AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಂಪಿಯನ್ ಪಟ್ಟಕ್ಕಾಗಿ ಕೊನೆಯ ನಾಲ್ಕು ಪಂದ್ಯಗಳು ನಾಳಿನಿಂದ | Last 4 matches will decide the winner of IPL 2020

ಬರೋಬ್ಬರಿ 46 ದಿನಗಳ ಲೀಗ್ ಹಂತ ಮತ್ತು 56 ಮೈನವಿರೇಳಿಸಿದ ಪಂದ್ಯಗಳ ನಂತರ ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತ್ತಿ ಪ್ಲೇ ಆಫ್ ಹಂತ ತಲುಪಿದೆ. ನಾಲ್ಕು ಬಾರಿ ಚಾಂಪಿಯನ್​ಶಿಪ್ ಗೆದ್ದಿರುವ ಮುಂಬೈ ಇಂಡಿಯನ್ಸ್, ಇನ್ನೂ ಪ್ರಶಸ್ತಿ ಗೆಲ್ಲಬೇಕಿರುವ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮತ್ತು ಒಮ್ಮೆ ಚಾಂಪಿಯನ್ ಪಟ್ಟ ಧರಿಸಿರುವ ಹೈದರಾಬಾದ್ (2009ರಲ್ಲಿ ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್​ಶಿಪ್ ಗೆದ್ದಿತ್ತು) ನಿರ್ಣಾಯಕ ಹಂತವನ್ನು ತಲುಪಿವೆ. ಮುಂಬೈ ಮತ್ತು ಡೆಲ್ಲಿ ಕ್ರಮವಾಗಿ 18 ಮತ್ತು 16 ಅಂಕಗಳೊಂದಿಗೆ […]

ಚಾಂಪಿಯನ್ ಪಟ್ಟಕ್ಕಾಗಿ ಕೊನೆಯ ನಾಲ್ಕು ಪಂದ್ಯಗಳು ನಾಳಿನಿಂದ | Last 4 matches will decide the winner of IPL 2020
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Nov 04, 2020 | 4:39 PM

Share

ಬರೋಬ್ಬರಿ 46 ದಿನಗಳ ಲೀಗ್ ಹಂತ ಮತ್ತು 56 ಮೈನವಿರೇಳಿಸಿದ ಪಂದ್ಯಗಳ ನಂತರ ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತ್ತಿ ಪ್ಲೇ ಆಫ್ ಹಂತ ತಲುಪಿದೆ. ನಾಲ್ಕು ಬಾರಿ ಚಾಂಪಿಯನ್​ಶಿಪ್ ಗೆದ್ದಿರುವ ಮುಂಬೈ ಇಂಡಿಯನ್ಸ್, ಇನ್ನೂ ಪ್ರಶಸ್ತಿ ಗೆಲ್ಲಬೇಕಿರುವ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮತ್ತು ಒಮ್ಮೆ ಚಾಂಪಿಯನ್ ಪಟ್ಟ ಧರಿಸಿರುವ ಹೈದರಾಬಾದ್ (2009ರಲ್ಲಿ ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್​ಶಿಪ್ ಗೆದ್ದಿತ್ತು) ನಿರ್ಣಾಯಕ ಹಂತವನ್ನು ತಲುಪಿವೆ. ಮುಂಬೈ ಮತ್ತು ಡೆಲ್ಲಿ ಕ್ರಮವಾಗಿ 18 ಮತ್ತು 16 ಅಂಕಗಳೊಂದಿಗೆ ಮೊದಲಿನೆರಡು ಸ್ಥಾನ ಗಿಟ್ಟಿಸಿದರೆ, ಮಂಗಳವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈಯನ್ನು 10 ವಿಕೆಟ್​ಗಳ ಭಾರಿ ಅಂತರದಿಂದ ಸೋಲಿಸಿ ತನ್ನ ನೆಟ್​ ರನ್​ರೇಟ್ ಉತ್ತಮಪಡಿಸಿಕೊಂಡ ಹೈದರಾಬಾದ್ ಮೂರನೇ ಸ್ಥಾನದೊಂದಿಗೆ ಅರ್ಹತೆ ಪಡೆಯಿತು ಮತ್ತು ಹೈದರಾಬಾದ್​ನಷ್ಟೇ ಅಂಕ ಪಡೆದರೂ ನೆಟ್ ರನ್​ರೇಟ್​ನಲ್ಲಿ ಕೊಂಚ ಹಿಂದಿದ್ದ ಬೆಂಗಳೂರು ನಾಲ್ಕನೇ ತಂಡವಾಗಿ ಪ್ರವೇಶ ಪಡೆಯಿತು.

ಪ್ಲೇ ಆಫ್ ಹಂತಲ್ಲಿ ಈಗ ನಾಲ್ಕು ಪಂದ್ಯಗಳು ನಡೆಯಲಿವೆ. ಕ್ವಾಲಿಫೈಯರ್ 1, ಎಲಿಮಿನೇಟರ್, ಕ್ವಾಲಿಫೈಯರ್ 2 ಮತ್ತು ಫೈನಲ್.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಪ್ ಎರಡು ತಂಡಗಳು ಅಂದರೆ, ಮುಂಬೈ ಮತ್ತು ಡೆಲ್ಲಿ ನವೆಂಬರ್ 5ರಂದು ಅಂದರೆ ನಾಳೆ (ಗುರುವಾರ) ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ಸೆಣಸಲಿವೆ. ಈ ಪಂದ್ಯದಲ್ಲಿ ಗೆಲ್ಲುವ ಟೀಮು ಫೈನಲ್ ತಲುಪುತ್ತದೆ. ಸೋಲುವ ತಂಡ ಟೂರ್ನಿಯಿಂದೇನೂ ನಿರ್ಗಮಿಸುವುದಿಲ್ಲ. ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದೊಂದಿಗೆ ಆಡಿ ಫೈನಲ್​ಗೆ ಅರ್ಹತೆ ಗಿಟ್ಟಿಸುವ ಮತ್ತೊಂದು ಅವಕಾಶ ಅದಕ್ಕೆ ಸಿಗುತ್ತದೆ. ಎಲಿಮಿನೇಟರ್ ಪಂದ್ಯ ಪಾಯಿಂಟ್ಸ್ ಟೇಬಲ್​ನಲ್ಲಿ 3ಮತ್ತು 4 ನೇ ಸ್ಥಾನ ಪಡೆದ ಹೈದರಾಬಾದ ಮತ್ತು ಬೆಂಗಳೂರು ನಡುವೆ ನವೆಂಬರ್ 6ರಂದು (ಶುಕ್ರವಾರ) ಅಬು ಧಾಬಿಯ ಶೇಖ್ ಜಾಯೆದ್ ಮೈದಾನದಲ್ಲಿ ನಡೆಯಲಿದೆ. ಸದರಿ ಪಂದ್ಯದಲ್ಲಿ ಗೆಲ್ಲುವ ಟೀಮು ಕ್ವಾಲಿಫೈಯರ್ 2 ರಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಳ್ಳುತ್ತದೆ. ಸೋಲುವ ತಂಡ ಟೂರ್ನಿಯಿಂದ ನಿರ್ಗಮಿಸುತ್ತದೆ.

ಅಂದಹಾಗೆ, ಕ್ವಾಲಿಫೈಯರ್ 2ರಲ್ಲಿ ಕ್ವಾಲಿಫೈಯರ್ 1ರಲ್ಲಿ ಸೋತ ಮತ್ತು ಎಲಿಮಿನೇಟರ್​ನಲ್ಲಿ ಗೆದ್ದ ತಂಡಗಳು ಫೈನಲ್​ನಲ್ಲಿ ಆಡುವ ಅರ್ಹತೆ ಗಿಟ್ಟಿಸಲು ಹೋರಾಡುತ್ತವೆ. ಈ ಪಂದ್ಯ ಅಬು ಧಾಬಿಯಲ್ಲಿ ನವೆಂಬರ್ 8 ರಂದು ನಡೆಯಲಿದ್ದು ಸೋಲುವ ತಂಡ ಟೂರ್ನಿಯಿಂದ ಹೊರಬೀಳುತ್ತದೆ.

ಕ್ವಾಲಿಫೈಯರ್ 2ರಲ್ಲಿ ಗೆಲ್ಲುವ ಟೀಮು, ಅದಾಗಲೇ ಕ್ವಾಲಿಫೈಯರ್ 1 ರಲ್ಲಿ ಗೆದ್ದು ಫೈನಲ್ ಪ್ರವೇಶಿದ ಟೀಮಿನೊಂದಿಗೆ ಐಪಿಎಲ್ 2020 ಕಿರೀಟ ಧರಿಸಲು ಸೆಣಸುತ್ತದೆ. ಈ ಸೀಸನ್​ನ ಕಟ್ಟಕಡೆಯ ಪಂದ್ಯ ನವೆಂಬರ್ 10 ರಂದು ದುಬೈಯಲ್ಲಿ ನಡೆಯಲಿದೆ.

ಅಂದಹಾಗೆ, ಲೀಗ್ ಹಂತದ ಟಾಪ್ ಪರ್ಫಾರ್ಮರ್​ಗಳ ಸಾಧನೆಯನ್ನು ಒಮ್ಮೆ ನೋಡೋಣ.

14 ಪಂದ್ಯಗಳಿಂದ 670 ರನ್ ಗಳಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ ಎಲ್ ರಾಹುಲ್ ಆರೇಂಜ್ ಕ್ಯಾಪಿನ ಒಡೆಯರಾದರು. ಹೈದರಾಬಾದ್​ನ ಡೇವಿಡ್ ವಾರ್ನರ್ 14 ಪಂದ್ಯಗಳಿಂದ 529, ಡೆಲ್ಲಿ ಕ್ಯಾಪಿಟಲ್ಸ್​ನ ಶಿಖರ್ ಧವನ್ 525 (14), ಆರ್​ಸಿಬಿಯ ದೇವದತ್ ಪಡಿಕ್ಕಲ್ 472 (14), ಆರ್​ಸಿಬಿಯ ವಿರಾಟ್ ಕೊಹ್ಲಿ 460 (14), ಚೆನೈ ಸೂಪರ್ ಕಿಂಗ್ಸ್​ನ ಫಫ್ ಡು ಪ್ಲೆಸ್ಸಿ 449 (13), ಮುಂಬೈನ ಕ್ವಿಂಟನ್ ಡಿ ಕಾಕ್ 443 (14), ಕೆಕೆಆರ್​ನ ಶುಬ್​ಮನ್ ಗಿಲ್ 440 (14), ಮುಂಬೈನ ಇಶಾನ್ ಕಿಷನ್ 428 (12) ಮತ್ತು ಪಂಜಾಬ್​ನ ಮಾಯಾಂಕ್ ಅಗರ್​ವಾಲ್ 424 (11) ಗಳಿಸಿ ಟಾಪ್ ಸ್ಕೋರರ್​ಗಳೆನಿಸಿಕೊಂಡರು.

ಬೌಲರ್​ಗಳ ಪೈಕಿ 14 ಪಂದ್ಯಗಳಿಂದ 25 ವಿಕೆಟ್ ಪಡೆದ ಡೆಲ್ಲಿಯ ಕಗಿಸೊ ರಬಾಡ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡರು. ಉಳಿದಂತೆ, ಮುಂಬೈನ ಜಸ್ಪ್ರೀತ್ ಬುಮ್ರಾ 23 (13), ಅವರ ಜೊತೆಗಾರ ಟ್ರೆಂಟ್ ಬೌಲ್ಟ್ 20 (13), ಆರ್​ಸಿಬಿಯ ಯುಜ್ವೇಂದ್ರ ಚಹಲ್ 20 (14), ಪಂಜಾಬ್​ನ ಮೊಹಮ್ಮದ್ ಶಮಿ 20 (14), ರಾಜಸ್ತಾನ್ ರಾಯಲ್ಸ್​ನ ಜೊಫ್ರಾ ಆರ್ಚರ್ 20 (14), ಡೆಲ್ಲಿಯ ಌನ್ರಿಖ್ ನೊರ್ಕಿಯ 19 (13), ಹೈದರಾಬಾದ್​ನ ರಶೀದ್ ಖಾನ್ 19 (14), ಕೆಕೆಆರ್​ನ ವರುಣ್ ಚಕ್ರವರ್ತಿ 17 (13) ಮತ್ತು ಮುಂಬೈನ ದೀಪಕ್ ಚಹರ್ 15 (14) ವಿಕೆಟ್​ಗಳನ್ನು ಪಡೆದು ಬೌಲಿಂಗ್​ನಲ್ಲಿ ಮಿಂಚಿದರು.

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.