ಚೊಚ್ಚಲ ಬಾರಿಗೆ ಹಗಲು-ರಾತ್ರಿ ಪಿಂಕ್​ ಬಾಲ್ ಟೆಸ್ಟ್​​ ಕ್ರಿಕೆಟ್ ಆಡಲಿದ್ದಾರೆ ಭಾರತದ ವನಿತೆಯರು! ​

|

Updated on: May 20, 2021 | 11:06 AM

Indian women maiden pink ball Test: ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯು ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಭಾರತ ತಂಡದ ವನಿತೆಯರು ಚೊಚ್ಚಲ ಬಾರಿಗೆ ಹಗಲು-ರಾತ್ರಿ ಪಿಂಕ್​ ಬಾಲ್​ ಕ್ರಿಕೆಟ್ ಆಡಲಿದ್ದಾರೆ!

ಚೊಚ್ಚಲ ಬಾರಿಗೆ ಹಗಲು-ರಾತ್ರಿ ಪಿಂಕ್​ ಬಾಲ್ ಟೆಸ್ಟ್​​ ಕ್ರಿಕೆಟ್ ಆಡಲಿದ್ದಾರೆ ಭಾರತದ ವನಿತೆಯರು!  ​
ಚೊಚ್ಚಲ ಬಾರಿಗೆ ಹಗಲು-ರಾತ್ರಿ ಪಿಂಕ್​ ಬಾಲ್ ಟೆಸ್ಟ್​​ ಕ್ರಿಕೆಟ್ ಆಡಲಿದ್ದಾರೆ ಭಾರತದ ವನಿತೆಯರು! ​
Follow us on

ಕೋಲ್ಕೊತ್ತಾ: ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯು ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಭಾರತ ತಂಡದ ವನಿತೆಯರು ಚೊಚ್ಚಲ ಬಾರಿಗೆ ಹಗಲು-ರಾತ್ರಿ ಪಿಂಕ್​ ಬಾಲ್​ ಕ್ರಿಕೆಟ್ ಆಡಲಿದ್ದಾರೆ! ಈ ಬಗ್ಗೆ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ​, ಇದೇ ವರ್ಷಾಂತ್ಯದಲ್ಲಿ ಭಾರತ ಕ್ರಿಕೆಟ್ ತಂಡದ ವನಿತೆಯರು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಆ ವೇಳೆ ಅವರು ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಬಾರಿಗೆ ಹಗಲು-ರಾತ್ರಿ ಪಿಂಕ್​ ಬಾಲ್ ಟೆಸ್ಟ್​​ ಕ್ರಿಕೆಟ್ ಆಡಲಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋಗಲು ಅತೀವ ಸಂತಸವಾಗುತ್ತಿದೆ. ನಮ್ಮ ವನಿತೆಯರು ಡೇ-ನೈಟ್​ ಟೆಸ್ಟ್​ ಮ್ಯಾಚ್​ ಆಲಿದ್ದಾರೆ. ಇದರಿಂದ ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಭಾರೀ ಉತ್ತೇಜನ ದೊರೆಯಲಿದೆ ಎಂದು ಜಯ್​ ಷಾ ಟ್ವೀಟ್​ನಲ್ಲಿ ತಿಳಿಸಿದ್ದಾರೆ: ಟ್ವೀಟ್​ ಸಾರಾಂಶ ಹೀಗಿದೆ: Taking forward our commitment towards women’s cricket, I am extremely pleased to announce that Team India @BCCIwomen will play in their first-ever pink ball day-night Test later this year in Australia.

ಇದಾದ ಕೆಲವೇ ಕ್ಷಣಗಳಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಂತಾರಾಕ್ಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ ಅವರ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿದೆ.

(Team India women to play maiden day-night pink ball Test in Australia tweets BCCI secretary Jay Shah)