ವೈಯಕ್ತಿಕ ದ್ವೇಷ, ಖಾಸಗಿ ವಿಡಿಯೋ ಸೋರಿಕೆ; ವಿವಾದಗಳಿಂದಲೇ ಸುದ್ದಿಯಲ್ಲಿದ್ದ ಶ್ರೀಲಂಕಾ ಕ್ರಿಕೆಟಿಗನ ಬಗ್ಗೆ ನಿಮಗೆಷ್ಟು ಗೊತ್ತು?

|

Updated on: Jun 09, 2021 | 6:10 PM

ತನ್ನ ಗೆಳತಿಯ ಮೇಲೆ ಸೇಡು ತೀರಿಸಿಕೊಳ್ಳಲು ಜಯಸೂರ್ಯ ಸ್ವತಃ ವಿಡಿಯೋ ಸೋರಿಕೆ ಮಾಡಿದ್ದಾಗಿ ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ.

ವೈಯಕ್ತಿಕ ದ್ವೇಷ, ಖಾಸಗಿ ವಿಡಿಯೋ ಸೋರಿಕೆ; ವಿವಾದಗಳಿಂದಲೇ ಸುದ್ದಿಯಲ್ಲಿದ್ದ ಶ್ರೀಲಂಕಾ ಕ್ರಿಕೆಟಿಗನ ಬಗ್ಗೆ ನಿಮಗೆಷ್ಟು ಗೊತ್ತು?
ಸನತ್ ಜಯಸೂರ್ಯ
Follow us on

ಶ್ರೀಲಂಕಾದ ಸನತ್ ಜಯಸೂರ್ಯ ಅವರು ವಿಶ್ವದ ಪ್ರಖ್ಯಾತ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಎಣಿಸಲ್ಪಟ್ಟಿದ್ದಾರೆ. ಪವರ್‌ಪ್ಲೇನಲ್ಲಿ ಕ್ರಿಕೆಟ್ ಆಡುವ ವಿಧಾನವನ್ನು ಅವರು ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಬದಲಾಯಿಸಿದರು. ಜಯಸೂರ್ಯ 90 ರ ದಶಕದಲ್ಲಿ ಅತಿ ವೇಗದ ಐವತ್ತು ಮತ್ತು ಶತಕದ ದಾಖಲೆಯನ್ನು ಹೊಂದಿದ್ದರು. ಅವರು 1996 ರಲ್ಲಿ ವಿಶ್ವಕಪ್ ಗೆದ್ದ ಶ್ರೀಲಂಕಾ ತಂಡದ ಭಾಗವಾಗಿದ್ದರು. ಅವರು ಒಟ್ಟು 586 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 110 ಟೆಸ್ಟ್, 445 ಏಕದಿನ ಮತ್ತು 31 ಟಿ 20 ಗಳು ಸೇರಿವೆ. ಒಟ್ಟು 440 ವಿಕೆಟ್ ಕಬಳಿಸಿ 20859 ರನ್ ಗಳಿಸಿದ್ದಾರೆ. ಅವರು ಭಾರತದ ವಿರುದ್ಧವೂ ಅದ್ಭುತ ದಾಖಲೆಯನ್ನು ಹೊಂದಿದ್ದರು. ಭಾರತ ವಿರುದ್ಧದ 10 ಟೆಸ್ಟ್‌ಗಳಲ್ಲಿ 67 ರ ಸರಾಸರಿಯಲ್ಲಿ 938 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ ಏಕದಿನ ಪಂದ್ಯಗಳಲ್ಲಿ 89 ಪಂದ್ಯಗಳಲ್ಲಿ 2899 ರನ್ ಗಳಿಸಿದ್ದಾರೆ. 1997 ರಲ್ಲಿ ನಡೆದ ಪೆಪ್ಸಿ ಕಪ್‌ನಲ್ಲಿ ಅವರು ಭಾರತದ 225 ರನ್‌ಗಳನ್ನು ಬೆನ್ನಟ್ಟುವಾಗ ಏಕಾಂಗಿಯಾಗಿ 151 ರನ್ ಬಾರಿಸಿದ್ದರು.

ಆದರೆ ಸನತ್ ಜಯಸೂರ್ಯ ಅವರು ಮೈದಾನದ ಹೊರಗಿನ ವಿವಾದಗಳಲ್ಲಿ ಸಿಲುಕಿದ್ದು, ಕೆಲವೊಮ್ಮೆ ಭ್ರಷ್ಟಾಚಾರಕ್ಕಾಗಿ ಮತ್ತು ಕೆಲವೊಮ್ಮೆ ಇತರ ಕೆಟ್ಟ ಕೆಲಸಗಳಲ್ಲಿ. ಅದೇ ರೀತಿ, ಒಮ್ಮೆ ತನ್ನ ಗೆಳತಿಯ ಸೆಕ್ಸ್ ಟೇಪ್ ಸೋರಿಕೆಯಾದ ಪ್ರಕರಣದಲ್ಲಿ ಸಿಕ್ಕಿಬಿದ್ದಿದರು. ಸೇಡು ತೀರಿಸಿಕೊಳ್ಳಲು ತನ್ನ ಗೆಳತಿಯ ಸೆಕ್ಸ್ ವಿಡಿಯೋವನ್ನು ಸ್ವತಃ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಲಾಯಿತು. ಈ ಸಮಯದಲ್ಲಿ ಅವರು ಅನೈತಿಕ ಸಂಬಂಧದಲ್ಲಿದ್ದರು ಎಂದು ವರದಿಯಾಗಿತ್ತು. ಈ ವಿಷಯದಲ್ಲಿ ಸಾಕಷ್ಟು ಅಸಮಾಧಾನವಿತ್ತು. ಜೊತೆಗೆ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

2017 ರ ಪ್ರಕರಣ
ಈ ಪ್ರಕರಣವು 2017 ರಲ್ಲಿ ಬೆಳಕಿಗೆ ಬಂತು. ಆ ಸಮಯದಲ್ಲಿ, ತನ್ನ ಗೆಳತಿಯ ಮೇಲೆ ಸೇಡು ತೀರಿಸಿಕೊಳ್ಳಲು ಜಯಸೂರ್ಯ ಸ್ವತಃ ವಿಡಿಯೋ ಸೋರಿಕೆ ಮಾಡಿದ್ದಾಗಿ ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ. ಕೊಲಂಬೊ ಟೆಲಿಗ್ರಾಫ್‌ನಲ್ಲಿ ಪ್ರಕಟವಾದ ಲೇಖನವೊಂದರ ಪ್ರಕಾರ, ಈ ಬಗ್ಗೆ ಹುಡುಗಿ ತನ್ನ ಕೆಲವು ಆಪ್ತರಿಗೆ ವಿವರವಾಗಿ ಹೇಳಿದ್ದಳು. ಅವರು ಜಯಸೂರ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಮತ್ತು ಈ ಕಾರ್ಯಕ್ರಮವು ಒಂದು ಸಣ್ಣ ದೇವಾಲಯದಲ್ಲಿ ನಡೆಯಿತು ಎಂದು ಅವರು ಹೇಳಿದ್ದಾರೆ. ಏಕೆಂದರೆ ಆ ಸಮಯದಲ್ಲಿ ಸನತ್ ಜಯಸೂರ್ಯ ತಮ್ಮ ಹೆಂಡತಿಯಿಂದ ವಿಚ್ಚೇದನ ಪಡೆದಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ದೇವಾಲಯದಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಳ್ಳಲಾಗಿತ್ತು ಎಂದು ಆಕೆ ಹೇಳಿಕೆ ನೀಡಿದ್ದಳು. ಈ ವಿಚಾರ ಸಾಕಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಏಕೆಂದರೆ ಆ ಸಮಯದಲ್ಲಿ ಜಯಸೂರ್ಯ ಮಾಜಿ ಕ್ರಿಕೆಟಿಗ ಮಾತ್ರವಲ್ಲ, ಮಹಿಂದಾ ರಾಜಪಕ್ಸೆ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ ನಂತರ ಈ ವಿಷಯದಲ್ಲಿ ಹೆಚ್ಚು ಏನೂ ಸಂಭವಿಸಲಿಲ್ಲ ಮತ್ತು ಈ ವಿಷಯವನ್ನು ಮುಚ್ಚಿ ಹಾಕಲಾಯಿತು.

ಆದರೆ ಜಯಸೂರ್ಯ ವಿವಾದ ಬಗ್ಗೆ ಮಾತನಾಡಿದರೆ ಇದು ಮೊದಲ ಪ್ರಕರಣವಲ್ಲ. ರುಹಾನಾ ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲು ಜಯಸೂರ್ಯ ಜನಸಮೂಹವನ್ನು ಪ್ರಚೋದಿಸಿದರೆಂದು ಶ್ರೀಲಂಕಾದ ಜನತ ವಿಮುಕ್ತಿ ಪೆರಮಣ ಅವರು 2014 ರ ಜೂನ್‌ನಲ್ಲಿ ಆರೋಪಿಸಿದ್ದರು. ಆದರೆ, ಈ ಎಲ್ಲ ಆರೋಪಗಳನ್ನು ಮಾಜಿ ಕ್ರಿಕೆಟಿಗ ನಿರಾಕರಿಸಿದ್ದಾರೆ.