ಇದು ನಿಜಾ! ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ IPL
ಇನ್ನೇನು ಕೊರೊನಾಗೆ ಇಡೀ ವಿಶ್ವವೇ ನಲುಗಿ ಹೋಗಿರುವಾಗ, ಇನ್ನೆಲ್ಲಿಯ ಐಪಿಎಲ್ ಅನ್ನೋ ಮಾತುಗಳು ಕೇಳಿ ಬರ್ತಿತ್ತು. ಆದ್ರೀಗ ಬಿಸಿಸಿಐ ಐಪಿಎಲ್ ನಡೆಸೋದಕ್ಕೆ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದು, ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಕೊರೊನಾ ಕೋಲಾಹಲದ ಮಧ್ಯೆಯೂ ಸಿಹಿ ಸುದ್ದಿ ನೀಡಿದೆ. ಕಾಡ್ಗಿಚ್ಚಿನಂತೆ ಹಬ್ಬುತ್ತಿರೋ ಮಹಾಮಾರಿ ಕೊರೊನಾದಿಂದಾಗಿ ಇಡೀ ವಿಶ್ವವೇ ನಲುಗಿ ಹೋಗಿದೆ. ಎಲ್ಲಾ ವಲಯವೂ ಸೇರಿದಂತೆ ಕ್ರೀಡಾ ಜಗತ್ತೂ ನಲುಗಿ ಹೋಗಿದೆ. ಆದ್ರೆ ಭಾರತದಲ್ಲಿ ಕೊರೊನಾ ಕೋಲಾಹಲದ ಮಧ್ಯೆಯೂ, ಪದೆ ಪದೆ ಸದ್ದು ಮಾಡಿದ್ದು, ಐಪಿಎಲ್ ಅನ್ನೋ ಮಿಲಿಯನ್ […]
ಇನ್ನೇನು ಕೊರೊನಾಗೆ ಇಡೀ ವಿಶ್ವವೇ ನಲುಗಿ ಹೋಗಿರುವಾಗ, ಇನ್ನೆಲ್ಲಿಯ ಐಪಿಎಲ್ ಅನ್ನೋ ಮಾತುಗಳು ಕೇಳಿ ಬರ್ತಿತ್ತು. ಆದ್ರೀಗ ಬಿಸಿಸಿಐ ಐಪಿಎಲ್ ನಡೆಸೋದಕ್ಕೆ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದು, ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಕೊರೊನಾ ಕೋಲಾಹಲದ ಮಧ್ಯೆಯೂ ಸಿಹಿ ಸುದ್ದಿ ನೀಡಿದೆ.
ಕಾಡ್ಗಿಚ್ಚಿನಂತೆ ಹಬ್ಬುತ್ತಿರೋ ಮಹಾಮಾರಿ ಕೊರೊನಾದಿಂದಾಗಿ ಇಡೀ ವಿಶ್ವವೇ ನಲುಗಿ ಹೋಗಿದೆ. ಎಲ್ಲಾ ವಲಯವೂ ಸೇರಿದಂತೆ ಕ್ರೀಡಾ ಜಗತ್ತೂ ನಲುಗಿ ಹೋಗಿದೆ. ಆದ್ರೆ ಭಾರತದಲ್ಲಿ ಕೊರೊನಾ ಕೋಲಾಹಲದ ಮಧ್ಯೆಯೂ, ಪದೆ ಪದೆ ಸದ್ದು ಮಾಡಿದ್ದು, ಐಪಿಎಲ್ ಅನ್ನೋ ಮಿಲಿಯನ್ ಡಾಲರ್ ಟೂರ್ನಿ.
ನಿಜ.. ಜಗತ್ತೇ ತಲೆಕೆಳಗಾಗ್ಲಿ.. ಆಕಾಶವೇ ಕಳಚಿ ಬಿಳಲಿ.. ನಾವು ಐಪಿಎಲ್ ನಡೆಸಿಯೇ ತೀರ್ತಿವಿ ಅಂತಿದ್ದ ಬಿಸಿಸಿಐ ಬಿಗ್ಬಾಸ್ಗಳು, ಕಡೆಗೂ ತಾವಂದುಕೊಂಡಿದ್ದನ್ನ ಸಾಧಿಸಲಿದ್ದಾರೆ. ಯಾಕಂದ್ರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಐಪಿಎಲ್ ವಿಚಾರದಲ್ಲಿ ಸಿಹಿ ಸುದ್ದಿಯೊಂದನ್ನ ನೀಡಿದ್ದಾರೆ.
ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ ಐಪಿಎಲ್! ಲಾಕ್ಡೌನ್ನಲ್ಲಿ ಬೇಸರಗೊಂಡಿದ್ದ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಗುಡ್ ನ್ಯೂಸ್ ನೀಡಿದ್ದಾರೆ. ಈ ವರ್ಷ ಐಪಿಎಲ್ ಅನ್ನ ತೆರೆದ ಮೈದಾನದಲ್ಲೇ ನಡೆಸೋದಾಗಿ ಹೇಳಿದ್ದಾರೆ. ಆ ಮೂಲಕ ಬಿಸಿಸಿಐಗಾಗೋ ನಷ್ಟವನ್ನ ಸರಿದೂಗಿಸೋಕೆ ದಾದಾ ರೆಡಿಯಾಗಿದ್ದಾರೆ.
ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್ ‘‘ಈ ವರ್ಷ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ, ಪ್ರಯತ್ನ ನಡೆಸುತ್ತಿದೆ. ಕ್ರಿಕೆಟ್ ಅಭಿಮಾನಿಗಳು, ಫ್ರಾಂಚೈಸಿಗಳು, ದೇಸಿ ಮತ್ತು ವಿದೇಶಿ ಆಟಗಾರರು, ಪ್ರಸಾರಕರು, ಪ್ರಾಯೋಜಕರು ಮತ್ತು ಇತರ ಎಲ್ಲಾ ಪಾಲುದಾರರು, ಈ ವರ್ಷ ಐಪಿಎಲ್ ಟೂರ್ನಿಯನ್ನ ಎದುರು ನೋಡುತ್ತಿದ್ದಾರೆ. ಹೀಗಾಗಿ ನಾವು ಖಾಲಿ ಸ್ಟೇಡಿಯಮ್ಗಳಲ್ಲಿ ಐಪಿಎಲ್ ಟೂರ್ನಿಯನ್ನ ಆಯೋಜಿಸಲು ಚಿಂತಿಸುತ್ತಿದ್ದೇವೆ.’’ – ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ
ಹೀಗೆ ಸೌರವ್ ಗಂಗೂಲಿ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮತ್ತೊಂದೆಡೆ ಮೊನ್ನೆ ನಡೆದ ಐಸಿಸಿ ಮಹತ್ವದ ಸಭೆಯಲ್ಲಿ ಟಿಟ್ವೆಂಟಿ ವಿಶ್ವಕಪ್ ಆಯೋಜನೆ ಕುರಿತು, ಯಾವುದೇ ಅಂತಿಮ ನಿರ್ಣಯ ಕೈಗೊಂಡಿಲ್ಲ. ಆದ್ರೆ ಜುಲೈನಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವನ್ನ ಕೈಗೊಳ್ಳದಾಗಿ ಐಸಿಸಿ ತಿಳಿಸಿದೆ. ಹೀಗಾಗಿ ಬಿಸಿಸಿಐ, ಟಿಟ್ವೆಂಟಿ ವಿಶ್ವಕಪ್ ಮುಂದೂಡಿಕೆಯಾದ್ರೆ, ಸೆಪ್ಟಂಬರ್, ಅಕ್ಟೋಬರ್ನಲ್ಲಿ ಐಪಿಎಲ್ ನಡೆಸೋದಕ್ಕೆ ಈಗಲೇ ಸಿದ್ಧತೆ ಮಾಡಿಕೊಳ್ತಿದೆ. ಆದ್ರೆ ಬಿಸಿಸಿಐ ಬಿಗ್ಬಾಸ್ಗಳ ಐಪಿಎಲ್ ಕನಸು ನನಸಾಗುತ್ತೋ ಇಲ್ವೋ ಅನ್ನೋದಕ್ಕೆ ಜುಲೈನಲ್ಲೇ ಸ್ಪಷ್ಟವಾದ ಉತ್ತರ ಸಿಗಲಿದೆ.
Published On - 6:44 am, Fri, 12 June 20