ಇಂದು ಕ್ವಾಲಿಫೈಯರ್ 1 ರಲ್ಲಿ ಎರಡು ಸಮಬಲ ತಂಡಗಳ ಸೆಣಸಾಟ| MI and DC lock horns today for a berth in IPL 2020 final
ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತ್ತಿಯ ಕೊನೆಯ ನಾಲ್ಕು ನಿರ್ಣಾಯಕ ಪಂದ್ಯ ಪೈಕಿ ಮೊದನೆಯದ್ದು ಇಂದು ಲೀಗ್ ಹಂತದ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದ ಗಳಿಸಿದ ಮುಬೈ ಇಂಡಿಯನ್ಸ್ ಮತ್ತು ಎರಡನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಲೀಗ್ ಹಂತದ ಕೊನೆಯ ಪಂದ್ಯವನ್ನು ಸನ್ರೈಸರ್ಸ್ ವಿರುದ್ಧ ಮುಂಬೈ ಸೋತರೆ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು ಸಾಧಿಸಿತು. ಅಂದರೆ ಇವತ್ತು ಮೈದಾನಕ್ಕಿಳಿಯುವ ಮೊದಲು ಡೆಲ್ಲಿ ಟೀಮಿನ ನೈತಿಕ ಬಲ ಮುಂಬೈಗಿಂತ ಎತ್ತರ […]
ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತ್ತಿಯ ಕೊನೆಯ ನಾಲ್ಕು ನಿರ್ಣಾಯಕ ಪಂದ್ಯ ಪೈಕಿ ಮೊದನೆಯದ್ದು ಇಂದು ಲೀಗ್ ಹಂತದ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದ ಗಳಿಸಿದ ಮುಬೈ ಇಂಡಿಯನ್ಸ್ ಮತ್ತು ಎರಡನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಲೀಗ್ ಹಂತದ ಕೊನೆಯ ಪಂದ್ಯವನ್ನು ಸನ್ರೈಸರ್ಸ್ ವಿರುದ್ಧ ಮುಂಬೈ ಸೋತರೆ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು ಸಾಧಿಸಿತು. ಅಂದರೆ ಇವತ್ತು ಮೈದಾನಕ್ಕಿಳಿಯುವ ಮೊದಲು ಡೆಲ್ಲಿ ಟೀಮಿನ ನೈತಿಕ ಬಲ ಮುಂಬೈಗಿಂತ ಎತ್ತರ ಸ್ತರದಲ್ಲಿರುವದು ನಿಶ್ವಿತ. ಆದರೆ, ಸೀಮಿತ ಓವರ್ಗಳ ಕ್ರಿಕೆಟ್ ಪಂದ್ಯಗಳಲ್ಲಿ ಯಾವುದನ್ನೂ ನಿಖರವಾಗಿ ಹೇಳಲಾಗದು. ಪಂದ್ಯ ನಡೆಯುವ ದಿನದ ಪ್ರದರ್ಶನವಷ್ಟೇ ಗಣನೆಗೆ ಬರುತ್ತದೆ.
ತೊಡೆಸಂದಿ ಸಮಸ್ಯೆಯಿಂದ ಬಳಲುತ್ತಿದ್ದ ಮುಂಬೈ ನಾಯಕ ರೋಹಿತ್ ಶರ್ಮ ಗುಣಮುಖನಾಗಿರುವೆನೆಂದು ಹೇಳುತ್ತಿದ್ದಾರೆ. ಹೈದರಾಬಾದ್ ವಿರುದ್ಧ ಅವರು ಆಡಿದರಾದರೂ ಅವರ ಖ್ಯಾತಿಗೆ ತಕ್ಕ ಪ್ರದರ್ಶನ ಬರಲಿಲ್ಲ. ಗಾಯದ ಕಾರಣಕ್ಕಾಗಿಯೇ ಅವರನ್ನು ಆಸ್ಟ್ರೇಲಿಯ ಪ್ರವಾಸಕ್ಕೆ ಆರಿಸಿಲ್ಲ. ಗಾಯವನ್ನು ನಿರ್ಲಕ್ಷಿಸಿ ಆಡಿದರೆ ಸಮಸ್ಯೆ ಉಲ್ಬಣಗೊಳ್ಳಬಹುದೆಂದು ಮಾಜಿ ಆಟಗಾರರು ಮತ್ತು ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಎಚ್ಚರಿಸಿದ್ದಾರೆ. ಅದು ಸಂಪೂರ್ಣ ವಾಸಿಯಾಗಿದೆ ಅಂತ ಹೇಳುತ್ತಿರುವ ರೋಹಿತ್ ಆಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
[yop_poll id=”27″]
ಬಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೆಡಿಕಲ್ ಟೀಮು ರೋಹಿತ್ಗೆ ಆಗಿರುವ ಗಾಯ ಮತ್ತು ಚೇತರಿಕೆಯ ಮೇಲೆ ನಿಗಾ ಇಟ್ಟಿದೆ. ಒಂದು ಪಕ್ಷ ಅವರು ಫಿಟ್ ಆಗಿದ್ದಾರೆಂದು ಈ ಟೀಮು ರಿಪೋರ್ಟ್ ನೀಡಿದರೆ ಆಸ್ಟ್ರೇಲಿಯಾಗೆ ಕಳಿಸಲೇಬೇಕಾಗುತ್ತದೆ. ಹಾಗೆ ಮಾಡಬೇಕಾದರೆ ಮೂರು ಆವೃತ್ತಿಗಳಿಗೂ ಆಯ್ಕೆಯಾಗಿರುವ ಒಬ್ಬ ಸದಸ್ಯನನ್ನು ಡ್ರಾಪ್ ಮಾಡಬೇಕಾಗುತ್ತದೆ ಇಲ್ಲವೇ ರೋಹಿತ್, ಟೀಮಿನ ಹೆಚ್ಚುವರಿ ಸದಸ್ಯನಾಗಿ ಆಸ್ಟ್ರೇಲಿಯಾಗೆ ಹೋಗಬೇಕಾಗುತ್ತದೆ, ಆದರೆ ಅದಕ್ಕೆ ಆ ದೇಶದ ಕ್ರಿಕೆಟ್ ಮಂಡಳಿ ಅನುಮತಿ ನೀಡಬೇಕು. ಇದು ಹೊಸ ಸಮಸ್ಯೆ ಸೃಷ್ಟಿಸುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗೆ ನೋಡಿದರೆ, ರೋಹಿತ್ ಅನುಪಸ್ಥಿತಿಯಲ್ಲೂ ಮುಂಬೈ ಉತ್ತಮ ಪ್ರದರ್ಶನಗಳನ್ನು ನೀಡಿದೆ. ಟೀಮು ಅವರೊಬ್ಬರನ್ನಷ್ಟೇ ನೆಚ್ಚಿಕೊಂಡಿಲ್ಲವೆನ್ನುವುದು ಇದರಿಂದ ಸಾಬೀತಾಗುತ್ತದೆ.
ಸರಿ, ಇವತ್ತಿನ ಪಂದ್ಯಕ್ಕೆವಾಪಸ್ಸು ಬರೋಣ. ಡೆಲ್ಲಿ ಮತ್ತು ಮುಂಬೈ ಸಮಬಲದ ತಂಡಗಳು. ನಿನ್ನೆ ಮಾಧ್ಯಮಗಳೊಂದಿಗೆ ಮಾತಾಡಿದ ಮತ್ತು ಅತ್ಯುತ್ತಮ ಫಾರ್ಮ್ನಲ್ಲಿರುವ ಡೆಲ್ಲಿಯ ಆರಂಭ ಆಟಗಾರ ಶಿಖರ್ ಧವನ್, ‘ಮುಂಬೈ ನಮಗಿಂತ ಸಶಕ್ತವಾಗಿದೆ ಎಂದು ಹೇಳಲಾಗದು, ಯಾಕೆಂದರೆ, ನಮ್ಮಲ್ಲೂ ಕ್ವಾಲಿಟಿ ಆಟಗಾರರಿದ್ದಾರೆ ಹಾಗೂ ಯಾವುದೇ ಟೀಮನ್ನು ಸೋಲಿಸುವ ಕ್ಷಮತೆ ನಮ್ಮಲ್ಲಿದೆ. ರೋಹಿತ್ ನಿಸ್ಸಂದೇಹವಾಗಿ ಶ್ರೇಷ್ಠ ಆಟಗಾರ, ಆದರೆ ಹೈದರಾಬಾದ್ ವಿರುದ್ಧ ಅವರು ವಿಫಲರಾಗಿದ್ದು ನಮಗೆ ಗೊತ್ತಿದೆ. ಹಾಗಾಗಿ ಅವರನ್ನು ಥ್ರೆಟ್ ಎಂದು ನಾವು ಭಾವಿಸುವುದಿಲ್ಲ,’ ಎಂದಿದ್ದಾರೆ.
ಕ್ವಿಂಟನ್ ಡಿ ಕಾಕ್ (443), ಇಶಾನ್ ಕಿಷನ್ (428) ಮತ್ತು ಸರ್ಯಕುಮಾರ್ ಯಾದವ್ (410) ಲೀಗ್ ಹಂತದಲ್ಲಿ ಚೆನ್ನಾಗಿ ಆಡಿದ್ದಾರೆ. ಸರ್ವಾಂಗ ಪ್ರಬಲ ಅಟಗಾರರಾದ ಕೈರನ್ ಪೊಲ್ಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಸಹ ಬಿರುಸಿನ ಆಟವಾಡಿ ರನ್ ಗಳಿಸಿದ್ದಾರೆ.
ಬೌಲರ್ಗಳ ಸಾಧನೆಯನ್ನು ನೋಡುವುದಾದರೆ ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ತಮ್ಮಿಬ್ಬರ ನಡುವೆ 43 ವಿಕೆಟ್ಗಳನ್ನು ಕಬಳಿಸಿದ್ದಾರೆ. ಬೌಲ್ಟ್ ತಾವು ಪಡೆದಿರುವ 20 ವಿಕೆಟ್ಗಳಲ್ಲಿ 12ನ್ನು ಪವರ್ ಪ್ಲೇ ಓವರ್ಗಳಲ್ಲಿ ಉರುಳಿಸಿರುವುದು ಗಮನಾರ್ಹ. ಮೊದಲ 6 ಓವರ್ಗಳಲ್ಲಿ ಅವರೆಷ್ಟು ಘಾತಕಕಾರಿ ಎನ್ನುವುದು ಇದರಿಂದ ಗೊತಾಗುತ್ತದೆ.
ಸ್ಪಿನ್ನರುಗಳಾದ ರಾಹುಲ್ ಚಹರ್ ಮತ್ತು ಕೃಣಾಲ್ ಪಾಂಡೆ ಸಹ ಉತ್ತಮವಾಗಿ ಬೌಲ್ ಮಾಡುತ್ತಿರುವುದು ಮುಂಬೈಗೆ ನೆರವಾಗಲಿದೆ. ಹೈದರಾಬಾದ್ ವಿರುದ್ಧ ಅವರಿಂದ ನಿರೀಕ್ಷಿತ ಪ್ರದರ್ಶನ ಬಾರದಿದ್ದರೂ ಅವರಿಬ್ಬರನ್ನು ಇವತ್ತಿನ ಪಂದ್ಯದಲ್ಲಿ ಆಡಿಸುವುದು ನಿಶ್ಚಿತ.
ಅತ್ತ, ದೆಹಲಿ ಟೀಮಿನ ಪ್ರಮುಖ ಬ್ಯಾಟ್ಸ್ಮನ್ಗಳು ಸಹ ರನ್ ಗಳಿಸುತ್ತಿದ್ದಾರೆ. ಧವನ್ ಈಗಾಗಲೇ ಎರಡು ಬ್ಯಾಕ್ ಟು ಬ್ಯಾಕ್ ಸೆಂಚುರಿಗಳೊಂದಿಗೆ 525 ರನ್ ಶೇಖರಿಸಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್ 421 ರನ್ ಕಲೆಹಾಕಿದ್ದಾರೆ. ಆದರೆ, ಧವನ್ ಜೊತೆಗಾರ ಪೃಥ್ವಿ ಶಾ (282) ಮೊದಲಿನ ಕೆಲ ಪಂದ್ಯಗಳಲ್ಲಿ ಚೆನ್ನಾಗಿ ಆಡಿದ ನಂತರ ಫೋಕಸ್ ಕಳೆದುಕೊಂಡಿದ್ದಾರೆ. ವಿಕೆಟ್ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ (228) ಅವರಿಂದಲೂ ನಿರಾಶಾದಾಯಕ ಪ್ರದರ್ಶನಗಳು ಬಂದಿವೆ. ಟೂರ್ನಿಯಲ್ಲಿ ತಡವಾಗಿ ಆಡುವ ಅವಕಾಶ ಪಡೆದು ಮೊದಲಿನ ಎರಡು ಪಂದ್ಯಗಳಲ್ಲಿ ಫೇಲಾದ ಅಜಿಂಕ್ಯಾ ರಹಾನೆ ಬೆಂಗಳೂರು ವಿರುದ್ಧ 60 ರನ್ ಬಾರಿಸಿ ಸ್ಪರ್ಶ ಕಂಡುಕೊಂಡರು. ಇವರಿಬ್ಬರಿಗಿಂತ ಜಾಸ್ತಿ ನಿರಾಶೆಗೊಳಿಸಿರುವುದು ವೆಸ್ಟ್ ಇಂಡೀಸಿನ ಪಾಕೆಟ್ ಡೈನಮೊ ಶಿಮ್ರೊನ್ ಹೆಟ್ಮೆಯರ್. ಅವರ ನಿರ್ಭೀತ ಹಿಟ್ಟಿಂಗ್ ಮೇಲೆ ಅಪಾರ ವಿಶ್ವಾಸವನ್ನಿಟ್ಟುಕೊಂಡು ಡೆಲ್ಲಿಯ ಮ್ಯಾನೇಜ್ಮೆಂಟ್ ಅವರನ್ನು ಖರೀದಿಸಿತ್ತು. ಇದುವರೆಗೆ ಅವರ ಬ್ಯಾಟ್ನಿಂದ ಕೇವಲ 138 ರನ್ ಮಾತ್ರ ಬಂದಿವೆ.
ಬ್ಯಾಟ್ಸ್ಮನ್ಗಳ ವೈಫಲ್ಯವನ್ನು ರಬಾಡ ಮತ್ತು ಌನ್ರಿಖ್ ನೊರ್ಕಿಯ ಸರಿದೂಗಿಸುತ್ತಿದ್ದಾರೆ. ತಮ್ಮ ನಡುವೆ ಅವರು 44 ವಿಕೆಟ್ ಪಡೆದಿರುವುದು ಅವರು ಮೆರೆದಿರುವ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ರವಿಚಂದ್ರನ್ ಅಶ್ವಿನ್ ಫಿಟ್ನೆಸ್ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ನಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಉತ್ತಮ ಲಯದಲ್ಲಿ ಬೌಲ್ ಮಾಡುತ್ತಿರುವ ಅಕ್ಸರ್ ಪಟೇಲ್ ಮುಂಬೈ ಬ್ಯಾಟ್ಸ್ಮನ್ಗಳನ್ನು ಕಾಡಬಹುದು.
ಅಂದಹಾಗೆ, ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ತಲುಪಿಬಿಡುತ್ತದೆ, ಸೋಲುವ ತಂಡ ಟೂನಿಯಿಂದ ನಿರ್ಗಮಿಸುವುದಿಲ್ಲ. ಎಲಿಮಿನೇಟರ್ ಸುತ್ತಿನಲ್ಲಿ ಗೆಲ್ಲುವ ತಂಡದೊಂದಿಗೆ ಆಡಿ ಫೈನಲ್ ಪ್ರವೇಶಿಸುವ ಪೈನಲ್ ತಲುಪುವ ಮತ್ತೊಂದು ಅವಕಾಶ ಅದಕ್ಕಿರುತ್ತದೆ.
Published On - 5:25 pm, Thu, 5 November 20