AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics: ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರ ಒಲಂಪಿಕ್ಸ್ ಪದಕದ ಕನಸು ಭಗ್ನ

Deepika Kumari: ಆರ್ಚರ್ ಸ್ಪರ್ಧೆಯಲ್ಲಿ ಪದಕದ ಭರವಸೆ ಹುಟ್ಟಿಸಿದ್ದ ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಕ್ವಾರ್ಟರ್ ಫೈನಲ್​ನಲ್ಲಿ ಅವರು ದಕ್ಷಿಣ ಕೊರಿಯಾದ ವಿರುದ್ಧ ಸೋಲನುಭವಿಸಿದ್ದಾರೆ.

Tokyo Olympics: ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರ ಒಲಂಪಿಕ್ಸ್ ಪದಕದ ಕನಸು ಭಗ್ನ
ಭಾರತದ ಆರ್ಚರ್ ಸ್ಪರ್ಧಿ ದೀಪಿಕಾ ಕುಮಾರಿ (ಸಾಂದರ್ಭಿಕ ಚಿತ್ರ, ಕೃಪೆ: Reuters)
TV9 Web
| Updated By: shivaprasad.hs|

Updated on:Jul 30, 2021 | 12:35 PM

Share

ಟೊಕಿಯೊ ಒಲಂಪಿಕ್ಸ್: ಭಾರತಕ್ಕೆ ಆರ್ಚರ್ ಸ್ಪರ್ಧೆಯಲ್ಲಿ ಪದಕದ ಭರವಸೆ ಹುಟ್ಟಿಸಿದ್ದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ. ದಕ್ಷಿಣ ಕೊರಿಯಾದ ಅನ್ ಸಾನ್ ಅವರಿಗೆ 6-0 ಅಂತರದಿಂದ ದೀಪಿಕಾ ಕುಮಾರಿ ಶರಣಾಗಿದ್ಧಾರೆ. ಉತ್ತಮವಾಗಿ ಅಭಿಯಾನ ಆರಂಭಿಸಿ ಗೆಲುವಿನೊಂದಿಗೆ ಮುನ್ನುಗ್ಗುತ್ತಿದ್ದ ದೀಪಿಕಾ ಅವರಿಗೆ ಕ್ವಾರ್ಟರ್ ಫೈನಲ್​ನಲ್ಲಿ ಅನ್ ಸಾನ್ ಅವರು ಬ್ರೇಕ್ ಹಾಕಿದ್ದಾರೆ. ಈ ಗೆಲುವಿನೊಂದಿಗೆ ಅನ್ ಸಾನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ದೀಪಿಕಾ ಕುಮಾರಿ ಅವರಿಗೆ ಪದಕ ಗೆಲ್ಲಲು ಕೇವಲ ಮೂರು ಹೆಜ್ಜೆಗಳಿದ್ದವು. ಈ ಸೋಲಿನೊಂದಿಗೆ ಅವರ ಟೊಕಿಯೊ ಒಲಂಪಿಕ್ಸ್ ಅಭಿಯಾನ ಅಂತ್ಯವಾಗಿದೆ.

ದಕ್ಷಿಣ ಕೊರಿಯಾದ ಅನ್ ಸಾನ್ ಅವರು ಈಗಾಗಲೇ ಟೂರ್ನಿಯಲ್ಲಿ ಎರಡು ಪದಕಗಳಿಗೆ ಕೊರಳೊಡ್ಡಿದ್ದಾರೆ. ಮಹಿಳೆಯರ ಗುಂಪು ಸ್ಪರ್ಧೆಯಲ್ಲಿ ಹಾಗೂ ಮಿಶ್ರ ಗುಂಪು ಸ್ಪರ್ಧೆಯಲ್ಲಿ ಈಗಾಗಲೇ ಗೆಲುವು ಸಾಧಿಸಿ ಹ್ಯಾಟ್ರಿಕ್ ಪದಕ ಜಯಿಸುವ ಹಂಬಲದಲ್ಲಿರುವ ಅನ್ ಸಾನ್ ಅವರು ದೀಪಿಕಾ ವಿರುದ್ಧದ ಜಯದೊಂದಿಗೆ ಪ್ರಶಸ್ತಿಗೆ ಮತ್ತಷ್ಟು ಸನಿಹವಾಗಿದ್ದಾರೆ.

ಈ ಕುರಿತು ಭಾರತದ ಅಧಿಕೃತ ಒಲಂಪಿಕ್ಸ್ ಟ್ವಿಟರ್ ಖಾತೆ ಹಂಚಿಕೊಂಡ ಟ್ವೀಟ್:

ಭಾರತಕ್ಕೆ ಆರ್ಚರಿ ಸ್ಪರ್ಧೆಯಲ್ಲಿ ಮೊದಲ ಪದಕ ತಂದುಕೊಡುವ ಹುಮ್ಮಸ್ಸಿನಲ್ಲಿದ್ದ ದೀಪಿಕಾ ಅವರಿಗೆ ಈ ಪಂದ್ಯದಿಂದ ನಿರಾಸೆಯಾಗಿದೆ.

ಇದನ್ನೂ ಓದಿ: Tokyo Olympics: ಒಲಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ ಲವ್ಲಿನಾ ಬೊರ್ಗೊಹೈನ್!

ಇದನ್ನೂ ಓದಿ: Tokyo Olympics: ಮಾಡು ಇಲ್ಲವೇ ಮಡಿ ಪಂದ್ಯ ಗೆದ್ದ ಭಾರತದ ವನಿತೆಯರ ಹಾಕಿ ತಂಡ; ಪದಕದಾಸೆ ಜೀವಂತ

(Indian Archer Deepika Kumari eliminated in quarter finals of Tokyo Olympics )

Published On - 12:21 pm, Fri, 30 July 21

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!