AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಹುತೇಕ ಪೂರ್ಣ: 1 ಕೋಟಿಗೂ ಅಧಿಕ ಮತದಾರರ ಹೆಸರು ಡಿಲೀಟ್ ಸಾಧ್ಯತೆ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, 1 ಕೋಟಿಗೂ ಅಧಿಕ ಮತದಾರರ ಹೆಸರು ಕರಡು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ASDDO ಪಟ್ಟಿಯಲ್ಲಿರುವ ಮತದಾರರಿಗೆ ಹೆಸರು ಸೇರ್ಪಡೆ ಹಾಗೂ ವಿಳಾಸ ಬದಲಾವಣೆಗೆ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಹುತೇಕ ಪೂರ್ಣ: 1 ಕೋಟಿಗೂ ಅಧಿಕ ಮತದಾರರ ಹೆಸರು ಡಿಲೀಟ್ ಸಾಧ್ಯತೆ
ಸಾಂದರ್ಭಿಕ ಚಿತ್ರImage Credit source: tv9
ಗಣಪತಿ ಶರ್ಮಾ
|

Updated on: Aug 06, 2026 | 6:56 AM

Share

ಮುಖ್ಯಾಂಶಗಳು

  • SIR ಪ್ರಕ್ರಿಯೆ ಶೇ 99.96ರಷ್ಟು ಪೂರ್ಣ
  • ASDDO ಪಟ್ಟಿಯಲ್ಲಿ ಕೋಟಿಗೂ ಅಧಿಕ ಮತದಾರರು
  • ಆಗಸ್ಟ್ 8ರ ಬಳಿಕ ಸಿಗಲಿದೆ ಅಂತಿಮ ಅಂಕಿಅಂಶ

ಬೆಂಗಳೂರು, ಆಗಸ್ಟ್ 6: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಇಂದಿನವರೆಗಿನ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ 1 ಕೋಟಿ 11 ಲಕ್ಷದ 705 ಮತದಾರರ ಹೆಸರು ಮತಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಆದರೆ, ಯಾವುದೇ ಕಾರಣವಿಲ್ಲದೆ ಮತದಾರರ ಹೆಸರುಗಳನ್ನು ಆಯೋಗ ಡಿಲೀಟ್ ಮಾಡಿಲ್ಲ. ಮತದಾರರನ್ನು ASDDO ಅಂದರೆ Absent (ಗೈರಾದವರು), Shifted (ಸ್ಥಳಾಂತರಗೊಂಡವರು), Dead (ಮೃತಪಟ್ಟವರು), Duplicate and Others (ನಕಲಿ ಹೆಸರುಗಳು ಅಥವಾ ಇತರ ಕಾರಣಗಳಿಂದ ಕೈಬಿಟ್ಟವರು) ಎಂಬ ವರ್ಗಗಳಾಗಿ ವಿಂಗಡಿಸಲಾಗಿದೆ.

SIR ಪ್ರಕ್ರಿಯೆ ಶೇ 99.96ರಷ್ಟು ಪೂರ್ಣ

ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿಗೆ ಎನ್ಯೂಮರೇಷನ್ ಫಾರಂ ನೀಡಲಾಗಿತ್ತು. ಈ ಪೈಕಿ 5,53,93,875 ಫಾರಂಗಳ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ 22,972 ಫಾರಂಗಳು ಬಾಕಿ ಉಳಿದಿದ್ದು, ಇವು ಮತದಾರರು ಅಥವಾ ಬಿಎಲ್‌ಒಗಳ ಹಂತದಲ್ಲಿರಬಹುದು.

ಒಟ್ಟು ಪ್ರಕ್ರಿಯೆಗೊಂಡ ಫಾರಂಗಳ ಪೈಕಿ ಶೇ 79ರಷ್ಟು, ಅಂದರೆ 4,43,04,632 ಮತದಾರರು ಫಾರಂ ಭರ್ತಿ ಮಾಡಿ ಸಲ್ಲಿಸಿದ್ದಾರೆ. ಈ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಇವರ ಹೆಸರುಗಳು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲಿವೆ.

1 ಕೋಟಿಗೂ ಅಧಿಕ ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ

SIR ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತದಾರರನ್ನು ASDDO ಪಟ್ಟಿಯಲ್ಲಿ ವರ್ಗೀಕರಿಸಲಾಗಿದೆ. ಇದರಲ್ಲಿ ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಹಾಗೂ ಇತರೆ ಕಾರಣಗಳಿಂದ ಪ್ರಕ್ರಿಯೆಯಲ್ಲಿ ಭಾಗಿಯಾಗದವರು ಸೇರಿದ್ದಾರೆ.

ASDDO ವರ್ಗೀಕರಣದ ವಿವರ

  • ಗೈರಾದವರು: 14,30,012
  • ಸ್ಥಳಾಂತರಗೊಂಡವರು: 66,64,943
  • ಮೃತಪಟ್ಟವರು: 16,30,872
  • ನಕಲಿ: 6,89,904
  • ಇತರ: 4,88,974
  • ಒಟ್ಟು: 1,11,4705 (20.03%)

ASDDO ಎಂದರೇನು?

  • ‘A’ ಅಂದರೆ Absent. ಇದರಲ್ಲಿ ಗೈರಾಗಿರುವವರು, ಪ್ರಕ್ರಿಯೆಯಲ್ಲಿ ಭಾಗಿಯಾಗದೇ ಉಳಿದವರು ಹಾಗೂ ಫಾರಂ ಪಡೆದುಕೊಂಡು ವಾಪಸ್ ನೀಡದವರು ಸೇರಿದ್ದಾರೆ.
  • ‘S’ ಅಂದರೆ Shifted. ಅಂದರೆ, ತಮ್ಮ ನಿವಾಸವನ್ನು ಬದಲಾಯಿಸಿರುವ ಮತದಾರರು. ಈ ವರ್ಗದಲ್ಲಿ 66,64,943 ಮತದಾರರಿದ್ದಾರೆ.
  • ‘D’ ಅಂದರೆ Death. SIR ಪ್ರಕ್ರಿಯೆ ವೇಳೆ ಮತದಾರರ ಪಟ್ಟಿಯಲ್ಲಿ 16,30,872 ಮೃತ ಮತದಾರರು ಪತ್ತೆಯಾಗಿದ್ದಾರೆ.
  • ‘D’ ಅಂದರೆ Duplicate ವರ್ಗದಲ್ಲಿ ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಹೊಂದಿರುವವರು ಅಥವಾ ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ 6,89,904 ಮಂದಿ ಪತ್ತೆಯಾಗಿದ್ದಾರೆ.
  • ‘O’ ಅಂದರೆ Other. ಫಾರಂಗೆ ಸಹಿ ಹಾಕಲು ನಿರಾಕರಿಸಿದವರು ಸೇರಿದಂತೆ ಇತರೆ ಕಾರಣಗಳಿಂದ ಪ್ರಕ್ರಿಯೆಯಿಂದ ದೂರ ಉಳಿದ 4,88,974 ಮತದಾರರು ಈ ವರ್ಗದಲ್ಲಿದ್ದಾರೆ.

ಈ ಎಲ್ಲಾ ವರ್ಗಗಳನ್ನು ಸೇರಿಸಿ ASDDO ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅಂತಿಮ ಪಟ್ಟಿಯಲ್ಲಿ ಅಂಕಿ-ಅಂಶಗಳಲ್ಲಿ ಸ್ವಲ್ಪ ವ್ಯತ್ಯಾಸವಾಗುವ ಸಾಧ್ಯತೆ ಇದ್ದರೂ, ಬಹುತೇಕ ಹೆಸರುಗಳು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲೂ ಭಾರೀ ಸಂಖ್ಯೆಯ ಹೆಸರು ಡಿಲೀಟ್ ಸಾಧ್ಯತೆ

ಬೆಂಗಳೂರಿನಲ್ಲಿ ಕೂಡ ದೊಡ್ಡ ಸಂಖ್ಯೆಯ ಮತದಾರರ ಹೆಸರು ಮತಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಚುನಾವಣಾ ಆಯೋಗ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಒಟ್ಟು 10,388,363 ಮತದಾರರಿದ್ದು, ASDDO ಪಟ್ಟಿಯಲ್ಲಿ 49,42,750 ಮತದಾರರನ್ನು ಸೇರಿಸಲಾಗಿದೆ.

ಇದರಲ್ಲಿ 7,96,277 ಮಂದಿ Absent, 33,80,013 ಮಂದಿ Shifted, 3,15,335 ಮಂದಿ ಮೃತರು, 60,092 ಮಂದಿ Duplicate ಹಾಗೂ 3,91,033 ಮಂದಿ Other ವರ್ಗದಲ್ಲಿದ್ದಾರೆ.

ಬೆಂಗಳೂರಿನ ASDDO ವಿವರ

  • ಆಬ್ಸೆಂಟ್: 7,96,277
  • ಶಿಫ್ಟೆಡ್: 33,80,013
  • ಡೆತ್: 3,15,335
  • ಡುಪ್ಲಿಕೇಟ್: 60,092
  • ಅದರ್ಸ್: 3,91,033
  • ಒಟ್ಟು: 49,42,750

ಬೆಂಗಳೂರಿನಲ್ಲಿ ಒಟ್ಟು 1,03,88,363 ಮತದಾರರಿಗೆ ಫಾರಂ ನೀಡಲಾಗಿತ್ತು. ಈ ಪೈಕಿ ASDDO ಪಟ್ಟಿಗೆ ಸೇರಿದ 49,42,750 ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.

ಆಗಸ್ಟ್ 8ರ ಬಳಿಕ ಅಂತಿಮ ಅಂಕಿ-ಅಂಶ

ಇದೀಗ ಕೇವಲ ಶೇ 0.16ರಷ್ಟು ಡಿಜಿಟಲೀಕರಣ ಕಾರ್ಯ ಬಾಕಿ ಉಳಿದಿದ್ದು, ಅದನ್ನೂ ಶೀಘ್ರದಲ್ಲೇ ಪೂರ್ಣಗೊಳಿಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಬಳಿಕ ಕರಡು ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಲಾಗುತ್ತದೆ. ಇನ್ನೂ ಮೂರು ದಿನಗಳ ಕಾಲಾವಕಾಶವಿದ್ದು, ಅಂತಿಮ ಅಂಕಿ-ಅಂಶ ಆಗಸ್ಟ್ 8ರ ನಂತರ ಹೊರಬರುವ ಸಾಧ್ಯತೆ ಇದೆ.

ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ ಪತ್ತೆಯಾಗದ 16.3 ಲಕ್ಷ ಮತದಾರರು, ಬೆಂಗಳೂರಲ್ಲಿ ಅತಿ ಹೆಚ್ಚು?

ASDDO ಪಟ್ಟಿಯಲ್ಲಿರುವ ಮತದಾರರು ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಲು ಹಾಗೂ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಗೈರಾಗಿದ್ದವರು, ಸ್ಥಳಾಂತರಗೊಂಡವರು ಹಾಗೂ ಫಾರಂ ಭರ್ತಿ ಮಾಡದವರು ಅಗತ್ಯ ಪ್ರಕ್ರಿಯೆ ಕೈಗೊಳ್ಳಬಹುದು. ವಿಳಾಸ ಬದಲಾವಣೆ ಅಥವಾ ಇತರೆ ತಿದ್ದುಪಡಿಗಳಿಗಾಗಿ Form 6 ಮತ್ತು Form 8 ಮೂಲಕ ಅಪ್‌ಡೇಟ್ ಮಾಡಿಕೊಳ್ಳಲು ಅವಕಾಶವಿದೆ.

ವರದಿ: ಅರುಣ್​​ ಕುಮಾರ್​​, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುತ್ತಿದೆ; ಶೇಖ್ ಹಸೀನಾ ಮಗ ಎಚ್ಚರಿಕೆ
ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುತ್ತಿದೆ; ಶೇಖ್ ಹಸೀನಾ ಮಗ ಎಚ್ಚರಿಕೆ
‘ಬಾಸ್ ಸಿನಿಮಾ ರಿಲೀಸ್ ಮಾಡಲು ದರ್ಶನ್ ಒಪ್ಪಿದ್ದಾರೆ’: ತನುಷ್ ಶಿವಣ್ಣ
‘ಬಾಸ್ ಸಿನಿಮಾ ರಿಲೀಸ್ ಮಾಡಲು ದರ್ಶನ್ ಒಪ್ಪಿದ್ದಾರೆ’: ತನುಷ್ ಶಿವಣ್ಣ
ಬಸ್‌ನಲ್ಲಿದ್ದ ಪ್ರಯಾಣಿಕನಿಗೆ ಹೃದಯಾಘಾತ, ಜೀವ ಉಳಿಸಿದ ಚಾಲಕ
ಬಸ್‌ನಲ್ಲಿದ್ದ ಪ್ರಯಾಣಿಕನಿಗೆ ಹೃದಯಾಘಾತ, ಜೀವ ಉಳಿಸಿದ ಚಾಲಕ
ಅಸಮಾಧಾನಿತ ಹಿರಿಯ ಶಾಸಕನ ಮನವೊಲಿಕೆಗೆ ಅಖಾಡಕ್ಕಿಳಿದ ಹೈಕಮಾಂಡ್
ಅಸಮಾಧಾನಿತ ಹಿರಿಯ ಶಾಸಕನ ಮನವೊಲಿಕೆಗೆ ಅಖಾಡಕ್ಕಿಳಿದ ಹೈಕಮಾಂಡ್
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ