IPL 2020: ಮುಂಬೈ ಚಾಂಪಿಯನ್ ಆಟಕ್ಕೆ ಡೆಲ್ಲಿ ಪ್ರತಿರೋಧ ತೋರದೆ ಸೋತ ಪಂದ್ಯದ ಝಲಕ್ Photos
ಡೆಲ್ಲಿ ಹಾಗೂ ಮುಂಬೈ ನಡುವೆ ನಡೆದ ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ಎದುರು 57 ರನ್ಗಳ ಅತ್ಯಂತ ಹೀನಾಯ ಸೋಲು ಅನುಭವಿಸಿತು. ಡೆಲ್ಲಿ ವಿರುದ್ಧ ಶೂನ್ಯಕ್ಕೆ ಔಟಾಗೋದ್ರೊಂದಿಗೆ ಐಪಿಎಲ್ನಲ್ಲಿ ಮುಂಬೈ ಇಂಡಿಯ್ಸ್ ನಾಯಕ ರೋಹಿತ್ ಶರ್ಮಾ, ಹೆಚ್ಚು ಬಾರಿ ಡಕೌಟ್ ಆದ ದಾಖಲೆ ಮಾಡಿದ್ದಾರೆ. ರೋಹಿತ್ ಇದುವರೆಗೂ ಒಟ್ಟು 13ಬಾರಿ ಡಕೌಟ್ ಆಗಿದ್ದಾರೆ. ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆಯೋ ಮೂಲಕ ಈ ಸೀಸನ್ನಲ್ಲಿ ಬೂಮ್ರಾ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ದಾರೆ. ಇದ್ರೊಂದಿಗೆ […]
ಡೆಲ್ಲಿ ಹಾಗೂ ಮುಂಬೈ ನಡುವೆ ನಡೆದ ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ಎದುರು 57 ರನ್ಗಳ ಅತ್ಯಂತ ಹೀನಾಯ ಸೋಲು ಅನುಭವಿಸಿತು.
ಡೆಲ್ಲಿ ವಿರುದ್ಧ ಶೂನ್ಯಕ್ಕೆ ಔಟಾಗೋದ್ರೊಂದಿಗೆ ಐಪಿಎಲ್ನಲ್ಲಿ ಮುಂಬೈ ಇಂಡಿಯ್ಸ್ ನಾಯಕ ರೋಹಿತ್ ಶರ್ಮಾ, ಹೆಚ್ಚು ಬಾರಿ ಡಕೌಟ್ ಆದ ದಾಖಲೆ ಮಾಡಿದ್ದಾರೆ. ರೋಹಿತ್ ಇದುವರೆಗೂ ಒಟ್ಟು 13ಬಾರಿ ಡಕೌಟ್ ಆಗಿದ್ದಾರೆ.
ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆಯೋ ಮೂಲಕ ಈ ಸೀಸನ್ನಲ್ಲಿ ಬೂಮ್ರಾ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ದಾರೆ. ಇದ್ರೊಂದಿಗೆ 25ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದ ರಬಾಡನನ್ನ ಹಿಂದಿಕ್ಕಿರೋ ಬೂಮ್ರಾ, 27ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ.
ಕ್ವಾಲಿಫೈಯರ್ ಪಂದ್ಯದ ಮೂಲಕ 100ನೇ ಐಪಿಎಲ್ ಪಂದ್ಯವಾಡಿದ ಸೂರ್ಯಕುಮಾರ್ ಯಾದವ್, 2000ರನ್ ಪೂರೈಸಿದ ದಾಖಲೆ ಮಾಡಿದ್ರು.
ಡೆಲ್ಲಿ ವಿರುದ್ಧ ನಾಲ್ಕು ವಿಕೆಟ್ ಪಡೆದು ಮಿಂಚಿದ ಬೂಮ್ರಾ, ಮುಂಬೈ ಫೈನಲ್ಗೆ ಎಂಟ್ರಿ ಕೊಡೋದಕ್ಕೆ ಕಾರಣವಾದ್ರು.
ತಂಡ ಸೋಲಿನ ಸುಳಿಯಲ್ಲಿದ್ದರೂ ಅದ್ಭುತವಾಗಿ ಆಡಿದ ಸ್ಟೋಯ್ನಿಸ್ ಅಮೋಘ ಅರ್ಧ ಶತಕ ಬಾರಿಸಿದರು.
ಮತ್ತೊಂದೆಡೆ ಆಲ್ರೌಂಡರ್ ಆಟ ಆಡಿದ ಅಕ್ಸರ್ ಪಟೇಲ್ ತಂಡಕ್ಕೆ ಅವಶ್ಯಕವಾದ 47 ರನ್ ಕೊಡುಗೆ ನೀಡಿದರು.