ಮುಂದಿನ ಐಪಿಎಲ್ ಸೀಸನ್​ನಲ್ಲಿ ‘ವ್ಯಾಟೊ’ ಮೈದಾನಗಳಲ್ಲಿ ಕಾಣುವುದಿಲ್ಲ | Watson decides to hang up his boots from all formats of Cricket

ಬಿಗ್ ಮ್ಯಾನ್, ಬಿಗ್–ಹಿಟ್ಟರ್ ಮತ್ತು ಬಿಗ್ ಮ್ಯಾಚ್ ಪ್ಲೇಯರ್ ಅಂತೆಲ್ಲ ಕರೆಸಿಕೊಳ್ಳುತ್ತಿದ್ದ ಆಸ್ಟ್ರೇಲಿಯಾದ ಅಲ್ ರೌಂಡರ್ ಶೇನ್ ವಾಟ್ಸನ್ ಎಲ್ಲ ಬಗೆಯ ಕ್ರಿಕೆಟ್ ಆವೃತ್ತಿಗಳಿಗೆ ವಿದಾಯ ಹೇಳಿದ್ದಾರೆ. 13 ವರ್ಷಗಳ ಕಾಲ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಮೂರು ವಿವಿಧ ಫ್ರಾಂಚೈಸಿಗಳಿಗೆ ಆಡಿದ ವ್ಯಾಟೊ ಮುಂದಿನ ಸೀಸನ್​ಗೆ ತಾನು ಲಭ್ಯನಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಾಟ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದು 2016ರಲ್ಲಿ. ಅದಕ್ಕಿಂತ ಮೊದಲು ಅವರು ಎರಡು ಬಾರಿ ಐಸಿಸಿ ವಿಶ್ವಕಪ್, ಮತ್ತು ಎರಡು ಬಾರಿ ಐಸಿಸಿ ಚಾಂಪಿಯನ್ಸ್ […]

ಮುಂದಿನ ಐಪಿಎಲ್ ಸೀಸನ್​ನಲ್ಲಿ ‘ವ್ಯಾಟೊ’ ಮೈದಾನಗಳಲ್ಲಿ ಕಾಣುವುದಿಲ್ಲ | Watson decides to hang up his boots from all formats of Cricket
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 04, 2020 | 8:55 PM

ಬಿಗ್ ಮ್ಯಾನ್, ಬಿಗ್ಹಿಟ್ಟರ್ ಮತ್ತು ಬಿಗ್ ಮ್ಯಾಚ್ ಪ್ಲೇಯರ್ ಅಂತೆಲ್ಲ ಕರೆಸಿಕೊಳ್ಳುತ್ತಿದ್ದ ಆಸ್ಟ್ರೇಲಿಯಾದ ಅಲ್ ರೌಂಡರ್ ಶೇನ್ ವಾಟ್ಸನ್ ಎಲ್ಲ ಬಗೆಯ ಕ್ರಿಕೆಟ್ ಆವೃತ್ತಿಗಳಿಗೆ ವಿದಾಯ ಹೇಳಿದ್ದಾರೆ. 13 ವರ್ಷಗಳ ಕಾಲ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಮೂರು ವಿವಿಧ ಫ್ರಾಂಚೈಸಿಗಳಿಗೆ ಆಡಿದ ವ್ಯಾಟೊ ಮುಂದಿನ ಸೀಸನ್​ಗೆ ತಾನು ಲಭ್ಯನಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಾಟ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದು 2016ರಲ್ಲಿ. ಅದಕ್ಕಿಂತ ಮೊದಲು ಅವರು ಎರಡು ಬಾರಿ ಐಸಿಸಿ ವಿಶ್ವಕಪ್, ಮತ್ತು ಎರಡು ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಆಸ್ಟ್ರೇಲಿಯ ಟೀಮಿನ ಪ್ರಮುಖ ಭಾಗವಾಗಿದ್ದರು.

ಐಪಿಎಲ್​ನಲ್ಲಿ ಮೊದಲ 7 ವರ್ಷಗಳ ಕಾಲ ರಾಜಸ್ತಾನ ರಾಯಲ್ಸ್​ಗೆ ಆಡಿದ ವ್ಯಾಟ್ಸನ್ ಆ ಟೀಮು ಉದ್ಘಾಟನಾ ಆವೃತ್ತಿ (2008) ಗೆಲ್ಲುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು. ಆ ಸೀಸನ್​ನಲ್ಲಿ ಅವರು 427 ಗಳಿಸಿದ್ದೂ ಅಲ್ಲದೆ 17 ವಿಕೆಟ್​ಗಳನ್ನು ಸಹ ಪಡೆದಿದ್ದರು. ಐಪಿಎಲ್​ನಲ್ಲಿ ವಾಟ್ಸನ್ ಒಟ್ಟು 145 ಪಂದ್ಯಗಳನ್ನಾಡಿ 4 ಶತಕ ಮತ್ತು 21 ಅರ್ಧ ಶತಕಗಳೊಂದಿಗೆ 30.99 ರ ಸರಾರಿಯಲ್ಲಿ 3874 ರನ್ ಗಳಿಸಿದ್ದಾರೆ. ಹಾಗೆಯೇ, 29.15 ಸರಾಸರಿಯಲ್ಲಿ 92 ವಿಕೆಟ್​ಗಳನ್ನು ಪಡೆದಿದ್ದಾರೆ. ಅವರ ಉತ್ಕೃಷ್ಟ ಬೌಲಿಂಗ್ ಸಾಧನೆ 4/29.

ಆರಂಭದ 7 ಸೀಸನ್​ಗಳನ್ನು ರಾಯಲ್ಸ್ ಪರ ಆಡಿದಾಗ್ಯೂ ವಾಟ್ಸನ್​ಗೆ ಚೆನೈ ಟೀಮಿನ ಮೇಲೆ ಜಾಸ್ತಿ ಪ್ರೀತಿ ಇರುವಂತಿದೆ. 2019 ಸೀಸನ್​ನಲ್ಲಿ ಅವರು ಸತತವಾಗಿ ವಿಫಲರಾದರೂ ಟೀಮಿನ ನಾಯಕ ಮಹೇಂದ್ರಸಿಂಗ್ ಧೋನಿ ಮತ್ತು ಹೆಡ್ ಕೋಚ್ ಸ್ಟೀಫೆನ್ ಫ್ಲೆಮಿಂಗ್ ಆಡುವ ಇಲೆವೆನ್​ನಲ್ಲಿ ಇರಿಸಿಕೊಂಡಿದ್ದನ್ನು ಅವರು ಕೃತಜ್ಞತೆಯಿಂದ ನೆನೆಯುತ್ತಾರೆ.

‘‘ಕಳೆದ ಸೀಸನ್​ನಲ್ಲಿ 10 ಪಂದ್ಯಗಳಲ್ಲಿ ಸತತವಾಗಿ ರನ್ ಗಳಿಸದೆ ಮತ್ತು ವಿಕೆಟ್ ಕೀಳದೆ ಹೋದರೂ ನನ್ನನ್ನು ಆಡುವ ಇಲೆವೆನ್​ನಲ್ಲಿ ಮುಂದುವರಿಸಲಾಯಿತು. ನನ್ನ ಮೇಲೆ ಆ ಮಟ್ಟದ ವಿಶ್ವಾಸವಿಟ್ಟುಕೊಂಡಿದ್ದ ಎಮ್ ಎಸ್ ಧೋನಿ ಮತ್ತು ಸ್ಟೀಫೆನ್ ಫ್ಲೆಮಿಂಗ್ ಅವರಿಗೆ ಧನ್ಯವಾದಗಳು. ಆಭೂತಪೂರ್ವ ಸನ್ನಿವೇಶವಾಗಿದ್ದ ಅದು ನನ್ನಲ್ಲಿನ ಸಂಕಲ್ಪವನ್ನು ಹೆಚ್ಚಿಸಿತು,’’ ಎಂದು ವಾಟ್ಸನ್ ಹೇಳಿದ್ದರು.

ಧೋನಿಯ ಟೀಮಿಗೆ ಆಡುವ ಮೊದಲು ವಾಟ್ಸನ್ ಆರ್​ಸಿಬಿಗೆ ಎರಡು ಸೀಸನ್ (2016 ಮತ್ತು 2017) ಆಡಿದರು. ಆದರೆ ಕೊಹ್ಲಿ ತಂಡದೊಂದಿಗಿನ ಸ್ಟಿಂಟ್ ಅಂಥ ಫಲಪ್ರದವಾಗಿರಲಿಲ್ಲ.

ಮುಂಬೈ ಇಂಡಿಯನ್ಸ್ ವಿರುದ್ಧ 2018ರ ಐಪಿಎಲ್ ಫೈನಲ್​ನಲ್ಲಿ ಅವಿಸ್ಮರಣಿಯ ಇನ್ನಿಂಗ್ಸ್ ಆಡಿದ ವಾಟ್ಸನ್ ಕೇವಲ 57 ಎಸೆತಗಳಲ್ಲಿ 117 ರನ್ ಬಾರಿಸಿ ಚೆನೈ ಟ್ರೋಫಿ ಗೆಲ್ಲಲು ನೆರವಾಗಿದ್ದರು. 2019ರ ಫೈನಲ್​ನಲ್ಲೂ ಅವರು ಮೊಳಕಾಲಿಗೆ ಆದ ಗಾಯದಿಂದ ರಕ್ತ ಸೋರುತ್ತಿದ್ದರೂ, ವೀರೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿ 80 ರನ್ ಬಾರಿಸಿದ್ದರು. ಆದರೆ ಆ ಪಂದ್ಯವನ್ನು ಚೆನೈ ಕೇವಲ 1 ರನ್ನಿನ ಅಂತರದಿಂದ ಸೋತಿತ್ತು.

ವಾಟ್ಸನ್, ಆಟಗಾರನಾಗಿ ರಿಟೈರಾದರೂ, ಮುಂದಿನ ಸೀಸನ್​ಗೆ ಕೋಚ್ ರೂಪದಲ್ಲಿ ಯಾವುದಾದರರು ಫ್ರಾಂಚೈಸಿಗೆ ಲಭ್ಯರಾಗಬಹುದು.

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ