India vs England 4th Test Day 3: ಭರ್ಜರಿ ಜಯದೊಂದಿಗೆ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸಿದ ಭಾರತ

|

Updated on: Mar 06, 2021 | 4:29 PM

India vs England 4th Test Live Updates: ಒಂದು ಪಕ್ಷ ಭಾರತದ ಸ್ಪಿನ್ನರ್​ಗಳು ಮೂರನೇ ಟೆಸ್ಟ್​ನಲ್ಲಿ ತೋರಿದ ಪ್ರದರ್ಶನವನ್ನು ಪುನರಾವರ್ತಿಸಿದರೆ, ಈ ಟೆಸ್ಟ್ ಇಂದೇ ಕೊನೆಗೊಂಡರೂ ಆಶರ್ಯಪಡಬೇಕಿಲ್ಲ.

India vs England 4th Test Day 3: ಭರ್ಜರಿ ಜಯದೊಂದಿಗೆ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸಿದ ಭಾರತ
ಟೆಸ್ಟ್ ಮತ್ತು ಸರಣಿ ಗೆದ್ದ ಸಂಭ್ರಮದಲ್ಲಿ ಟೀಮ್ ಇಂಡಿಯಾ
Follow us on

India vs England 4th Test Day 3 Live | ಅಹಮದಾಬಾದ್: ಭಾರತದ ಹೊಸ ಬೌಲಿಂಗ್ ಸೆನ್ಸೇಷನ್ ಅಕ್ಷರ್ ಪಟೇಲ್ ಮತ್ತು ಅನುಭವಿ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ತಲಾ 5 ವಿಕಟ್​ ಪಡೆಯುವ ಸಾಧನೆ ಮಾಡಿ ಭಾರತಕ್ಕೆ ಸರಣಿ ಗೆಲುವು ಕೊಡಿಸುವುದರೊಂದಿಗೆ ವಿಶ್ವ ಟೆಸ್ಟ್  ಚಾಂಪಿಯನ್​ಶಿಪ್ (WTC) ಫೈನಲ್​ನಲ್ಲಿ ಆಡುವ ಅರ್ಹತೆಯನ್ನೂ ದೊರಕಿಸಿದ್ದಾರೆ. ಇಂದು ಮೊಟೆರಾದ ನರೇಂದ್ರ ಮೋದಿ ಮೈದಾನದಲ್ಲಿ ಕೊನೆಗೊಂಡ ಪಂದ್ಯದಲ್ಲಿ ಭಾರತ ಪ್ರವಾಸಿಗರನ್ನುಇನ್ನೂ 2 ದಿನಗಳ ಆಟ ಬಾಕಿಯಿರುವಂತೆಯೇ ಇನ್ನಿಂಗ್ಸ್ ಮತ್ತು 25 ರನ್​​ಗಳಿಂದ ಬಗ್ಗು ಬಡಿದು ಸರಣಿಯನ್ನು 3-1 ಅಂತರದಿಂದ ಗೆದ್ದಿತು.   

ಭಾರತ ಮತ್ತೊಮ್ಮೆ ಬ್ಯಾಟ್ ಮಾಡುವಂತಾಗಲು 161 ರನ್ ಗಳಿಸಬೇಕಿದ್ದ ಇಂಗ್ಲೆಂಡ್ 135 ರನ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತು. ಮಧ್ಯಮ ಕ್ರಮಾಂಕದ ಆಟಗಾರ ಡೇನಿಯಲ್ ಲಾರೆನ್ಸ್ ಮಾತ್ರ ಭಾರತದ ಸ್ಪಿನ್ನರ್​ಗಳನ್ನು ವಿಶ್ವಾಸದಿಂದ ಎದುರಿಸಿ ಅರ್ಧ ಶತಕ ಬಾರಿಸಿದರು.

ಅಕ್ಷರ್ 48 ರನ್ ನೀಡಿ 5 ವಿಕೆಟ್ ಪಡೆದರೆ, ಅಶ್ವಿನ್ 47 ರನ್​ಗಳಿಗೆ 5 ವಿಕೆಟ್ ಪಡೆದರು.

ಇದಕ್ಕೂ ಮೊದಲು, ಭಾರತ 365 ರನ್​ಗಳಿಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡು 160 ರನ್​ಗಳ ಮುನ್ನಡೆ ಸಾಧಿಸಿತು. ತಮ್ಮ ವೃತ್ತಿಬದುಕಿನ ಮೊದಲ ಶತಕ ದಾಖಲಿಸುವ ಅಂಚಿನ್ನಲ್ಲಿದ್ದ ವಾಷಿಂಗ್ಟನ್ ಸುಂದರ್ (ಅಜೇಯ 96) ಜೊತೆಗಾರರ ವಿವೇಚನೆರಹಿತ ಬ್ಯಾಟಿಂಗ್​ನಿಂದಾಗಿ ಅದನ್ನುಗಳಿಸದೆ ಹೋದರು.

ನುರಿತ ಬ್ಯಾಟ್ಸ್​ಮನ್​ನಂತೆ ಆಡುವ ಸುಂದರ್​ಗೆ ಇಂದು ವೃತ್ತಿಬದುಕಿನ ಮೊದಲ ಶತಕ ಬಾರಿಸುವ ಸುವರ್ಣಾವಕಾಶವಿತ್ತು. ಆದರೆ ಇಶಾಂತ್ ಶರ್ಮ ಮತ್ತು ಮೊಹಮ್ಮದ್ ಸಿರಾಜ್, ಬೆನ್ ಸ್ಟೋಕ್ಸ್ ಅವರ ಎಸೆತಗಳನ್ನು ಬ್ಲಾಕ್ ಮಾಡುವ ಬದಲು ತಾವು ಬ್ಯಾಟ್​ ಮಾಡಬಲ್ಲೆವು ಎನ್ನುವುದನ್ನು ಸಾಬೀತು ಮಾಡುವ ಪ್ರಯತ್ನ ಮಾಡಿದರು. ಅವರಿಂದ ಅಂಥ ಧೋರಣೆಯನ್ನು ನಿರೀಕ್ಷಿಸಿದ್ದ ಬೆನ್ ನೇರವಾದ ಎಸೆತಗಳನ್ನು ಬೌಲ್ ಮಾಡಿ ಇಶಾಂತ್​ರನ್ನು  ಎಲ್ ಬಿ ಡಬ್ಲ್ಯು ಮತ್ತು ಸಿರಾಜ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅವರ ಬ್ಯಾಟಿಂಗ್ ವೈಖರಿಯಿಂದ ಶತಕ ತಪ್ಪಿದ್ದಕ್ಕೆ ಹತಾಶರಾದ ಸುಂದರ್ ತೀವ್ರ ಸ್ವರೂಪದ ನಿರಾಶಾಭಾವದೊಂದಿಗೆ ಪೆವಿಯನ್​ನತ್ತ ಮರಳಿದರು.

 

Published On - 3:57 pm, Sat, 6 March 21