್ ಉತ್ತಮ ನಾಯಕತ್ವದ ಗುಣಗಳನ್ನು ಮೆರೆದು ಪ್ರಶಂಸನೀಯ ರೀತಿಯಲ್ಲಿ ತಂಡವನ್ನು ಮುನ್ನಡೆಸಿದರು.

ಭಾರತದಲ್ಲಿ ಹೆಚ್ಚುತ್ತಿದ್ದ ಕೋವಿಡ್ ಪ್ರಕರಣಗಳು ಮತ್ತು ಕೆಲ ಆಟಗಾರರ ಜೊತೆ ಸಪೋರ್ಟ್  ಸ್ಟಾಫ್​ನವರು ಸಹ ಸೋಂಕಿಗೊಳಗಾಗಿದ್ದರಿಂದ ಐಪಿಎಲ್ 2021 ಸೀಸನ್ ಸ್ಥಗಿತಗೊಳ್ಳುವ ಮೊದಲು ಪಂತ್ ಅವರ ನಾಯಕತ್ವ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನ ಗಳಿಸಿತ್ತು.

ಐಪಿಎಎಲ್ ಉಳಿದ ಭಾಗವನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಕಳೆದ ಬಾರಿಯಂತೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಆಯೋಜಿಸಲಾಗುತ್ತದೆ. ತಮಗಾದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅಯ್ಯರ್ ಅವರು ಸೀಸನ್ನ ಎರಡನೇ ಭಾಗದಲ್ಲಿ ಆಡುವ ವಿಶ್ವಾಸ ಹೊಂದಿದ್ದಾರೆ. ಅವರು ಆಡಬಹದೇನೋ ಸರಿ, ಆದರೆ ಡಿಸಿ ತಂಡ ಅವರನ್ನು ನಾಯಕನಾಗಿ ಆಡಿಸುತ್ತದೆಯೇ ಅಥವಾ ಕೇವಲ ಒಬ್ಬ ಆಟಗಾರನ ಸಾಮರ್ಥ್ಯದಲ್ಲಿ ಆಡುವಂತೆ ಹೇಳುತ್ತದೆಯೇ ಎನ್ನುವುದರ ಬಗ್ಗೆ ಖುದ್ದು ಅಯ್ಯರ್ ಅವರಿಗೆ ಖಾತ್ರಿಯಿಲ್ಲ.

‘ಭುಜದ ಗಾಯದಿಂದ ನಾನೀಗ ಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಅಂದರೆ ಈಗ ನೋವು ಕೊಂಚವೂ ಇಲ್ಲ. ಆದರೆ ಭುಜವನ್ನು ಈಗ ಸದೃಢ ಮಾಡುವ ಕೆಲಸ ಆಗಬೇಕಿದೆ. ವೈದ್ಯರು ಹೇಳುವ ಪ್ರಕಾರ ಅದಕ್ಕೆ ಇನ್ನೂ ಒಂದು ತಿಂಗಳ ಸಮಯ ಹಿಡಿಯಲಿದೆ. ಅದರ ಜೊತೆಗೆ ನಾನು ಆಭ್ಯಾಸವನ್ನೂ ಆರಂಭಿಸಲಿದ್ದೇನೆ. ಐಪಿಎಲ್ ಉಳಿದರ್ಧ ಭಾಗದಲ್ಲಿ ಆಡುವ ನಿರೀಕ್ಷೆಯನ್ನಿಟ್ಟುಕೊಂಡಿದ್ದೇನೆ,’ ಎಂದು ಅಯ್ಯರ್ ಅವರು ದಿ ಗ್ರೇಟ್ ಕ್ರಿಕಟರ್ಸ್’ ಯೂಟ್ಯೂಬ್ ಚ್ಯಾನೆಲ್​ನಲ್ಲಿ ಮಾತಾಡುವಾಗ ಹೇಳಿದ್ದಾರೆ.

‘ನಾಯಕತ್ವದ ಬಗ್ಗೆ ನನಗೇನೂ ಗೊತ್ತಿಲ್ಲ. ಅದರ ಬಗ್ಗೆ ಪ್ರಾಂಚೈಸಿ ಮಾಲೀಕರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ, ಗಮನಿಸಬೇಕಾದ ಅಂಶವೆಂದರೆ, ಟೀಮ್ ಉತ್ತಮ ಪ್ರದರ್ಶನ ನೀಡುತ್ತಿದೆ ಮತ್ತು ಪಾಯಿಂಟ್ಸ್ ಟೇಬಲ್ನಲ್ಲಿ ಆಗ್ರಸ್ಥಾನದಲ್ಲಿದೆ. ನಾನು ಆ ನಿಟ್ಟಿನಲ್ಲಿ ಯೋಚಿಸುತ್ತಿದ್ದೇನೆ. ನನ್ನ ಮುಖ್ಯವಾದ ಗುರಿಯೆಂದರೆ, ಡೆಲ್ಲಿ ತಂಡ ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಬೇಕೆನ್ನುವುದು. ನಮ್ಮ ತಂಡ ಇದುವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ,’ ಎಂದು ಅಯ್ಯರ್ ಹೇಳಿದರು.

ಕಳೆದ ಸೀಸನ್​ನಲ್ಲಿ ಅಯ್ಯರ್ ನೇತೃತ್ವದ ಡೆಲ್ಲಿ ತಂಡ ಫೈನಲ್ ಪ್ರವೇಶಿಸಿತ್ತು ಆದರೆ ಪ್ರಶಸ್ತಿ ಗೆಲ್ಲಲಾಗಿರಲಿಲ್ಲ. ಫೈನಲ್ನಲ್ಲಿ ಅದು ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋತಿತ್ತು.

ಇದನ್ನೂ ಓದಿ: IPL 2021: ದ್ವಿತೀಯಾರ್ಧದ ಐಪಿಎಲ್​​ಗೆ ಇಯಾನ್ ಮೋರ್ಗಾನ್ ಅನುಮಾನ! ಯಾರಾಗಲಿದ್ದಾರೆ ಕೆಕೆಆರ್​ ತಂಡದ ಸಾರಥಿ?

ಇದನ್ನೂ ಓದಿ: IPL 2021: ಐಪಿಎಲ್ 2021 ಸಾಲಿನ ಉಳಿಕೆ ಪಂದ್ಯಗಳು ದುಬೈನಲ್ಲಿ ಸೆಪ್ಟೆಂಬರ್ 19ರಿಂದ ಆರಂಭ, ಫೈನಲ್​ ಯಾವಾಗ?