Tokyo Olympics 2020: ಲವ್ಲೀನಾ ಹುಟ್ಟು ಹೋರಾಟಗಾರ್ತಿ ಮತ್ತು ಯುವಶಕ್ತಿಯ ಸಂತೇತವಾಗಿದ್ದಾಳೆ: ಭಾರತೀಯ ಬಾಕ್ಸಿಂಗ್ ಫೆಡರೇಶನ್
ಆಕೆ ಭಾರತದ ಯುವಶಕ್ತಿಯ ಸಂಕೇತವಾಗಿದ್ದಾಳೆ. ಮುಂಬರುವ ವರ್ಷಗಳಲ್ಲಿ ಬಾಕ್ಸಿಂಗ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಯುವ ಪ್ರತಿಭೆಗಳು ಆಕೆಯಿಂದ ಪ್ರೇರಿತರಾಗಿ ಭಾರತಕ್ಕೆ ಒಲಂಪಿಕ್ಸ್ನಲ್ಲಿ ಪದಕಗಳನ್ನು ಗೆಲ್ಲುತ್ತಾರೆಂಬ ಭರವಸೆ ನನಗಿದೆ,’ ಎಂದು ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುರುವಾರದಂದು ಭಾರತದ ಸ್ಟಾರ್ ಬಾಕ್ಸರ್ ಮತ್ತು ಪದಕ ಗೆದ್ದೇ ಗೆಲ್ಲ್ಲುತ್ತಾರೆ ಅಂತ ಇಡೀ ದೇಶ ಎದರು ನೋಡುತ್ತಿದ್ದ ಮೇರಿ ಕೋಮ್, ಟೋಕಿಯೊ ಒಲಂಪಿಕ್ಸ್ನಿಂದ ಸೋತು ನಿರ್ಗಮಿಸಿದ ನಂತರ ಶುಕ್ರವಾರ ಭಾರತೀಯರಿಗೆ ಒಂದು ಒಳ್ಳೇ ಸುದ್ದಿ ಸಿಕ್ಕಿದೆ. ಮಹಿಳೆಯರ ವೆಲ್ಟರ್ವೇಟ್ ವಿಭಾಗದಲ್ಲಿ ಲವ್ಲೀನಾ ಬೊರ್ಗೊಹೇನ್ ಅವರು ಸೆಮಿಫೈನಲ್ ಹಂತ ತಲುಪಿ ಕನಿಷ್ಟ ಕಂಚಿನ ಪದಕವನ್ನು ಖಚಿತಪಡಿಸಿದ್ದ್ದಾರೆ. ಆಕೆಯ ಯಶಸ್ಸನ್ನು ಭಾರತದ ಭಾರತದ ಬಾಕ್ಸಿಂಗ್ ಫೆಡರೇಶನ್ ಸಂಭ್ರಮಿಸುತ್ತಿದೆ. ಗೆಲುವಿನ ನಂತರ ಮಾಧ್ಯಮದವರೊಂದಿಗೆ ಮಾತಾಡುತ್ತಾ ಲವ್ಲೀನಾ ಅವರನ್ನು ಅಭಿನಂದಿಸಿದ ಫೆಡರೇಶನ್ ಅಧ್ಯಕ್ಷ ಅಜಯ ಸಿಂಗ್, ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ‘ನಾವೆಲ್ಲ ಬಹಳ ಕಾತುರತೆಯಿಂದದ ಕಾಯುತ್ತಿದ್ದ ಸುದ್ದಿ ಇದು. ಈ ಹೆಮ್ಮೆಯ ಕ್ಷಣ ಕೇವಲ ಭಾರತೀಯ ಬಾಕ್ಸಿಂಗ್ ಅಥವಾ ಅಸ್ಸಾಂ ರಾಜ್ಯಕ್ಕೆ ಮಾತ್ರ ಮೀಸಲಾಗಿರದೆ, ಇಡೀ ದೇಶವೇ ಸಂಭ್ರಮಿಸುವಂಥ ವಿಷಯವಾಗಿದೆ. ಲವ್ಲೀನಾ ಬಹಳ ಪರಾಕ್ರಮದ ಪ್ರದರ್ಶನ ನೀಡಿದರು. ಬಹಳಷ್ಟು ಜನಕ್ಕೆ ಗೊತ್ತಿರಲಾರದು. ಕಳೆದ ವರ್ಷ ಆಕೆ ಕೋವಿಡ್ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಆಕೆಯ ತಾಯಿ ಸಹ ಜೀವಕ್ಕೆ ಕುತ್ತು ತರುವಂಥ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ ಲವ್ಲೀನಾ ಹುಟ್ಟು ಹೋರಾಟಗಾರ್ತಿ. ಆಕೆಯ ಸಾಧನೆ ಭಾರತದ ಬಾಕ್ಸಿಂಗ್ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ ಮತ್ತು ಈ ಹುಡುಗಿ ತನಗೆ ಎದುರಾದ ಎಲ್ಲ ಸಂಕಷ್ಟಗಳನ್ನು ಮೆಟ್ಟಿ ಈ ಸಾಧನೆ ಮಾಡಿದ್ದು ನಮಲ್ಲಿ ಹೆಮ್ಮೆ ಮೂಡಿಸಿದೆ,’ ಎಂದು ಹೇಳಿದ್ದಾರೆ.
‘ಭಾರತದ ಬಾಕ್ಸಿಂಗ್ ಫೆಡರೇಶನ್ ಆಕೆಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಕಳೆದ ನಾಲ್ಕು ವರ್ಷಗಳಿಂದ ನಾವು ಅನುಸರಿಸಿಕೊಂಡ ಬಂದ ಒಂದು ಪದ್ಧತಿಗೆ ಸಿಕ್ಕ ಪ್ರತಿಫಲ ಇದಾಗಿದೆ. ಆದರೆ, ನಾನು ಆಗಲೇ ಹೇಳಿದ ಹಾಗೆ ಲವ್ಲೀನಾಗೆ ಇದು ಕೇವಲ ಆರಂಭವಾಗಿದೆ. ದೇಶಕ್ಕಾಗಿ ಬಂಗಾರದ ಪದಕ ಗೆಲ್ಲಬೇಕಾದರೆ ಅಕೆ ಬಹಳ ಜಾಗರೂಕತೆಯಿಂದ ಪ್ಲ್ಯಾನ್ ಮಾಡಬೇಕಿದೆ. ಆಕೆ ಭಾರತದ ಯುವಶಕ್ತಿಯ ಸಂಕೇತವಾಗಿದ್ದಾಳೆ. ಮುಂಬರುವ ವರ್ಷಗಳಲ್ಲಿ ಬಾಕ್ಸಿಂಗ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಯುವ ಪ್ರತಿಭೆಗಳು ಆಕೆಯಿಂದ ಪ್ರೇರಿತರಾಗಿ ಭಾರತಕ್ಕೆ ಒಲಂಪಿಕ್ಸ್ನಲ್ಲಿ ಪದಕಗಳನ್ನು ಗೆಲ್ಲುತ್ತಾರೆಂಬ ಭರವಸೆ ನನಗಿದೆ,’ ಎಂದು ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲವ್ಲೀನಾ ಅವರು ಶುಕ್ರವಾರ ಚೈನೀಸ್ ತೈಪೆಯ ನೀನ್-ಚಿನ್ ಚೆನ್ ಅವರನ್ನು 4-1 ರ ವಿಭಜಿತ ನಿರ್ಣಯದ ಆಧಾರದಲ್ಲಿ ಸೋಲಿಸಿದರು. ಮೊದಲ ಸುತ್ತಿನಲ್ಲಿ ಐವರು ಜಡ್ಜ್ಗಳು ವಿಭಜಿತ ನಿರ್ಣಯಗಳನ್ನು ನೀಡಿದರು. ಆದರೆ ಮುಂದಿನ ಎರಡು ಸುತ್ತುಗಳಲ್ಲಿ ಎಲ್ಲ ಜಡ್ಜ್ಗಳು ಲವ್ಲೀನಾ ಅವರ ಪಾರಮ್ಯಕ್ಕೆ ಮುದ್ರೆ ಒತ್ತಿದರು.
ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಸಹ ಲವ್ಲೀನಾ ಅವರನ್ನು ಅಭಿನಂದಿಸಿ, ಆಕೆ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: Tokyo Olympics: ಸೆಮಿಫೈನಲ್‌ನಲ್ಲಿ ಪಿವಿ ಸಿಂಧುಗೆ ಎದುರಾಳಿ ಯಾರು ಗೊತ್ತಾ? ಇಬ್ಬರ ಮುಖಾಮುಖಿ ಬಗ್ಗೆ ಅಂಕಿ- ಅಂಶ ಹೇಳಿದ್ದೇನು?