ಶ್ರೇಯಸ್ ಜಾಣತನ ಮತ್ತು ಕಾರ್ತೀಕ್ ದಿಟ್ಟತನ ನಡುವಿನ ಪಂದ್ಯ

|

Updated on: Oct 03, 2020 | 4:50 PM

ಇಂಡಿಯನ್ ಪ್ರಿಮೀಯರ್ ಲೀಗ್13ನೇ ಅವೃತಿ ಆರಂಭಗೊಂಡು ಎರಡು ವಾರ ಕಳೆದಿದೆ. ಟೂರ್ನಿಯ 16ನೇ ಮತ್ತು ಇಂದಿನ ಎರಡನೇ ಪಂದ್ಯ; ಪಾಯಿಂಟ್ಸ್ ಟೇಬಲ್​ನಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತಾ ನೈಟ್​ರೈಡರ್ಸ್ ನಡುವೆ ಶಾರ್ಜಾದಲ್ಲಿ ನಡೆಯಲಿದೆ. ಇಂದು ಗೆಲುವು ಸಾಧಿಸುವ ಟೀಮು ಟೇಬಲ್​ನ ಅಗ್ರಸ್ಥಾನಕ್ಕೇರಲಿದೆ. ಎರಡು ತಂಡಗಳಲ್ಲೂ ಪ್ರತಿಭಾವಂತ ಯುವ ಆಟಗಾರರಿದ್ದು ಅವರೆಲ್ಲ ಚೆನ್ನಾಗಿ ಪರ್ಫಾರ್ಮ್ ಮಾಡುತ್ತಿದ್ದಾರೆ. ಡೆಲ್ಲಿ ಟೀಮಿನ ಸಾಮರ್ಥ್ಯವನ್ನು ಗಮನಿಸಿದ್ದೇಯಾದರೆ, ಇದುವರೆಗೆ ಬೆಂಚ್ ಕಾಯಿಸುತ್ತಿದ್ದ್ದ ಅಜಿಂಕಾ ರಹಾನೆ ಅವರನ್ನು ಇವತ್ತಿನ […]

ಶ್ರೇಯಸ್ ಜಾಣತನ ಮತ್ತು ಕಾರ್ತೀಕ್ ದಿಟ್ಟತನ ನಡುವಿನ ಪಂದ್ಯ
Follow us on

ಇಂಡಿಯನ್ ಪ್ರಿಮೀಯರ್ ಲೀಗ್13ನೇ ಅವೃತಿ ಆರಂಭಗೊಂಡು ಎರಡು ವಾರ ಕಳೆದಿದೆ. ಟೂರ್ನಿಯ 16ನೇ ಮತ್ತು ಇಂದಿನ ಎರಡನೇ ಪಂದ್ಯ; ಪಾಯಿಂಟ್ಸ್ ಟೇಬಲ್​ನಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತಾ ನೈಟ್​ರೈಡರ್ಸ್ ನಡುವೆ ಶಾರ್ಜಾದಲ್ಲಿ ನಡೆಯಲಿದೆ. ಇಂದು ಗೆಲುವು ಸಾಧಿಸುವ ಟೀಮು ಟೇಬಲ್​ನ ಅಗ್ರಸ್ಥಾನಕ್ಕೇರಲಿದೆ.

ಎರಡು ತಂಡಗಳಲ್ಲೂ ಪ್ರತಿಭಾವಂತ ಯುವ ಆಟಗಾರರಿದ್ದು ಅವರೆಲ್ಲ ಚೆನ್ನಾಗಿ ಪರ್ಫಾರ್ಮ್ ಮಾಡುತ್ತಿದ್ದಾರೆ. ಡೆಲ್ಲಿ ಟೀಮಿನ ಸಾಮರ್ಥ್ಯವನ್ನು ಗಮನಿಸಿದ್ದೇಯಾದರೆ, ಇದುವರೆಗೆ ಬೆಂಚ್ ಕಾಯಿಸುತ್ತಿದ್ದ್ದ ಅಜಿಂಕಾ ರಹಾನೆ ಅವರನ್ನು ಇವತ್ತಿನ ಪಂದ್ಯದಲ್ಲಿ ಆಡಿಸುವ ನಿರೀಕ್ಷೆಯಿದೆ. ಈ ಮುಂಬೈ ಆಟಗಾರ ಬಿರುಗಾಳಿ ವೇಗದಲ್ಲಿ ರನ್ ಸ್ಕೋರ್ ಮಾಡುವುದಿಲ್ಲವಾದರೂ ಟಿ20 ಫಾರ್ಮಾಟ್​ಗೆ ಅಗತ್ಯವಿರುವ ಆಕ್ರಮಣಕಾರಿ ಆಟದ ಮೂಲಕ ಡೆಲ್ಲಿಯ ಬ್ಯಾಟಿಂಗ್ ವಿಭಾಗಕ್ಕೆ ಸ್ಥಿರತೆಯನ್ನು ಒದಗಿಸಬಲ್ಲರು. ಆಸ್ಟ್ರೇಲಿಯಾದ ವಿಕೆಟ್​ಕೀಪರ್-ಬ್ಯಾಟ್ಸ್​ಮನ್ ಅಲೆಕ್ಸ್ ಕೇರಿಯವರನ್ನು ಸಹ ಇವತ್ತಿನ ಪಂದ್ಯದಲ್ಲಿ ಆಡಿಸುವ ಲಕ್ಷಣಗಳಿವೆ. ಯುಎಇಗೆ ಆಗಮಿಸುವ ಮೊದಲು ಕೇರಿ, ಇಂಗ್ಲೆಂಡ್ ವಿರುದ್ಧ ಆಡಿದ ಮೂರನೇ ಒಂದು ದಿನದ ಪಂದ್ಯದಲ್ಲಿ ಆಜೇಯ ಶತಕ ಬಾರಿಸಿ ಆಸ್ಟ್ರೇಲಿಯಾಗೆ ರೋಚಕ ಗೆಲುವು ದೊರಕಿಸಿದ್ದರು.

ಡೆಲ್ಲಿಯ ಮತ್ತೊಬ್ಬ ವಿಕೆಟ್​ಕೀಪರ್-ಬ್ಯಾಟ್ಸ್​ಮನ್ ರಿಷಭ್ ಪಂತ್ ಕೊಂಚ ಒತ್ತಡದಲ್ಲಿದ್ದಾರೆ. ಅವರ ಬ್ಯಾಟ್​ನಿಂದ ರನ್ ಸಿಡಿಯುತ್ತಿಲ್ಲ. ಅವರ ಕಾಂಪಿಟೀಟರ್​ಗಳಾದ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಷನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಹಾಗಾಗಿ, ಪಂತ್ ಒಂದು ಬಿಗ್ ಇನ್ನಿಂಗ್ಸ್ ಆಡುವ ಒತ್ತಡದಲ್ಲಿದ್ದಾರೆ. ಶಿಖರ್ ಧವನ್ ಉತ್ತಮ ಆರಂಭಗಳನ್ನು 60-70 ರನ್​ಗಳ ಕಾಣಿಕೆಯಾಗಿ ಪರಿವರ್ತಿಸಲು ವಿಫಲರಾಗುತ್ತಿದ್ದಾರೆ. ಆದರೆ ಅವರ ಪಾರ್ಟ್​ನರ್ ಪೃಥ್ವಿ ಶಾ ಯೋಗ್ಯ ಕಾಂಟ್ರಿಬ್ಯೂಷನ್​ಗಳನ್ನು ನೀಡುತ್ತಿದ್ದಾರೆ. ಓವರ್​ಸೀಸ್ ಆಟಗಾರ ಶರ್ಮನ್ ಹೆಟ್ಮೆಯರ್ ಆಡುವ ಅವಕಾಶ ಪಡೆಯುತ್ತಿದ್ದರೂ ತನ್ನ ಖ್ಯಾತಿಗೆ ತಕ್ಕ ಆಟವಾಡುತ್ತಿಲ್ಲ.

ಆಲ್​ರೌಂಡರ್ ಮಾರ್ಕಸ್ ಸ್ಟಾಯ್ನಿಸ್ ಡೆಲ್ಲಿಗೆ ಬ್ಯಾಲೆನ್ಸ್ ಒದಗಿಸುತ್ತಿದ್ದಾರೆ. ವೇಗದ ಬೌಲರ್​ಗಳಾದ ಕಗಿಸೊ ರಬಾಡ, ಇಶಾಂತ್ ಶರ್ಮ, ಅನ್ರಿಖ್ ನೋರೆ ಮೊದಲಾದವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ. ಹಾಗೆಯೇ ಸ್ಪಿನ್ನರ್​ಗಳಾದ ಅಮಿತ್ ಮಿಶ್ರಾ, ಅಕ್ಸರ್ ಪಟೇಲ್ ಸಹ.

ಅತ್ತ, ಕೊಲ್ಕತಾ, ರಾಜಸ್ತಾನ ರಾಯಲ್ಸ್ ಮೇಲೆ ಸಾಧಿಸಿದ ಗೆಲುವಿನಿಂದ ಆತ್ಮವಿಶ್ವಾಸವನ್ನು ಮುಗಿಲೆತ್ತರಕ್ಕೆ ಏರಿಸಿಕೊಂಡಿದೆ. ಟೀಮಿನ ಬ್ಯಾಟಿಂಗ್ ಮೇನ್​ಸ್ಟೇ ಶುಭ್​ಮನ್ ಗಿಲ್ ಕೊಲ್ಕತಾ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಸಲ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಆದರೆ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುತ್ತಿರುವ ಸುನಿಲ್ ನರೈನ್ ಪದೇಪದೆ ವಿಫಲರಾಗುತ್ತಿರುವುದು ನಾಯಕ್ ದಿನೇಶ್ ಕಾರ್ತೀಕ್​ಗೆ ಸಂಕಟವನ್ನುಂಟು ಮಾಡುತ್ತಿದೆ

ಮೂರನೇ ಕ್ರಮಾಂಕದಲ್ಲಾಡುವ ನಿತಿಶ್ ರಾಣಾ ಅವರಿಂದ ದೊಡ್ಡ ಇನ್ನಿಂಗ್ಸ್ ಬಂದಿಲ್ಲವಾದರೂ ಅವರಿಂದ ಅದನ್ನು ನಿರೀಕ್ಷಿಸಬಹುದಾಗಿದೆ.

ಮಿಡ್ಲ್ ಆರ್ಡರ್​ನಲ್ಲಿ ಅಯಾನ್ ಮೊರ್ಗನ್ ತಮ್ಮ ಖ್ಯಾತಿಗೆ ತಕ್ಕ ಆಡವಾಡುತ್ತಿದ್ದಾರೆ. ಗಿಲ್ ಒಂದಿಗಿನ ಅವರ ಜೊತೆಯಾಟಗಳು ಟೀಮಿಗೆ ಗೆಲುವು ತಂದು ಕೊಡುತ್ತಿವೆ. ಸ್ಫೋಟಕ ಬ್ಯಾಟ್ಸ್​ಮನ್ ಆಂದ್ರೆ ರಸ್ಸೆಲ್​ಗೆ ಜಾಸ್ತಿ ಎಸೆತಗಳನ್ನಾಡುವ ಚಾನ್ಸ್ ಸಿಗುತ್ತಿಲ್ಲ. ಅವರನ್ನು ಮೂರನೇ ಕ್ರಮಾಂಕದಲ್ಲಾಡಿಸುವ ಬಗ್ಗೆ ಟೀಮಿನ ಥಿಂಕ್​ಟ್ಯಾಂಕ್ ಆಲೋಚಿಸುತ್ತಿದೆ. ಕಾರ್ತೀಕ್ ಮಾತ್ರ ತಮ್ಮ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಗೊಂದಲದಲ್ಲಿದ್ದಾರೆ. ಭಾರತದ ಮಾಜಿ ಆಲ್​ರೌಂಡರ್ ಮದನ್ ಲಾಲ್ ಕಾರ್ತೀಕ್ ಓಪನರ್ ಆಗಿ ಆಡುವುದು ಸೂಕ್ತ ಅಂತ ಹೇಳಿದ್ದಾರೆ.

ಪ್ಯಾಟ್ ಕಮ್ಮಿನ್ಸ್ ಅವರೊಂದಿಗೆ, ಯುವ ವೇಗದ ಬೌಲರ್​ಗಳಾದ ಶಿವಮ್ ಮಾವಿ, ಕಮ್ಲೇಶ್ ನಾಗರ್​ಕೋಟಿ ಎದುರಾಳಿಗಳನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ವಿಕೆಟ್​ಗಳನ್ನೂ ಪಡೆಯುತ್ತಿದ್ದಾರೆ. ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ತಮ್ಮ ಮೇಲಿಟ್ಟಿರುವ ಭರವಸೆಯನ್ನು ಉಳಿಸಿಕೊಂಡಿದ್ದಾರೆ.

ಅಂದಹಾಗೆ, ಕೆಕೆಆರ್ ಮತ್ತು ಡಿಸಿ ಐಪಿಎಲ್​ನಲ್ಲಿ 25 ಸಲ ಪರಸ್ಪರ ಸ್ಫರ್ಧಿಸಿದ್ದು, ಕೊಲ್ಕತಾ 23 ಸಲ ಗೆದ್ದಿದ್ದರೆ, ಡೆಲ್ಲಿ 11 ಸಲ ಜಯ ಸಾಧಿಸಿದೆ. ಒಂದು ಪಂದ್ಯ ರದ್ದಾಗಿದೆ.