Tokyo Olympics: ಡಿಸ್ಕಸ್ ಥ್ರೋ ಫೈನಲ್ ಪ್ರವೇಶಿಸಿದ ಭಾರತದ ಕಮಲ್​ಪ್ರೀತ್: ಪ್ರೀ ಕ್ವಾರ್ಟರ್ಸ್​ನಲ್ಲಿ ಅತನು, ಅಮಿತ್​ಗೆ ಸೋಲು

| Updated By: Vinay Bhat

Updated on: Jul 31, 2021 | 8:57 AM

Kamalpreet Kaur: ಕಮಲ್​ಪ್ರೀತ್ ಅವರು ಮೊದಲ ಪ್ರಯತ್ನದಲ್ಲಿ 6029 ಮೀ., ಎರಡನೇ ಪ್ರಯತ್ನದಲ್ಲಿ 63.97 ಮೀ. ಮತ್ತು ಅಂತಿಮ ಪ್ರಯತ್ನದಲ್ಲಿ 64.00 ಮೀಟರ್ ಎಸೆದು ಅತ್ಯುತ್ತಮ ಪ್ರದರ್ಶನ ನೀಡಿದರು. ಆಗಸ್ಟ್ 2 ರಂದು ಫೈನಲ್ ಪಂದ್ಯ ನಡೆಯಲಿದೆ.

Tokyo Olympics: ಡಿಸ್ಕಸ್ ಥ್ರೋ ಫೈನಲ್ ಪ್ರವೇಶಿಸಿದ ಭಾರತದ ಕಮಲ್​ಪ್ರೀತ್: ಪ್ರೀ ಕ್ವಾರ್ಟರ್ಸ್​ನಲ್ಲಿ ಅತನು, ಅಮಿತ್​ಗೆ ಸೋಲು
Kamalpreet Kaur
Follow us on

ಟೋಕಿಯೋ ಒಲಿಂಪಿಕ್ಸ್ 2020 ರ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಕಮಲ್​ಪ್ರೀತ್ ಕೌರ್ 64 ಮೀಟರ್ ಎಸೆದು ಫೈನಲ್ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ ಪದಕದ ಭರವಸೆ ಮೂಡಿಸಿದ್ದಾರೆ. ಕಮಲ್​ಪ್ರೀತ್ ಅವರು ಮೊದಲ ಪ್ರಯತ್ನದಲ್ಲಿ 6029 ಮೀ., ಎರಡನೇ ಪ್ರಯತ್ನದಲ್ಲಿ 63.97 ಮೀ. ಮತ್ತು ಅಂತಿಮ ಪ್ರಯತ್ನದಲ್ಲಿ 64.00 ಮೀಟರ್ ಎಸೆದು ಅತ್ಯುತ್ತಮ ಪ್ರದರ್ಶನ ನೀಡಿದರು. ಆಗಸ್ಟ್ 2 ರಂದು ಫೈನಲ್ ಪಂದ್ಯ ನಡೆಯಲಿದೆ.

 

64.00 ಮೀಟರ್ ದೂರದವರೆಗೆ ಡಿಸ್ಕಸ್ ಥ್ರೋ ಹಾರಿಸಿ ಅಂತಿಮ ಸುತ್ತು ಪ್ರವೇಶಿಸುವ ಮೂಲಕ ಭಾರತದ ಕಮಲ್ ಪ್ರೀತ್ ಕೌರ್ ಈ ಬಾರಿಯ ಒಲಿಂಪಿಕ್ ನಲ್ಲಿ ಅಂತಿಮ ಸುತ್ತು ಪ್ರವೇಶಿಸಿದ ಎರಡನೇ ಆಟಗಾರ್ತಿಯಾಗಿದ್ದಾರೆ. ಅಮೆರಿಕಾದ ವಲರೈ ಅಲ್ಲಮ್ ಕೂಡ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.

2 ಬಾರಿಯ ಚಾಂಪಿಯನ್ ಭಾರತದ ಆತನು ದಾಸ್ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಆರ್ಚರಿ ಕ್ರೀಡೆಯಲ್ಲಿ ಪ್ರೀ ಕ್ವಾರ್ಟರ್ ಫೈನಲ್​ಗೆ ಪ್ರವೇಶ ಪಡೆದಿದ್ದ ಆತನು ಇಂದು ನಡೆದ ಪಂದ್ಯದಲ್ಲಿ ಜಪಾನಿನ ಟಕಹುರಾ ಫುರುಕ್ವಾ ವಿರುದ್ಧ 6-4 ಅಂತರದಲ್ಲಿ ಸೋಲುಕಂಡಿದ್ದಾರೆ. ಇದರ ಜೊತೆ 52 ಕೆ.ಜಿ. ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪದಕದ ಭರವಸೆ ಎನಿಸಿದ್ದ ಅಮಿತ್ ಪಂಘಾಲ್‌ ಹೋರಾಟ ಕೂಡ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲೇ ಅಂತ್ಯವಾಗಿದೆ.

ಕೊಲಂಬಿಯಾದ ಯುಬ್ರಜೇನ್‌ ಹೆನ್ರಿ ಮಾರ್ಟಿನ್ಜಾ ವಿರುದ್ಧ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಪಂಘಾಲ್‌ 4-1 ಅಂಕಗಳ ಮುನ್ನಡೆ ಸಾಧಿಸಿಸುವದರ ಮೂಲಕ ಭರವಸೆ ಮೂಡಿಸಿದರು. ಆದರೆ, ಎರಡನೇ ಸುತ್ತಿನಲ್ಲಿ ಉತ್ತಮ ಕಮ್‌ಬ್ಯಾಕ್‌ ಮಾಡಿದ ಹೆನ್ರಿ ಮಾರ್ಟಿನ್ಜಾ 4-1 ಅಂತರದಲ್ಲಿ ಮುನ್ನಡೆ ಪಡೆದುಕೊಂಡರು.

ಮೂರನೇ ಹಾಗೂ ಅಂತಿಮ ಸೆಟ್‌ನಲ್ಲಿ ಪಂಘಾಲ್‌ ರಕ್ಷಣಾತ್ಮಕ ತಂತ್ರಕ್ಕೆ ಮೊರೆ ಹೋದರೆ, ಕೊಲಂಬಿಯಾ ಆಟಗಾರ ಮತ್ತೊಮ್ಮೆ ಆಕ್ರಮಣಕಾರಿ ರಣತಂತ್ರ ಅಳವಡಿಸಿಕೊಳ್ಳುವ ಮೂಲಕ ನಂ.1 ಬಾಕ್ಸರ್ ಎದುರು ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪಂಘಾಲ್‌ ಒಲಿಂಪಿಕ್ಸ್‌ ಪದಕ ಗೆಲ್ಲುವ ಆಸೆ ನುಚ್ಚುನೂರಾಗಿದೆ.

Team India: 3 ಆಟಗಾರರನ್ನು ಲಂಕಾದಲ್ಲೇ ಬಿಟ್ಟು ತವರಿಗೆ ಹಿಂತಿರುಗಿದ ಟೀಮ್ ಇಂಡಿಯಾ

Tokyo Olympics: ಹಾಕಿ ಕ್ವಾರ್ಟರ್ ಫೈನಲ್​ನಲ್ಲಿ ಭಾರತಕ್ಕೆ ಬಲಿಷ್ಠ ತಂಡ ಎದುರಾಳಿ; ಆಗಸ್ಟ್ 1 ರಂದು ನಡೆಯುವ ಪಂದ್ಯದಲ್ಲಿ ಗೆಲುವು ಯಾರಿಗೆ?

(Tokyo Olympics 2021 Kamalpreet Kaur qualifies for womens discus throw final with a best effort of 64m)

Published On - 8:48 am, Sat, 31 July 21