IPL 2020: ಕೊಹ್ಲಿಯ ಈ 5 ತಪ್ಪು ನಿರ್ಣಯಗಳೇ ಪಂದ್ಯದ ಸೋಲಿಗೆ ಕಾರಣವಾಯ್ತ?
ಲೀಗ್ ಹಂತದ ಕೊನೆಯ ನಾಲ್ಕು ಪಂದ್ಯಗಳನ್ನ ಸೋತ್ರೂ ಆರ್ಸಿಬಿ ಅದೃಷ್ಟದಿಂದಾಗಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿತ್ತು. ಆದ್ರೆ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿದೆ. ಆರ್ಸಿಬಿ ಟೂರ್ನಿಯಿಂದ ಹೊರ ಬೀಳೋದಕ್ಕೆ ನಾಯಕ ಕೊಹ್ಲಿಯ ಐದು ತಪ್ಪು ನಿರ್ಧಾರಗಳೇ ಕಾರಣವಾಯ್ತು. ಕೊಹ್ಲಿ ತಪ್ಪು ನಿರ್ಧಾರ ನಂ.5 ಶಹಬಾಜ್ ಅಹ್ಮದ್ನನ್ನ ಕೈ ಬಿಟ್ಟ ವಿರಾಟ್ ಲೀಗ್ನ ಕೊನೆ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 2 ವಿಕೆಟ್ ಪಡೆದು ಮಿಂಚಿದ್ದ ಶಹಬಾಜ್ ಅಹ್ಮದ್ನನ್ನ ಕೊಹ್ಲಿ ಏಕಾಏಕಿ ಕೈ ಬಿಟ್ರು. ಆರ್ಸಿಬಿ […]
ಲೀಗ್ ಹಂತದ ಕೊನೆಯ ನಾಲ್ಕು ಪಂದ್ಯಗಳನ್ನ ಸೋತ್ರೂ ಆರ್ಸಿಬಿ ಅದೃಷ್ಟದಿಂದಾಗಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿತ್ತು. ಆದ್ರೆ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿದೆ. ಆರ್ಸಿಬಿ ಟೂರ್ನಿಯಿಂದ ಹೊರ ಬೀಳೋದಕ್ಕೆ ನಾಯಕ ಕೊಹ್ಲಿಯ ಐದು ತಪ್ಪು ನಿರ್ಧಾರಗಳೇ ಕಾರಣವಾಯ್ತು.
ಕೊಹ್ಲಿ ತಪ್ಪು ನಿರ್ಧಾರ ನಂ.5 ಶಹಬಾಜ್ ಅಹ್ಮದ್ನನ್ನ ಕೈ ಬಿಟ್ಟ ವಿರಾಟ್ ಲೀಗ್ನ ಕೊನೆ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 2 ವಿಕೆಟ್ ಪಡೆದು ಮಿಂಚಿದ್ದ ಶಹಬಾಜ್ ಅಹ್ಮದ್ನನ್ನ ಕೊಹ್ಲಿ ಏಕಾಏಕಿ ಕೈ ಬಿಟ್ರು. ಆರ್ಸಿಬಿ ಪರ ಸ್ಟಾರ್ ಸ್ಪಿನ್ನರ್ಗಳಾದ ಚಹಲ್ ಮತ್ತು ಜಂಪಾ ಒಂದೊಂದು ವಿಕೆಟ್ ಪಡೆದ್ರು. ಒಂದು ವೇಳೆ ಅಹ್ಮದ್ ತಂಡದಲ್ಲಿ ಇದ್ದಿದ್ರೆ, ಪಂದ್ಯದ ಗತಿ ಬದಲಾಗೋ ಸಾಧ್ಯತೆಯಿತ್ತು.
ಕೊಹ್ಲಿ ತಪ್ಪು ನಿರ್ಧಾರ ನಂ4 ಅಲಿ, ದುಬೆಯನ್ನ ಬಳಸಿಕೊಳ್ಳಲು ಕೊಹ್ಲಿ ಫೇಲ್ ಆಲ್ರೌಂಡರ್ಗಳಾದ ಮೊಯಿನ್ ಅಲಿ ಮತ್ತು ಶಿವಂ ದುಬೆಗೆ ಅವಕಾಶ ನೀಡಿದ ಕೊಹ್ಲಿ ಇವರಿಬ್ಬರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಇಬ್ಬರಿಗೂ ಕೊಹ್ಲಿ ಒಂದೊಂದೇ ಓವರ್ ನೀಡಿದ್ರು. ಒಂದು ವೇಳೆ ಇವರಿಬ್ಬರನ್ನ ಸರಿಯಾಗಿ ಬಳಸಿಕೊಂಡಿದ್ರೆ, ಈ ಜೋಡಿ ಪಂದ್ಯಕ್ಕೆ ಬ್ರೇಕ್ ಥ್ರೂ ಕೊಡದೇ ಇರುತ್ತಿರಲಿಲ್ಲ.
ಕೊಹ್ಲಿ ತಪ್ಪು ನಿರ್ಧಾರ ನಂ.3 ವೇಗಿಗಳನ್ನ ಅತಿಯಾಗಿ ನಂಬಿದ ಕೊಹ್ಲಿ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ವೇಗಿಗಳನ್ನ ಅತಿಯಾಗಿ ನಂಬಿದ್ದ ನಿರ್ಧಾರವು ಮುಳುವಾಯ್ತು. 15 ಓವರ್ಗಳ ಬಳಿಕ ವಿರಾಟ್ ಸ್ಪಿನ್ನರ್ಗಳನ್ನ ಬಳಸಿಕೊಳ್ಳಲೇ ಇಲ್ಲ. ಸುಂದರ್, ಅಲಿ ಕೋಟಾದಲ್ಲಿ ಇನ್ನು ಓವರ್ಗಳಿದ್ರೂ ಅವಕಾಶ ನೀಡಲಿಲ್ಲ.
ಕೊಹ್ಲಿ ತಪ್ಪು ನಿರ್ಧಾರ ನಂ.2 ಆರಂಭಿಕನಾಗಿ ಬಂದು ಎಡವಟ್ಟು ಮಾಡಿದ ಕೊಹ್ಲಿ ಆರ್ಸಿಬಿ ಸೋಲಿಗೆ ಪ್ರಮುಖ ಕಾರಣವಾದದ್ದೇ ಇದು. ಆರಂಭಿಕನಾಗಿ ಬಂದ ವಿರಾಟ್ ಬೇಗನೇ ವಿಕೆಟ್ ಒಪ್ಪಿಸಿದ್ರು. ಅಲ್ಲಿಗೆ ಮೊದಲ ಪ್ರಯತ್ನದಲ್ಲೇ ಕೊಹ್ಲಿ ವಿಕೆಟ್ ಪಡೆದ ಹೈದರಾಬಾದ್ ಪಂದ್ಯದ ಮೇಲೆ ಹಿಡಿತ ಸಾಧಿಸೋದಕ್ಕೆ ಕಾರಣವಾಯ್ತು.
ಕೊಹ್ಲಿ ತಪ್ಪು ನಿರ್ಧಾರ ನಂ.1 ಫಿಂಚ್ನನ್ನ ವಂಡೌನ್ನಲ್ಲಿ ಕಳಿಸಿದ್ರು. ಕೊಹ್ಲಿಯ ಮತ್ತೊಂದು ತಪ್ಪು ನಿರ್ಧಾರ ಆರೋನ್ ಫಿಂಚ್ನನ್ನ ವಂಡೌನ್ನಲ್ಲಿ ಕಣಕ್ಕಿಳಿಸಿದ್ದು. ವಂಡೌನ್ನಲ್ಲಿ ಕಣಕ್ಕಿಳಿದ ಫಿಂಚ್ ಸಾಲಿಡ್ ಬ್ಯಾಟಿಂಗ್ ಮಾಡಿದ್ರು. ಅದೇ ಫಿಂಚ್ ಆರಂಭಿಕನಾಗಿ ಬಂದಿದ್ರೆ, ಹೈದರಾಬಾದ್ ಮೇಲೆ ಸುಲಭವಾಗಿ ಒತ್ತಡ ಹೇರಬಹುದಾಗಿತ್ತು.
ಕ್ರೂಶಿಯಲ್ ಪಂದ್ಯದಲ್ಲೇ ಕೊಹ್ಲಿಯ ಈ ಐದು ತಪ್ಪು ನಿರ್ಧಾರಗಳು, ಆರ್ಸಿಬಿ ಸೋಲಿಗೆ ಕಾರಣವಾಯ್ತು. ಎಲ್ಲಕ್ಕಿಂತ ಹೆಚ್ಚಾಗಿ ಲೀಗ್ನ ಕೊನೆ ನಾಲ್ಕು ಪಂದ್ಯಗಳನ್ನ ಸೋತು ಪ್ಲೇ ಆಫ್ಗೆ ಬಂದಿದ್ದ ಕೊಹ್ಲಿ ಪಡೆ, ಹಳೆ ತಪ್ಪುಗಳನ್ನ ತಿದ್ದಿಕೊಳ್ಳದೇ ಇದ್ದಿದ್ದಕ್ಕೆ ಭಾರಿ ದಂಡ ತೆರಬೇಕಾಯ್ತು.
Published On - 9:06 am, Sat, 7 November 20