ಆಟಗಾರನಿಗೆ ಕೊರೊನಾ; ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯ ಮುಂದೂಡಿಕೆ
ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಆಡಲು ಇಂಗ್ಲೆಂಡ್ ತಂಡ ತೆರಳಿದೆ. ಶುಕ್ರವಾರ ಮುಂಜಾನೆ 11 ಗಂಟೆಗೆ ಮ್ಯಾಚ್ ಆರಂಭಗೊಳ್ಳಬೇಕಿತ್ತು. ಆದರೆ, ಇದಕ್ಕೂ ಮೊದಲು ನಡೆದ ಕೊರೊನಾ ಪರೀಕ್ಷೆಯಲ್ಲಿ ಆಟಗಾರನಿಗೆ ಕೊರೊನಾ ವೈರಸ್ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ.
ಕೊರೊನಾ ಪರೀಕ್ಷೆ ವೇಳೆ ಆಟಗಾರನೊಬ್ಬನಿಗೆ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯ ಮುಂದೂಡಲ್ಪಟ್ಟಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.
ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಆಡಲು ಇಂಗ್ಲೆಂಡ್ ತಂಡ ತೆರಳಿದೆ. ಶುಕ್ರವಾರ ಮುಂಜಾನೆ 11 ಗಂಟೆಗೆ ಮ್ಯಾಚ್ ಆರಂಭಗೊಳ್ಳಬೇಕಿತ್ತು. ಆದರೆ, ಇದಕ್ಕೂ ಮೊದಲು ನಡೆದ ಕೊರೊನಾ ಪರೀಕ್ಷೆಯಲ್ಲಿ ಆಟಗಾರನಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ, ಪಂದ್ಯ ಭಾನುವಾರಕ್ಕೆ ಮುಂದೂಡಲ್ಪಟ್ಟಿದೆ.
ಎರಡೂ ತಂಡದ ಆಟಗಾರರ ಹಿತದೃಷ್ಟಿಯಿಂದ ನಾವು ಪಂದ್ಯವನ್ನು ಮುಂದೂಡುತ್ತಿದ್ದೇವೆ. ಸುರಕ್ಷತೆಗೆ ನಾವು ಮೊದಲ ಆದ್ಯತೆ ನೀಡುತ್ತೇವೆ ಎಂದು ಎರಡೂ ಕ್ರಿಕೆಟ್ ಮಂಡಳಿ ಜಂಟಿಯಾಗಿ ಹೇಳಿಕೆ ಬಿಡುಗಡೆ ಮಾಡಿವೆ. ಅಷ್ಟೇ ಅಲ್ಲ, ಎಲ್ಲ ಕ್ರಿಕೆಟ್ ಆಟಗಾರರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.
CONFIRMED: Cricket South Africa and @ECB_cricket confirm the postponement of the first #BetwayODI of the three-match series to Sunday, 06 December 2020. #SAvENG pic.twitter.com/wRXpr7YYA9
— Cricket South Africa (@OfficialCSA) December 4, 2020
ದಕ್ಷಿಣ ಆಫ್ರಿಕಾ ನೆಲದಲ್ಲಿ ಇಂಗ್ಲೆಂಡ್ ಮೂರು ಪಂದ್ಯಗಳನ್ನು ಆಡಲಿದೆ. ಇಂದಿನಿಂದ ಪಂದ್ಯ ಆರಂಭಗೊಳ್ಳಬೇಕಿತ್ತು.
This decision results from a player from the Proteas team testing positive for COVID-19 after the teams’ last round of scheduled testing performed on Thursday ahead of the #BetwayODI series.#SAvENG
— Cricket South Africa (@OfficialCSA) December 4, 2020
In the interests of the safety and well-being of both teams, match officials, and all involved in the match, the Acting CEO of CSA, Kugandrie Govender as well as the CEO of the ECB, Tom Harrison, have agreed to postpone the first fixture to Sunday. #SAvENG #BetwayODI
— Cricket South Africa (@OfficialCSA) December 4, 2020
Published On - 5:54 pm, Fri, 4 December 20