AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anna Kiesenhofer: ಸೈಕ್ಲಿಂಗ್​ನಲ್ಲಿ ಚಿನ್ನ ಬಾಚಿದ ಸೈಂಟಿಸ್ಟ್: ಈಕೆಯ ಜರ್ನಿಯೇ ಅತ್ಯಂತ ರೋಚಕ

Tokyo Olympics: 2004ರ ಬಳಿಕ ಆಸ್ಟ್ರಿಯಾ ಒಲಿಂಪಿಕ್​ನಲ್ಲಿ ಯಾವುದೇ ಕ್ರೀಡೆಯಲ್ಲಿ ಒಂದೇ ಒಂದು ಪದಕ ಗೆದ್ದಿರಲಿಲ್ಲ. ಸದ್ಯ ಚಿನ್ನಕ್ಕೆ ಕೊರಳೊಡ್ಡುವ ಮೂಲಕ ಕೀಸೆನ್‌ ಹೋಫೆರ್ ಹೊಸ ದಾಖಲೆ ಕೂಡ ಬರೆದರು.

Anna Kiesenhofer: ಸೈಕ್ಲಿಂಗ್​ನಲ್ಲಿ ಚಿನ್ನ ಬಾಚಿದ ಸೈಂಟಿಸ್ಟ್: ಈಕೆಯ ಜರ್ನಿಯೇ ಅತ್ಯಂತ ರೋಚಕ
Anna Kiesenhofer
TV9 Web
| Updated By: Vinay Bhat|

Updated on: Jul 31, 2021 | 12:39 PM

Share

ಟೋಕಿಯೋ ಒಲಿಂಪಿಕ್ಸ್ (Tokyo Olympics) 2020 ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಿದೆ. ಊಹಿಸಲಾಗದಂತ ಅನೇಕ ಸಂಗತಿಗಳು ನಡೆಯುತ್ತಿವೆ. ಇದೇ ಸಾಲಿಗೆ ಆಸ್ಟ್ರೇಯಾದ ವಿಜ್ಞಾನಿ ಅನ್ನಾ ಕೀಸೆನ್‌ ಹೊಫೆರ್ (Anna Kiesenhofer) ಎಂಬವಳು ಚಿನ್ನ ಗೆದ್ದ ಸಂಗತಿಯೂ ಸೇರಿದೆ.

ಹೌದು, ಆಸ್ಟ್ರಿಯಾದ ಸೈಂಟಿಸ್ಟ್ ಕೀಸೆನ್‌ ಹೊಫೆರ್ ಅವರು ಟೋಕಿಯೋ ಒಲಿಂಪಿಕ್ಸ್‌ನ ಸೈಕ್ಲಿಂಗ್ ರೋಡ್‌ ರೇಸ್‌ನಲ್ಲಿ, ಫೇವರಿಟ್ ವೃತ್ತಿಪರ ಸೈಕ್ಲಿಸ್ಟ್‌ಗಳಿಗೆ ಆಘಾತ ನೀಡಿ ಚಿನ್ನದ ಪದಕ ಗೆದ್ದುಕೊಂಡು ಸುದ್ದಿಯಾಗಿದ್ದಾರೆ. ಅಚ್ಚರಿ ಎಂದರೆ ಇವರು ಕೇವಲ ಸೈಂಟಿಸ್ಟ್ ಮಾತ್ರವಲ್ಲ ಗಣಿತಶಾಸ್ತ್ರ ಪಿಎಚ್‌ಡಿ ಪದವೀಧರೆ ಕೂಡ ಹೌದು.

ಕ್ಯಾಲಿಫೋರ್ನಿಯಾದ ಪಾಲಿಟೆಕ್ನಿಕ್ ವಿಶ್ವವಿದ್ಯಾನಿಲಯದಲ್ಲಿ ಅನ್ವಯಿಕ ಗಣಿತಶಾಸ್ತ್ರದ ವಿಷಯದಲ್ಲಿ ಇವರು ಪಿಎಚ್‌ಡಿ ಪಡೆದಿದ್ದಾರೆ. ವಿಯೆನ್ನಾ ಹಾಗೂ ಕ್ಯಾಂಬ್ರಿಡ್ಜ್ ವಿವಿಗಳಲ್ಲೂ ಅಧ್ಯಯನ ಮಾಡಿರುವ 30 ವರ್ಷದ ಮಹಿಳೆ ನ್ಯಾಷನಲ್ ಟೈಮ್ ಟ್ರಯಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

“ಇದು ನಂಬಲು ಅಸಾಧ್ಯ, ನಾನು ವಿಜಯದ ಗೆರೆ ದಾಟಿದರೂ ನನಗೆ ನಂಬಲು ಸಾಧ್ಯವಾಗಲಿಲ್ಲ” ಎಂದು ಕೀಸೆನ್‌ ಹೋಫೆರ್ ಸಂಭ್ರಮದ ಕ್ಷಣ ಹಂಚಿಕೊಂಡರು. “ಒಂದು ಕಿಲೋಮೀಟರ್‌ಗಿಂತ ಕಡಿಮೆ ಇದ್ದಾಗ ನಾನು ದಾಳಿಗೆ ಯೋಜಿಸಿದ್ದೆ ಹಾಗೂ ನಾನು ಮುಂಚೂಣಿಯನ್ನು ಸಾಧಿಸಿದ ಬಗ್ಗೆ ಸಂತಸವಿದೆ. ಆದರೆ ಪೆರೊಟಾನ್‌ ನಲ್ಲಿ ನಾನು ಉತ್ತಮವಾಗಿ ಸವಾರಿ ಮಾಡದಿದ್ದುದು ಕಡೆಗಣಿಸುವ ವಿಚಾರವಲ್ಲ” ಎಂದು ಹೇಳಿದರು.

ಇನ್ನೂ ಬೆವರಿನಲ್ಲಿ ಮುಳುಗಿದ್ದ ಕೀಸೆನ್‌ ಹೋಫೆರ್, ವಿಜಯದ ಗೆರೆ ದಾಟಿದ ತಕ್ಷಣವೇ ನಂಬಲಸಾಧ್ಯ ಚಿನ್ನ ಸಾಧಿಸಿದ ಸಂಭ್ರಮದಿಂದ ಚೀರಿಕೊಂಡು ಕುಸಿದುಬಿದ್ದರು.

2004ರ ಬಳಿಕ ಆಸ್ಟ್ರಿಯಾ ಒಲಿಂಪಿಕ್​ನಲ್ಲಿ ಯಾವುದೇ ಕ್ರೀಡೆಯಲ್ಲಿ ಒಂದೇ ಒಂದು ಪದಕ ಗೆದ್ದಿರಲಿಲ್ಲ. ಸದ್ಯ ಚಿನ್ನಕ್ಕೆ ಕೊರಳೊಡ್ಡುವ ಮೂಲಕ ಕೀಸೆನ್‌ ಹೋಫೆರ್ ಹೊಸ ದಾಖಲೆ ಕೂಡ ಬರೆದರು.

ಖ್ಯಾತ ಸೈಕ್ಲಿಂಗ್ ಪಟು ಹಾಲೆಂಡ್‌ನ ಅನ್ನೆಮಿಕ್ ವಾನ್ ವ್ಲೆಟನ್ ತಾನು ವಿಜಯದ ಗೆರೆ ದಾಟಿದಾಗ ತಾವೇ ಸ್ಪರ್ಧೆಯಲ್ಲಿ ಗೆದ್ದಿರುವುದಾಗಿ ತಪ್ಪುಕಲ್ಪನೆ ಮಾಡಿಕೊಂಡಿದ್ದರು. ಆದರೆ ಅವರು ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಇಟಲಿಯ ಎಲಿಸಾ ಲೋಂಗೊ ಬೋರ್ಗಿನಿ ಸತತ ಎರಡನೇ ಬಾರಿಗೆ ಕಂಚಿನ ಪದಕ ಗೆದ್ದರು. ಸ್ಪರ್ಧೆಯಲ್ಲಿ ತಾವೇ ಜಯ ಸಾಧಿಸಿದ್ದಾಗಿ ತಿಳಿದು ಕೈಗಳನ್ನು ಮೇಲಕ್ಕೆತ್ತಿ ಸಂಭ್ರಮಿಸಿದ್ದು ನಿರರ್ಥಕವಾಯಿತು ಎಂದು ವಾನ್ ವ್ಲೆಟೆನ್ ಹೇಳಿದರು.

Isuru Udana Retirement: ಅಂತರರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಶ್ರೀಲಂಕಾ ತಂಡದ ಇಸುರು ಉದಾನ

Tokyo Olympics: ಭಾರತ ಮಹಿಳಾ ಹಾಕಿ ತಂಡದ ಕ್ವಾರ್ಟರ್ ಫೈನಲ್​ ಆಸೆ ಜೀವಂತ: ಆಫ್ರಿಕಾ ವಿರುದ್ಧ 4-3 ಅಂತರದ ಗೆಲುವು

(Meet Anna Kiesenhofer a scientist Mathematics Lecturer Who Shocked Cycling Superstars to Win Gold Medal at Tokyo Olympics)

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ