ಹ್ಯಾಪಿ ಬರ್ತ್ಡೇ ವಿರಾಟ್! | Kohli celebrates his 32nd birthday in Dubai
ಟೀಮ್ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ 32 ನೇ ಹುಟ್ಟುಹಬ್ಬವನ್ನು ತಾವು ತಂಗಿರುವ ದುಬೈನ ಹೊಟೆಲೊಂದರಲ್ಲಿ ಪತ್ನಿ ಅನುಷ್ಕಾ ಶರ್ಮ, ಆರ್ ಸಿ ಬಿ ಟೀಮಿನ ಆಟಗಾರರು, ಆಡಳಿತ ಮತ್ತು ವೈದ್ಯಕೀಯ ವಿಭಾಗದ ಸದಸ್ಯರೊಂದಿಗೆ ಕೇಕ್ ಕತ್ತರಿಸುತ್ತಾ, ಕುಣಿಯುತ್ತಾ, ಮೋಜು-ಮಸ್ತಿ ಮಾಡುತ್ತಾ ಆಚರಿಸಿಕೊಂಡರು. ಮೂಲಗಳ ಪ್ರಕಾರ ಅವರ ತಾರಾ ಪತ್ನಿ ಅನುಷ್ಕಾ ಅವರೇ ಭರ್ಜರಿ ಬರ್ತ್ಡೇ ಪಾರ್ಟಿಯ ವ್ಯವಸ್ಥೆ ಮಾಡಿದ್ದರು. ಐಪಿಎಲ್ನಲ್ಲಿ ಆಡುವ ಎಲ್ಲ ಫ್ರಾಂಚೈಸಿಗಳು, ಟೀಮಿನ ಸದಸ್ಯರು, […]
ಟೀಮ್ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ 32 ನೇ ಹುಟ್ಟುಹಬ್ಬವನ್ನು ತಾವು ತಂಗಿರುವ ದುಬೈನ ಹೊಟೆಲೊಂದರಲ್ಲಿ ಪತ್ನಿ ಅನುಷ್ಕಾ ಶರ್ಮ, ಆರ್ ಸಿ ಬಿ ಟೀಮಿನ ಆಟಗಾರರು, ಆಡಳಿತ ಮತ್ತು ವೈದ್ಯಕೀಯ ವಿಭಾಗದ ಸದಸ್ಯರೊಂದಿಗೆ ಕೇಕ್ ಕತ್ತರಿಸುತ್ತಾ, ಕುಣಿಯುತ್ತಾ, ಮೋಜು-ಮಸ್ತಿ ಮಾಡುತ್ತಾ ಆಚರಿಸಿಕೊಂಡರು. ಮೂಲಗಳ ಪ್ರಕಾರ ಅವರ ತಾರಾ ಪತ್ನಿ ಅನುಷ್ಕಾ ಅವರೇ ಭರ್ಜರಿ ಬರ್ತ್ಡೇ ಪಾರ್ಟಿಯ ವ್ಯವಸ್ಥೆ ಮಾಡಿದ್ದರು.
ಐಪಿಎಲ್ನಲ್ಲಿ ಆಡುವ ಎಲ್ಲ ಫ್ರಾಂಚೈಸಿಗಳು, ಟೀಮಿನ ಸದಸ್ಯರು, ಮಾಜಿ ಮತ್ತು ಹಾಲಿ ಆಟಗಾರರು, ಸ್ನೇಹಿತರು, ಹಿತೈಷಿಗಳು, ರಾಜಕೀಯ ರಂಗದ ಧುರೀಣರು, ಬೇರೆ ರಾಷ್ಟ್ರದ ಆಟಗಾರರು ಕೊಹ್ಲಿಗೆ ಸಂದೇಶಗಳನ್ನು ಕಳಿಸಿ ಶುಭ ಹಾರೈಸಿದ್ದಾರೆ.
ಕ್ರಿಸ್ ಗೇಲ್, ‘ ಟೀಮ್ ಇಂಡಿಯಾ ಕ್ಯಾಪ್ಟನ್ @imVkohli, ಲೆಜೆಂಡ್ಗೆ ಹುಟ್ಟು ಹಬ್ಬದ ಶುಭಾಶಯಗಳು, ಈ ಬಾರಿ ಆರ್ಸಿಬಿಗಾಗಿ ಕಪ್ ಗೆಲ್ಲಿರಿ ಎಂದು ಹಾರೈಸುತ್ತೇನೆ,’ ಅಂತ ಟ್ವೀಟ್ ಮಾಡಿದ್ದಾರೆ.
ಹಾಗೆಯೇ ಕೊಹ್ಲಿಯ ಆಪ್ತಮಿತ್ರ ಮತ್ತು ಆರ್ ಸಿ ಬಿಗೆ ಅವರೊಂದಿಗೆ 13 ವರ್ಷಗಳಿಂದ ಆಡುತ್ತಿರುವ ಎಬಿ ಡಿ ವಿಲಿಯರ್ಸ್ ಟ್ವೀಟ್ ಮಾಡಿ, ‘ನಿಮಗೆ ಬರ್ತ್ಡೇ ಶುಭಾಶಯಯಗಳು, ನಿಮ್ಮ ವ್ಯಕ್ತಿತ್ವ ಅದ್ಭುತ, ಇವತ್ತಿನ ದಿನವನ್ನು ನಾವೆಲ್ಲ ಸೇರಿ ಸುಂದರವಾಗಿಸುವ. ಕೇಕ್ ಮೇಲಿನ ಚೆರಿ ನಿಮಗೆ ನಾವು ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಬೇಕಿರುವುದನ್ನು ನೆನಪಿಸುತ್ತದೆ ಎಂದು ಭಾವಿಸುತ್ತೇನೆ. ಕಪ್ ಗೆಲ್ಲಲು ನಮ್ಮ ಶಕ್ತಿ ಮೀರಿ ಪ್ರಯತ್ನಿಸೋಣ. ನಿಮ್ಮೊಂದಿಗೆ ಕಳೆದಿರುವ ಸಮಯ ಅವಿಸ್ಮರಣೀಯ, ಅವು ನೆನಪುಗಳಾಗಿ ನನ್ನಲ್ಲಿ ಭದ್ರವಾಗಿ ನೆಲೆಗೊಂಡಿವೆ. ನಮ್ಮ ಸ್ನೇಹ ಬದುಕಿನ ಕೊನೆ ಕ್ಷಣದವರೆಗೂ ಹೀಗೆಯೇ ಮುಂದುವರಿಯುತ್ತದೆ,’ ಎಂದಿದ್ದಾರೆ.
2011ರಲ್ಲಿ ಐಸಿಸಿ ವಿಶ್ವಕಪ್ ಗೆದ್ದ ಭಾರತೀಯ ಟೀಮಿನ ಸದಸ್ಯರಾಗಿದ್ದ ಕೊಹ್ಲಿ 2008ರಲ್ಲೇ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರು. ಎರಡು ವರ್ಷಗಳ ನಂತರ ಟಿ20ಐ ಪಂದ್ಯಗಳಲ್ಲಿ ಭಾರತದ ಪರ ಆಡಲಾರಂಭಿಸಿದರು. ಆಮೇಲೆ 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಿಂಗಸ್ಟನ್ ಜಮೈಕಾದ ಸಬೈನಾ ಪಾರ್ಕ್ನಲ್ಲಿ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟರು.
ಕೇವಲ 10 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ಅವಧಿಯಲ್ಲಿ ಕೊಹ್ಲಿ ಸುಮಾರು 21,000 ರನ್ ಬಾರಿಸಿದ್ದಾರೆ. ಅದರಲ್ಲಿ 70 ಶತಕಗಳು ಸೇರಿವೆ. ಟೆಸ್ಟ್, ಒಡಿಐ ಮತ್ತು ಟಿ29ಐ–ಮೂರೂ ಫಾರ್ಮಾಟ್ಗಳಲ್ಲಿ 50 ರನ್ಗಳಿಗಿಂತ ಜಾಸ್ತಿ ಸರಾಸರಿಯನ್ನು ಹೊಂದಿರುವ ವಿಶ್ವದ ಏಕೈಕ ಆಟಗಾರ ಕೊಹ್ಲಿ.
ಭಾರತಕ್ಕೆ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಟ್ಟಿರುವ ಕೊಹ್ಲಿಯ ಸಕ್ಸಸ್ ರೇಟ್ 75.89 ರಷ್ಟಿದೆ! ಹಾಗೆಯೇ ಟೆಸ್ಟ್ಗಳಲ್ಲಿ ನಾಯಕನಾಗಿ ಅತಿಹೆಚ್ಚು ರನ್ ಗಳಿಸಿರುವ ದಾಖಲೆಯೂ ಅವರ ಹೆಸರಲ್ಲಿದೆ.
ಟಿ20ಐ ಕ್ರಿಕೆಟ್ನಲ್ಲಿ ಭಾರತದ ಪರ ಅತಿಹೆಚ್ಚು ರನ್ ಕೊಹ್ಲಿ ಗಳಿಸಿದ್ದಾರೆ. ಇನ್ನೂ 5 ವರ್ಷಗಳ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಆಡುವುದು ಸಾಧ್ಯವಿರುವುದರಿಂದ ಕ್ರೀಡೆಯ ಬಹುತೇಕ ದಾಖಲೆಗಳನ್ನು ಅವರು ತಮ್ಮ ಹೆಸರಿಗೆ ಬರೆದುಕೊಂಡು ರಿಟೈರಾಗುವುದರಲ್ಲಿ ಅನುಮಾನವೇ ಇಲ್ಲ.
Published On - 7:19 pm, Thu, 5 November 20