India vs England Test Series: ಕುಲ್ದೀಪ್​ರನ್ನು ಟೀಮಿನಿಂದ ಹೊರಗಿಟ್ಟಿರುವುದು ನನ್ನಲ್ಲಿ ದಿಗ್ಭ್ರಮೆ ಮೂಡಿಸಿದೆ: ಹರ್ಭಜನ್ ಸಿಂಗ್

|

Updated on: Feb 06, 2021 | 10:54 PM

ರವೀಂದ್ರ ಜಡೇಜಾ ಗಾಯಗೊಂಡಿದ್ದಾರೆ ಮತ್ತು ವಾಷಿಂಗ್ಟನ್ ಸುಂದರ್ ಕೇವಲ ಒಂದು ಟೆಸ್ಟ್​ ಪಂದ್ಯವನ್ನು ಮಾತ್ರ ಆಡಿದ್ದಾರೆ. ಭಾರತ ಮೊದಲ ಟೆಸ್ಟ್​ನಲ್ಲಿ ಮೂರು ಸ್ಪಿನ್ನರ್​ಗಳನ್ನು ಆಡಿಸುವ ನಿರ್ಧಾರ ಮಾಡಿದ್ದರೆ, ಕುಲ್ದೀಪ್ ಅವರಲ್ಲೊಬ್ಬರಾಗಬೇಕಿತ್ತು ಎಂದು ಭಜ್ಜಿ ಹೇಳಿದ್ದಾರೆ.

India vs England Test Series: ಕುಲ್ದೀಪ್​ರನ್ನು ಟೀಮಿನಿಂದ ಹೊರಗಿಟ್ಟಿರುವುದು ನನ್ನಲ್ಲಿ ದಿಗ್ಭ್ರಮೆ ಮೂಡಿಸಿದೆ: ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್
Follow us on

ಚೈನಾಮನ್​ಗಳನ್ನು ಬೌಲ್ ಮಾಡುವ ಎಡಗೈ ರಿಸ್ಟ್ ಸ್ಪಿನ್ನರ್ ಕುಲ್ದೀಪ್ ಯಾದವ್​ರನ್ನು ಇಂಗ್ಲೆಂಡ್ ವಿರುದ್ಧ ಚೆನೈಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನಿಂದ ಹೊರಗಿಟ್ಟಿರುವುದು ಭಾರತದ ವಿಖ್ಯಾತ ಆಫ್-ಸ್ಪಿನ್ನರ್ ಹರಭಜನ್ ​ಸಿಂಗ್​ಗೆ ದಿಗ್ಭ್ರಮೆ ಮೂಡಿಸಿದೆ.

ರವೀಂದ್ರ ಜಡೇಜಾ ಗಾಯಗೊಂಡಿದ್ದಾರೆ ಮತ್ತು ವಾಷಿಂಗ್ಟನ್ ಸುಂದರ್ ಕೇವಲ ಒಂದು ಟೆಸ್ಟ್​ ಪಂದ್ಯವನ್ನು ಮಾತ್ರ ಆಡಿದ್ದಾರೆ. ಭಾರತ ಮೊದಲ ಟೆಸ್ಟ್​ನಲ್ಲಿ ಮೂರು ಸ್ಪಿನ್ನರ್​ಗಳನ್ನು ಆಡಿಸುವ ನಿರ್ಧಾರ ಮಾಡಿದ್ದರೆ, ಕುಲ್ದೀಪ್ ಅವರಲ್ಲೊಬ್ಬರಾಗಬೇಕಿತ್ತು ಎಂದು ಭಜ್ಜಿ ಹೇಳಿದ್ದಾರೆ. ಅವರ ಸ್ಥಾನದಲ್ಲಿ ಸುಂದರ್​ ಅವರನ್ನು ಆಡಿಸಿರುವುದು ಆಘಾತಕಾರಿ ನಿರ್ಣಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರ ನನ್ನಲ್ಲಿ ಅಕ್ಷರಶಃ ದಿಗ್ಭ್ರಮೆ ಮೂಡಿಸಿದೆ. ಟೀಮಿನ ಭಾಗವಾಗಿದ್ದರೂ ಕುಲ್ದೀಪ್​ರನ್ನು ಆಡಸದಿರುವುದು ಅವರು ಹೇಗೆ ವಿಶ್ಲೇಷಿಸುತ್ತಾರೆ ಅಂತ ನನಗರ್ಥವಾಗುತ್ತಿಲ್ಲ, ಅಕ್ಸರ್ ಪಟೇಲ ಗಾಯಗೊಂಡ ಕಾರಣ ಅವರಂತೆಯೇ ಎಡಗೈ ಸ್ಪಿನ್ನರ್ ಆಗಿರುವ ನದೀಮ್ ಅವರನ್ನು ಬದಲೀ ಆಟಗಾರನಾಗಿ ಆಡುವ ಇಲೆವೆನ್​ನಲ್ಲಿ ಸ್ಥಾನ ನೀಡಿರುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಇಬ್ಬಿಬ್ಬರು ಆಫ್-ಸ್ಪಿನ್ನರ್​ಗಳನ್ನು ಆಡಿಸುವುದು ಯಾವ ಸೀಮೆ ನ್ಯಾಯ? ಅವರ ನಿರ್ಧಾರ ನನ್ನ ವಿವೇಚನಗೆ ನಿಲುಕುತ್ತಿಲ್ಲ,’ ಎಂದು ಭಜ್ಜಿ ಕ್ರಿಕೆಟ್ ವೆಬ್​ಸೈಟೊಂದರ ಜೊತೆ ಮಾತಾಡುವಾಗ ಹೇಳಿದ್ದಾರೆ.

ಕುಲ್ದೀಪ್ ಯಾದವ್

ಕುಲ್ದೀಪ್ ಬಹಳ ಸಮಯದಿಂದ ಬೆಂಚ್ ಕಾಯಿಸುತ್ತಿದ್ದಾರೆ. ಅವರನ್ನು ಸೀಮಿತ ಓವರ್​ಗಳ ಪಂದ್ಯಗಳಿಗೆ ಪರಿಗಣಿಸುವುದಿಲ್ಲ ಮತ್ತು ಟೆಸ್ಟ್ ಪಂದ್ಯವೊಂದರಲ್ಲಿ ಅವರು ಕಾಣಿಸಿಕೊಂಡು ಈಗ್ಗೆ 2 ವರ್ಷಗಳಾಯಿತು. ತಾನಾಡಿದ ಕೊನೆಯ ಟೆಸ್ಟ್​ ಪಂದ್ಯದಲ್ಲಿ (ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ) ಅವರು ವಿಕೆಟ್ 5 ಪಡೆಯುವ ಸಾಧನೆ ಮಾಡಿದಾಗ್ಯೂ ನಂತರ ನಡೆದಿರುವ ಟೆಸ್ಟ್​ಗಳಿಗೆ ಅವರನ್ನು ಪರಿಗಣಿಸದಿರುವುದು ಆಶ್ಚರ್ಯಕರ ವಿಷಯವಾಗಿದೆ ಎಂದು ಭಜ್ಜಿ ಹೇಳಿದ್ದಾರೆ.

ಎಡಗೈ ರಿಸ್ಟ್ ಸ್ಪಿನ್ನ​ರ್​ನ ಉಪಸ್ಥಿತಿ ಭಾರತದ ದಾಳಿಗೆ ಒಂದು ವಿಶಿಷ್ಟ ಆಯಾಮ ಒದಗಿಸುತ್ತಿತ್ತು ಮತ್ತು ಹೀಗೆಯೇ ಕಡೆಗಣಿಸುತ್ತಿದ್ದರೆ ಅವರ ಆತ್ಮವಿಶ್ವಾಸಕ್ಕೆ ಭಾರಿ ಧಕ್ಕೆಯಾಗಲಿದೆ ಎಂದು ಹರ್ಭಜನ್ ಹೇಳಿದ್ದಾರೆ.

‘ಕುಲ್ದೀಪ್​ರನ್ನು ಅಡಿಸಿದ್ದರೆ ಭಾರತದ ಬೌಲಿಂಗ್ ದಾಳಿಗೆ ವೈವಿಧ್ಯತೆ ದೊರೆಯುತ್ತಿತ್ತು. ತಾನಾಡಿದ ಕೊನೆಯ ಎರಡು ಟೆಸ್ಟ್​ಗಳಲ್ಲೂ ಅವರು 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದಾರೆ. ಅವರನ್ನು ಅಯ್ಕೆಗೆ ಪರಿಗಣಿಸದಿರುವುದು ನನ್ನಲ್ಲಿ ಆಘಾತವನ್ನುಂಟು ಮಾಡಿದೆ. ಇದು ಅವರ ಮನಸ್ಥಿಯ ಮೇಲೆ ಭಾರಿ ಅಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಟೀಮಿನ ಭಾಗವಾಗಿದ್ದರೂ ಆಡುವ ಇಲೆವೆನ್​ನಲ್ಲಿ ಸ್ಥಾನ ಗಿಟ್ಟಿಸದಿರುವುದು ಬಹಳ ಯಾತನಾಮಯ ಸಂಗತಿ,’ ಎಂದು ಭಜ್ಜಿ ಹೇಳಿದ್ದಾರೆ.

India vs England Test Series | ಮೊದಲ ಟೆಸ್ಟ್​ನಲ್ಲಿ ಕುಲ್​ದೀಪ್​​ ಕಡೆಗಣನೆ: ಗೌತಮ್ ಗಂಭೀರ್ ಆಕ್ಷೇಪ