The Hundred: ಹಂಡ್ರೆಡ್ನಲ್ಲಿ ಮಿಂಚುತ್ತಿರುವ ಜೆಮಿಯಾ ರೊಡ್ರಿಗಸ್: ಮತ್ತೊಂದು ಸ್ಫೋಟಕ ಆಟ, ಮತ್ತೊಂದು ಗೆಲುವು
Jemimah Rodriguez: ಇನ್ನಿಂಗ್ಸ್ ಆರಂಭದಿಂದಲೂ ಜೆಮಿಯಾ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರು. ಕೇವಲ 41 ಎಸೆತಗಳಲ್ಲಿ 10 ಬೌಂಡರಿ ಬಾರಿಸಿದ ಜೆಮಿಯಾ 60 ರನ್ ಚಚ್ಚಿದರು.
ಆಂಗ್ಲರ ನಾಡಿನಲ್ಲಿ ಸಾಗುತ್ತಿರುವ ದಿ ಹಂಡ್ರೆಡ್ ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಜೆಮಿಯಾ ರೊಡ್ರಿಗಸ್ ನಾರ್ಥನ್ ಸೂಪರ್ ಚಾರ್ಜಸ್ ಪರ ಆಡುತ್ತಿದ್ದು, ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಮೊನ್ನೆಯಷ್ಟೆ ಚೊಚ್ಚಲ ಪಂದ್ಯದಲ್ಲಿ ಕೇವಲ 43 ಎಸೆತಗಳಲ್ಲಿ ಅಜೇಯ 92 ರನ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದ ಜೆಮಿಯಾ ಎರಡನೇ ಪಂದ್ಯದಲ್ಲೂ ಅಬ್ಬರಿಸಿದ್ದಾರೆ.
ಸೋಮವಾರ ನಡೆದ ಟ್ರೆಂಟ್ ರಾಕೆಟ್ಸ್ ವಿರುದ್ಧದ ಪಂದ್ಯದಲ್ಲಿ ಜೆಮಿಯಾ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಬೌಲರ್ಗಳ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ನಾರ್ಥನ್ ಸೂಪರ್ ಚಾರ್ಜಸ್ ತಂಡ 27 ರನ್ಗಳ ಭರ್ಜರಿ ಜಯ ಸಾಧಿಸಿತು.
2⃣in2⃣!
Jemimah Rodrigues 6⃣0⃣ Katherine Brunt 4⃣3⃣ Sammy-Jo Johnson 4⃣/1⃣5⃣ Katie Levick 2⃣/2⃣0⃣
Powerful batting and restrictive bowling help Northern Superchargers to a clinical win against Trent Rockets..#TheHundred pic.twitter.com/SMZDs0faJs
— Women’s CricZone (@WomensCricZone) July 26, 2021
ಮೊದಲು ಬ್ಯಾಟಿಂಗ್ ಶುರುಮಾಡಿದ ನಾರ್ಥನ್ ತಂಡಕ್ಕೆ ಓಪನರ್ಗಳಾದ ನಾಯಕಿ ವಿನ್ಫಿಲ್ಡ್ ಹಿಲ್ ಮತ್ತು ಜೆಮಿಯಾ ಭರ್ಜರಿ ಆರಂಭ ಒದಗಿಸಿದರು. 54 ಎಸೆತಗಳನ್ನು ಆಡಿದ ಈ ಜೋಡಿ 64 ರನ್ಗಳ ಜೊತೆಯಾಟ ಆಡಿತು. ಹಿಲ್ 29 ಎಸೆತಗಳಲ್ಲಿ 33 ರನ್ ಬಾರಿಸಿದರು. ನಂತರ ಬಂದ ವೋಲ್ವರ್ಡ್ 13 ಎಸೆತಗಳಲ್ಲಿ 31 ರನ್ ಸಿಡಿಸಿದರೆ, ಬಳಿಕ ಬಂದವರು ಹೆಚ್ಚು ರನ್ ಕಲೆಹಾಕಲಿಲ್ಲ.
ಆದರೆ, ಇನ್ನಿಂಗ್ಸ್ ಆರಂಭದಿಂದಲೂ ಜೆಮಿಯಾ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರು. ಕೇವಲ 41 ಎಸೆತಗಳಲ್ಲಿ 10 ಬೌಂಡರಿ ಬಾರಿಸಿದ ಜೆಮಿಯಾ 60 ರನ್ ಚಚ್ಚಿದರು. ಈ ಮೂಲಕ ನಾರ್ಥನ್ ತಂಡ 100 ಎಸೆತಗಳಲ್ಲಿ 7 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು.
View this post on Instagram
ಕಠಿಣ ಟಾರ್ಗೆಟ್ ಬೆನ್ನಟ್ಟಿದ ಟ್ರೆಂಟ್ ರಾಕೆಟ್ಸ್ ತಂಡ ಉತ್ತಮ ಆರಂಭ ಪಡೆದುಕೊಂಡಿಲ್ಲ. ನಾಯಕಿ ಮಟಾಲಿ ಸ್ಕಿವರ್ 33 ರನ್ ಗಳಿಸಿದರು, ಕ್ಯಾಥೆರಿನ್ ಬ್ರಂಟ್ 36 ಎಸೆತಗಳಲ್ಲಿ ಅಜೇಯ 43 ರನ್ ಬಾರಿಸಿದರು ಪ್ರಯೋಜನವಾಗಿಲ್ಲ. ಅಂತಿಮವಾಗಿ ಟ್ರೆಂಟ್ ತಂಡ 100 ಎಸೆತಗಳಲ್ಲಿ 122 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲುಕಂಡಿತು.
27 ರನ್ಗಳ ಭರ್ಜರಿ ಜಯದೊಂದಿಗೆ ನಾರ್ಥನ್ ಸೂಪರ್ ಚಾರ್ಜಸ್ ತಂಡ ಆಡಿದ ಎರಡೂ ಪಂದ್ಯಗಳನ್ನು ಗೆದ್ದು 4 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
Tokyo Olympics 2020: ನಾಲ್ಕನೇ ದಿನ ಭಾರತ ಉತ್ತಮ ಆರಂಭ: ಮುಂದಿನ ಸುತ್ತಿಗೆ ಮನು-ಸೌರಭ್
Sri Lanka vs India 2nd T20: ಲಂಕಾ ವಿರುದ್ದ 2ನೇ ಚುಟುಕು ಕದನ: ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್
(The Hundred Jemimah Rodriguez brings up her second consecutive half-century in The Hundred)