ಟೋಕಿಯೊ ಪ್ಯಾರಾಲಿಂಪಿಕ್ಸ್ (Tokyo 2020 Paralympics) ನಲ್ಲಿ ಭಾರತ ಚೊಚ್ಚಲ ಗೆಲುವು ಸಾಧಿಸಿದೆ. ಟೆಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಮಹಿಳಾ ಸಿಂಗಲ್ಸ್ನ A ಗುಂಪಿನ ಪಂದ್ಯದಲ್ಲೇ ಗೆಲುವು ಕಾಣುವ ಮೂಲಕ ಖಾತೆ ತೆರೆದಿದ್ದಾರೆ. ಇಂದು ನಡೆದ ಎರಡನೇ ಗುಂಪಿನ ಎ ಪಂದ್ಯದಲ್ಲಿ ಭಾವಿನಾ ಗ್ರೇಟ್ ಬ್ರಿಟನ್ನ ಮೆಗನ್ ಶಾಕ್ಲೆಟನ್ ವಿರುದ್ಧ 3-1 ಅಂತರದಿಂದ ಗೆದ್ದು ಬೀಗಿದ್ದು ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾವಿನಾ ಮುನ್ನಡೆ ಸಾಧಿಸುತ್ತಾ ಬಂದರು. ಮೂರನೇ ಗೇಮ್ನಲ್ಲಿ 17-15 ಮುನ್ನಡೆ ಸಾಧಿಸಿ ಭಾರತ 2-1 ಮುನ್ನಡೆ ಸಾಧಿಸಿತು. ನಾಲ್ಕನೇ ಸುತ್ತಿನಲ್ಲಿ ಇಬ್ಬರೂ 11-11 ಅಂಕ ಸಂಪಾದಿಸಿದ ಪರಿಣಾಮ ಟೈ ಆಯಿತು. ಅಂತಿಮ ಸುತ್ತಿನಲ್ಲಿ ಭಾವಿನಾ 13-11 ಪಾಯಿಂಟ್ ಸಂಪಾದಿಸಿ ಮೆಗನ್ ವಿರುದ್ಧ 3-1 ಸೆಟ್ಗಳ ಅಂತರದಿಂದ ಗೆದ್ದರು.
#IND‘s @BhavinaPatel6 beats #GBR‘s Megan Shackleton in a thriller! ??
She won 3-1 (11-7, 9-11, 17-15, 13-11) to book passage into the next round! ?#Paralympics #Tokyo2020 #ParaTableTennis
— #Tokyo2020 for India (@Tokyo2020hi) August 26, 2021
ಬುಧವಾರ ನಡೆದ ಟೆಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾವಿನಾ ಅವರು ಚೀನಾದ ಝೌ ಯಿಂಗ್ ವಿರುದ್ಧ 3-0 ಅಂತರದಲ್ಲಿ ಸೋಲು ಅನುಭವಿಸಿದ್ದರು.
ಇನ್ನೂ ಬುಧವಾರದ ಮತ್ತೊಂದು ಪಂದ್ಯದಲ್ಲಿ ಪ್ಯಾರಾ ಟೇಬಲ್ ಟೆನ್ನಿಸ್ ಆಟಗಾರ್ತಿ ಸೋನಾಲ್ಬೆನ್ ಪಟೇಲ್ ವಿಶ್ವದ 4ನೇ ಶ್ರೇಯಾಂಕದಲ್ಲಿರುವ ಕಿಯಾನ್ ಲಿ ಅವರ ವಿರುದ್ಧ ನಿರಾಶೆ ಅನುಭವಿಸಿದ್ದರು. 3-2 ಸೆಟ್ಗಳ ಅಂತರದಿಂದ ಪಟೇಲ್ ಸೋತಿದ್ದು, ಎರಡನೇ ಗುಂಪಿನ ಡಿ ಪಂದ್ಯದಲ್ಲಿ ಗುರುವಾರ ದಕ್ಷಿಣ ಕೊರಿಯಾದ ಮಿ ಗಿಯು ಲೀ ವಿರುದ್ಧ ಸೆಣಸಲಿದ್ದಾರೆ.
ಟೋಕಿಯೊ ಕ್ರೀಡಾಕೂಟದಲ್ಲಿ ಭಾರಗತೀಯ ಸ್ಪರ್ಧಿಗಳು ಹಲವು ವಿಭಾಗದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕ್ಯಾನೋಯಿಂಗ್, ಶೂಟಿಂಗ್, ಈಜು, ಪವರ್ ಲಿಫ್ಟಿಂಗ್, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೋ ಸೇರಿದಂತೆ ಒಂಬತ್ತು ಕ್ರೀಡೆಗಳಲ್ಲಿ ದೇಶದ 54 ಆಟಗಾರರು ಭಾಗವಹಿಸಲಿದ್ದಾರೆ.
Published On - 10:23 am, Thu, 26 August 21