ಮಧ್ಯಮ ಕ್ರಮಾಂಕದಲ್ಲಿ ವಿಶ್ವಾಸಾರ್ಹ ಬ್ಯಾಟ್ಸ್​ಮನ್ ಆಗಿ ತನ್ನನ್ನು ಸ್ಥಾಪಿಸಿಕೊಳ್ಳಲು ಪಾಂಡ್ಯಗೆ ಇದು ಸಕಾಲ: ವಿರಾಟ್ ಕೊಹ್ಲಿ

|

Updated on: Dec 07, 2020 | 5:57 PM

ರವಿವಾರ ಎರಡನೆ ಟಿ20 ಪಂದ್ಯದಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತಕ್ಕೆ ಜಯ ದೊರಕಿಸಿದ ಹಾರ್ದಿಕ್ ಪಾಂಡ್ಯ ಟೀಮಿನಲ್ಲಿ ಒಬ್ಬ ವಿಶ್ವಾಸಾರ್ಹ ಬ್ಯಾಟ್ಸ್​ಮನ್ ಆಗಿ ತಮ್ಮನ್ನು ಸ್ಥಾಪಿಸಿಕೊಳ್ಳಲು ಇದು ಸೂಕ್ತ ಸಮಯವೆಂದು ಹೇಳಿರುವ ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ, ಪಾಂಡ್ಯ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ತೃಪ್ತಿದಾಯಕ ಸಂಗತಿಯಾಗಿದೆ ಎಂದಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ವಿಶ್ವಾಸಾರ್ಹ ಬ್ಯಾಟ್ಸ್​ಮನ್ ಆಗಿ ತನ್ನನ್ನು ಸ್ಥಾಪಿಸಿಕೊಳ್ಳಲು ಪಾಂಡ್ಯಗೆ ಇದು ಸಕಾಲ: ವಿರಾಟ್ ಕೊಹ್ಲಿ
ಹಾರ್ದಿಕ್ ಪಾಂಡ್ಯ
Follow us on

ಹಾರ್ದಿಕ್ ಪಾಂಡ್ಯನನ್ನು ಅಭಿನಂದಿಸುತ್ತಿರುವ ನಾಯಕ ವಿರಾಟ್​ ಕೊಹ್ಲಿ

ಹಾರ್ದಿಕ್ ಪಾಂಡ್ಯ ಅವರನ್ನು ಎಲ್ಲರೂ ಹೊಗಳಲಾರಂಭಿಸಿದ್ದಾರೆ. ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಅವರಂತೂ ಪಾಂಡ್ಯ ಬಗ್ಗೆ ಉಳಿದೆಲ್ಲದವರಿಗಿಂತ ಇಂಪ್ರೆಸ್ ಆಗಿದ್ದಾರೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಎರಡನೇ ಟಿ20 ಐ ಪಂದ್ಯವನ್ನು ಬಿರುಗಾಳಿ ವೇಗದ ಬ್ಯಾಟಿಂಗ್ ಮತ್ತು ಪ್ರಚಂಡ ಹೊಡೆತಗಳ ಮೂಲಕ ಕೇವಲ 22 ಎಸೆತಗಳಲ್ಲಿ ಅಜೇಯ 44 ರನ್ ಬಾರಿಸಿ ಭಾರತಕ್ಕೆ ಪಂದ್ಯ ಗೆದ್ದುಕೊಟ್ಟ ಪಾಂಡ್ಯಗೆ ಭಾರತೀಯ ಟೀಮಿನಲ್ಲಿ ಒಬ್ಬ ವಿಶ್ವಾಸಾರ್ಹ ಮಿಡ್ಲ್ ಆರ್ಡರ್ ಬ್ಯಾಟ್ಸ್​ಮನ್​ ಆಗಿ ತಮ್ಮನ್ನು ಸ್ಥಾಪಿಸಿಕೊಳ್ಳಲು ಇದು ಸಕಾಲ ಎಂದು ಕೊಹ್ಲಿ ಹೇಳಿದ್ದಾರೆ.

‘‘ನಾಲ್ಕು ವರ್ಷಗಳ ಹಿಂದೆ, 2016ರಲ್ಲಿ ಅಪ್ಪಟ ಸಾಮರ್ಥ್ಯದ ಮೇಲೆ ಅವರನ್ನು ರಾಷ್ಟ್ರೀಯ ಟೀಮಿಗೆ ಆರಿಸಲಾಗಿತ್ತು. ಆಗ ಅವರಿನ್ನೂ ಕಚ್ಚಾ ಪ್ರತಿಭೆಯ ಆಟಗಾರರಾಗಿದ್ದರು. ತನ್ನ ಸಮಯ ಈಗ ಬಂದಿದೆ ಎನ್ನುವುದನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಮುಂದಿನ 4-5 ವರ್ಷಗಳ ಕಾಲ ಅವರು ಫಿನಿಶರ್ ಆಗಿ ಯಾವುದೇ ಸ್ಥಿತಿಯಿಂದ ಭಾರತಕ್ಕೆ ಪಂದ್ಯಗಳನ್ನು ಗೆದ್ದು ಕೊಡಲಿದ್ದಾರೆ. ಅಲ್ಲದೆ, ಭಾರತೀಯ ಟೀಮಿಗೆ ಒಬ್ಬ ವಿಶ್ವಾಸಾರ್ಹ ಮತ್ತು ಟೀಮು ಆತುಕೊಳ್ಳಬಹುದಾದ ಬ್ಯಾಟ್​ಮನ್ ಎಂದು ಸಾಬೀತು ಮಾಡಲು ಪಾಂಡ್ಯಗಿದು ಸೂಕ್ತ ಸಮಯ,’’ ಎಂದು ಕೊಹ್ಲಿ ಹೇಳಿದ್ದಾರೆ.

ಪ್ರತಿ ಪಂದ್ಯಕ್ಕೆ ಪಾಂಡ್ಯ ಬೇರೆ ಬೇರೆ ವಿಧದ ಯೋಜನೆಗಳನ್ನು ಮಾಡಿಕೊಂಡು ಆ ಯೋಜನೆಗಳನ್ನು ಯಶಸ್ವೀಯಾಗಿ ಕಾರ್ಯರೂಪಕ್ಕೆ ತರವುದನ್ನು ನೋಡುತ್ತಿದ್ದರೆ ಬಹಳ ಖುಷಿಯಾಗುತ್ತದೆಯೆಂದು ಕೊಹ್ಲಿ ಹೇಳಿದ್ದಾರೆ.

‘‘ಅವರ ಮಾಡಿಕೊಳ್ಳುವ ಪ್ಲ್ಯಾನ್​ಗಳು ಪರಿಪಕ್ವವಾಗಿರುತ್ತವೆ. ಅವುಗಳನ್ನು ಅವರು ಕಾರ್ಯರೂಪಕ್ಕೆ ತಂದಾಗಲೇ ನಮಗೆ ಅವು ಅರ್ಥವಾಗುತ್ತವೆ. ಮೈದಾನದಲ್ಲಿ ಆಡುವಾಗ ಪಾಂಡ್ಯ ತಮ್ಮ ಹೃದಯದ ಮಾತು ಕೇಳುತ್ತಾರೆ. ಅವರಲ್ಲಿರುವ ಸ್ಫರ್ಧಾತ್ಮಕ ಮನೋಭಾವ ಮತ್ತು ತಮ್ಮ ಯೋಜನೆಗಳನ್ನು ಇಂಥ ಉನ್ನತಮಟ್ಟದ ಕ್ರಿಕೆಟ್​ನಲ್ಲಿ ಕಾರ್ಯಗತಗೊಳಿಸುವ ಕೌಶಲ್ಯ ಮನಸ್ಸನ್ನು ಖುಷಿಪಡಿಸುತ್ತದೆ. ಬಿಳಿ ಚೆಂಡಿನ ಗೇಮ್​ಗಳಲ್ಲಿ ನಮ್ಮ ಇಬ್ಬರು ಪರಿಣಿತ ಆಟಗಾರರಾದ ರೋಹಿತ್ ಶರ್ಮ ಮತ್ತು ಜಸ್ಪ್ರೀತ್ ಬುಮ್ರಾ ಅವರ ಗೈರು ಹಾಜರಿ ಹೊರತಾಗಿಯೂ ನಮ್ಮ ಟೀಮ್ ಅತ್ಯುತ್ತಮ ಪ್ರದರ್ಶನಗಳನ್ನು ನೀಡುತ್ತಿದೆ,’’ ಎಂದು ಕೊಹ್ಲಿ ಹೇಳಿದ್ದಾರೆ.

ಕೆಲಸದೊತ್ತಡ ನಿರ್ವಹಣೆ ಅಂಗವಾಗಿ ವಿಶ್ರಾಂತಿ ಪಡೆಯುತ್ತಿರುವ ಬುಮ್ರಾ ಸ್ಥಾನದಲ್ಲಿ ಆಡುವ ಅವಕಾಶ ಪಡೆದ ತಮಿಳುನಾಡಿನ ಯಾರ್ಕರ್ ಸ್ಪೆಷಲಿಸ್ಟ್ ಟಿ ನಟರಾಜನ್ ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ ಅಂತ ಕೊಹ್ಲಿ ಹೇಳಿದ್ದಾರೆ.

ಟಿ ನಟರಾಜನ್

‘‘ಸಾಂಘಿಕ ಪ್ರಯತ್ನಗಳಿಂದ ನಾವು ಪಂದ್ಯಗಳನ್ನು ಗೆಲ್ಲುತ್ತಿದ್ದೇವೆ. ಟೀಮಿನ ಎಲ್ಲ ಸದಸ್ಯರು ಇಂಡಿಯನ್ ಪ್ರಿಮೀಯರ್​ ಲೀಗ್​ನಲ್ಲಿ 14 ಪಂದ್ಯಗಳನ್ನು ಆಡಿರುವುದು ಪ್ಲಾನಿಂಗ್​ಗೆ ನೆರವಾಗುತ್ತಿದೆ. ಪ್ರತಿ ಪಂದ್ಯಕ್ಕೂ ನಾವು ಪ್ಲ್ಯಾನ್ ಮಾಡಿಕೊಂಡು ಅವುಗಳನ್ನು ಅಕ್ಷರಶಃ ಜಾರಿಗೊಳಿಸುತ್ತಿದ್ದೇವೆ. ರವಿವಾರದಂದು ನಾವು ಆಸ್ಟ್ರೇಲಿಯ ಟೀಮನ್ನು ನಾವು ಬೆನ್ನಟ್ಟಬಹುದಾದ ಮೊತ್ತಕ್ಕೆ ನಿಯಂತ್ರಿಸಿದೆವು. ಟೀಮಿನ ಪ್ರತಿಯೊಬ್ಬ ಸದಸ್ಯ ತನ್ನ ಸಾಮರ್ಥ್ಯಕ್ಕನುಗುಣವಾದ ಕಾಣಿಕೆ ನೀಡಿ ಯಶಸ್ಸಿನ ಭಾಗವಾಗಿದ್ದಾನೆ. ನಟರಾಜನ್ ತನಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಯುವ ಆಟಗಾರರೆಲ್ಲ ತಮಗೆ ಸಿಕ್ಕಿರುವ ಅವಕಾಶಗಳಲ್ಲಿ ಮಿಂಚುತ್ತಿರುವುದು ಸಂತೋಷವೆನಿಸುತ್ತಿದೆ,’’ ಎಂದು ಕೊಹ್ಲಿ ಹೇಳಿದರು.