Tokyo Olympics: ಮಾಡು ಇಲ್ಲವೇ ಮಡಿ ಪಂದ್ಯ ಗೆದ್ದ ಭಾರತದ ವನಿತೆಯರ ಹಾಕಿ ತಂಡ; ಪದಕದಾಸೆ ಜೀವಂತ

Indian Women Hockey Team: ಭಾರತದ ಮಹಿಳೆಯರ ಹಾಕಿ ತಂಡವು ಐರ್ಲೆಂಡ್ ವಿರುದ್ಧದ ಪಂದ್ಯವನ್ನು ಗೆದ್ದು ಕ್ವಾರ್ಟರ್ ಫೈನಲ್ ಆಸೆಯನ್ನು ಜೀವಂತವಾಗಿಟ್ಟಿದೆ.

Tokyo Olympics: ಮಾಡು ಇಲ್ಲವೇ ಮಡಿ ಪಂದ್ಯ ಗೆದ್ದ ಭಾರತದ ವನಿತೆಯರ ಹಾಕಿ ತಂಡ; ಪದಕದಾಸೆ ಜೀವಂತ
ಐರ್ಲೆಂಡ್ ವಿರುದ್ಧ 1-0 ಗೆಲುವು ದಾಖಲಿಸಿದ ಭಾರತದ ಮಹಿಳೆಯರ ಹಾಕಿ ತಂಡ (ಚಿತ್ರ ಕೃಪೆ: ಹಾಕಿ ಇಂಡಿಯಾ)
Follow us
| Updated By: shivaprasad.hs

Updated on:Jul 30, 2021 | 11:54 AM

ಟೊಕಿಯೊ ಒಲಂಪಿಕ್ಸ್: ಭಾರತದ ವನಿತೆಯರ ಹಾಕಿ ತಂಡವು ನಿರ್ಣಾಯಕವಾಗಿದ್ದ ಐರ್ಲೆಂಡ್ ವಿರುದ್ಧದ ಪಂದ್ಯವನ್ನು ಗೆದ್ದು ಕ್ವಾರ್ಟರ್ ಫೈನಲ್ ಆಸೆಯನ್ನು ಜೀವಂತವಾಗಿಟ್ಟಿದೆ. ಇಂದು (ಶುಕ್ರವಾರ) ‘ಓಯ್ ಹಾಕಿ ಕ್ರೀಡಾಂಗಣದ ಉತ್ತರ ಪಿಚ್​’ನಲ್ಲಿ ನಡೆದ ಪಂದ್ಯದಲ್ಲಿ ರಾಣಿ-ರಾಮ್​ಪಾಲ್ ನೇತೃತ್ವದ ಮಹಿಳೆಯರ ತಂಡ 1-0 ಗೋಲುಗಳಿಂದ ಐರ್ಲೆಂಡ್ ತಂಡವನ್ನು ಮಣಿಸಿತು. ಈ ಮೊದಲು ಗ್ರೂಪ್ ಹಂತದದ ಮೊದಲ ಮೂರು ಪಂದ್ಯಗಳಲ್ಲಿ ಭಾರತ ಸೋಲನುಭವಿಸಿತ್ತು. ಈಗ ಗೆಲುವಿನ ಹಾದಿಗೆ ಮರಳಿದೆ.

ಪಂದ್ಯದ ಮೊದಲಾರ್ಧದಲ್ಲಿ ಪ್ರಬಲ ಪೈಪೋಟಿ ನಡೆಸಿದ ಎರಡೂ ತಂಡಗಳು ಹಲವು ಬಾರಿ ಪ್ರಯತ್ನ ಪಟ್ಟರೂ ಗೋಲು ದಾಖಲಿಸಲು ಸಾಧ್ಯವಾಗಿರಲಿಲ್ಲ. ದ್ವಿತೀಯಾರ್ಧದಲ್ಲೂ ಮೂರನೇ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಿರಲಿಲ್ಲ. ನಾಲ್ಕನೇ ಅವಧಿಯಲ್ಲಿ ಭಾರತದ ತಂಡವು ಒತ್ತಡವನ್ನು ಹಿಮ್ಮೆಟ್ಟಿ ಆಟದ ಮುಕ್ತಾಯಕ್ಕೆ ಕೊನೆಯ ಮೂರು ನಿಮಿಷಗಳಿರುವಾಗ ಗೋಲು ದಾಖಲಿಸಿತು. ಕೊನೆಯಲ್ಲಿ ಭಾರತದ ಗೆಲುವಿನ ನಗುವಿಗೆ ಕಾರಣವಾಗಿದ್ದು ನವನೀತ್ ಕೌರ್ ದಾಖಲಿಸಿದ ಗೋಲು. ಅದಕ್ಕೆ ಪ್ರತಿಯಾಗಿ ಐರ್ಲೆಂಡ್ ವನಿತೆಯರು ಬಹಳ ಪ್ರಯತ್ನಪಟ್ಟರೂ ಗೋಲು ದಾಖಲಾಗಲಿಲ್ಲ. ಕೊನೆಯಲ್ಲಿ ಭಾರತವೇ ವಿಜಯದ ನಗೆ ಬೀರಿತು.

ಭಾರತದ ಅಧಿಕೃತ ಕ್ರೀಡಾ ಖಾತೆ ಎಸ್​ಎಐಎಮ್ ಹಂಚಿಕೊಂಡ ಟ್ವೀಟ್:

ಇತ್ತ ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಪದಕವೊಂದು ಖಚಿತವಾಗಿದೆ. ಅಸ್ಸಾಂ ಮೂಲದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಸೆಮಿಫೈನಲ್​ಗೆ ಲಗ್ಗೆ ಇಟ್ಟಿದ್ದು, ಮೇರಿ ಕೋಮ್, ವಿಜೇಂದರ್ ಸಿಂಗ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಭಾರತದ ಭರವಸೆಯ ಷಟ್ಲರ್ ಪಿ.ವಿ.ಸಿಂಧು ಅವರು ಇಂದು ಕ್ವಾರ್ಟರ್ ಫೈನಲ್​ನಲ್ಲಿ ಸೆಣಸಲಿದ್ದಾರೆ.

ಇದನ್ನೂ ಓದಿ:

Tokyo Olympics: ಒಲಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ ಲವ್ಲಿನಾ ಬೊರ್ಗೊಹೈನ್!

Tokyo Olympics: ಆರ್ಚರಿಯಲ್ಲಿ ಕೆ.ಪೆರೊವಾ ವಿರುದ್ಧ ಗೆಲುವು; ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟ ಭಾರತದ ದೀಪಿಕಾ ಕುಮಾರಿ

(Indian Women Hockey team won against Ireland and keeps hope of quarter final in Tokyo Olympics)

Published On - 11:52 am, Fri, 30 July 21

ತಾಜಾ ಸುದ್ದಿ
ರೈತನಿಗೆ ಅಪಮಾನ: 7 ದಿನ ಜಿಟಿ ಮಾಲ್​ ಬಂದ್​​, ಸರ್ಕಾರ ಆದೇಶ
ರೈತನಿಗೆ ಅಪಮಾನ: 7 ದಿನ ಜಿಟಿ ಮಾಲ್​ ಬಂದ್​​, ಸರ್ಕಾರ ಆದೇಶ
ಜೈಲು ಸೇರಿರೋ ದರ್ಶನ್ ಹೆಸರನ್ನು ಹಾಳು ಮಾಡಲು ನಡೆದಿದೆ ಹುನ್ನಾರ?
ಜೈಲು ಸೇರಿರೋ ದರ್ಶನ್ ಹೆಸರನ್ನು ಹಾಳು ಮಾಡಲು ನಡೆದಿದೆ ಹುನ್ನಾರ?
ಅವಮಾನಗಳು ಮುಂದುವರಿದರೆ ರೈತರು ಬೆಂಗಳೂರಿಗೆ ಬರೋದನ್ನು ನಿಲ್ಲಿಸ್ತಾರೆ: ಶಾಸಕ
ಅವಮಾನಗಳು ಮುಂದುವರಿದರೆ ರೈತರು ಬೆಂಗಳೂರಿಗೆ ಬರೋದನ್ನು ನಿಲ್ಲಿಸ್ತಾರೆ: ಶಾಸಕ
ಕರ್ನಾಟಕ ಅಧಿವೇಶನ: ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ
ಕರ್ನಾಟಕ ಅಧಿವೇಶನ: ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ, ಕಾಣದಂತಾದ ಹೆಬ್ಬಾರೆ ಸೇತುವೆ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ, ಕಾಣದಂತಾದ ಹೆಬ್ಬಾರೆ ಸೇತುವೆ
ಪರ ಸ್ತ್ರೀಯೊಂದಿಗೆ ರೋಮ್ಯಾನ್ಸ್​​​ ಮಾಡುತ್ತಿದ್ದ ವೇಳೆ ಪತ್ನಿಯ ಎಂಟ್ರಿ
ಪರ ಸ್ತ್ರೀಯೊಂದಿಗೆ ರೋಮ್ಯಾನ್ಸ್​​​ ಮಾಡುತ್ತಿದ್ದ ವೇಳೆ ಪತ್ನಿಯ ಎಂಟ್ರಿ
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ನಾಲ್ವರು ಸಚಿವರಿಂದ ಸುದ್ದಿಗೋಷ್ಠಿ
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ನಾಲ್ವರು ಸಚಿವರಿಂದ ಸುದ್ದಿಗೋಷ್ಠಿ
ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಸಾಲಿನ ಫಾಲ್ಸ್​ಗಳಿಗೆ ಜೀವ ಕಳೆ
ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಸಾಲಿನ ಫಾಲ್ಸ್​ಗಳಿಗೆ ಜೀವ ಕಳೆ
ಹಾಸನ: ಚಲಿಸುತ್ತಿದ್ದ ಓಮಿನಿ ಕಾರಿನ ಮೇಲೆ ಕುಸಿದ ಗುಡ್ಡ, ವಿಡಿಯೋ ಇಲ್ಲಿದೆ
ಹಾಸನ: ಚಲಿಸುತ್ತಿದ್ದ ಓಮಿನಿ ಕಾರಿನ ಮೇಲೆ ಕುಸಿದ ಗುಡ್ಡ, ವಿಡಿಯೋ ಇಲ್ಲಿದೆ
ದರ್ಶನ್ ತಲೆಯನ್ನು ಕ್ಲೀನ್ ಶೇವ್ ಮಾಡಲಾಗಿದೆಯಾ? ಅಸಲಿ ವಿಚಾರ ಇಲ್ಲಿದೆ
ದರ್ಶನ್ ತಲೆಯನ್ನು ಕ್ಲೀನ್ ಶೇವ್ ಮಾಡಲಾಗಿದೆಯಾ? ಅಸಲಿ ವಿಚಾರ ಇಲ್ಲಿದೆ