Tokyo Olympics: ಒಲಂಪಿಕ್ಸ್​ನಲ್ಲಿ ಜೆಸ್ಸಿಕಾ ಫಾಕ್ಸ್​ಗೆ ಪದಕ ಗೆಲ್ಲಲು ಸಹಾಯ ಮಾಡಿತು ಒಂದು ಕಾಂಡೊಮ್!

Jessica Fox: ಆಸ್ಟ್ರೇಲಿಯಾದ ಜೆಸ್ಸಿಕಾ ಫಾಕ್ಸ್ ಕ್ಯಾನೋ ಸ್ಲೇಲಮ್ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚಿನ ಪದಕ ಗೆದ್ದಿದ್ದಾರೆ. ಅದಕ್ಕೆ ಸಹಾಯಕವಾದ ಒಂದು ಕುತೂಹಲಕರ ಸಂಗತಿಯನ್ನೂ ಜೆಸ್ಸಿಕಾ ಎಲ್ಲರೆದುರು ತೆರೆದಿಟ್ಟಿದ್ದಾರೆ.

Tokyo Olympics: ಒಲಂಪಿಕ್ಸ್​ನಲ್ಲಿ ಜೆಸ್ಸಿಕಾ ಫಾಕ್ಸ್​ಗೆ ಪದಕ ಗೆಲ್ಲಲು ಸಹಾಯ ಮಾಡಿತು ಒಂದು ಕಾಂಡೊಮ್!
ಗೆದ್ದಿರುವ ಪದಕದೊಂದಿಗೆ ಜೆಸ್ಸಿಕಾ ಫಾಕ್ಸ್
Follow us
TV9 Web
| Updated By: shivaprasad.hs

Updated on: Jul 30, 2021 | 6:08 PM

ಕ್ಯಾನೋ ಸ್ಲೇಲಮ್ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚಿನ ಪದಕವನ್ನು ಗೆದ್ದಿರುವ ಆಸ್ಟ್ರೇಲಿಯಾದ ಸ್ಪರ್ಧಿ ಜೆಸ್ಸಿಕಾ ಫಾಕ್ಸ್ ತಮ್ಮ ಯಶಸ್ಸಿನ ಗುಟ್ಟನ್ನು ತೆರೆದಿಟ್ಟು ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಅವರ ಯಶಸ್ಸಿನ ಹಿಂದೆ ಒಲಂಪಿಕ್ ಕ್ರೀಡಾಗ್ರಾಮದಲ್ಲಿ ಕೊಡಲಾಗುವ ಕಾಂಡೊಮ್ ಪಾಲೂ ಇದೆ ಎಂದು ಅವರು ಸ್ವತಃ ಹೇಳಿಕೊಂಡಿದ್ದಾರೆ. ಈ ಕುರಿತು ವಿಡಿಯೊವೊಂದನ್ನು ಪೋಸ್ಟ್ ಮಾಡಿರುವ ಅವರು, ಕಷ್ಟಕಾಲದಲ್ಲಿ ಕಾಂಡೊಮ್ ಹೇಗೆ ಸಹಾಯ ಮಾಡಿತು ಎಂಬುದನ್ನು ವಿವರಿಸಿದ್ದಾರೆ. ಅವರ ಕಯಾಕ್​ನ(ಒಂದು ಮಾದರಿಯ ದೋಣಿ) ಒಂದು ಭಾಗ ಹಾಳಾಗಿತ್ತಂತೆ. ಅದನ್ನು ಸರಿಪಡಿಸಲು ಅವರು ಕಾಂಡೊಮ್ ಬಳಸಿದ್ದಾರೆ. ಆ ಪ್ರಕ್ರಿಯೆಯ ವಿಡಿಯೊವನ್ನು ಅವರು ಹಂಚಿಕೊಂಡಿದ್ದು, ಅದಕ್ಕೆ ಟಿಪ್ಪಣಿಯಾಗಿ ‘ನಾನು ಬೇಕಾದರೆ ಪಂದ್ಯ ಕಟ್ಟಬಲ್ಲೆ. ಕಯಾಕ್ ರಿಪೇರಿಗೆ ಕಾಂಡೊಮ್ ಬಳಸಬಹುದು ಎಂಬ ಕಲ್ಪನೆಯೇ ನಿಮಗಿರುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಮೂಲದಲ್ಲಿ ಟಿಕ್​ಟಾಕ್​ನಲ್ಲಿ ಹಂಚಿರುವ ಈ ವಿಡಿಯೊ ಈಗ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಯಾಕ್​ನ ಹಾಳಾದ ತುದಿಯನ್ನು ಸರಿಪಡಿಸಲು ಮತ್ತು ಕಾರ್ಬನ್​ಗೆ ಸೂಕ್ತವಾದ ಹೊರಮೈಲ್ಮೈಯನ್ನು ಹೊಂದಲು ಕಾಂಡೊಮ್ ಸಹಾಯ ಮಾಡುತ್ತದೆ ಎಂದೂ ವಿವರಣೆಯನ್ನು ನೀಡಿದ್ದಾರೆ ಜೆಸ್ಸಿಕಾ.

ಜೆಸ್ಸಿಕಾ ಹಂಚಿಕೊಂಡಿರುವ ವಿಡಿಯೊ ಇಲ್ಲಿದೆ:

ಜೆಸ್ಸಿಕಾರ ಅನ್ವೇಷಣೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂಜಿನಿಯರ್ ತಲೆ ನಿಮ್ಮದು ಎಂದು ಒಬ್ಬ ಅಭಿಮಾನಿ ಹೇಳಿದ್ದಾನೆ. ನೀವು ಪ್ರತೀ ಬಾರಿಯೂ ಏನಾದರೂ ಹೊಸದನ್ನು ಕಲಿಯುತ್ತೀರಿ ಎಂದು ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾನೆ. ಸದ್ಯ ಇದು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಜೆಸ್ಸಿಕಾರ ಸಮಯ ಪ್ರಜ್ಞೆಯನ್ನು  ಮತ್ತು ಮುಕ್ತ ಮನಸ್ಸನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

Jessica Fox

ಒಲಂಪಿಕ್ ಸ್ಪರ್ಧೆಯಲ್ಲಿ ಜೆಸ್ಸಿಕಾ ಆಟದ ಸೊಬಗು

ಒಲಂಪಿಕ್ ಕ್ರೀಡಾಗ್ರಾಮದಲ್ಲಿ ಸ್ಪರ್ಧಿಗಳಿಗೆಂದೇ ಸುಮಾರು 60,000 ಕಾಂಡೊಮ್​ಗಳನ್ನು ಹಂಚಿಕೆ ಮಾಡಲಾಗಿದೆ. ಎಚ್​ಐವಿ, ಏಡ್ಸ್ ಕುರಿತು ಜಾಗೃತಿ ಮೂಡಿಸಲು ತಲಾ 12ರಂತೆ ಸ್ಪರ್ಧಿಗಳಿಗೆ ಕಾಂಡೊಮ್ ಹಂಚಿಕೆ ಮಾಡಲಾಗಿದೆ. ಆದರೆ ಇದನ್ನು ಕ್ರೀಡಾಗ್ರಾಮದಲ್ಲಿ ಬಳಸದೇ ಮರಳಿ ತಮ್ಮ ದೇಶಕ್ಕೆ ಕೊಂಡೊಯ್ಯಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನೂ ಆಯೋಜನಾ ಸಮಿತಿ ತಿಳಿಸಿದೆ.

ಕ್ಯಾನೋ ಸ್ಲೇಲಮ್ ಸ್ಪರ್ಧೆಯೆಂದರೆ ಏನು?

ಇದರಲ್ಲಿ ಸ್ಪರ್ಧಿಗಳು ಒಬ್ಬರೇ ಹುಟ್ಟುಹಾಕಬಹುದಾದ ಮಾದರಿಯ ದೋಣಿಗಳಲ್ಲಿ ಕುಳಿತು ಅಡೆತಡೆಗಳನ್ನು ದಾಟಿ ಗುರಿಯನ್ನು ಮುಟ್ಟಬೇಕು. ಹಾಕಿರುವ ಅಡೆತಡೆಗಳು ಮೈಗೆ ತಾಗಿದರೆ ಅಂಕಗಳು ಕಡಿತವಾಗುತ್ತವೆ. ಮೊದಲು ಗುರಿಯನ್ನು ತಲುಪವುದು ಮತ್ತು ಇತರ ನಿಯಮಾವಳಿಗಳ ಪಾಲನೆಯಲ್ಲಿ ಹೆಚ್ಚು ಅಂಕ ಗಳಿಸಿರುವುದನ್ನು ಒಟ್ಟು ಮಾಡಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಜೆಸ್ಸಿಕಾ ಅವರು ಒಲಂಪಿಕ್ ಸ್ಪರ್ಧೆಯಲ್ಲಿ ಮೊದಲು ಗುರಿ ಮುಟ್ಟಿದರೂ ಅಡೆ ತಡೆಗಳಿಗೆ ಮೈ ತಾಗಿದ್ದರಿಂದ ಅಂಕ ಕಡಿತವಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದಾಗ್ಯೂ ಕ್ಯಾನೋ ಸ್ಲೇಲಮ್​ನ ಮತ್ತೊಂದು ವಿಭಾಗದಲ್ಲಿ ಅವರು ಚಿನ್ನ ಜಯಿಸಿದ್ದಾರೆ.

ಜೆಸ್ಸಿಕಾ ಅವರು ಪ್ರಾಗ್ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕಯಾಕಿಂಗ್ ಮಾಡುತ್ತಿರುವ ವಿಡಿಯೊ ಇಲ್ಲಿದೆ:

View this post on Instagram

A post shared by Jessica Fox (@jessfox94)

27 ವರ್ಷದ ಜೆಸ್ಸಿಕಾ ಫಾಕ್ಸ್ 2008ರಲ್ಲೇ ಅಂತಾರಾಷ್ಟ್ರೀಯ ಸ್ಪರ್ಧೆಗೆ ಪಾದಾರ್ಪಣೆ ಮಾಡಿದ್ದರು. 2012ರ ಲಂಡನ್ ಒಲಂಪಿಕ್ಸ್​ನಿಂದ ಒಲಂಪಿಕ್ಸ್ ಸ್ಪರ್ಧೆಯಲ್ಲಿ ತೊಡಗಿಕೊಂಡ ಅವರು ನಂತರದ ಎಲ್ಲಾ ಒಲಂಪಿಕ್ಸ್​ಗಳಲ್ಲೂ ಪದಕ ಗಳಿಸಿದ್ದಾರೆ.

ಇದನ್ನೂ ಓದಿ: 

ಆತ್ಮಾವಲೋಕನ ಮಾಡಿಕೊಳ್ಳಿ.. ಸತತ 9 ಪಂದ್ಯಗಳಲ್ಲಿ ವಿಫಲ: ತನ್ನ ಶಿಷ್ಯನ ಆಟದಿಂದ ನಿರಾಸೆಗೊಂಡರ ಗುರು ದ್ರಾವಿಡ್?

Pulsar 250F: ಹೊಸ ಬಜಾಜ್ ಪಲ್ಸರ್ 250F: ಏನಿದರ ವಿಶೇಷತೆ, ಬೆಲೆ ಎಷ್ಟು ಗೊತ್ತಾ?

(Australian based Olympic Champion Jessica Fox shares that a Condom was helped to fix her Kayak)

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ