ಇಂದು ಎಲಿಮಿನೇಟರ್ ಸುತ್ತಿನಲ್ಲಿ ಕೆಂಪು ಮತ್ತು ಕಿತ್ತಳೆ ಸೇನೆಗಳ ಕಾದಾಟ | Time for RCB to settle scores with SRH and move to qualifier 2

ಇಂಡಿಯನ್ ಪ್ರಿಮೀಯರ್ಲೀಗ್ 13ನೇ ಅವೃತ್ತಿಯ ಚಾಂಪಿಯನ್ ಯಾರಾಗುತ್ತಾರೆನ್ನುವುದು ಇನ್ನುಳಿದಿರುವ 3 ಪಂದ್ಯಗಳ ನಂತರ ಗೊತ್ತಾಗುತ್ತದೆ. ಇಂದು ಎಲಿಮಿನೇಟರ್ ಸುತ್ತಿನ ಪಂದ್ಯ ದಕ್ಷಿಣ ಭಾರತದ ಎರಡು ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ರೈಸರ್ಸ್ ಹೈದರಾಬಾದ ನಡುವೆ ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನ್ಲಲಿ ನಡೆಯಲಿದೆ. ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ರೋಹಿತ್ ಶರ್ಮ ಅವರ ಟೀಮು ನಿರೀಕ್ಷೆಗಿಂತ ಸುಲಭ ಜಯ ಗಳಿಸಿ ಫೈನಲ್ ಪ್ರವೇಶಿಸಿದೆ. ಇಂದಿನ ಪಂದ್ಯದಲ್ಲಿ […]

ಇಂದು ಎಲಿಮಿನೇಟರ್ ಸುತ್ತಿನಲ್ಲಿ ಕೆಂಪು ಮತ್ತು ಕಿತ್ತಳೆ ಸೇನೆಗಳ ಕಾದಾಟ | Time for RCB to settle scores with SRH and move to qualifier 2
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 06, 2020 | 4:55 PM

ಇಂಡಿಯನ್ ಪ್ರಿಮೀಯರ್ಲೀಗ್ 13ನೇ ಅವೃತ್ತಿಯ ಚಾಂಪಿಯನ್ ಯಾರಾಗುತ್ತಾರೆನ್ನುವುದು ಇನ್ನುಳಿದಿರುವ 3 ಪಂದ್ಯಗಳ ನಂತರ ಗೊತ್ತಾಗುತ್ತದೆ. ಇಂದು ಎಲಿಮಿನೇಟರ್ ಸುತ್ತಿನ ಪಂದ್ಯ ದಕ್ಷಿಣ ಭಾರತದ ಎರಡು ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ರೈಸರ್ಸ್ ಹೈದರಾಬಾದ ನಡುವೆ ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನ್ಲಲಿ ನಡೆಯಲಿದೆ. ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ರೋಹಿತ್ ಶರ್ಮ ಅವರ ಟೀಮು ನಿರೀಕ್ಷೆಗಿಂತ ಸುಲಭ ಜಯ ಗಳಿಸಿ ಫೈನಲ್ ಪ್ರವೇಶಿಸಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಕ್ವಾಲಿಫೈಯರ್ 2ರಲ್ಲಿ ಡೆಲ್ಲಿ ಜೊತೆ ಆಡುವ ಅವಕಾಶ ಪಡೆಯುತ್ತದೆ. ಸೋಲುವ ಟೀಮು ಐಪಿಎಲ್ 13 ನೇ ಸೀಸನ್​ನಿಂದ ಹೊರಬೀಳುತ್ತದೆ.

ಬೆಂಗಳೂರಿನ ಪ್ರಮುಖ ಬ್ಯಾಟ್ಸ್​ಮನ್​ಗಳು ರನ್ ಗಳಿಸುತ್ತಿದ್ದರೂ ಲೀಗ್ ಹಂತದಲ್ಲಿ ಅದರ ಪ್ರದರ್ಶನಗಳು ಅಸ್ಥಿರವಾಗಿದ್ದವು. ಸೋಲುಗೆಲುವುಸೋಲು ಸರಪಳಿಯ ನಂತರ ಪ್ಲೇ ಆಫ್ ಹಂತವನ್ನು ತಲುಪಿದೆಯಾದರೂ ಅದರ ಪಯಣ ಕನ್ವಿನ್ಸಿಂಗ್ ಅನಿಸಲಿಲ್ಲ. ಟೀಮಿನ ಬಿಗ್ ಗನ್​ಗಳುನಾಯಕ ವಿರಾಟ್ ಕೊಹ್ಲಿ ಮತ್ತು ಸ್ಟಾರ್ ಬ್ಯಾಟ್ಸ್​ಮನ್ ಎಬಿ ಡಿ ವಿಲಿಯರ್ಸ್ ಈ ಸೀಸನ್​ನಲ್ಲಿ ಕ್ರಮವಾಗಿ 460 ಮತ್ತು 454 ರನ್ ಗಳಿಸಿದ್ದಾರೆ. ಅವರಿಬ್ಬರೂ ಬಿಗ್ ಮ್ಯಾಚ್ ಪ್ಲೇಯರ್​ಗಳೆನ್ನುವುದು ವಾರ್ನರ್​ಗೆ ಚೆನ್ನಾಗಿ ಗೊತ್ತಿದೆ.

ಟೂರ್ನಮೆಂಟ್​ನ ಶೋಧ ಅನಿಸಿಕೊಂಡಿರುವ ಆರಂಭ ಆಟಗಾರ ದೇವದತ್ ಪಡಿಕ್ಕಲ್ 4 ಅರ್ಧ ಶತಕಗಳೊಂದಿಗೆ 472 ರನ್ ಕಲೆಹಾಕಿದ್ದಾರೆ. ಆರನ್ ಫಿಂಚ್ ಅವರ ಸ್ಥಾನದಲ್ಲಿ ಅಡುವ ಇಲೆವೆನ್ ಸೇರಿರುವ ಅವರದ್ದೇ ದೇಶದವರಾದ ಜೊಷುವ ಫಿಲಿಪ್ ಇದುವರೆಗೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿಲ್ಲ. ಇವತ್ತಿನ ಪಂದ್ಯ ಬಹಳ ಮಹತ್ವಪೂರ್ಣದ್ದಾಗಿರುವುದರಿಂದ ಫಿಲಿಪ್ ಬದಲಿಗೆ ಪುನಃ ಪಿಂಚ್ ಅವರನ್ನು ಆಡಿಸುವ ನಿರ್ಧಾರ ಟೀಮ್ ಮ್ಯಾನೇಜ್ಮೆಂಟ್ ಮಾಡಿದರೂ ಆಶ್ವರ್ಯಪಡಬೇಕಿಲ್ಲ.

ಮೊಯೀನ್ ಅಲಿ ಮತ್ತು ಶಿವಮ್ ದುಬೆ ಆಲ್​ರೌಂಡರ್​ಗಳಾದರೂ ಬ್ಯಾಟ್​ನಿಂದಾಗಲೀ, ಬೌಲಿಂಗ್​ನಲ್ಲಾಗಲೀ ಇವರಿಬ್ಬರಿಂದ ತಂಡಕ್ಕೆ ಉಪಯುಕ್ತ ಕಾಣಿಕೆ ದೊರಕುತ್ತಿಲ್ಲ. ಟೀಮಿನ ಮತ್ತೊಬ್ಬ ಪ್ರಮುಖ ಅಲ್​ರೌಂಡರ್ ಕ್ರಿಸ್ ಮೊರಿಸ್ ಬೌಲಿಂಗ್​ನಲ್ಲಿ ಮತ್ತು ಫೀಲ್ಡಿಂಗ್​ನಲ್ಲಿ ಉತ್ಕೃಷ್ಟ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಸತತವಾಗಿ 140ಕಿಮೀ/ಗಂಟೆಗಿಂತ ಜಾಸ್ತಿ ವೇಗದಲ್ಲಿ ಬೌಲ್ ಮಾಡುತ್ತಿರುವ ಮೊರಿಸ್ ಪವರ್ ಪ್ಲೇ ಮತ್ತು ಡೆತ್ ಓವರ್​ಗಳಲ್ಲೂ ಅದ್ಭುತವಾಗಿ ಆಕ್ರಮಣ ನಡೆಸುತ್ತಿದ್ದಾರೆ. ಹಾಗೆಯೇ, ಎದುರಾಳಿ ಆಟಗಾರನ ಬ್ಯಾಟ್​ನಿಂದ ಸಿಡಿದ ಚೆಂಡು ಮೊರಿಸ್ ಫೀಲ್ಡ್ ಮಾಡುವ ಜಾಗದೆಡೆ ಚಿಮ್ಮಿದಾಗ ಕೊಹ್ಲಿ ಮುಖದಲ್ಲಿ ಮೂಡುವ ನಿರಾತಂಕ ಭಾವವನ್ನು ನೀವು ಗಮನಿಸಿರಬಹುದು, ಅಷ್ಟು ಸೇಫ್ ಫೀಲ್ಡರ್ ಅವರು.

ಆದರೆ ಅವರ ಬ್ಯಾಟ್ ಮೈದಾನದಲ್ಲಿ ಮೊಳಗುತ್ತಿಲ್ಲ. ಬ್ಯಾಟಿಂಗ್ ಕ್ರಮಾಂದಲ್ಲಿ ಬಡ್ತಿ ನೀಡುವ ನಿರ್ಧಾರ ಕೊಹ್ಲಿ ಇಂದು ತೆಗೆದುಕೊಂಡರೆ ಅದು ಸೂಕ್ತವೆನಿಸದಿರದು. ಟೀಮಿನ ಬೌಲರ್​ಗಳು ಕಳೆದ 3-4 ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯಕ್ಕಿಂತ ಕೆಳಗಿನ ಪ್ರದರ್ಶನ ನೀಡುತ್ತಿದ್ದಾರೆ. ಅವರೆಲ್ಲ ಈಗ ತೋಳೇರಿಸಲೇಬೇಕಾಗಿದೆ. ಯುಜ್ವೇಂದ್ರ ಚಹಲ್ ಮತ್ತು ವಾಷಿಂಗ್ಟನ್ ಸಂದರ್ ಮೇಲೆ ಕೊಹ್ಲಿಗೆ ಅಪಾರ ಭರವಸೆಯಿದೆ. ಟೂರ್ನಿಯ ಕೊನೆ ಹಂತದಲ್ಲಿ ಅವಕಾಶ ಪಡೆದಿರುವ ಶಾಹಬಾಜ್ ನದೀಮ್ ಡೆಲ್ಲಿ ವಿರುದ್ಧ ಉತ್ತಮವಾಗಿ ಬೌಲ್ ಮಾಡಿದರು

ಮತ್ತೊಂದೆಡೆ, ಲೀಗ ಹಂತದ ತನ್ನ ಕೊನೆಯ 5 ಪಂದ್ಯಗಳನ್ನು ಗೆದ್ದು ಹಿಮಾಲಯದಷ್ಟು ಎತ್ತರಕ್ಕೆ ವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ಹೈದರಾಬಾದ್​ಗೆ ಮತ್ತೊಮ್ಮೆ ವಾರ್ನರ್ ಮತ್ತು ವೃದ್ಧಿಮಾನ ಸಹಾ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ಟೀಮಿನ ಚೇತರಿಕೆ ಮತ್ತು ಪ್ಲೇ ಆಫ್ ಹಂತ ತಲುಪಲು ಅವರಿಬ್ಬರ ನಡುವಿನ ಎರಡು ಶತಕದ ಜೊತೆಯಾಟಗಳು (ಮುಂಬೈ ಮತ್ತು ಡೆಲ್ಲಿ) ನಿರ್ಣಾಯಕ ಪಾತ್ರ ನಿರ್ವಹಿಸಿದವು. ವಾರ್ನರ್ ಈ ಸೀಸನ್​ನಲ್ಲಿ 14 ಪಂದ್ಯಗಳಿಂದ 529ರನ್ ಗಳಿಸಿದ್ದಾರೆ. ಕೇವಲ 3 ಪಂದ್ಯಗಳನ್ನು ಮಾತ್ರ ಆಡಿರುವ ಸಹಾ 184 ರನ್ ಕಲೆಹಾಕಿ ತಮ್ಮನ್ನು ಕಡೆಗಣಿಸಿದ್ದು ದೊಡ್ಡ ತಪ್ಪು ಅನ್ನುವುದನ್ನು ಸಾಬೀತು ಮಾಡಿದ್ದಾರೆ. ವಾರ್ನರ್ ಮತ್ತು ಸಹಾ ಜೋಡಿಯ ಪ್ರದರ್ಶನಗಳಿಂದಾಗಿ, ಕೆಳಗಿನ ಕ್ರಮಾಂಕದ ಆಟಗಾರರಾದ ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್ ಮತ್ತು ಪ್ರಿಯಮ್ ಗರ್ಗ್ ಮೊದಲಾದವರ ಮೇಲೆ ಒತ್ತಡ ಇಲ್ಲವಾಗಿದೆ.

ಮೊರಿಸ್ ಅವರ ಸೇರ್ಪಡೆಯಿಂದ ಆರ್​ ಸಿ ಬಿಗೆ ಪ್ರಯೋಜನವಾಗಿರುವಂತೆಯೇ, ಜೇಸನ್ ಹೋಲ್ಡರ್ ಅವರ ಸೇರ್ಪಡೆ ಹೈದಾರಾಬಾದ್​ಗೆ ನೆರವಾಗಿದೆ. ಹೋಲ್ಡರ್ ಅತ್ಯುತ್ತಮವಾಗಿ ಬೌಲ್ ಮಾಡುತ್ತಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ಓಪನಿಂಗ್ ಬೌಲರ್ ಸಂದೀಪ್ ಶರ್ಮ ವಿಕೆಟ್ ಪಡೆಯುವುದರ ಜೊತೆಗೆ ನಿಯಂತ್ರಣವನ್ನು ಸಹ ಕಾಯ್ದುಕೊಳ್ಳತ್ತಿದ್ದಾರೆ. ಯಾರ್ಕರ್ ಪರಿಣಿತ ಟಿ ನಟರಾಜನ್ ಮತ್ತು ರಶೀದ್ ಖಾನ್ ಅವರು ವಾರ್ನರ್​ ತಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. 

ರೆಡ್ ಮತ್ತು ಆರೇಂಜ್ ಆರ್ಮಿಗಳ ನಡುವೆ ಇಂದು ತುರಿಸಿನ ಕಾದಾಟ ನಡೆಯುವುದು ಮಾತ್ರ ನಿಶ್ಚಿತ, ಗೆದ್ದವರಿಗೆ ಫೈನಲ್ ತಲುಪಲು ಮತ್ತೊಂದು ಅವಕಾಶ ಸಿಗುತ್ತದೆ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ