Tokyo Olympics: ಒಲಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ ಲವ್ಲಿನಾ ಬೊರ್ಗೊಹೈನ್!

Lovlina Borgohain: ಭಾರತಕ್ಕೆ ಒಲಂಪಿಕ್ಸ್​ನಲ್ಲಿ ಮತ್ತೊಂದು ಪದಕ ಖಾತ್ರಿಯಾಗಿದೆ. ಅಸ್ಸಾಂನ ಲವ್ಲಿನಾ ಬೊರ್ಗೊಹೈನ್ ಅವರು ಬಾಕ್ಸಿಂಗ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, ಚಿನ್ನಕ್ಕೆ ಕೊರಳೊಡ್ಡಲು ಇನ್ನೆರಡೇ ಮೆಟ್ಟಿಲಿದೆ.

Tokyo Olympics: ಒಲಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ ಲವ್ಲಿನಾ ಬೊರ್ಗೊಹೈನ್!
ಬಾಕ್ಸರ್ ಲವ್ಲಿನಾ ಬೊರ್ಗೊಹೈನ್
Follow us
| Updated By: shivaprasad.hs

Updated on:Jul 30, 2021 | 11:01 AM

ಟೊಕಿಯೊ ಒಲಂಪಿಕ್ಸ್:ಈ ಬಾರಿನ ಚೊಚ್ಚಲ ಬಾರಿಗೆ ಕಣಕ್ಕಿಳಿದಿರುವ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಭಾರತಕ್ಕೆ ಪದಕವೊಂದನ್ನು ಖಚಿತಪಡಿಸಿದ್ದಾರೆ. 69ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಅವರು ಕ್ವಾರ್ಟರ್ ಫೈನಲ್​ನಲ್ಲಿಚೀನಾ ತೈಪೆಯ ಚಿನ್ ಚೆನ್ ವಿರುದ್ಧ 4-1 ಅಂತರದಿಂದ ಗೆಲುವು ಸಾಧಿಸಿದರು. ಈ ಮೂಲಕ ಅವರು ಸೆಮಿಫೈನಲ್​ನಲ್ಲಿ ಆಡುವುದನ್ನು ಖಚಿತಪಡಿಸಿದ್ದು, ಕನಿಷ್ಠ ಕಂಚಿನ ಪದಕ ಖಾತ್ರಿಯಾಗಿದೆ. ಸೆಮಿಫೈನಲ್ ಮೆಟ್ಟಿಲನ್ನು ಅವರು ಏರಿದರೆ ಚಿನ್ನಕ್ಕೆ ಅಥವಾ ಬೆಳ್ಳಿಗೆ ಕೊರಳೊಡ್ಡಲಿದ್ದಾರೆ.

ಭಾರತಕ್ಕೆ ಮತ್ತೊಂದು ಪದಕ ಖಾತರಿಪಡಿಸಿದ ಅವರಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಕಿರಣ್ ರಿಜಿಜು, ಅಭಿನವ್ ಬಿಂದ್ರಾ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಭಾರತಕ್ಕೆ ಈ ಮೂಲಕ ಒಲಂಪಿಕ್ಸ್ ಇತಿಹಾಸದಲ್ಲಿ ಮೂರನೇ ಬಾರಿಗೆ ಬಾಕ್ಸಿಂಗ್​ನಲ್ಲಿ ಪದಕ ಲಭ್ಯವಾಗಲಿದೆ. ಈ ಮೊದಲು ಮೇರಿ ಕೊಮ್, ವಿಜೇಂದರ್ ಸಿಂಗ್ ಕಂಚಿನ ಪದಕ ಗೆದ್ದಿದ್ದರು. ಈಗ ಅದಕ್ಕಿಂತಲೂ ಉತ್ತಮ ಅವಕಾಶವನ್ನು ಲವ್ಲಿನಾ ಹೊಂದಿದ್ದು ಭಾರತದ ಕ್ರೀಡಾ ಪ್ರಿಯರ ಕಣ್ಣು ಅವರತ್ತ ನೆಟ್ಟಿದೆ.

ಭಾರತದ ಬಾಕ್ಸಿಂಗ್ ಫೆಡರೇಶನ್ ಹಂಚಿಕೊಂಡಿರುವ ಟ್ವೀಟ್:

ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದಿರುವ ಲವ್ಲಿನಾ ಈಗ ಒಲಂಪಿಕ್ಸ್​ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಲು ತಯಾರಾಗಿದ್ದಾರೆ. ಈ ಮೊದಲು ಶೂಟಿಂಗ್​ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದ ಅಭಿನವ್ ಬಿಂದ್ರಾ ಲವ್ಲಿನಾ ಅವರನ್ನು ಅಭಿನಂದಿಸಿದ್ದು, ಚಿನ್ನದ ಪದಕ ಜಯಿಸಿ ಎಂದು ಶುಭಹಾರೈಸಿದ್ದಾರೆ.

ಇದನ್ನೂ ಓದಿ: Tokyo Olympics: ಆರ್ಚರಿಯಲ್ಲಿ ಕೆ.ಪೆರೊವಾ ವಿರುದ್ಧ ಗೆಲುವು; ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟ ಭಾರತದ ದೀಪಿಕಾ ಕುಮಾರಿ

(Indian Boxer Lovlina Borgohain confirms a medal for India in Tokyo Olympics)

Published On - 10:50 am, Fri, 30 July 21