AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics: ಆರ್ಚರಿಯಲ್ಲಿ ಕೆ.ಪೆರೊವಾ ವಿರುದ್ಧ ಗೆಲುವು; ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟ ಭಾರತದ ದೀಪಿಕಾ ಕುಮಾರಿ

6-5 ಅಂತರದಿಂದ ದೀಪಿಕಾ ಕುಮಾರಿ ಜಯಗಳಿಸಿದ್ದು, ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿದ್ದಾರೆ. ಕ್ವಾರ್ಟರ್​ ಫೈನಲ್​ನಲ್ಲಿ ದೀಪಿಕಾ ಕುಮಾರಿ ಕೊರಿಯಾದ ಆ್ಯನ್​ ಸ್ಯಾನ್​ ಅವರೊಂದಿಗೆ ಸೆಣೆಸಲಿದ್ದು, ಬೆಳಗ್ಗೆ 11.30ಕ್ಕೆ (ಭಾರತೀಯ ಕಾಲಮಾನ) ಆರಂಭವಾಗುವ ಪಂದ್ಯದತ್ತ ಎಲ್ಲರ ಗಮನ ನೆಟ್ಟಿದೆ.

Tokyo Olympics: ಆರ್ಚರಿಯಲ್ಲಿ ಕೆ.ಪೆರೊವಾ ವಿರುದ್ಧ ಗೆಲುವು; ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟ ಭಾರತದ ದೀಪಿಕಾ ಕುಮಾರಿ
ದೀಪಿಕಾ ಕುಮಾರಿ (ಸಂಗ್ರಹ ಚಿತ್ರ)
TV9 Web
| Edited By: |

Updated on: Jul 30, 2021 | 8:22 AM

Share

ಟೋಕಿಯೋ ಒಲಿಂಪಿಕ್ಸ್ 2020ರ ಏಳನೇ ದಿನದಂದು ಭಾರತದ ದೀಪಿಕಾ ಕುಮಾರಿ ಆರ್ಚರಿಯಲ್ಲಿ ಕೆ.ಪೆರೊವಾ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 6-5 ಅಂತರದಿಂದ ದೀಪಿಕಾ ಕುಮಾರಿ ಜಯಗಳಿಸಿದ್ದು, ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿದ್ದಾರೆ. ಕ್ವಾರ್ಟರ್​ ಫೈನಲ್​ನಲ್ಲಿ ದೀಪಿಕಾ ಕುಮಾರಿ ಕೊರಿಯಾದ ಆ್ಯನ್​ ಸ್ಯಾನ್​ ಅವರೊಂದಿಗೆ ಸೆಣೆಸಲಿದ್ದು, ಬೆಳಗ್ಗೆ 11.30ಕ್ಕೆ (ಭಾರತೀಯ ಕಾಲಮಾನ) ಆರಂಭವಾಗುವ ಪಂದ್ಯದತ್ತ ಎಲ್ಲರ ಗಮನ ನೆಟ್ಟಿದೆ.

ಇತ್ತ, ಒಲಿಂಪಿಕ್ಸ್​ ತೀರ್ಪುಗಾರರ ನಿರ್ಣಯದ ಬಗ್ಗೆ ಮೇರಿ ಕೋಮ್​ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ 51 ಕೆಜಿ ಫ್ಲೈವೇಟ್ ಪ್ರೀ ಕ್ವಾರ್ಟರ್ ಫೈನಲ್ ಬೌಟ್​ನಲ್ಲಿ ಮೂರು ಸುತ್ತುಗಳ ಪೈಕಿ ಎರಡರಲ್ಲಿ ಗೆದ್ದರೂ ಎದುರಾಳಿಯನ್ನು ವಿಜಯೀ ಎಂದು ಘೋಷಿಸಿದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಟಾಸ್ಕ್​ ಫೋರ್ಸ್​ ತೀರ್ಪನ್ನು ಕಳಪೆ ಎಂದು ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ಮೇರಿ ಕೋಮ್ ಹೇಳಿದ್ದಾರೆ. ಹಣಕಾಸಿನ ದುರ್ವ್ಯವಹಾರದ ಆರೋಪದಲ್ಲಿ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯನ್ನು (ಎಐಬಿಎ) ಐಒಸಿ ಸಸ್ಪೆಂಡ್ ಮಾಡಿರುವುದರಿಂದ ಟೊಕಿಯೋ ಒಲಿಂಪಿಕ್ಸ್​ನಲ್ಲಿ ಬಾಕ್ಸಿಂಗ್ ಸ್ಪರ್ಧೆಗಳನ್ನು ಟಾಸ್ಕ್ ಫೋರ್ಸ್ ಆಯೋಜಿಸುತ್ತಿದೆ. ಅವರ ನಿರ್ಣಯ ನನಗೆ ಅರ್ಥವಾಗುತ್ತಿಲ್ಲ. ಟಾಸ್ಕ್ ಫೋರ್ಸ್​ಗೆ ಏನಾಗಿದೆ? ಐಒಸಿಗೆ ಏನಾಗಿದೆ? ಎಂದು ಪಿಟಿಐಗೆ ಪೋನ್​ ಮೂಲಕ ನೀಡಿದ ಸಂದರ್ಶನದಲ್ಲಿ ಮೇರಿ ಕೋಮ್​ ಹೇಳಿದ್ದಾರೆ.

ನಾನು ಸಹ ಟಾಸ್ಕ್ ಫೋರ್ಸ್ ಸದಸ್ಯಳಾಗಿದ್ದೆ. ಸ್ಪರ್ಧೆಗಳು ಸುಸೂತ್ರವಾಗಿ ನಡೆಯಲು ನಾನು ಅವರಿಗೆ ಸಲಹೆಗಳನ್ನು ನೀಡುತ್ತಾ ಬೆಂಬಲ ಒದಗಿಸುತ್ತಿದ್ದೆ. ಅದರೆ ಅವರು ನನಗೆ ಮಾಡಿರುವುದು ಏನು? ಎಂದು ಮೇರಿ ಹೇಳಿದ್ದಾರೆ. ಹಲವಾರು  ಬಾರಿ ಏಷ್ಯನ್ ಮತ್ತು ವಿಶ್ವ ಚಾಂಪಿಯನ್​ಶಿಪ್​ ಗೆದ್ದಿರುವ 38-ವರ್ಷ ವಯಸ್ಸಿನ ಮೇರಿ ಒಲಂಪಿಕ್ಸ್​ನಲ್ಲಿ ತಮ್ಮ ಎರಡನೇ ಪದಕ ಗೆಲ್ಲುವ ಸನ್ನಾಹದಲ್ಲಿದ್ದರು. 2012 ರ ಲಂಡನ್ ಒಲಂಪಿಕ್ಸ್​ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಗುರುವಾರದಂದು ಸ್ಪರ್ಧೆ ಮುಗಿದ ನಂತರ ಡೋಪಿಂಗ್ ಟೆಸ್ಟ್​ಗೆ ಕರೆದುಕೊಂಡ ಸಮಯದಲ್ಲೂ ತನಗೆ ವಸ್ತುಸ್ಥಿತಿಗೆ ಮರಳಲು ಸಾಧ್ಯವಾಗಿರಲಿಲ್ಲ ಎಂದು ಮೇರಿ ಕೋಮ್ ಹೇಳಿದ್ದಾರೆ.

ರಿಂಗ್​ನಲ್ಲಿದ್ದಾಗ ನಾನು ಖುಷಿಯಾಗಿದ್ದೆ ಮತ್ತು ಅದರಿಂದ ಹೊರಬಂದಾಗಲಲೂ ನಾನು ಖುಷಿಯಾಗಿಯೇ ಇದ್ದೆ. ಯಾಕೆಂದರೆ ಬೌಟ್​ ಗೆದ್ದ ವಿಶ್ವಾಸ ನನ್ನಲ್ಲಿತ್ತು. ನನ್ನನ್ನು ಡೋಪಿಂಗ್ ಟೆಸ್ಟ್​ಗೆ ಕರೆದೊಯ್ದಾಗಲೂ ಸಂತೋಷ ಮರೆಯಾಗಿರಲಿಲ್ಲ. ಸಾಮಾಜಿಕ ಜಾಲತಾಣ ನೋಡಿದ ನಂತರ ಮತ್ತು ನನ್ನ ಕೋಚ್ ಛೋಟೆ ಲಾಲ್ ಯಾದವ್ ಹೇಳಿದ ನಂತರವೇ ನಾನು ಸೋತಿರುವುದು ಖಚಿತವಾಯಿತು ಎಂದು ಆಕೆ ಹೇಳಿದ್ದಾರೆ.

ಇದಕ್ಕೆ ಮೊದಲು ಈ ಹುಡುಗಿಯನ್ನು (ವೆಲೆನ್ಸಿಯಾ) ನಾನು ಎರಡು ಬಾರಿ ಸೋಲಿಸಿದ್ದೇನೆ. ರೆಫರಿ ಆಕೆಯ ಕೈ ಮೇಲೆ ಎತ್ತಿದಾಗ ನನಗೆ ನಂಬಲು ಸಾಧ್ಯವಾಗಲೇ ಇಲ್ಲ. ನಾನು ಸೊತಿದ್ದೇನೆ ಅಂತ ನನಗೆ ಅನಿಸಲೇ ಇಲ್ಲ ಎಂದು ಪ್ರಮಾಣ ಮಾಡಿ ಹೇಳತ್ತೇನೆ, ನನಗೆ ಅಷ್ಟು ಭರವಸೆಯಿತ್ತು ಎಂದು ಮೇರಿ ಹೇಳಿದ್ದಾರೆ.

ಇದನ್ನೂ ಓದಿ: Tokyo Olympics: ಪ್ರೀ- ಕ್ವಾರ್ಟರ್​ನಲ್ಲಿ ಎಡವಿದ ಮೇರಿ ಕೋಮ್​! ಹುಸಿಯಾಯ್ತು ಭಾರತದ ಪದಕ ಭರವಸೆ.. ಒಲಿಂಪಿಕ್ಸ್​​ನಿಂದ ಔಟ್ 

Tokyo Olympics 2020: ಟೋಕಿಯೋ ಒಲಿಂಪಿಕ್ಸ್ ಪದಕ ಪಟ್ಟಿ : ಭಾರತಕ್ಕೆ ಎಷ್ಟನೇ ಸ್ಥಾನ?

(Tokyo Olympics Indian Deepika Kumari Enters Quarter Final in Archery)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ