ಇಂಡಿಯನ್ ಪ್ರಿಮೀಯರ್ಲೀಗ್ 13ನೇ ಅವೃತ್ತಿಯ ಚಾಂಪಿಯನ್ ಯಾರಾಗುತ್ತಾರೆನ್ನುವುದು ಇನ್ನುಳಿದಿರುವ 3 ಪಂದ್ಯಗಳ ನಂತರ ಗೊತ್ತಾಗುತ್ತದೆ. ಇಂದು ಎಲಿಮಿನೇಟರ್ ಸುತ್ತಿನ ಪಂದ್ಯ ದಕ್ಷಿಣ ಭಾರತದ ಎರಡು ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ ನಡುವೆ ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನ್ಲಲಿ ನಡೆಯಲಿದೆ. ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ರೋಹಿತ್ ಶರ್ಮ ಅವರ ಟೀಮು ನಿರೀಕ್ಷೆಗಿಂತ ಸುಲಭ ಜಯ ಗಳಿಸಿ ಫೈನಲ್ ಪ್ರವೇಶಿಸಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಕ್ವಾಲಿಫೈಯರ್ 2ರಲ್ಲಿ ಡೆಲ್ಲಿ ಜೊತೆ ಆಡುವ ಅವಕಾಶ ಪಡೆಯುತ್ತದೆ. ಸೋಲುವ ಟೀಮು ಐಪಿಎಲ್ 13 ನೇ ಸೀಸನ್ನಿಂದ ಹೊರಬೀಳುತ್ತದೆ.
ಮೊಯೀನ್ ಅಲಿ ಮತ್ತು ಶಿವಮ್ ದುಬೆ ಆಲ್ರೌಂಡರ್ಗಳಾದರೂ ಬ್ಯಾಟ್ನಿಂದಾಗಲೀ, ಬೌಲಿಂಗ್ನಲ್ಲಾಗಲೀ ಇವರಿಬ್ಬರಿಂದ ತಂಡಕ್ಕೆ ಉಪಯುಕ್ತ ಕಾಣಿಕೆ ದೊರಕುತ್ತಿಲ್ಲ. ಟೀಮಿನ ಮತ್ತೊಬ್ಬ ಪ್ರಮುಖ ಅಲ್ರೌಂಡರ್
ಆದರೆ ಅವರ ಬ್ಯಾಟ್ ಮೈದಾನದಲ್ಲಿ ಮೊಳಗುತ್ತಿಲ್ಲ. ಬ್ಯಾಟಿಂಗ್ ಕ್ರಮಾಂದಲ್ಲಿ ಬಡ್ತಿ ನೀಡುವ ನಿರ್ಧಾರ ಕೊಹ್ಲಿ ಇಂದು ತೆಗೆದುಕೊಂಡರೆ ಅದು ಸೂಕ್ತವೆನಿಸದಿರದು. ಟೀಮಿನ ಬೌಲರ್ಗಳು ಕಳೆದ 3-4 ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯಕ್ಕಿಂತ ಕೆಳಗಿನ ಪ್ರದರ್ಶನ ನೀಡುತ್ತಿದ್ದಾರೆ. ಅವರೆಲ್ಲ ಈಗ ತೋಳೇರಿಸಲೇಬೇಕಾಗಿದೆ. ಯುಜ್ವೇಂದ್ರ ಚಹಲ್ ಮತ್ತು ವಾಷಿಂಗ್ಟನ್ ಸಂದರ್ ಮೇಲೆ ಕೊಹ್ಲಿಗೆ ಅಪಾರ ಭರವಸೆಯಿದೆ. ಟೂರ್ನಿಯ ಕೊನೆ ಹಂತದಲ್ಲಿ ಅವಕಾಶ ಪಡೆದಿರುವ ಶಾಹಬಾಜ್ ನದೀಮ್ ಡೆಲ್ಲಿ ವಿರುದ್ಧ ಉತ್ತಮವಾಗಿ ಬೌಲ್ ಮಾಡಿದರು
ಮತ್ತೊಂದೆಡೆ, ಲೀಗ ಹಂತದ ತನ್ನ ಕೊನೆಯ 5 ಪಂದ್ಯಗಳನ್ನು ಗೆದ್ದು ಹಿಮಾಲಯದಷ್ಟು ಎತ್ತರಕ್ಕೆ ವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ಹೈದರಾಬಾದ್ಗೆ ಮತ್ತೊಮ್ಮೆ ವಾರ್ನರ್ ಮತ್ತು ವೃದ್ಧಿಮಾನ ಸಹಾ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
ಟೀಮಿನ ಚೇತರಿಕೆ ಮತ್ತು ಪ್ಲೇ ಆಫ್
ಮೊರಿಸ್ ಅವರ ಸೇರ್ಪಡೆಯಿಂದ ಆರ್ ಸಿ ಬಿಗೆ ಪ್ರಯೋಜನವಾಗಿರುವಂತೆಯೇ, ಜೇಸನ್ ಹೋಲ್ಡರ್ ಅವರ ಸೇರ್ಪಡೆ ಹೈದಾರಾಬಾದ್ಗೆ ನೆರವಾಗಿದೆ. ಹೋಲ್ಡರ್ ಅತ್ಯುತ್ತಮವಾಗಿ ಬೌಲ್ ಮಾಡುತ್ತಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ಓಪನಿಂಗ್ ಬೌಲರ್ ಸಂದೀಪ್ ಶರ್ಮ ವಿಕೆಟ್ ಪಡೆಯುವುದರ ಜೊತೆಗೆ ನಿಯಂತ್ರಣವನ್ನು ಸಹ ಕಾಯ್ದುಕೊಳ್ಳತ್ತಿದ್ದಾರೆ. ಯಾರ್ಕರ್ ಪರಿಣಿತ ಟಿ ನಟರಾಜನ್ ಮತ್ತು ರಶೀದ್ ಖಾನ್ ಅವರು ವಾರ್ನರ್ ತಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ.
ರೆಡ್ ಮತ್ತು ಆರೇಂಜ್ ಆರ್ಮಿಗಳ ನಡುವೆ ಇಂದು ತುರಿಸಿನ ಕಾದಾಟ ನಡೆಯುವುದು ಮಾತ್ರ ನಿಶ್ಚಿತ, ಗೆದ್ದವರಿಗೆ ಫೈನಲ್ ತಲುಪಲು ಮತ್ತೊಂದು ಅವಕಾಶ ಸಿಗುತ್ತದೆ.