Tokyo Olympics: ವಿಶ್ವದ ನಂ.1 ಆಟಗಾರ ಜೊಕೊವಿಕ್ ಚಿನ್ನ ಗೆಲ್ಲುವ ಕನಸು ಭಗ್ನ: ನೊವಾಕ್ ಮಣಿಸಿ ಫೈನಲ್​ ಪ್ರವೇಶಿಸಿದ ಅಲೆಕ್ಸಾಂಡರ್ ಜ್ವೆರೆವ್

Tokyo Olympics: ಪುರುಷರ ಸಿಂಗಲ್ಸ್ ಸೆಮಿಫೈನಲ್​ನಲ್ಲಿ, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಜೊಕೊವಿಚ್ ಅವರನ್ನು 1-6, 6-3, 6-1ರಿಂದ ಮೂರು ಸೆಟ್​ಗಳ ಪಂದ್ಯದಲ್ಲಿ ಸೋಲಿಸಿ ತನ್ನ ಮೊದಲ ಒಲಿಂಪಿಕ್ ಫೈನಲ್ ತಲುಪಿದರು.

Tokyo Olympics: ವಿಶ್ವದ ನಂ.1 ಆಟಗಾರ ಜೊಕೊವಿಕ್ ಚಿನ್ನ ಗೆಲ್ಲುವ ಕನಸು ಭಗ್ನ: ನೊವಾಕ್ ಮಣಿಸಿ ಫೈನಲ್​ ಪ್ರವೇಶಿಸಿದ ಅಲೆಕ್ಸಾಂಡರ್ ಜ್ವೆರೆವ್
ಅಲೆಕ್ಸಾಂಡರ್ ಜ್ವೆರೆವ್, ಜೊಕೊವಿಚ್
Follow us
TV9 Web
| Updated By: ಪೃಥ್ವಿಶಂಕರ

Updated on:Jul 30, 2021 | 4:10 PM

ಟೋಕಿಯೊ ಒಲಿಂಪಿಕ್ಸ್ 2020 ಒಂದರ ನಂತರ ಒಂದರಂತೆ ಅನೇಕ ಆಶ್ಚರ್ಯಕಾರಿ ಮತ್ತು ಆಘಾತಕಾರಿ ಫಲಿತಾಂಶಗಳನ್ನು ನೀಡುತ್ತಿದೆ. ವಿಶೇಷವಾಗಿ ಟೆನಿಸ್ ಕೋರ್ಟ್ ಅತ್ಯಂತ ಆಶ್ಚರ್ಯಕರ ಫಲಿತಾಂಶಗಳನ್ನು ನೀಡಿದೆ. ಸೆಮಿಫೈನಲ್‌ನಲ್ಲಿ ವಿಶ್ವದ ಪ್ರಥಮ ಪುರುಷ ಟೆನಿಸ್ ಆಟಗಾರ ಸೆರ್ಬಿಯಾದ ನೊವಾಕ್ ಜೊಕೊವಿಕ್ ಸೋಲನುಭವಿಸಿದ್ದಾರೆ. ಪುರುಷರ ಸಿಂಗಲ್ಸ್ ಸೆಮಿಫೈನಲ್​ನಲ್ಲಿ, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಜೊಕೊವಿಚ್ ಅವರನ್ನು 1-6, 6-3, 6-1ರಿಂದ ಮೂರು ಸೆಟ್​ಗಳ ಪಂದ್ಯದಲ್ಲಿ ಸೋಲಿಸಿ ತನ್ನ ಮೊದಲ ಒಲಿಂಪಿಕ್ ಫೈನಲ್ ತಲುಪಿದರು. ಇದರೊಂದಿಗೆ, ‘ಗೋಲ್ಡನ್ ಸ್ಲ್ಯಾಮ್’ ಪೂರ್ಣಗೊಳಿಸುವ ಜೊಕೊವಿಕ್ ಅವರ ಕನಸು ಈಡೇರಲಿಲ್ಲ. ಫೈನಲ್‌ನಲ್ಲಿ ಜ್ವೆರೆವ್ ರಷ್ಯಾದ ಒಲಿಂಪಿಕ್ ಸಮಿತಿ ಆಟಗಾರ ಕರೆನ್ ಖಚನೋವ್ ಅವರನ್ನು ಎದುರಿಸಲಿದ್ದಾರೆ.

ಈ ವರ್ಷ ಒಲಿಂಪಿಕ್ಸ್‌ಗೆ ಮೊದಲು ನಡೆದ ಮೂರು ಗ್ರ್ಯಾಂಡ್ ಸ್ಲ್ಯಾಮ್‌ಗಳಲ್ಲಿ ಪ್ರಶಸ್ತಿಯನ್ನು ಗೆದ್ದ ಜೊಕೊವಿಕ್ ಯಾವುದೇ ಪ್ರಮುಖ ಪಂದ್ಯವನ್ನು ಕಳೆದುಕೊಂಡಿರಲಿಲ್ಲ. ಅವರು ಮೊದಲ ಬಾರಿಗೆ ಸಿಂಗಲ್ಸ್ ಚಿನ್ನ ಗೆಲ್ಲುವ ಉದ್ದೇಶದಿಂದ ಒಲಿಂಪಿಕ್ಸ್‌ಗೆ ಪ್ರವೇಶಿಸಿದರು ಮತ್ತು ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಟೋಕಿಯೊದಲ್ಲಿ ಪಂದ್ಯಗಳು ಆರಂಭವಾದಾಗಿನಿಂದ ಸೆಮಿಫೈನಲ್‌ವರೆಗೂ ಉತ್ತಮವಾಗಿ ಕಾಣುತ್ತಿದ್ದ ಜೊಕೊವಿಚ್ ತನ್ನ ಪ್ರತಿಸ್ಪರ್ಧಿಗಳನ್ನು ಸುಲಭವಾಗಿ ಸೋಲಿಸಿ ಸೆಮಿಫೈನಲ್‌ಗೆ ತಲುಪಿದ್ದರು.

ಜೊಕೊವಿಚ್ ತನ್ನ ಆಕ್ರಮಣಕಾರಿ ಶೈಲಿಯನ್ನು ಮೊದಲ ಸೆಟ್ ನಲ್ಲಿ ತೋರಿಸಿದರು ಮತ್ತು ಜ್ವೆರೆವ್ ಅವರನ್ನು 6-1ಅಂತರದಿಂದ ಸೋಲಿಸಿದರು. ಜ್ವೆರೆವ್ ಈ ಸೆಟ್ನಲ್ಲಿ ಚೇತರಿಸಿಕೊಳ್ಳುವ ಅವಕಾಶವನ್ನು ಸಹ ಪಡೆಯಲಿಲ್ಲ. ಆದರೆ ಅವರು ಎರಡನೇ ಸೆಟ್ನಲ್ಲಿ ಬಲವಾದ ಪುನರಾಗಮನ ಮಾಡಿದರು. ಜರ್ಮನಿಯ ಯುವ ಆಟಗಾರ ಜೊಕೊವಿಚ್ ಸರ್ವ್ ಮುರಿದು 6-3 ಸೆಟ್ ಗೆದ್ದು ಪಂದ್ಯದ ಫಲಿತಾಂಶವನ್ನು ಅಂತಿಮ ಸೆಟ್ ಗೆ ಕೊಂಡೊಯ್ದರು. ಇಲ್ಲಿ ಜ್ವೆರೆವ್ ಸಂಪೂರ್ಣವಾಗಿ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡರು. ಜೊಕೊವಿಚ್ ಅವರ ಮೊದಲ ಎರಡು ಸರ್ವ್‌ಗಳನ್ನು ಮುರಿದು 4-0 ಮುನ್ನಡೆ ಸಾಧಿಸಿದರು. ಜೊಕೊವಿಚ್‌ಗೆ ಹೆಚ್ಚಿನ ಪುನರಾಗಮನದ ಅವಕಾಶವಿರಲಿಲ್ಲ ಮತ್ತು ಜ್ವೆರೆವ್ ಕೊನೆಯ ಸೆಟ್‌ನಲ್ಲಿ 6-1 ಅಂತರದಿಂದ ಜಯಗಳಿಸಿ ಎಲ್ಲರನ್ನು ಅಚ್ಚರಿಗೊಳಿಸಿದರು.

Published On - 3:53 pm, Fri, 30 July 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್