SRH vs RCB, IPL 2021 Match 6 Result: ಶಹಬಾಜ್ ಅಹ್ಮದ್ ಮ್ಯಾಜಿಕ್! ರೋಚಕ ಪಂದ್ಯದಲ್ಲಿ ಗೆದ್ದ ಆರ್​ಸಿಬಿ; ಸನ್​ರೈಸರ್ಸ್​ಗೆ ಮತ್ತೆ ಸೋಲು

| Updated By: ganapathi bhat

Updated on: Apr 05, 2022 | 12:37 PM

SRH vs RCB Scorecard: ಸನ್​ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಟೂರ್ನಿ ಪಂದ್ಯಾಟದ ಲೈವ್ ಅಪ್ಡೇಟ್​ಗಳು ಇಲ್ಲಿ ಸಿಗಲಿದೆ.

SRH vs RCB, IPL 2021 Match 6 Result: ಶಹಬಾಜ್ ಅಹ್ಮದ್ ಮ್ಯಾಜಿಕ್! ರೋಚಕ ಪಂದ್ಯದಲ್ಲಿ ಗೆದ್ದ ಆರ್​ಸಿಬಿ; ಸನ್​ರೈಸರ್ಸ್​ಗೆ ಮತ್ತೆ ಸೋಲು
ಆರ್​ಸಿಬಿ

ಚೆನ್ನೈ: ಆರ್​ಸಿಬಿ-ಎಸ್​ಆರ್​ಎಚ್ ನಡುವಿನ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ರನ್​ಗಳ ರೋಚಕ ಗೆಲುವು ದಾಖಲಿಸಿದೆ. ಹೈದರಾಬಾದ್ ತಂಡದ ಪರ ನಾಯಕ ಡೇವಿಡ್ ವಾರ್ನೆರ್ ಹಾಗೂ ಮನೀಶ್ ಪಾಂಡೆ ಉತ್ತಮ ಆಟವಾಡಿ ಗೆಲ್ಲುವ ಸೂಚನೆ ನೀಡಿದ್ದರು. ಆದರೆ, ಅವರಿಬ್ಬರು ಔಟ್ ಆದ ಬಳಿಕ ಕ್ರೀಸ್​ಗೆ ಇಳಿದ ಆಟಗಾರರು ತಂಡವನ್ನು ಮುನ್ನಡೆಸುವ ಮನಮಾಡಲಿಲ್ಲ. ಆರ್​ಸಿಬಿ ಬೌಲರ್​ಗಳು ಡೆತ್ ಓವರ್​ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು. ಸನ್​ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಲೈನ್​ಅಪ್ ಧೂಳಿಪಟ ಮಾಡಿದರು. ಆರ್​ಸಿಬಿ ಪರ ಶಹಬಾಜ್ ಅಹ್ಮದ್ 2 ಓವರ್ ಬೌಲ್ ಮಾಡಿ ಕೇವಲ 7 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದರು. ಒಂದೇ ಓವರ್​ನಲ್ಲಿ ಶಹಬಾಜ್ 3 ವಿಕೆಟ್ ಪಡೆದಿದ್ದು ಪಂದ್ಯದ ದಿಕ್ಕನ್ನೇ ಬದಲಿಸಿತು.

ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್​ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 149 ರನ್ ದಾಖಲಿಸಿತ್ತು. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್​ಗೆ ಗೆಲ್ಲಲು 150 ರನ್​ಗಳ ಸುಲಭ ಟಾರ್ಗೆಟ್ ನೀಡಿತ್ತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ನೀರಸ ಪ್ರದರ್ಶನ ತೋರಿತ್ತು. ಆರ್​ಸಿಬಿ ಪರ ನಾಯಕ ವಿರಾಟ್ ಕೊಹ್ಲಿ 33(29) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ 59(41) ಹೊರತುಪಡಿಸಿ ಉಳಿದ ಆಟಗಾರರು ಇನ್ನಿಂಗ್ಸ್ ಕಟ್ಟುವ ಆಟ ಆಡಿಲ್ಲ. ಸನ್​ರೈಸರ್ಸ್ ಹೈದರಾಬಾದ್ ಪರ ಬೌಲರ್​ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದರು.  ರಶೀದ್ ಖಾನ್ 4 ಓವರ್​ನಲ್ಲಿ 18 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿದ್ದಾರೆ. ಜೇಸನ್ ಹೋಲ್ಡರ್ 4 ಓವರ್​ನಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ.

LIVE NEWS & UPDATES

The liveblog has ended.
  • 14 Apr 2021 11:13 PM (IST)

    ರಾಯಲ್ ಚಾಲೆಂಜರ್ಸ್​ಗೆ ರೋಚಕ ಜಯ

    ಸನ್​ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ರನ್​ಗಳ ರೋಚಕ ಗೆಲುವು ದಾಖಲಿಸಿದೆ. ಡೆತ್ ಓವರ್​ಗಳಲ್ಲಿ ಆರ್​ಸಿಬಿ ಅದ್ಭುತ ಪ್ರದರ್ಶನ ತೋರಿದೆ.

  • 14 Apr 2021 11:11 PM (IST)

    ಕೊನೆಯ ಓವರ್​ನಲ್ಲಿ ಮತ್ತೊಂದು ವಿಕೆಟ್

    ಶಹಬಾಜ್ ನದೀಮ್ ಹರ್ಷಲ್ ಪಟೇಲ್​ಗೆ ವಿಕೆಟ್ ಒಪ್ಪಿಸಿದ್ದಾರೆ.


  • 14 Apr 2021 11:09 PM (IST)

    ರನ್ ಗಳಿಸುವ ಅವಸರದಲ್ಲಿ ರನೌಟ್

    ಸನ್​ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ರಶೀದ್ ಖಾನ್ 3 ಬಾಲ್​ಗೆ 8 ರನ್ ಗಳಿಸುವ ಅವಸರದಲ್ಲಿ ರನೌಟ್ ಆಗಿದ್ದಾರೆ. ಹರ್ಷಲ್ ಪಟೇಲ್ ಎಸೆತಕ್ಕೆ ಎರಡು ರನ್ ಪಡೆಯಲು ಓಡಿ ಔಟ್ ಆಗಿದ್ದಾರೆ. ರಶೀದ್ ಖಾನ್ 9 ಬಾಲ್​ಗೆ 18 ರನ್ ಗಳಿಸಿ ನಿರ್ಗಮಿಸಿದ್ದಾರೆ. ಭುವನೇಶ್ವರ್ ಕುಮಾರ್ ಹಾಗೂ ಶಹಬಾಜ್ ನದೀಮ್ ಕ್ರೀಸ್​ನಲ್ಲಿದ್ದಾರೆ.

  • 14 Apr 2021 11:07 PM (IST)

    ಸನ್​ರೈಸರ್ಸ್ 4 ಬಾಲ್​ಗೆ 8 ರನ್

    19.2ನೇ ಬಾಲ್​ಗೆ ರಶೀದ್ ಖಾನ್ ಬೌಂಡರಿ ಬಾರಿಸಿದ್ದಾರೆ. ಈ ಮೂಲಕ ಸನ್​ರೈಸರ್ಸ್​ಗೆ 4 ಬಾಲ್​ಗೆ 8 ರನ್ ಬೇಕಾಗಿದೆ.

  • 14 Apr 2021 11:05 PM (IST)

    ಸನ್​ರೈಸರ್ಸ್ ಗೆಲ್ಲಲು 6 ಬಾಲ್​ಗೆ 16 ಬೇಕು

    ಸನ್​ರೈಸರ್ಸ್ ಹೈದರಾಬಾದ್ ತಂಡದ ಗೆಲುವಿಗೆ 6 ಬಾಲ್​ಗೆ 16 ರನ್ ಬೇಕಾಗಿದೆ. ರಶೀದ್ ಖಾನ್ ಹಾಗೂ ಭುವನೇಶ್ವರ್ ಕುಮಾರ್ ಕ್ರೀಸ್​ನಲ್ಲಿದ್ದಾರೆ. ಕೊನೆಯ ಓವರ್​ನ್ನು ಹರ್ಷಲ್ ಪಟೇಲ್ ಬಾಲ್ ಮಾಡುತ್ತಿದ್ದಾರೆ.

  • 14 Apr 2021 11:03 PM (IST)

    ಹೋಲ್ಡರ್ ಔಟ್; ರೋಚಕ ಹಂತದತ್ತ ಪಂದ್ಯ

    ಜೇಸನ್ ಹೋಲ್ಡರ್ ಸಿಕ್ಸರ್​ ಕಡೆ ಎತ್ತಿದ ಬಾಲ್​ನ್ನು ಕ್ರಿಶ್ಚಿಯನ್ ಕ್ಯಾಚ್ ಹಿಡಿದಿದ್ದಾರೆ. ಸಿರಾಜ್ ಎಸೆತಕ್ಕೆ ಹೋಲ್ಡರ್ ಔಟ್ ಆಗಿದ್ದು, 5 ಬಾಲ್​ಗೆ 4 ರನ್ ನೀಡಿ ನಿರ್ಗಮಿಸಿದ್ದಾರೆ.

  • 14 Apr 2021 10:59 PM (IST)

    ವಿಜಯ್ ಶಂಕರ್ ಔಟ್; ಸನ್​ರೈಸರ್ಸ್ ಗೆಲ್ಲಲು 12 ಬಾಲ್ 27 ರನ್

    ಸನ್​ರೈಸರ್ಸ್ ಪರ ದಾಂಡಿಗ ವಿಜಯ್ ಶಂಕರ್ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ, ಹರ್ಷಲ್ ಪಟೇಲ್​ಗೆ ವಿಕೆಟ್ ಒಪ್ಪಿಸಿದ್ದಾರೆ. 18 ಓವರ್ ಅಂತ್ಯಕ್ಕೆ ಹೈದರಾಬಾದ್ ಸ್ಕೋರ್ 123/6 ಆಗಿದೆ. ಜೇಸನ್ ಹೋಲ್ಡರ್ ಜೊತೆ ರಶೀದ್ ಖಾನ್ ಕ್ರೀಸ್​ನಲ್ಲಿದ್ದಾರೆ.

  • 14 Apr 2021 10:54 PM (IST)

    ಅಬ್ದುಲ್ ಸಮದ್ ಕೂಡ ಔಟ್

    ಶಹಬಾಜ್ ಅಹ್ಮದ್ ಎಸೆದ ಕೊನೆಯ ಓವರ್​ನಲ್ಲಿ ಪಂದ್ಯ ತಿರುವು ಪಡೆದುಕೊಂಡಿದೆ. ಸೋಲಿನ ಭೀತಿಯಲ್ಲಿದ್ದ ಆರ್​ಸಿಬಿ 3 ವಿಕೆಟ್ ಕಬಳಿಸಿ ಗೆಲುವಿನ ಆಸೆ ಉಳಿಸಿಕೊಂಡಿದೆ. ವಿಜಯ್ ಶಂಕರ್ ಮತ್ತು ಜೇಸನ್ ಹೋಲ್ಡರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. 16 ಬಾಲ್​ಗೆ 32 ರನ್ ಬೇಕಿದೆ.

  • 14 Apr 2021 10:50 PM (IST)

    ಪಾಂಡೆ ಔಟ್!

    ಹೈದರಾಬಾದ್ ಪರ ಉತ್ತಮ ಆಟವಾಡಿದ್ದ ಮನೀಶ್ ಪಾಂಡೆ 39 ಬಾಲ್​ಗೆ 38 ರನ್ ದಾಖಲಿಸಿ ಔಟ್ ಆಗಿದ್ದಾರೆ. ಶಹಬಾಜ್ ಅಹ್ಮದ್ ಬಾಲ್​ನ್ನು ಸಿಕ್ಸರ್​ಗೆ ಎತ್ತಲು ಹೋಗಿ ಹರ್ಷಲ್ ಪಟೇಲ್​ಗೆ ಕ್ಯಾಚ್ ನೀಡಿದ್ದಾರೆ. ಅಬ್ದುಲ್ ಸಮದ್ ಜೊತೆ ವಿಜಯ್ ಶಂಕರ್ ಕ್ರೀಸ್​ನಲ್ಲಿ ಇದ್ದಾರೆ. ಜೊತೆಜೊತೆಗೆ ಎರಡು ವಿಕೆಟ್​ಗಳನ್ನು ಪಡೆದು ಆರ್​ಸಿಬಿ ಗೆಲ್ಲುವ ಉತ್ಸಾಹ ಉಳಿಸಿಕೊಂಡಿದೆ.

  • 14 Apr 2021 10:48 PM (IST)

    ಬೇರ್​ಸ್ಟೋ ಔಟ್

    ಸನ್​ರೈಸರ್ಸ್ ಹೈದರಾಬಾದ್ ಬ್ಯಾಟ್ಸ್​ಮನ್ ಬೇರ್​ಸ್ಟೋ 13 ಬಾಲ್​ಗೆ 12 ರನ್ ಗಳಿಸಿ ಔಟ್ ಆಗಿದ್ದಾರೆ. ಶಹಬಾಜ್ ಅಹ್ಮದ್ ಎಸೆತವನ್ನು ಸಿಕ್ಸರ್​ಗೆ ಎತ್ತಲು ಹೋಗಿ ಕೀಪರ್ ಎಬಿ ಡಿವಿಲಿಯರ್ಸ್​ಗೆ ಕ್ಯಾಚ್ ನೀಡಿದ್ದಾರೆ.

  • 14 Apr 2021 10:45 PM (IST)

    ಸನ್​ರೈಸರ್ಸ್ 115/2 (16 ಓವರ್)

    ಸನ್​ರೈಸರ್ಸ್ ಹೈದರಾಬಾದ್ ಗೆಲುವಿಗೆ 24 ಬಾಲ್​ಗೆ 35 ರನ್ ಬೇಕಾಗಿದೆ. ಹೈದರಾಬಾದ್ ತಂಡ 16 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 115 ರನ್ ಕಲೆಹಾಕಿದೆ. ಮನೀಶ್ ಪಾಂಡೆ 38 ಬಾಲ್​ಗೆ 38 ರನ್ ಗಳಿಸಿದ್ದಾರೆ. ಬೇರ್​ಸ್ಟೋ 12 ಬಾಲ್​ಗೆ 12 ರನ್ ಗಳಿಸಿದ್ದಾರೆ.

  • 14 Apr 2021 10:39 PM (IST)

    ಸನ್​ರೈಸರ್ಸ್ ಗೆಲುವಿಗೆ 30 ಬಾಲ್​ಗೆ 42 ಬೇಕು

    ಸನ್​ರೈಸರ್ಸ್ ಹೈದರಾಬಾದ್ ತಂಡ ಗೆಲ್ಲಲು 30 ಬಾಲ್​ಗೆ 42 ರನ್ ಬೇಕಾಗಿದೆ. ತಂಡದ ಪರವಾಗಿ ಬೇರ್​ಸ್ಟೋ ಮತ್ತು ಮನೀಶ್ ಪಾಂಡೆ ಆಡುತ್ತಿದ್ದಾರೆ. ಸನ್​ರೈಸರ್ಸ್ ಸ್ಕೋರ್ 15 ಓವರ್​ಗೆ 108/2 ಆಗಿದೆ.

  • 14 Apr 2021 10:35 PM (IST)

    ಸನ್​ರೈಸರ್ಸ್ 102/2 (14 ಓವರ್)

    14 ಓವರ್​ಗಳ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ ಆಟಗಾರರು 2 ವಿಕೆಟ್ ಕಳೆದುಕೊಂಡು 102 ರನ್ ದಾಖಲಿಸಿದ್ದಾರೆ. ತಂಡದ ಗೆಲುವಿಗೆ 36 ಬಾಲ್​ಗೆ 48 ರನ್ ಬೇಕಾಗಿದೆ. ಮನೀಶ್ ಪಾಂಡೆ-ಬೇರ್​ಸ್ಟೋ ಕ್ರೀಸ್​ನಲ್ಲಿದ್ದಾರೆ.

  • 14 Apr 2021 10:33 PM (IST)

    ವಾರ್ನರ್ ಔಟ್

    ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ಡೇವಿಡ್ ವಾರ್ನರ್ 37 ಬಾಲ್​ಗೆ 54 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಜಾಂಇಸನ್ ಬಾಲ್​ಗೆ ಕ್ರಿಶ್ಚಿಯನ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಬೇರ್​ಸ್ಟೋ ಮನೀಶ್ ಪಾಂಡೆಗೆ ಜೊತೆಯಾಗಿದ್ದಾರೆ.

  • 14 Apr 2021 10:30 PM (IST)

    ಸನ್​ರೈಸರ್ಸ್ ಗೆಲುವಿಗೆ 42 ಬಾಲ್​ಗೆ 54 ರನ್

    ಸನ್​ರೈಸರ್ಸ್ ತಂಡ 13 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 96 ರನ್ ದಾಖಲಿಸಿದೆ.

    ವಾರ್ನರ್ 31 ಬಾಲ್​ಗೆ ಅರ್ಧಶತಕ..

  • 14 Apr 2021 10:28 PM (IST)

    ವಾರ್ನರ್ ಭರ್ಜರಿ ಅರ್ಧಶತಕ

    ಸನ್​ರೈಸರ್ಸ್ ಹೈದರಾಬಾದ್ ಪರ ನಾಯಕ ಡೇವಿಡ್ ವಾರ್ನರ್ ಭರ್ಜರಿ ಅರ್ಧಶತಕ ದಾಖಲಿಸಿದ್ದಾರೆ. ವಾರ್ನರ್ 33 ಬಾಲ್​ಗೆ 53 ರನ್ ಗಳಿಸಿ ಆಡುತ್ತಿದ್ದಾರೆ. 7 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ್ದಾರೆ.

  • 14 Apr 2021 10:19 PM (IST)

    ವಾರ್ನರ್ ಬೌಂಡರಿ ಆಟ

    ಡೇವಿಡ್ ವಾರ್ನರ್ ಚಹಾಲ್ ಕೊನೆಯ ಓವರ್​ನ ಬಾಲ್​ಗೆ 2 ಬೌಂಡರಿ ಬಾರಿಸಿದ್ದಾರೆ. ಸನ್​ರೈಸರ್ಸ್ ತಂಡದ ಮೊತ್ತ 11 ಓವರ್​ಗೆ 87/1 ಆಗಿದೆ. ಗೆಲ್ಲಲು 54 ಬಾಲ್​ಗೆ 63 ರನ್ ಬೇಕಿದೆ. ವಾರ್ನರ್ 47 ರನ್ ಬಾರಿಸಿ ಅರ್ಧಶತಕದ ಹೊಸ್ತಿಲಲ್ಲಿ ಇದ್ದಾರೆ.

  • 14 Apr 2021 10:15 PM (IST)

    ಸನ್​ರೈಸರ್ಸ್ 77/1 (10 ಓವರ್)

    10 ಓವರ್​ಗಳ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ ತಂಡ 1 ವಿಕೆಟ್ ಕಳೆದುಕೊಂಡು 77 ರನ್ ಕಲೆಹಾಕಿದೆ. ತಂಡಕ್ಕೆ ಗೆಲ್ಲಲು 60 ಬಾಲ್​ಗೆ 73 ರನ್ ಬೇಕಿದೆ.

  • 14 Apr 2021 10:09 PM (IST)

    ಸನ್​ರೈಸರ್ಸ್ 70/1 (9 ಓವರ್)

    ಸನ್​ರೈಸರ್ಸ್ ಹೈದರಾಬಾದ್ ತಂಡ 9 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 70 ರನ್ ದಾಖಲಿಸಿದೆ. ತಂಡದ ಪರ ವಾರ್ನರ್ 32(19), ಮನೀಶ್ ಪಾಂಡೆ 29(26) ಆಡುತ್ತಿದ್ದಾರೆ. ಸನ್​ರೈಸರ್ಸ್ ಗೆಲುವಿಗೆ 66 ಬಾಲ್​ಗೆ 80 ರನ್ ಬೇಕಿದೆ.

  • 14 Apr 2021 10:04 PM (IST)

    ಪಾಂಡೆ ಸಿಕ್ಸರ್

    ವಾಷಿಂಗ್ಟನ್ ಸುಂದರ್ ಕೊನೆಯ ಓವರ್​ನಲ್ಲಿ ಮನೀಶ್ ಪಾಂಡೆ ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ತಂಡದ ಮೊತ್ತ 8 ಓವರ್ ಅಂತ್ಯಕ್ಕೆ 65/1 ಆಗಿದೆ. ಹೈದರಾಬಾದ್ ಗೆಲ್ಲಲು 72 ಬಾಲ್​ಗೆ 85 ರನ್ ಬೇಕಾಗಿದೆ.

  • 14 Apr 2021 10:01 PM (IST)

    ಸನ್​ರೈಸರ್ಸ್ 57/1 (7 ಓವರ್)

    ಸನ್​ರೈಸರ್ಸ್ ಹೈದರಾಬಾದ್ ತಂಡ ಗೆಲ್ಲಲು 78 ಬಾಲ್​ಗೆ 93 ರನ್ ಬೇಕಾಗಿದೆ. 7 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 57 ರನ್ ದಾಖಲಿಸಿದೆ.

  • 14 Apr 2021 09:58 PM (IST)

    ಪವರ್​ಪ್ಲೇ ಅಂತ್ಯಕ್ಕೆ ಸನ್​ರೈಸರ್ಸ್ 50/1 (6 ಓವರ್)

    6 ಓವರ್​ಗಳ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ ತಂಡ 1 ವಿಕೆಟ್ ಕಳೆದುಕೊಂಡು 50 ರನ್ ದಾಖಲಿಸಿದೆ. ತಂಡದ ಪರ ವಾರ್ನರ್ 28(13) ಹಾಗೂ ಮನೀಶ್ ಪಾಂಡೆ 14(14) ಕಣದಲ್ಲಿದ್ದಾರೆ.

  • 14 Apr 2021 09:50 PM (IST)

    ಸನ್​ರೈಸರ್ಸ್ 38/1 (5 ಓವರ್)

    ಸನ್​ರೈಸರ್ಸ್ ಹೈದರಾಬಾದ್ ತಂಡ 5 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿದೆ. ತಂಡದ ಪರ ನಾಯಕ ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ ಬ್ಯಾಟ್ ಬೀಸುತ್ತಿದ್ದಾರೆ. ಸನ್​ರೈಸರ್ಸ್ ಗೆಲ್ಲಲು 90 ಬಾಲ್​ಗೆ 112 ರನ್ ಬೇಕಿದೆ.

  • 14 Apr 2021 09:46 PM (IST)

    ಸನ್​ರೈಸರ್ಸ್ 32/1 (4 ಓವರ್)

    ಸನ್​ರೈಸರ್ಸ್ ಹೈದರಾಬಾದ್ ತಂಡ 4 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 32 ರನ್ ಕಲೆಹಾಕಿದೆ. ಎಸ್​ಆರ್​ಎಚ್ ಪರ ವಾರ್ನರ್ ಹಾಗೂ ಮನೀಶ್ ಪಾಂಡೆ ಕಣದಲ್ಲಿದ್ದಾರೆ. ರನ್ ಗತಿ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.

  • 14 Apr 2021 09:42 PM (IST)

    ಸನ್​ರೈಸರ್ಸ್ ಹೈದರಾಬಾದ್ 15/1 (3 ಓವರ್)

    ಸನ್​ರೈಸರ್ಸ್ ಹೈದರಾಬಾದ್ ತಂಡ 3 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 15 ರನ್ ದಾಖಲಿಸಿದೆ. ಮನೀಶ್ ಪಾಂಡೆ ಹಾಗೂ ಡೇವಿಡ್ ವಾರ್ನರ್ ಬ್ಯಾಟಿಂಗ್​ನಲ್ಲಿದ್ದಾರೆ. ಆರ್​ಸಿಬಿ ಪರ ಸಿರಾಜ್ ಹಾಗೂ ಜಾಮಿಸನ್ ಬೌಲಿಂಗ್ ಮಾಡುತ್ತಿದ್ದಾರೆ.

    ಆರ್​ಸಿಬಿ ಪರ ವಿಕೆಟ್ ಕಿತ್ತ ಸಿರಾಜ್

  • 14 Apr 2021 09:39 PM (IST)

    ವೃದ್ಧಿಮಾನ್ ಸಹಾ ಔಟ್

    ಇನ್ನಿಂಗ್ಸ್ ಆರಂಭಿಸಿದ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಮೊದಲ ಬರೆ ಬಿದ್ದಿದೆ. ಓಪನರ್ ವೃದ್ಧಿಮಾನ್ ಸಹಾ 9 ಬಾಲ್​ಗೆ 1 ರನ್ ಕಲೆಹಾಕಿ ಸಿರಾಜ್​ಗೆ ವಿಕೆಟ್ ಒಪ್ಪಿಸಿದ್ದಾರೆ.

  • 14 Apr 2021 09:11 PM (IST)

    ರಾಯಲ್ ಚಾಲೆಂಜರ್ಸ್ 149/8 (20 ಓವರ್)

    20 ಓವರ್​ಗಳ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ತಂಡ 7 ವಿಕೆಟ್ ಕಳೆದುಕೊಂಡು 149 ರನ್ ದಾಖಲಿಸಿದೆ. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ 150 ರನ್​ಗಳ ಟಾರ್ಗೆಟ್ ನೀಡಿದೆ. ಕೊನೆಯ ಎಸೆತದಲ್ಲಿ ಮ್ಯಾಕ್ಸ್​ವೆಲ್ ಔಟ್ ಆಗಿದ್ದಾರೆ.

  • 14 Apr 2021 09:06 PM (IST)

    ಮ್ಯಾಕ್ಸ್​ವೆಲ್ 50!

    ರಾಯಲ್ ಚಾಲೆಂಜರ್ಸ್ ಪರ ಏಕಾಂಗಿ ಹೋರಾಟ ಮಾಡಿದ ಗ್ಲೆನ್ ಮ್ಯಾಕ್ಸ್​ವೆಲ್ ಅರ್ಧಶತಕ ಪೂರೈಸಿದ್ದಾರೆ. 38 ಬಾಲ್​ಗೆ 50 ರನ್ ಬಾರಿಸಿ, ತಂಡದ ಪರ ಉತ್ತಮ ಆಟವಾಡುತ್ತಿದ್ದಾರೆ. ಮ್ಯಾಕ್ಸ್​ವೆಲ್ 2 ಸಿಕ್ಸರ್, 5 ಬೌಂಡರಿ ದಾಖಲಿಸಿದ್ದಾರೆ.

  • 14 Apr 2021 09:03 PM (IST)

    ಜಾಮಿಸನ್ ಔಟ್

    ಕೊನೆಯ ಓವರ್​ನ ಮೊದಲನೇ ಎಸೆತದಲ್ಲಿ ಕೈಲ್ ಜಾಮಿಸನ್ ಔಟ್ ಆಗಿದ್ದಾರೆ. ಜೇಸನ್ ಹೋಲ್ಡರ್ ಬಾಲ್​ನ್ನು ಮನೀಶ್ ಪಾಂಡೆಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಮ್ಯಾಕ್ಸ್​ವೆಲ್ ಬ್ಯಾಟ್ ಮಾಡುತ್ತಿದ್ದು ಹರ್ಷಲ್ ಪಟೇಲ್ ಜೊತೆಯಾಗಿದ್ದಾರೆ. ಜಾಮಿಸನ್ 9 ಬಾಲ್​ಗೆ 12 ರನ್​ಗಳ ಕೊಡುಗೆ ನೀಡಿದ್ದಾರೆ.

  • 14 Apr 2021 08:58 PM (IST)

    ರಾಯಲ್ ಚಾಲೆಂಜರ್ಸ್ 124/6 (18 ಓವರ್)

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 124 ರನ್ ದಾಖಲಿಸಿದೆ. ಜಾಮಿಸನ್ ಹಾಗೂ ಮ್ಯಾಕ್ಸ್​ವೆಲ್ ಅಂತಿಮ ಓವರ್​ಗಳಲ್ಲಿ ವೇಗದ ಆಟಕ್ಕೆ ಮುಂದಾಗಿದ್ದಾರೆ.

  • 14 Apr 2021 08:52 PM (IST)

    ಬಂದಂತೆ ಹೋದ ಡೇನಿಯಲ್ ಕ್ರಿಶ್ಚಿಯನ್

    ಕ್ರಿಶ್ಚಿಯನ್ 2 ಬಾಲ್ ಎದುರಿಸಿ ಕೇವಲ 1 ರನ್ ಗಳಿಸಿ ಔಟ್ ಆಗಿದ್ದಾರೆ. ಟಿ. ನಟರಾಜನ್ ಬಾಲ್​ಗೆ ಕೀಪರ್ ವೃದ್ಧಿಮಾನ್ ಸಹಾಗೆ ಕ್ಯಾಚ್ ನೀಡಿದ್ದಾರೆ. 17 ಓವರ್ ಅಂತ್ಯಕ್ಕೆ ಆರ್​ಸಿಬಿ ಮೊತ್ತ 110/6 ಆಗಿದೆ.

  • 14 Apr 2021 08:47 PM (IST)

    ರಾಯಲ್ ಚಾಲೆಂಜರ್ಸ್ 106/5 (16 ಓವರ್)

    16 ಓವರ್​ಗಳ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 106 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ. ಯಾವೊಬ್ಬ ಬ್ಯಾಟ್ಸ್​ಮನ್ ಕೂಡ ಇನ್ನಿಂಗ್ಸ್ ಕಟ್ಟುವ ಪರಿಪೂರ್ಣ ಆಟ ತೋರುತ್ತಿಲ್ಲ. ಸನ್​ರೈಸರ್ಸ್ ಹೈದರಾಬಾದ್ ಪರ ಬೌಲರ್​ಗಳು, ವಿಶೇಷವಾಗಿ ರಶೀದ್ ಖಾನ್ ಮಿಂಚುತ್ತಿದ್ದಾರೆ.

  • 14 Apr 2021 08:43 PM (IST)

    ವಾಷಿಂಗ್ಟನ್ ಸುಂದರ್ ಔಟ್

    ವಾಷಿಂಗ್ಟನ್ ಸುಂದರ್ 15.5ನೇ ಬಾಲ್​ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ರಶೀದ್ ಖಾನ್ ಬಾಲ್​ಗೆ ಮನೀಶ್ ಪಾಂಡೆಗೆ ಕ್ಯಾಚ್ ನೀಡಿ ಸುಂದರ್ ಔಟ್ ಆಗಿದ್ದಾರೆ. ಸುಂದರ್ 11 ಬಾಲ್​ಗೆ 8 ರನ್ ಗಳಿಸುವಷ್ಟರಲ್ಲಿ ಸುಸ್ತಾಗಿದ್ದಾರೆ.

  • 14 Apr 2021 08:39 PM (IST)

    ರಾಯಲ್ ಚಾಲೆಂಜರ್ಸ್ 103/4 (15 ಓವರ್)

    ರಾಯಲ್ ಚಾಲೆಂಜರ್ಸ್ ತಂಡ 15 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 103 ರನ್ ದಾಖಲಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಪರ ಮ್ಯಾಕ್ಸ್​ವೆಲ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 14 Apr 2021 08:36 PM (IST)

    1 ರನ್​ಗೆ ಔಟ್ ಆದ ಎಬಿಡಿ

    ಆರ್​ಸಿಬಿ ಪರ ಬ್ಯಾಟಿಂಗ್​ಗೆ ಬಂದ ಎಬಿ ಡಿವಿಲಿಯರ್ಸ್ ಕೇವಲ 1 ರನ್ ಗಳಿಸಿ ನಿರ್ಗಮಿಸಿದ್ದಾರೆ. ರಶೀದ್ ಖಾನ್ ಬಾಲ್​ನ್ನು ವಾರ್ನರ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಆರ್​ಸಿಬಿ 14 ಓವರ್ ಅಂತ್ಯಕ್ಕೆ 96/4 ಆಗಿದೆ.

  • 14 Apr 2021 08:30 PM (IST)

    ರಾಯಲ್ ಚಾಲೆಂಜರ್ಸ್ 92/3 (13 ಓವರ್)

    13 ಓವರ್​ಗಳ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ 3 ವಿಕೆಟ್ ಕಳೆದುಕೊಂಡು 92 ರನ್ ದಾಖಲಿಸಿದೆ. ರಾಯಲ್ ಚಾಲೆಂಜರ್ಸ್ ಪರ ಮ್ಯಾಕ್ಸ್​ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 14 Apr 2021 08:28 PM (IST)

    ವಿರಾಟ್ ಕೊಹ್ಲಿ ಔಟ್

    ಆರ್​ಸಿಬಿ ಪರ ಉತ್ತಮ ಆಟವಾಡುತ್ತಿದ್ದ ವಿರಾಟ್ ಕೊಹ್ಲಿ ಕೆಟ್ಟ ಶಾಟ್​ಗೆ ಬಲಿಯಾಗಿದ್ದಾರೆ. ಜೇಸನ್ ಹೋಲ್ಡರ್​ ಬಾಲ್​ನ್ನು ವಿಜಯ್ ಶಂಕರ್​ಗೆ ಕ್ಯಾಚ್ ನೀಡಿದ್ದಾರೆ. 29 ಬಾಲ್​ಗೆ 33 ರನ್ ನೀಡಿ ನಿರ್ಗಮಿಸಿದ್ದಾರೆ.

  • 14 Apr 2021 08:24 PM (IST)

    ರಾಯಲ್ ಚಾಲೆಂಜರ್ಸ್ 91/2 (12 ಓವರ್)

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 91 ರನ್ ದಾಖಲಿಸಿದ್ದಾರೆ. ಆರ್​ಸಿಬಿ ಪರ ಕೊಹ್ಲಿ-ಮ್ಯಾಕ್ಸ್​ವೆಲ್ ಜೋಡಿ ಇನ್ನಿಂಗ್ಸ್ ಕಟ್ಟುವ ಆಟ ಆಡುತ್ತಿದ್ದಾರೆ.

  • 14 Apr 2021 08:19 PM (IST)

    ಮ್ಯಾಕ್ಸ್​ವೆಲ್ ಫೋರ್ ಸಿಕ್ಸರ್ ಆಟ

    10ನೇ ಓವರ್​ ಬಳಿಕ ವೇಗದ ಆಟ ಆಡುತ್ತಿರುವ ಮ್ಯಾಕ್ಸ್​ವೆಲ್ ನದೀಮ್ ಬಾಲ್​ಗೆ 2 ಬೌಂಡರಿ 2 ಸಿಕ್ಸರ್ ಬಾರಿಸಿದ್ದಾರೆ. 11 ಓವರ್​ಗಳ ಅಂತ್ಯಕ್ಕೆ ಆರ್​​ಸಿಬಿ 2 ವಿಕೆಟ್ ಕಳೆದುಕೊಂಡು 85 ರನ್ ದಾಖಲಿಸಿದೆ.

  • 14 Apr 2021 08:17 PM (IST)

    ರಾಯಲ್ ಚಾಲೆಂಜರ್ಸ್ 63/2 (10 ಓವರ್)

    10 ಓವರ್​ಗಳ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ತಂಡ 63 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ.

  • 14 Apr 2021 08:15 PM (IST)

    ರಾಯಲ್ ಚಾಲೆಂಜರ್ಸ್ 58/2 (9 ಓವರ್)

    ರಾಯಲ್ ಚಾಲೆಂಜರ್ಸ್ ತಂಡ 9 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 58 ರನ್ ದಾಖಲಿಸಿದೆ. ಸನ್​ರೈಸರ್ಸ್ ಬ್ಯಾಟಿಂಗ್ ಪಡೆಗೆ ಹೋಲಿಕೆ ಮಾಡಿದರೆ ರನ್ ವೇಗ ಹೆಚ್ಚಿಸಿಕೊಳ್ಳುವ ಅವಶ್ಯಕತೆ ಆರ್​ಸಿಬಿಗೆ ಇದೆ.

  • 14 Apr 2021 08:09 PM (IST)

    ರಾಯಲ್ ಚಾಲೆಂಜರ್ಸ್ 55/2 (8 ಓವರ್)

    ಸನ್​ರೈಸರ್ಸ್ ಪರ ಸ್ಪಿನ್ನರ್​ಗಳು ಕಮಾಲ್ ಮಾಡುತ್ತಿದ್ದಾರೆ. ಕೊನೆಯ ಓವರ್ ಬೌಲ್ ಮಾಡಿದ ರಶೀದ್ ಕೇಔಲ 7 ರನ್ ಬಿಟ್ಟುಕೊಟ್ಟಿದ್ದಾರೆ. ಆರ್​ಸಿಬಿ ಪರ ಮ್ಯಾಕ್ಸ್​ವೆಲ್-ಕೊಹ್ಲಿ ಜೊತೆಯಾಟ ಮುಂದುವರಿದಿದೆ. 8 ಓವರ್​ಗೆ 2 ವಿಕೆಟ್ ಕಳೆದುಕೊಂಡು 55 ರನ್ ದಾಖಲಾಗಿದೆ.

  • 14 Apr 2021 08:04 PM (IST)

    ರಾಯಲ್ ಚಾಲೆಂಜರ್ಸ್ 48/2 (7 ಓವರ್)

    ರಾಯಲ್ ಚಾಲೆಂಜರ್ಸ್ 2 ವಿಕೆಟ್ ಕಳೆದುಕೊಂಡು ರನ್ ಗತಿ ನಿಧಾನವಾಗಿದೆ. ಪಡಿಕ್ಕಲ್ ಹಾಗೂ ಶಹಬಾಜ್ ಔಟ್ ಆಗಿದ್ದಾರೆ. ಕೊಹ್ಲಿ-ಮ್ಯಾಕ್ಸ್​ವೆಲ್ ಆಡುತ್ತಿದ್ದಾರೆ. 7 ಓವರ್ ಅಂತ್ಯಕ್ಕೆ ಆರ್​ಸಿಬಿ ಮೊತ್ತ 48 ಆಗಿದೆ. ಕೊನೆಯ ಓವರ್​ನಲ್ಲಿ ಶಹಬಾಜ್ ಹೆಚ್ಚು ರನ್ ಬಿಟ್ಟುಕೊಟ್ಟಿಲ್ಲ.

  • 14 Apr 2021 08:01 PM (IST)

    ಶಹಬಾಜ್ ಔಟ್

    ಶಹಬಾಜ್ ಅಹ್ಮದ್, ಶಹಬಾಜ್ ನದೀಮ್ ಬಾಲ್​ಗೆ ಸಿಕ್ಸರ್ ಬಾರಿಸಲು ಹೋಗಿ ರಶೀದ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಶಹಬಾಜ್ ಅಹ್ಮದ್ 10 ಬಾಲ್​ಗೆ 1 ಸಿಕ್ಸರ್ ಸಹಿತ 14 ರನ್ ನೀಡಿ ನಿರ್ಗಮಿಸಿದ್ದಾರೆ. ಮ್ಯಾಕ್ಸ್​ವೆಲ್-ಕೊಹ್ಲಿ ಜೊತೆಯಾಗಿದ್ದಾರೆ.

  • 14 Apr 2021 07:59 PM (IST)

    ಪವರ್​ಪ್ಲೇ ಅಂತ್ಯಕ್ಕೆ 47/1

    ಪವರ್​ಪ್ಲೇ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1 ವಿಕೆಟ್ ಕಳೆದುಕೊಂಡು 47 ರನ್ ದಾಖಲಿಸಿದೆ. ಕೊನೆಯ ಓವರ್​ನ್ನು ನಟರಾಜನ್ ಬಾಲ್ ಮಾಡಿದ್ದಾರೆ. ಆರ್​ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ಹಾಗೂ ಶಹಬಾಜ್ ಅಹ್ಮದ್ ಬ್ಯಾಟ್ ಮಾಡುತ್ತಿದ್ದಾರೆ.

  • 14 Apr 2021 07:55 PM (IST)

    ರಾಯಲ್ ಚಾಲೆಂಜರ್ಸ್ 36/1 (5 ಓವರ್)

    ರಾಯಲ್ ಚಾಲೆಂಜರ್ಸ್ ತಂಡ 5 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 36 ರನ್ ದಾಖಲಿಸಿದೆ. ಸನ್​ರೈಸರ್ಸ್ ಪರ ಕೊನೆಯ ಓವರ್​ನ್ನು ನದೀಮ್ ಬಾಲ್ ಮಾಡಿ 10 ರನ್ ಬಿಟ್ಟುಕೊಟ್ಟಿದ್ದಾರೆ.

  • 14 Apr 2021 07:53 PM (IST)

    ಶಹಬಾಜ್ ಸಿಕ್ಸರ್

    ನದೀಮ್ ಬಾಲ್​ಗೆ ಶಹಬಾಜ್ ಸಿಕ್ಸರ್ ಬಾರಿಸಿದ್ದಾರೆ. ಸ್ಪಿನ್ ಎಸೆತವನ್ನು ಕುಳಿತು ಎದುರಿಸಿ, ಲೆಗ್ ಸೈಡ್​ನತ್ತ ಸಿಕ್ಸ್ ದಾಖಲಿಸಿದ್ದಾರೆ.

  • 14 Apr 2021 07:51 PM (IST)

    ರಾಯಲ್ ಚಾಲೆಂಜರ್ಸ್ 26/1 (4 ಓವರ್)

    ರಾಯಲ್ ಚಾಲೆಂಜರ್ಸ್ ತಂಡ 4 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 26 ರನ್ ದಾಖಲಿಸಿದೆ. ಸನ್​ರೈಸರ್ಸ್ ಪರ ಭುವನೇಶ್ವರ್ ಕುಮಾರ್ ಹಾಗೂ ಜೇಸನ್ ಹೋಲ್ಡರ್ ತಲಾ 2 ಓವರ್ ಬಾಲ್ ಮಾಡಿದ್ದಾರೆ. ಕೊಹ್ಲಿ-ಶಹಬಾಜ್ ಕ್ರೀಸ್​ನಲ್ಲಿದ್ದಾರೆ.

  • 14 Apr 2021 07:46 PM (IST)

    ರಾಯಲ್ ಚಾಲೆಂಜರ್ಸ್ 20/1 (3 ಓವರ್)

    ರಾಯಲ್ ಚಾಲೆಂಜರ್ಸ್ ತಂಡ 3 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 20 ರನ್ ಕಲೆಹಾಕಿದೆ. ತಂಡದ ಪರ ನಾಯಕ ವಿರಾಟ್ ಕೊಹ್ಲಿ ಹಾಗೂ ಶಹಬಾಜ್ ಅಹಮದ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

  • 14 Apr 2021 07:45 PM (IST)

    ಪಡಿಕ್ಕಲ್ ಔಟ್

    ಆರಂಭಿಕರಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಭುವನೇಶ್ವರ್ ಕುಮಾರ್ ಬಾಲ್​ನ್ನು ಫೋರ್​ ಬಾರಿಸಲು ಹೋಗಿ, ನದೀಮ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. 13 ಬಾಲ್​ಗೆ 2 ಬೌಂಡರಿ ಸಹಿತ 11 ರನ್ ಕಲೆಹಾಕಿ ನಿರ್ಗಮಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಮೊದಲ ಪಂದ್ಯ ಆಡುತ್ತಿರುವ ಪಡಿಕ್ಕಲ್ ಮೇಲೆ ಹೆಚ್ಚು ಭರವಸೆ ಇಡಲಾಗಿತ್ತು. ಅವರ ವಿಕೆಟ್ ಆರ್​ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

  • 14 Apr 2021 07:40 PM (IST)

    ರಾಯಲ್ ಚಾಲೆಂಜರ್ಸ್ 16/0 (2 ಓವರ್)

    ಎರಡನೇ ಓವರ್​ನಲ್ಲಿ ಅಬ್ಬರದ ಬ್ಯಾಟಿಂಗ್​ಗೆ ಮುಂದಾದ ಆರ್​ಸಿಬಿ ದಾಂಡಿಗರಾದ ದೇವದತ್ ಪಡಿಕ್ಕಲ್ ಹಾಗೂ ಕೊಹ್ಲಿ ತಂಡದ ಮೊತ್ತವನ್ನು 16ಕ್ಕೆ ಏರಿಸಿದ್ದಾರೆ. ಜೇಸನ್ ಹೋಲ್ಡರ್ ಎಸೆತಕ್ಕೆ 2 ಬೌಂಡರಿ ಬಾರಿಸಿದ್ದಾರೆ.

  • 14 Apr 2021 07:38 PM (IST)

    ರಾಯಲ್ ಚಾಲೆಂಜರ್ಸ್ 5/0 (1 ಓವರ್)

    ಬ್ಯಾಟಿಂಗ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 5 ರನ್ ಕಲೆಹಾಕಿದೆ. ಆರ್​ಸಿಬಿ ಪರ ನಾಯಕ ಕೊಹ್ಲಿ ಹಾಗೂ ಪಡಿಕ್ಕಲ್ ಬ್ಯಾಟಿಂಗ್ ಆರಂಭಿಸಿದ್ದಾರೆ.

  • 14 Apr 2021 07:09 PM (IST)

    ರಾಯಲ್ ಚಾಲೆಂಜರ್ಸ್ ಪ್ಲೇಯಿಂಗ್ ಇಲೆವೆನ್

    ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಡೇನಿಯಲ್ ಕ್ರಿಶ್ಚಿಯನ್, ಕೈಲ್ ಜಾಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್

  • 14 Apr 2021 07:07 PM (IST)

    ಸನ್​ರೈಸರ್ಸ್ ಪ್ಲೇಯಿಂಗ್ ಇಲೆವೆನ್

    ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಜಾನಿ ಬೈರ್‌ಸ್ಟೋವ್, ವಿಜಯ್ ಶಂಕರ್, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಶಹಬಾಜ್ ನದೀಮ್

  • 14 Apr 2021 07:05 PM (IST)

    ಟಾಸ್ ಗೆದ್ದ ಸನ್​ರೈಸರ್ಸ್ ಬೌಲಿಂಗ್ ಆಯ್ಕೆ

    ಸನ್​ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ರಾಯಲ್ ಚಾಲೆಂಜರ್ಸ್ ಬ್ಯಾಟಿಂಗ್ ಮಾಡಲಿದೆ. ಈ ಮೊದಲ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಚೇಸಿಂಗ್ ಮಾಡಿದ್ದ ಸನ್​ರೈಸರ್ಸ್ ಸೋಲುಂಡಿತ್ತು.

  • 14 Apr 2021 06:57 PM (IST)

    ಗೆಲುವಿನ ಲೆಕ್ಕಾಚಾರ ಹೀಗಿದೆ

    ಸನ್​ರೈಸರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಪರಸ್ಪರ ಎದುರಾಳಿಗಳಾಗಿ ಆಡಿರುವ ಪಂದ್ಯಗಳ ಪೈಕಿ ಎಸ್​ಆರ್​ಎಚ್ ತಂಡ 10 ಗೆಲುವು ಕಂಡಿದ್ದರೆ, ಆರ್​ಸಿಬಿ 7 ಬಾರಿ ವಿಜಯ ಸಾಧಿಸಿದೆ.

  • 14 Apr 2021 06:56 PM (IST)

    ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಸನ್​ರೈಸರ್ಸ್​

    ಸನ್​ರೈಸರ್ಸ್ ಹೈದರಾಬಾದ್ ತಂಡ ಇಂದು ತನ್ನ 2ನೇ ಪಂದ್ಯವನ್ನು ಗೆದ್ದು, ಟೂರ್ನಿಯಲ್ಲಿ ಮೊದಲ ಗೆಲುವು ಕಾಣುವ ನಿರೀಕ್ಷೆಯಲ್ಲಿದೆ..

  • 14 Apr 2021 06:53 PM (IST)

    ಆರ್​ಸಿಬಿ ತಯಾರಿ

    ಸನ್​ರೈಸರ್ಸ್ ವಿರುದ್ಧ ಕ್ರಿಕೆಟ್ ಕದನಕ್ಕೆ ಆರ್​ಸಿಬಿ ತಯಾರಿ

Published On - 11:13 pm, Wed, 14 April 21

Follow us on