ಒಲಿಂಪಿಕ್ (Olympics) ಕ್ರೀಡಾಕೂಟ ಪ್ರಾರಂಭವಾಗಿದ್ದು 1896ರಲ್ಲಿ. ಈ ಚೊಚ್ಚಲ ಒಲಿಂಪಿಕ್ನಲ್ಲೇ ಭಾರತೀಯ ವೈಟ್ಲಿಫ್ಟಿಂಗ್ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟದ್ದರು. ಈ ವಿಚಾರ ಅನೇಕರಿಗೆ ತಿಳಿದೇ ಇಲ್ಲ. ಆದರೆ, ಆ ಪದಕ ಭಾರತಕ್ಕೆ ಸಿಕ್ಕಿಲ್ಲ. ಯಾಕಂದ್ರೆ ಈ ಚಿನ್ನದ ಪದಕ ಗೆದ್ದಿದ್ದು ಭಾರತೀಯ ಮೂಲದ ಬ್ರಿಟನ್ನ ಲೂಂಸೆಸ್ಟನ್ ಎಲಿಯಟ್ (Launceston Elliot).
ಹೌದು, ಲೂಂಸೆಸ್ಟನ್ 1896ರ ಚೊಚ್ಚಲ ಒಲಿಂಪಿಕ್ಸ್ನಲ್ಲಿ ವೈಟ್ಲಿಫ್ಟಿಂಗ್ ವಿಭಾಗದಲ್ಲಿ ಭಾಗವಹಿಸಿ ಚಿನ್ನ ಗೆದ್ದಿದ್ದರು. ಮೂಲತಃ ಇವರು ಭಾರತದವರು. ಇವರು ಹುಟ್ಟಿದ್ದು 1874 ರಂದು ಕರ್ನಾಟಕ ರಾಜ್ಯದ ಬಾಗಲಕೋಟೆಯಲ್ಲಿನ ಕಲಡ್ಗಿ ಎಂಬ ಗ್ರಾಮದಲ್ಲಿ.
ಈ ಸಂದರ್ಭ ಇವರ ತಂದೆ ಭಾರತೀಯ ನಾಗರಿಕ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 1887 ರಲ್ಲಿ ಲೂಂಸೆಸ್ಟನ್ ತಂದೆ ಆ ಹುದ್ದೆಯನ್ನು ತ್ಯಜಿಸಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದರು. ಆಗ ಇವರಿಗೆ 13 ವರ್ಷ ವಯಸ್ಸಾಗಿತ್ತು.
ಬಳಿಕ ಇಂಗ್ಲೆಂಡ್ನಲ್ಲಿ ವೈಟ್ಲಿಫ್ಟಿಂಗ್ನಲ್ಲಿ ಸಾಕಷ್ಟು ತರಬೇತಿ ಪಡೆದು 1896ರ ಮೊದಲ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಗೆದ್ದು ಚಿನ್ನದ ಪದಕ ಪಡೆದುಕೊಳ್ಳುತ್ತಾರೆ. ಈ ವಿಚಾರವನ್ನು ಬ್ರಿಟಿಶ್ ಒಲಿಂಪಿಕ್ ಅಸೋಸಿಯೇಶನ್ ನೆನಪಿಸಿಕೊಂಡಿದೆ.
Mohammed Siraj: ವಿಕೆಟ್ ಕಿತ್ತಾಗ ತುಟಿಗಳ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ: ಇದರ ಹಿಂದಿದೆ ಖಡಕ್ ಕಾರಣ
India vs England: ರೋಚಕ ಘಟ್ಟದತ್ತ ಭಾರತ-ಇಂಗ್ಲೆಂಡ್ 2ನೇ ಟೆಸ್ಟ್: ತಿರುಗಿನಿಲ್ಲುತ್ತಾ ಕೊಹ್ಲಿ ಪಡೆ?
(Launceston Elliot The first Indian born to win Gold medal in Olympics)