Neeraj Chopra Gold: ಬಂಗಾರದ ಮನುಷ್ಯ ನೀರಜ್ ಚೋಪ್ರಾಗೆ ಮಹೀಂದ್ರಾ XUV 700 ಕಾರ್ ಗಿಫ್ಟ್!
ಜೆಕ್ ಗಣರಾಜ್ಯ ಜೋಡಿಯಾದ ಜಾಕೂಬ್ ವಾಡ್ಲೆಜ್ಚ್ ಮತ್ತು ವಿಟೆಜ್ಸ್ಲಾವ್ ವೆಸೆಲಿ ಅವರನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಗೆಲ್ಲಲು 23 ವರ್ಷದ ನೀರಜ್ 87.58 ಮೀಟರ್ ಎಸೆತವನ್ನು ಎಸೆದು ಇತಿಹಾಸ ಸೃಷ್ಟಿಸಿದರು.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ (Neeraj Chopra Gold) ಗಳಿಸಿದ ಬೆನ್ನಲ್ಲೇ ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಚಿನ್ನದ ಹುಡುಗನಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ನೀರಜ್ ಛೋಪ್ರಾಗೆ XUV 700 ಕಾರು ಗಿಫ್ಟ್ ನೀಡುವುದಾಗಿ ಆನಂದ್ ಮಹೀಂದ್ರಾ ಘೋಷಿಸಿದ್ದಾರೆ. ಭಾರತೀಯ ಕ್ರೀಡಾಪಟುಗಳು ಯಾವುದೇ ಮಹತ್ತರ ಸಾಧನೆ ಮಾಡಿದಲ್ಲಿ ಉಡುಗೊರೆ ಘೊಷಿಸುವ ಆನಂದ್ ಮಹೀಂದ್ರಾ ನೀರಜ್ ಚೋಪ್ರಾಗೂ ಕೊಡುಗೆ ನೀಡಿದ್ದಾರೆ.
ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಹರಿಯಾಣ ಸರ್ಕಾರ ನಗದು ಬಹುಮಾನವನ್ನು ಘೋಷಿಸಿತು. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಒಲಿಂಪಿಕ್ಸ್ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಚೋಪ್ರಾ ಅವರಿಗೆ 6 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ.
Yes indeed. It will be my personal privilege & honour to gift our Golden Athlete an XUV 7OO @rajesh664 @vijaynakra Keep one ready for him please. https://t.co/O544iM1KDf
— anand mahindra (@anandmahindra) August 7, 2021
ನೀರಜ್ ಪ್ರದರ್ಶನ ಹೀಗಿತ್ತು ನೀರಜ್ ತಮ್ಮ ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಎಸೆದರು. ಎರಡನೇ ಪ್ರಯತ್ನದಲ್ಲಿ, ನೀರಜ್ 87.58ಮೀಟರ್ ಎಸೆದರು. ನೀರಜ್ ಅವರ ಮೂರನೇ ಪ್ರಯತ್ನ ಸರಿಯಾಗಿರಲಿಲ್ಲ. ಅವರು 76.79 ಮೀಟರ್ ಎಸೆತವನ್ನು ಮಾತ್ರ ಸಾಧ್ಯವಾಯಿತು. ನಾಲ್ಕನೇ ಮತ್ತು ಐದನೇ ಪ್ರಯತ್ನದಲ್ಲಿ ನೀರಜ್ ಫೌಲ್ ಆದರು. ಕೊನೆಯ ಪ್ರಯತ್ನದಲ್ಲಿ ನೀರಜ್ 84 ಮೀಟರ್ ಎಸೆದರು. ನೀರಜ್ ಅರ್ಹತೆಯ ಮೊದಲ ಪ್ರಯತ್ನದಲ್ಲೇ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ಮೊದಲ ಪ್ರಯತ್ನದಲ್ಲಿ 86.65 ಮೀಟರ್ ದೂರ ಎಸೆದು ಫೈನಲ್ ತಲುಪಿದರು. 12 ಆಟಗಾರರು ಫೈನಲ್ ತಲುಪಿದ್ದರು, ಅದರಲ್ಲಿ ನೀರಜ್ ನಂಬರ್ ಒನ್ ಆಗಿದ್ದರು ಮತ್ತು ಶನಿವಾರ ಅವರು ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇತಿಹಾಸ ಸೃಷ್ಟಿಸುವಲ್ಲಿ ಯಶಸ್ವಿಯಾದರು.
ಜೆಕ್ ಗಣರಾಜ್ಯ ಜೋಡಿಯಾದ ಜಾಕೂಬ್ ವಾಡ್ಲೆಜ್ಚ್ ಮತ್ತು ವಿಟೆಜ್ಸ್ಲಾವ್ ವೆಸೆಲಿ ಅವರನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಗೆಲ್ಲಲು 23 ವರ್ಷದ ನೀರಜ್ 87.58 ಮೀಟರ್ ಎಸೆತವನ್ನು ಎಸೆದು ಇತಿಹಾಸ ಸೃಷ್ಟಿಸಿದರು. ಈ ಪದಕ, ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನದ ಪದಕ. 2008 ರ ಬೀಜಿಂಗ್‌ನಲ್ಲಿ ಅಭಿನವ್ ಬಿಂದ್ರಾ ಚಿನ್ನ ಗೆದ್ದ ನಂತರ ಒಲಿಂಪಿಕ್ ಇತಿಹಾಸದಲ್ಲಿ ದೇಶಕ್ಕೆ ಸಿಕ್ಕ ಎರಡನೇ ವೈಯಕ್ತಿಕ ಚಿನ್ನದ ಪದಕವಾಗಿದೆ.
ಇದನ್ನೂ ಓದಿ:
Tokyo olympics: ಬಂಗಾರದ ಪುತ್ರ ನೀರಜ್ ಚೋಪ್ರಾಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅಭಿನಂದನೆ
(Indian Golden man Neeraj Chopra Mahindra XUV 700 Car Gifted by Anand Mahindra)