Tokyo Olympics 2020: ಒಲಿಂಪಿಕ್ಸ್​ನಲ್ಲಿ ದಾಖಲೆ ಬರೆದ ಭಾರತದ ಮಹಿಳಾ ಹಾಕಿ ತಂಡ; ಸೆಮಿಫೈನಲ್​ಗೆ ಲಗ್ಗೆ

ಈ ಹಿಂದೆ 1980ರಲ್ಲಿ ಮಾಸ್ಕೋದಲ್ಲಿ ನಡೆದಿದ್ದ ಒಲಿಂಪಿಕ್ಸ್​​ನಲ್ಲಿ ಭಾರತ ಮಹಿಳಾ ತಂಡ ಹಾಕಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಅದೇ ಶ್ರೇಷ್ಠ ಸಾಧನೆಯಾಗಿತ್ತು.

Tokyo Olympics 2020: ಒಲಿಂಪಿಕ್ಸ್​ನಲ್ಲಿ ದಾಖಲೆ ಬರೆದ ಭಾರತದ ಮಹಿಳಾ ಹಾಕಿ ತಂಡ; ಸೆಮಿಫೈನಲ್​ಗೆ ಲಗ್ಗೆ
ಸೆಮಿ ಫೈನಲ್​ ಪ್ರವೇಶ ಮಾಡಿದ ಹಾಕಿ ತಂಡ
Edited By:

Updated on: Aug 02, 2021 | 11:15 AM

ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್(​​Tokyo Olympics)ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಬಹುದೊಡ್ಡ ಸಾಧನೆ, ಮಾಡಿ ದಾಖಲೆಯನ್ನೇ ಮಾಡಿದೆ.  ಕ್ವಾರ್ಟರ್​ಫೈನಲ್​ನಲ್ಲಿ (Hockey Quarterfinal)  ಬಲಿಷ್ಠ ಆಸ್ಟ್ರೇಲಿಯಾ ಹಾಕಿ ತಂಡವನ್ನು ಮಣಿಸಿ, ಸೆಮಿಫೈನಲ್​ಗೆ ಕಾಲಿಟ್ಟಿದೆ.  ಈ ಮೂಲಕ ಒಲಿಂಪಿಕ್ಸ್​ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಹಾಕಿ ತಂಡ ಸೆಮಿಫೈನಲ್​ ಪ್ರವೇಶ ಮಾಡಿದಂತೆ ಆಗಿದೆ.  ಈ ಹಿಂದೆ 1980ರಲ್ಲಿ ಮಾಸ್ಕೋದಲ್ಲಿ ನಡೆದಿದ್ದ ಒಲಿಂಪಿಕ್ಸ್​​ನಲ್ಲಿ ಭಾರತ ಮಹಿಳಾ ತಂಡ ಹಾಕಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಅದೇ ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶ ಮಾಡಿದೆ. 

ಭಾರತದ ಮಹಿಳಾ ಹಾಕಿ ತಂಡ ಇದೀಗ ಬರೋಬ್ಬರಿ 41 ವರ್ಷಗಳ ನಂತರ ಇಂಥದ್ದೊಂದು ಸಾಧನೆ ಮಾಡಿದೆ. ಮಾಸ್ಕೋದಲ್ಲಿ ಕ್ವಾರ್ಟರ್​ಫೈನಲ್​ನಲ್ಲಿ ಸೋತಿದ್ದ ಭಾರತ ಇದೀಗ ಸೆಮಿಫೈನಲ್​ ಪ್ರವೇಶ ಮಾಡಿದ್ದು, ಅಲ್ಲಿ, ಅರ್ಜಿಂಟೀನಾ, ನೆದರ್​ಲ್ಯಾಂಡ್​, ನ್ಯೂಜಿಲ್ಯಾಂಡ್, ಸ್ಪೇನ್ ಅಥವಾ ಗ್ರೇಟ್ ಬ್ರಿಟನ್​ ಈ ಯಾವುದಾದರೂ ದೇಶಗಳ ವಿರುದ್ಧ ಸೆಣೆಸಲಿದೆ. ಅಷ್ಟಕ್ಕೂ ಈ ಗೆಲುವಿಗೆ ಮುಖ್ಯ ಕಾರಣ ಗುರ್ಜಿತ್ ಕೌರ್​. ಭಾರತದ ಪರ ಒಂದೇಒಂದು ಗೋಲ್​ ಹೊಡೆದು ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಲು ಪ್ರಮುಖ ಕಾರಣರಾದರು.

ಇನ್ನು ಐತಿಹಾಸಿಕ ಸಾಧನೆ ಮಾಡಿ ಸೆಮಿಫೈನಲ್ ಪ್ರವೇಶಿಸಿದ ಭಾರತದ ಮಹಿಳಾ ಹಾಕಿ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಗಣ್ಯರು, ಸಾಮಾನ್ಯ ಜನರು ತಮ್ಮ ಸೋಷಿಯಲ್ ಮೀಡಿಯಾಗಳ ಮೂಲಕ ಅವರಿಗೆ ಹಾರ್ದಿಕ ಶುಭಾಶಯ ಕೋರುತ್ತಿದ್ದಾರೆ. ನಿನ್ನೆ ಪುರುಷರ ಹಾಕಿ ತಂಡ ಕೂಡ ಬರೋಬ್ಬರಿ 41 ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶ ಮಾಡಿದ್ದು ಸಂತೋಷದ ವಿಚಾರವೇ ಆಗಿದೆ.

Published On - 10:47 am, Mon, 2 August 21