Tokyo Olympics: ಭಾರತ ಮಹಿಳಾ ಹಾಕಿ ತಂಡದ ಕ್ವಾರ್ಟರ್ ಫೈನಲ್ ಆಸೆ ಜೀವಂತ: ಆಫ್ರಿಕಾ ವಿರುದ್ಧ 4-3 ಅಂತರದ ಗೆಲುವು
Indian Womens Hockey: ಇಂದು ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 4-3 ಅಂತರದ ಗೆಲುವು ದಾಖಲಿಸಿ ಕ್ವಾರ್ಟರ್ ಫೈನಲ್ ಆಸೆಯನ್ನ ಜೀವಂತವಾಗಿರಿಸಿದೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ 2020ರಲ್ಲಿ ಭಾರತ ಮಹಿಳಾ ಹಾಕಿ ತಂಡ ಭರ್ಜರಿ ಕಮ್ಬ್ಯಾಕ್ ಮಾಡಿದೆ. ಇಂದು ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 4-3 ಅಂತರದ ಗೆಲುವು ದಾಖಲಿಸಿ ಕ್ವಾರ್ಟರ್ ಫೈನಲ್ ಆಸೆಯನ್ನ ಜೀವಂತವಾಗಿರಿಸಿದೆ. ಐರ್ಲೆಂಟ್ ಹಾಗೂ ಗ್ರೇಟ್ ಬಿಟನ್ ನಡುವಣ ಪಂದ್ಯದಲ್ಲಿ ಐರ್ಲೆಂಡ್ ತಂಡ ಸೋತರೆ ಅಥವಾ ಪಂದ್ಯ ಡ್ರಾ ಆದರೆ ಭಾರತ ಮಹಿಳಾ ತಂಡ ಚೊಚ್ಚಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ.
ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತಕ್ಕೆ ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ವಂದನಾ ಕ್ಯಾತ್ರಿಯಾ ಮೊದಲ ಅಂಕ ತಂದುಕೊಟ್ಟರು. ಇದರ ಬೆನ್ನಲ್ಲೇ ಆಫ್ರಿಕಾ ಕೂಡ ಮೊದಲ ಗೋಲು ಬಾರಿಸಿತು. ಮೊದಲ ಕ್ವಾರ್ಟರ್ ವೇಳೆಗೆ ಉಭಯ ತಂಡಗಳು ತಲಾ 1-1ರ ಸಮಬಲ ಸಾಧಿಸಿದ್ದವು. ನಂತರ ಮತ್ತೊಮ್ಮೆ ವಂದನಾ ಅವರು ಭಾರತಕ್ಕೆ ಎರಡನೇ ಗೋಲು ಬಾರಿಸಿ ಮುನ್ನಡೆ ಸಾಧಿಸುವಂತೆ ಮಾಡಿದರು. ಸ್ವಲ್ಪ ಹೊತ್ತಿನಲ್ಲಿ ಆಫ್ರಿಕಾದ ಎರಿನ್ ಹಂಟರ್ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.
?? 4⃣ – 3⃣ ??
एक दम से वक्त बदल दिए, जज़्बात बदल दिए…???
The #IND women’s hockey team is still in the running to qualify for the quarter-final after a thrilling 4-3 win over #RSA#Tokyo2020 | #UnitedByEmotion | #StrongerTogether
— #Tokyo2020 for India (@Tokyo2020hi) July 31, 2021
ಭಾರತಕ್ಕೆ ಮೂರನೇ ಗೋಲು ಪೆನಾಲ್ಟಿ ಕಾರ್ನರ್ ಮೂಲಕ ಬಂತು. ತಂಡಕ್ಕೆ ಮತ್ತೊಮ್ಮೆ ಗೆಲುವು ನಿಶ್ಚಿತ ಮಾಡಿದ್ದು ವಂದಾನ ಸಿಡಿಸಿದ ಗೋಲು. ಹ್ಯಾಟ್ರಿಕ್ ಗೋಲು ಬಾರಿಸುವ ಮೂಲಕ ವಂದಾನ ಹೊಸ ಇತಿಹಾಸ ಬರೆದರು. ಕಳೆದ ಮೂರು ಒಲಿಂಪಿಕ್ನಲ್ಲಿ ಭಾರತ ಮಹಿಳೆಯರ ಪರ ಯಾರೂಕೂಡ ಹ್ಯಾಟ್ರಿಕ್ ಗೋಲು ದಾಖಲಿಸಿದ ಸಾಧನೆ ಮಾಡಿರಲಿಲ್ಲ. ವಂದನಾ ಹೊಸ ದಾಖಲೆ ಬರೆದು ಭಾರತದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು.
ಇನ್ನೂ ಟೋಕಿಯೋ ಒಲಿಂಪಿಕ್ಸ್ 2020 ರ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಕಮಲ್ಪ್ರೀತ್ ಕೌರ್ 64 ಮೀಟರ್ ಎಸೆದು ಫೈನಲ್ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ ಪದಕದ ಭರವಸೆ ಮೂಡಿಸಿದ್ದಾರೆ. ಕಮಲ್ಪ್ರೀತ್ ಅವರು ಮೊದಲ ಪ್ರಯತ್ನದಲ್ಲಿ 6029 ಮೀ., ಎರಡನೇ ಪ್ರಯತ್ನದಲ್ಲಿ 63.97 ಮೀ. ಮತ್ತು ಅಂತಿಮ ಪ್ರಯತ್ನದಲ್ಲಿ 64.00 ಮೀಟರ್ ಎಸೆದು ಅತ್ಯುತ್ತಮ ಪ್ರದರ್ಶನ ನೀಡಿದರು. ಆಗಸ್ಟ್ 2 ರಂದು ಫೈನಲ್ ಪಂದ್ಯ ನಡೆಯಲಿದೆ.
ಟಿ-20 ವಿಶ್ವಕಪ್ಗೆ ಟೀಮ್ ಇಂಡಿಯಾ ಸೇರಲಿದ್ದಾರೆ ಮೂವರು ಹೊಸ ಆಟಗಾರರು: ಯಾರು ಗೊತ್ತೇ?
(India beats South Africa 4-3, stays alive in quarterfinal race in Tokyo)
Published On - 10:41 am, Sat, 31 July 21