AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೆಕ್ಸ್ ಬ್ಯಾನ್ ಮಾಡಿದ್ದು ಹಾಸ್ಯಾಸ್ಪದ ಎಂದ ಸುಸೆನ್ ಟೈಡ್ಕೆ

ಒಲಿಂಪಿಕ್ಸ್​ ಸಂದರ್ಭ ಬಹಿರಂಗವಾಗಿಯೇ ಕೆಲವು ಕಡೆ ಸೆಕ್ಸ್ ನಡೆಯುತ್ತದೆ. ನಾನು ಇದನ್ನು ಕಣ್ಣಾರೆ ನೋಡಿದ್ದೇನೆ ಎಂದು 52 ವರ್ಷದ ಮಾಜಿ ಲಾಂಗ್ ಜಂಪರ್ ಸುಸೆನ್ ತಿಳಿಸಿದ್ದಾರೆ.

Tokyo Olympics: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೆಕ್ಸ್ ಬ್ಯಾನ್ ಮಾಡಿದ್ದು ಹಾಸ್ಯಾಸ್ಪದ ಎಂದ ಸುಸೆನ್ ಟೈಡ್ಕೆ
Tokyo Olympics
TV9 Web
| Edited By: |

Updated on: Jul 27, 2021 | 9:47 AM

Share

ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2020 (Tokyo Olympic) ರಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಪ್ರಮುಖವಾಗಿ ಈ ಬಾರಿ ಕೊರೋನಾದಿಂದ ಕೆಲವೊಂದು ಮಾರ್ಪಾಡು ಮಾಡಲಾಗಿದ್ದು, ಕ್ರೀಡಾಪಟುಗಳು ಲೈಂಗಿಕ ಕ್ರಿಯೆ ನಡೆಸಬಾರದು ಎಂದು ನಿಷೇಧಿಸಲಾಗಿದೆ. ಹೀಗಾಗಿ ಕ್ರೀಡಾಪಟುಗಳಿಗೆ ಆ್ಯಂಟಿ ಸೆಕ್ಸ್​ ಬೆಡ್ (Anti-sex beds)​ ನೀಡಲಾಗಿದೆ. ಸದ್ಯ ಈ ಬಗ್ಗೆ ಮಾತನಾಡಿರುವ ಮಾಜಿ ಒಲಿಂಪಿಕ್ ಆಟಗಾರ ಸುಸೆನ್ ಟೈಡ್ಕೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೆಕ್ಸ್ ಬ್ಯಾನ್ ಮಾಡಿದ್ದು ಹಾಸ್ಯಾಸ್ಪದವಾಗಿದೆ ಎಂದು ಹೇಳಿದ್ದಾರೆ.

ಈ ಬಾರಿ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಸುಮಾರು 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳಿಗೆ ತಲಾ 14ರಂತೆ ಒಟ್ಟಾರೆ 1.60 ಲಕ್ಷ ಕಾಂಡೋಮ್‌ಗಳನ್ನು ಸಂಘಟಕರು ವಿತರಿಸಿದ್ದರು. ಆದರೆ ಕ್ರೀಡಾಪಟುಗಳು ಅದನ್ನು ಒಲಿಂಪಿಕ್ಸ್ ಗ್ರಾಮದಲ್ಲಿ ಬಳಸಬಾರದು. ಸ್ಮರಣಿಕೆಗಳ ರೀತಿಯಲ್ಲಿ ತವರಿಗೆ ಕೊಂಡೊಯ್ಯಿರಿ ಎಂದು ಐಒಸಿ ಸೂಚಿಸಿತ್ತು.

“ಲೈಂಗಿಕ ಕ್ರಿಯೆ ನಿಷೇಧ ಮಾಡಿದ್ದು ಹಾಸ್ಯಾಸ್ಪದವಾಗಿದೆ. ಇದು ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ. ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ದೈಹಿಕ ಉತ್ತುಂಗದಲ್ಲಿರುತ್ತಾರೆ. ಸ್ಪರ್ಧೆ ಮುಗಿದ ನಂತರ ಅವರು ತಮ್ಮ ಶಕ್ತಿಯನ್ನು ಬಿಡುಗಡೆ ಮಾಡಲು ಬಯಸುತ್ತಾರೆ. ಇಂಥಹ ಸಮಯದಲ್ಲಿ ಸೆಕ್ಸ್ ತುಂಬಾನೆ ಸಹಕಾರಿಯಾಗುತ್ತದೆ. ಇಲ್ಲವಾದಲ್ಲಿ ಮದ್ಯಪಾನ ಮಾಡಲು ಮುಂದಾಗುತ್ತಾರೆ. ಇದರಿಂದ ಸೆಕ್ಸ್ ತುಂಬಾನೆ ಪ್ರಯೋಜನಕಾರಿಯಾಗಿದೆ. ನಮ್ಮಲ್ಲಿರುವ ಶಕ್ತಿಯನ್ನು ಇದು ಇನ್ನಷ್ಟು ಹೆಚ್ಚಿಸುತ್ತದೆ” ಎಂದು ಸುಸೆನ್ ಟೈಡ್ಕೆ ಹೇಳಿದ್ದಾರೆ.

ಒಲಿಂಪಿಕ್ಸ್​ ಸಂದರ್ಭ ಬಹಿರಂಗವಾಗಿಯೇ ಕೆಲವು ಕಡೆ ಸೆಕ್ಸ್ ನಡೆಯುತ್ತದೆ. ನಾನು ಇದನ್ನು ಕಣ್ಣಾರೆ ನೋಡಿದ್ದೇನೆ ಎಂದು 52 ವರ್ಷದ ಮಾಜಿ ಲಾಂಗ್ ಜಂಪರ್ ಸುಸೆನ್ ತಿಳಿಸಿದ್ದಾರೆ.

ಕ್ರೀಡಾಪಟುಗಳು ಲೈಂಗಿಕಾಸಕ್ತಿ ತೋರದೆ ಕೇವಲ ಕ್ರೀಡಾಸ್ಪರ್ಧೆಗಳತ್ತ ಗಮನ ಹರಿಸಲಿ ಎಂಬ ಉದ್ದೇಶವನ್ನು ಇಟ್ಟುಕೊಂಡು ಟೋಕಿಯೊ ಒಲಿಂಪಿಕ್ ಕ್ರೀಡಾ ಗ್ರಾಮದಲ್ಲಿ ಆ್ಯಂಟಿ-ಸೆಕ್ಸ್ ಬೆಡ್​​ಗಳನ್ನು ಅಳವಡಿಸಲಾಗಿದೆ. ಕ್ರೀಡಾಪಟುಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಕೊರೋನಾ ಹರಡುವಿಕೆಯ ಭೀತಿಯಿಂದ ದೂರವಿರಲಿ ಎಂಬುದು ಇದರ ಉದ್ದೇಶವಾಗಿದೆ.

ವಿಶೇಷವಾಗಿ ಈ ಆ್ಯಂಟಿ ಸೆಕ್ಸ್​ ಬೆಡ್​ಗಳನ್ನು ಕಾರ್ಡ್​ಬೋರ್ಡ್​ಗಳಿಂದ ಮಾಡಲ್ಪಟ್ಟಿದೆ. ಅಲ್ಲದೆ ಅದರಲ್ಲಿ ಒಬ್ಬ ವ್ಯಕ್ತಿ ಮಾತ್ರ ಮಲಗಲು ಸಾಧ್ಯವಿದೆ ಮತ್ತು ಒಬ್ಬ ವ್ಯಕ್ತಿಯ ತೂಕವನ್ನು ತಡೆಯುವ ಸಾಮರ್ಥ್ಯವಿದೆ. ಬೇರೊಬ್ಬರು ಸೇರಿದಂತೆ ಅಥವಾ ಯಾವುದೇ ಹಠಾತ್ ಚಲನೆಗಳಾದರೆ ಈ ಹಾಸಿಗೆಗಳು ಮುರಿಯುವ ನಿರೀಕ್ಷೆಯಿದೆ. ಹಾಗಾಗಿ ಈ ಬಾರಿ ಕ್ರೀಡಾಪಟುಗಳಿಗೆ ಪ್ರಣಯಕ್ಕೆ ಬ್ರೇಕ್ ಹಾಕಲಾಗಿದೆ.

Tokyo Olympics 2020: ಹಾಕಿಯಲ್ಲಿ ಭಾರತ ಭರ್ಜರಿ ಕಮ್​ಬ್ಯಾಕ್: ಸ್ಪೇನ್ ವಿರುದ್ಧ 3-0 ಅಂತರದ ಗೆಲುವು

The Hundred: ಹಂಡ್ರೆಡ್​ನಲ್ಲಿ ಮಿಂಚುತ್ತಿರುವ ಜೆಮಿಯಾ ರೊಡ್ರಿಗಸ್: ಮತ್ತೊಂದು ಸ್ಫೋಟಕ ಆಟ, ಮತ್ತೊಂದು ಗೆಲುವು

(Tokyo Olympics sex ban a laughing stock says former Olympian Susen Tiedtke)

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್