Tokyo Olympics: ಒಲಿಂಪಿಕ್ಸ್‌ನಲ್ಲಿ ಭಾರತಕ್ಕಿಂದು ಬಿಗ್ ಡೇ: ಪಿವಿ ಸಿಂಧೂ ಮೇಲೆ ಎಲ್ಲರ ಕಣ್ಣು
ಭಾರತದ ಪಿವಿ ಸಿಂಧೂ ವಿರುದ್ಧ ಚೈನೀಸ್ ತೈಪೆಯ ತಾಯ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಹೀಗಾಗಿ ಪಿವಿ ಸಿಂಧೂಗೆ ಈ ಪಂದ್ಯ ಅಗ್ನಿ ಪರೀಕ್ಷೆಯಾಗಿರಲಿದೆ
ಟೋಕಿಯೋ ಒಲಿಂಪಿಕ್ಸ್ 2020 (Tokyo Olympics) ರಲ್ಲಿ ಪ್ರಾರಂಭವಾಗಿ 8 ದಿನಗಳು ಕಳೆದರೂ ಭಾರತದ ಖಾತೆಯಲ್ಲಿ ಕೇವಲ 1 ಪದಕ ಮಾತ್ರವಿದೆ. ಮಹಿಳಾ ವೇಟ್ ಲಿಫ್ಟಿಂಗ್ನಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳೆ ಪದಕ ಗೆದ್ದಿದ್ದು ಬಿಟ್ಟರೆ ಬೇರೆ ಯಾವುದೇ ಪದಕ ತನ್ನದಾಗಿಸಿಲ್ಲ. ಆದರೆ, ಇತ್ತ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಒಂದು ಪದಕ ಖಚಿತವಾಗಿದೆ. ಇಂದು ಕೂಡ ಭಾರತಕ್ಕೆ ಬಹುಮುಖ್ಯ ದಿನವಾಗಿದ್ದು, ಪದಕ ಸಿಗಲಿದೆಯೇ ಎಂಬುದು ತಿಳಿಯಲಿದೆ.
ಸದ್ಯಕ್ಕೆ ಭಾರತ ತಂಡದ ಪರ ಇರುವ ಪದಕದ ಭರವಸೆಯೆಂದರೆ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬರ್ಗಹೈನ್, ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧೂ, ಆರ್ಚರಿಯಲ್ಲಿ ಅತನು ದಾಸ್, ಹಾಕಿಯಲ್ಲಿ ಪುರುಷರ ತಂಡ. ಇನ್ನುಳಿದ ಸ್ಪರ್ಧೆಗಳಲ್ಲಿ ಅನಿರೀಕ್ಷಿತ ಪದಕಗಳು ಸಿಗುವ ಸಾಧ್ಯತೆಯೂ ಇದೆ. ಈ ಪೈಕಿ ಇಂದು ನಡೆಯಲಿರುವ ಬ್ಯಾಡ್ಮಿಂಟನ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಪಿವಿ ಸಿಂಧೂ ಸೆಮಿ ಫೈನಲ್‌ಗೆ ಲಗ್ಗೆಯಿಟ್ಟಿದ್ದು ಪ್ರಶಸ್ತಿ ಸುತ್ತಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಆದರೆ, ಸೆಮಿ ಫೈನಲ್ ಕದನದ ಅಗ್ನಿ ಪರೀಕ್ಷೆಯನ್ನು ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಹೇಗೆ ಎದುರಿಸಲಿದ್ದಾರೆ ಎಂಬುದು ನೋಡಬೇಕಿದೆ. ಸೆಮಿ ಫೈನಲ್‌ನಲ್ಲಿ ಸಿಂಧೂ ಅವರಿಗೆ ಕಠಿಣ ಸವಾಲು ಎದುರಾಗಿದೆ. ಪ್ರಸಕ್ತ ನಂಬರ್ 1 ಆಟಗಾರ್ತಿಯಾಗಿರುವ ಚೈನೀಸ್ ತೈಪೆಯ ತಾಯ್ ಟ್ಜು ಯಿಂಗ್ ಅವರನ್ನು ಪಿವಿ ಸಿಂಧೂ ಸೆಮಿ ಫೈನಲ್‌ನಲ್ಲಿ ಇಂದು ಎದುರಿಸಲಿದ್ದಾರೆ.
ಭಾರತದ ಪಿವಿ ಸಿಂಧೂ ವಿರುದ್ಧ ಚೈನೀಸ್ ತೈಪೆಯ ತಾಯ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಹೀಗಾಗಿ ಪಿವಿ ಸಿಂಧೂಗೆ ಈ ಪಂದ್ಯ ಅಗ್ನಿ ಪರೀಕ್ಷೆಯಾಗಿರಲಿದೆ. ಈ ಇಬ್ಬರು ಆಟಗಾರ್ತಿಯರ ಮಧ್ಯೆ ಈವರೆಗೆ ಒಟ್ಟು 18 ಪಂದ್ಯಗಳು ನಡೆದಿದೆ. ಇದರಲ್ಲಿ ತಾಯ್ ಟ್ಜು ಯಿಂಗ್ ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ. ತಾಯ್ ಟ್ಜು ಯಿಂಗ್ ಒಟ್ಟು 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಪಿವಿ ಸಿಂಧೂ ಕೇವಲ 5ರಲ್ಲಿ ಗೆದ್ದಿದ್ದಾರೆ.
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ 9ನೇ ಸ್ಥಾನಿಯಾಗಿ ಪಿವಿ ಸಿಂಧೂ ಕಣಕ್ಕಿಳಿದಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ಸಿಂಧುಗೆ ಆತಿಥೇಯ ಜಪಾನ್‌ನ ಆಟಗಾರ್ತಿಯಾದ ಅಕಾನೆ ಯಮಗುಚಿ ವಿರುದ್ಧ ಸೆಣೆಸಾಡಿ ಗೆಲುವು ಸಾಧಿಸಿದರು. 21-13 22-20 ಅಂಕಗಳ ಮೂಲಕ ಸಿಂಧೂ ಭರ್ಜರಿಯಾಗಿ ಗೆಲುವು ಸಾಧಿಸಿ ಸೆಮಿ ಫೈನಲ್‌ಗೆ ಪ್ರವೇಶ ಗಿಟ್ಟಿಸಿದ್ದಾರೆ. ಈ ಪಂದ್ಯ 56 ನಿಮಿಷಗಳಲ್ಲಿ ಮುಕ್ತಾಯಕಂಡಿತ್ತು. ಕೆಲ ಕಠಿಣ ಸವಾಲುಗಳು ಸಿಂಧೂಗೆ ಈ ಪಂದ್ಯದಲ್ಲಿ ಎದುರಾಗಿತ್ತು. ಅದರಲ್ಲೀ ಎರಡನೇ ಸೆಟ್‌ನಲ್ಲಿ ಜಪಾನ್‌ನ ಆಟಗಾರ್ತಿ ಉತ್ತಮ ಹೋರಾಟವನ್ನು ಪ್ರದರ್ಶಿಸಿದರು. ಆದರೆ ಅಂತಿಮವಾಗಿ ಗೆಲುವು ಭಾರತೀಯ ಆಟಗಾರ್ತಿಯ ಪಾಲಾಗಿತ್ತು.
ಸಮಯ: ಪಿವಿ ಸಿಂಧೂ ಹಾಗೂ ತಾಯ್ ಟ್ಜು ಯಿಂಗ್ ವಿರುದ್ಧದ ಸೆಮಿಫೈನಲ್ ಕದನ ಶನಿವಾರ ನಡೆಯಲಿದೆ. ಮಧ್ಯಾಹ್ನ 2:30ಕ್ಕೆ ಪಂದ್ಯ ನಿಗದಿಯಾಗಿದೆ.
ನೇರಪ್ರಸಾರ: ಈ ಸೆಮಿಫೈನಲ್ ಪಂದ್ಯ ಸೋನಿ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಸೋನಿ ಲಿವ್ ಒಟಿಟಿ ವೇದಿಯಲ್ಲಿ ಈ ಪಂದ್ಯವನ್ನು ವೀಕ್ಷಿಸುವ ಅವಕಾಶವಿದೆ.
(Tokyo Olympics 2021 Big Day for Indiaa All eyes on PV Sindhu semi-final clash)