AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics: ಜಿದ್ದಾಜಿದ್ದಿನ ಕ್ವಾರ್ಟರ್ ಫೈನಲ್​ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ಭರ್ಜರಿ ಗೆಲುವು

PV Sindhu: ಭಾರತದ ಬ್ಯಾಡ್ಮಿಟನ್ ತಾರೆ ಪಿ.ವಿ ಸಿಂಧು ಟೊಕಿಯೊ ಒಲಂಪಿಕ್ಸ್​ನ ಕ್ವಾರ್ಟರ್ ಫೈನಲ್​ನಲ್ಲಿ ಜಪಾನ್​ನ ಅಕನೆ ಯಾಮಗುಚಿ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.

Tokyo Olympics: ಜಿದ್ದಾಜಿದ್ದಿನ ಕ್ವಾರ್ಟರ್ ಫೈನಲ್​ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ಭರ್ಜರಿ ಗೆಲುವು
ಬ್ಯಾಡ್ಮಿಂಟನ್ ಪದಕ ವಿಜೇತೆ ಪಿ.ವಿ.ಸಿಂಧು
TV9 Web
| Edited By: |

Updated on:Jul 30, 2021 | 3:04 PM

Share

ಟೊಕಿಯೊ ಒಲಂಪಿಕ್ಸ್: ಒಲಂಪಿಕ್ಸ್​ನಲ್ಲಿ ಪದಕದ ಬೇಟೆಗೆ ಮುನ್ನುಗ್ಗುತ್ತಿರುವ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು(PV Sindhu) ಕ್ವಾರ್ಟರ್​ ಫೈನಲ್​ನಲ್ಲಿ ಜಪಾನ್​ನ ಅಕನೆ ಯಾಮಗುಚಿ(Akane Yamaguchi) ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಮುಸಾಷಿನೊ ಫಾರೆಸ್ಟ್ ಪ್ಲಾಜಾದಲ್ಲಿ(Musashino Forest Sport Plaza) ನಡೆಯುತ್ತಿರುವ ಪಂದ್ಯದಲ್ಲಿ 21-13, 22-20ರ ಅಂತರದಿಂದ ಸಿಂಧು ಯಾಮಗುಚಿ ವಿರುದ್ಧ ಗೆಲುವು ದಾಖಲಿಸಿದ್ದಾರೆ.

ಮೊದಲಿಗೆ ಅಕನೆ ಯಾಮಗುಚಿ ಆಕ್ರಮಣಕಾರಿ ಆಟವಾಡುತ್ತಾ 6-5 ರ ಅಂತರದಲ್ಲಿ ಸಿಂಧುವಿಗಿಂತ ಮುಂದಿದ್ದರು. ಆದರೆ ನಂತರ ಲಯ ಕಂಡುಕೊಂಡ ಸಿಂಧು ಅವರಿಗೆ ಯಾಮಗುಚಿ ಸರಿಸಾಟಿಯಾಗಲೇ ಇಲ್ಲ. ಕೇವಲ 23 ನಿಮಿಷಗಳಲ್ಲಿ ಮೊದಲ ಸೆಟ್​ ಅನ್ನು 21-13 ಅಂತರದಲ್ಲಿ ಸಿಂಧು ವಶಪಡಿಸಿಕೊಂಡರು. ಎರಡನೇ ಸೆಟ್​ನಲ್ಲಿ ಮೊದಲಿಗೆ ಸಿಂಧು ಅವರು 11-6ರಿಂದ ಮುಂದಿದ್ದರು. ಆದರೆ ಅಲ್ಲಿಂದ ತಿರುಗಿ ಬಿದ್ದ ಯಾಮಗುಚಿ ತೀವ್ರ ಪೈಪೋಟಿ ನೀಡಿದರು. ಕೊನೆಗೆ 20-20ರಲ್ಲಿ ಸೆಟ್ ಸಮಬಲವಾಗಿತ್ತು. ಮತ್ತೆ ಲಯ ಕಂಡುಕೊಂಡ ಸಿಂಧು ಎರಡನೇ ಸೆಟ್​ ಅನ್ನು 22-20ರಿಂದ ಗೆದ್ದರು. ಪಂದ್ಯದ ಗೆಲುವಿನಿಂದ ಪಿ.ವಿ.ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಸಿಂಧು

ಪಾಯಿಂಟ್ ಗಳಿಸಿದಾಗ ಪಿ.ವಿ ಸಿಂಧು ಸಂಭ್ರಮ

ಜಪಾನ್​ನ ಅಕನೆ ಯಾಮಗುಚಿ ಅವರು ಈ ಮೊದಲು ವಿಶ್ವದ ಮೊದಲ ಶ್ರೇಯಾಂಕಿತ ಆಟಗಾರ್ತಿಯಾಗಿದ್ದರು. ಈಗ ವಿಶ್ವದ ಐದನೇ ಶ್ರೇಯಾಂಕದಲ್ಲಿದ್ಧಾರೆ. ಈ ಮೊದಲೂ ಸಹ ಭಾರತದ ಸಿಂಧು ಅವರಿಗೆ ಜಪಾನ್ ಆಟಗಾರ್ತಿಯಿಂದ ತೀವ್ರ ಪೈಪೋಟಿ ಎದುರಾಗುತ್ತಿತ್ತು. ಈ ಮೊದಲು ಆಲ್ ಇಂಗ್ಲೆಂಡ್ ಓಪನ್​ನಲ್ಲಿ ಈರ್ವರೂ ಎದುರಾಳಿಯಾಗಿದ್ದಾಗ ತೀವ್ರತರದ ಪೈಪೋಟಿ ಏರ್ಪಟ್ಟಿತ್ತು. ಅದನ್ನು ಸಿಂಧು ಅವರು 6-21, 21-16, 21-19 ಅಂತರದಲ್ಲಿ ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

ಯಾಮಗುಚಿ ಅವರು ರಿಯೊ ಒಲಂಪಿಕ್ಸ್​ನಲ್ಲೂ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಈ ಮೊದಲು ಸಿಂಧು ಹಾಗೂ ಯಾಮಗುಚಿ ನಡುವೆ ಒಟ್ಟು ಹದಿನೆಂಟು ಪಂದ್ಯಗಳು ನಡದಿದ್ದು ಅದರಲ್ಲಿ ಸಿಂಧು ಅವರು 11ರಲ್ಲಿ ಹಾಗೂ ಯಾಮಗುಚಿ ಏಳರಲ್ಲಿ ಜಯ ಸಾಧಿಸಿದ್ದಾರೆ. ಈ ಪಂದ್ಯದಲ್ಲಿ ಸಿಂಧು ಜಯದೊಂದಿಗೆ ಯಾಮಗುಚಿ ವಿರುದ್ಧ ಜಯದ ಸಂಖ್ಯೆ 12ಕ್ಕೇರಿದಂತಾಗಿದೆ. ಪ್ರಸ್ತುತ ಟೊಕಿಯೊ ಒಲಂಪಿಕ್ಸ್​ನಲ್ಲಿ ಪಿ.ವಿ. ಸಿಂಧು ಅವರು 16ರ ಘಟ್ಟದಲ್ಲಿ ಡೆನ್ಮಾರ್ಕ್​ನ ಮಿಯಾ ಬ್ಲಿಚ್​ಫೆಲ್ಟ್ ಅವರ ವಿರುದ್ಧ 21-15, 21-13 ಅಂತರದಲ್ಲಿ ಜಯ ಸಾಧಿಸಿ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದರು.

ಇದನ್ನೂ ಓದಿ:

Tokyo Olympics: ಒಲಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ ಲವ್ಲಿನಾ ಬೊರ್ಗೊಹೈನ್!

MS Dhoni: ಹೊಸ ಕೇಶ ವಿನ್ಯಾಸದಿಂದ ಮಿಂಚುತ್ತಿದ್ದಾರೆ ಕ್ಯಾಪ್ಟನ್ ಕೂಲ್ ಧೋನಿ!

(PV Sindhu won the quarter final match of badminton in Tokyo Olympics and enters to semifinal)

Published On - 2:56 pm, Fri, 30 July 21

ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ