AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics 2020: ಸೆಮಿಫೈನಲ್​ಗೆ ಅರ್ಹತೆ ಗಿಟ್ಟಿಸಲು ಸಾಜನ್ ಪ್ರಕಾಶ್ ವಿಫಲ, ಈಜು ಸ್ಪರ್ಧೆಗಳಲ್ಲಿ ಭಾರತದ ಸವಾಲು ಅಂತ್ಯ

ತಮ್ಮ ಸ್ಪರ್ಧೆಗಳಲ್ಲಿ ಕಳಾಹೀನ ಮತ್ತು ನಿರಾಶಾದಾಯಕ ಪ್ರದರ್ಶನಗಳನ್ನು ನೀಡಿದ ಭಾರತದ ಎಲ್ಲ ಮೂರು ಈಜುಪಟುಗಳು- ಪ್ರಕಾಶ್, ಶ್ರೀಧರ್ ನಟರಾಜ್ ಮತ್ತು ಮಾನಾ ಪಟೇಲ್ ಸ್ವದೇಶಕ್ಕೆ ವಾಪಸ್ಸಾಗಲಿದ್ದಾರೆ. ಇವರೆಲ್ಲ ತಮ್ಮ ಅತ್ಯುತ್ತಮ ಸಾಧನೆ ತೋರಲು ಸಹ ಫೇಲಾದರು.

Tokyo Olympics 2020: ಸೆಮಿಫೈನಲ್​ಗೆ ಅರ್ಹತೆ ಗಿಟ್ಟಿಸಲು ಸಾಜನ್ ಪ್ರಕಾಶ್ ವಿಫಲ, ಈಜು ಸ್ಪರ್ಧೆಗಳಲ್ಲಿ ಭಾರತದ ಸವಾಲು ಅಂತ್ಯ
ಸಾಜನ್ ಪ್ರಕಾಶ್
TV9 Web
| Edited By: |

Updated on: Jul 29, 2021 | 9:55 PM

Share

ಪುರುಷರ 100 ಮೀಟರ್ ಬಟರ್​ಫ್ಲೈ ಸ್ಫರ್ಧೆಯ ತಮ್ಮ ಹೀಟ್ಸ್​ನಲ್ಲಿ ಎರಡನೇಯವರಾಗಿ ಸ್ಪರ್ಧೆ ಮುಗಿಸಿದರೂ ಭಾರತದ ಸಾಜನ್ ಪ್ರಕಾಶ್ ಸೆಮಿಪೈನಲ್ ಹಂತ ತಲುಪಲು ವಿಫಲರಾದರು. ಇದರೊಂದಿಗೆ ಟೊಕಿಯೋ ಒಲಂಪಿಕ್ಸ್​ ಈಜು ಸ್ಪರ್ಧೆಗಳಲ್ಲಿ ಭಾರತದ ಸವಾಲು ಗುರುವಾರ ಅಂತ್ಯಗೊಂಡಿದೆ. ರಿಯೋ 2016 ಒಲಂಪಿಕ್ಸ್​ನಲ್ಲೂ ಭಾಗವಹಿಸಿದ್ದ ಪ್ರಕಾಶ್ ಅವರು, 53.45 ಸೆಕೆಂಡ್​ಗಳಲ್ಲಿ ಈಜಿ ಹೀಟ್ಸ್​ನಲ್ಲಿ ಎರಡನೇ ನಿಧಾನದ ಕಾಲವನ್ನು ದಾಖಲಿಸಿದರು. ಅರ್ಹತೆ ಪಡೆಯಲು ಅವರು 51.74 ಸೆಕೆಂಡ್​ಗಳಲ್ಲಿ ಈಜಬೇಕಿತ್ತು. 55 ಸ್ಪರ್ಧಿಗಳು ಭಾಗಿಯಾಗಿದ್ದ ಸದರಿ ಈವೆಂಟ್​ನಲ್ಲಿ 27-ವರ್ಷ ವಯಸ್ಸಿನ ಕೇರಳದ ಈಜುಗಾರ 46ನೇಯವರಾಗಿ ಹೊರಬಿದ್ದರು. ಮೊದಲ 16 ಸ್ಥಾನ ಗಳಿಸಿದವರು ಮಾತ್ರ ಸೆಮಿಫೈನಲ್​​ಗೆ ಮುನ್ನಡೆದರು.

ತಮ್ಮ ಸ್ಪರ್ಧೆಗಳಲ್ಲಿ ಕಳಾಹೀನ ಮತ್ತು ನಿರಾಶಾದಾಯಕ ಪ್ರದರ್ಶನಗಳನ್ನು ನೀಡಿದ ಭಾರತದ ಎಲ್ಲ ಮೂರು ಈಜುಪಟುಗಳು- ಪ್ರಕಾಶ್, ಶ್ರೀಧರ್ ನಟರಾಜ್ ಮತ್ತು ಮಾನಾ ಪಟೇಲ್ ಸ್ವದೇಶಕ್ಕೆ ವಾಪಸ್ಸಾಗಲಿದ್ದಾರೆ. ಇವರೆಲ್ಲ ತಮ್ಮ ಅತ್ಯುತ್ತಮ ಸಾಧನೆ ತೋರಲು ಸಹ ಫೇಲಾದರು.

ಕಳೆದ ತಿಂಗಳು ಒಲಂಪಿಕ್ ಎ ಅರ್ಹತೆ ಗುರಿಯನ್ನು ಸಾಧಿಸಿದ ಭಾರತದ ಮೊದಲ ಸ್ವಿಮ್ಮರ್ ಎನಿಸಿಕೊಂಡು ಟೊಕಿಯೋ ಒಲಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿದ್ದ ಪ್ರಕಾಶ್ 200ಮೀ ಬಟರ್​ಫ್ಲೈ ಸ್ಪರ್ಧೆಯಲ್ಲಿ ಅಂತಿಮವಾಗಿ 24 ನೇಯವರಾಗಿ ತಮ್ಮ ಸವಾಲು ಮುಗಿಸಿದರು. ಇದು ಅವರ ಅತ್ಯಂತ ನೆಚ್ಚಿನ ಈವೆಂಟ್ ಆಗಿತ್ತು. 100 ಮೀಟರ್ ಬ್ಯಾಕ್​ಸ್ಟ್ರೋಕ್​ನಲ್ಲಿ ಭಾಗವಹಿಸಿದ ನಟರಾಜ ಅವರು 20 ಸ್ವಿಮ್ಮರ್​ಗಳ ಪೈಕಿ 27 ನೇಯವರಾದರು,

ಪ್ರಕಾಶ್ ಮತ್ತು ನಟರಾಜ ಇಬ್ಬರೂ ಟೊಕಿಯೋ ಒಲಂಪಿಕ್ಸ್​ನಲ್ಲಿ ತಮ್ಮ ಅತ್ಯುತ್ತಮ ವೈಯಕ್ತಿಕ ಸಾಧನೆಯನ್ನು ತೋರಲು ವಿಫಲರಾಗಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ನಟರಾಜ ತಮ್ಮ ಅತ್ಯುತ್ತಮ ಸಾಧನೆಯನ್ನು ಪ್ರದರ್ಶಿದ್ದರೆ ನಿಸ್ಸಂದೇಹವಾಗಿ ಸೆಮಿಫೈನಲ್​ ಪ್ರವೇಶಿಸುತ್ತಿದ್ದರು.

ದೇಶವೊಂದರ ಒಬ್ಬ ಮಹಿಳಾ ಮತ್ತು ಒಬ್ಬ ಪುರುಷ ಸ್ಪರ್ಧಿ ಭಾಗವಹಿಸಲು ಅವಕಾಶ ನೀಡುವ ‘ಯೂನಿವರ್ಸಾಲಿಟಿ ಕೋಟಾ’ ಮೂಲಕ ಟೊಕಿಯೋ ಒಲಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿದ್ದ ಮಾನಾ ಅವರು, ಮಹಿಳೆಯರ 100 ಮೀಟರ್ ಬ್ಯಾಕ್​ಸ್ಟ್ರೋಕ್​ನಲ್ಲಿ 39ನೇಯವರಾಗಿ ಸ್ಪರ್ಧೆ ಕೊನೆಗೊಳಿಸಿದರು.

ಇದನ್ನೂ ಓದಿ: Tokyo Olympics: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೆಕ್ಸ್ ಬ್ಯಾನ್ ಮಾಡಿದ್ದು ಹಾಸ್ಯಾಸ್ಪದ ಎಂದ ಸುಸೆನ್ ಟೈಡ್ಕೆ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ