IND vs SL: 2ನೇ ಟಿ-20 ಪಂದ್ಯಕ್ಕೆ ಇದೆಯೇ ಮಳೆಯ ಕಾಟ: ಹವಾಮಾನ ವರದಿ ಏನು ಹೇಳುತ್ತೆ?

IND vs SL: 2ನೇ ಟಿ-20 ಪಂದ್ಯಕ್ಕೆ ಇದೆಯೇ ಮಳೆಯ ಕಾಟ: ಹವಾಮಾನ ವರದಿ ಏನು ಹೇಳುತ್ತೆ?
IND vs SL

India vs Sri lanka T20I: ಇಂದಿನ ಪಂದ್ಯಕ್ಕೆ ಮಳೆಯ ಕಾಟವಿದೆಯೇ ಎಂಬುದನ್ನು ನೋಡುವುದಾದರೆ, ದಿನದ ಒಟ್ಟಾರೆ ಮುನ್ಸೂಚನೆಯ ಹವಾಮಾನವು ಭಾಗಶಃ ಬಿಸಿಲಿನಿಂದ ಕೂಡಿರುತ್ತದೆ. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ.

TV9kannada Web Team

| Edited By: Vinay Bhat

Jul 27, 2021 | 10:38 AM

ಇಂದು ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವೆ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಎರಡನೇ ಟಿ-20 ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಈ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇತ್ತ ಏಕದಿನ ಸರಣಿ ಸೋಲಿನ ಜೊತೆ ಮೊದಲ ಟಿ-20 (T20I Cricket) ಯಲ್ಲೂ ಗೆಲ್ಲಲಾಗದೆ ಹತಾಶೆಯಲ್ಲಿರುವ ಲಂಕಾಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಉಭಯ ತಂಡಗಳಿಗೂ ಎರಡನೇ ಟಿ-20 ಮುಖ್ಯವಾಗಿರುವುದರಿಂದ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಪಡಿಕ್ಕಲ್ ಪದಾರ್ಪಣೆ?:

ಅವಕಾಶಕ್ಕಾಗಿ ಕಾಯುತ್ತಿರುವ ದೇವದತ್ ಪಡಿಕ್ಕಲ್ ಇಂದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಶಿಖರ್ ಧವನ್ ಜೊತೆ ಪೃಥ್ವಿ ಶಾ ಏಕದಿನ ಸರಣಿಯಿಂದಲೂ ಕಣಕ್ಕಿಳಿಯುತ್ತಿದ್ದಾರೆ. ಆದರೆ, ಕಳೆದ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದರು. ಹೀಗಾಗಿ ಪಡಿಕ್ಕಲ್​ಗೆ ಅವಕಾಶ ನೀಡಬಹುದು.

ಅಲ್ಲದೆ ಭರ್ಜರಿ ಫಾರ್ಮ್​ನಲ್ಲಿರುವ ಪಡಿಕ್ಕಲ್ ಟಿ20 ಯಲ್ಲಿ 2 ಶತಕ ಬಾರಿಸಿದ್ದಾರೆ. 39 ಟಿ20 ಪಂದ್ಯಗಳನ್ನು (ಐಪಿಎಲ್ ಮತ್ತು ಕರ್ನಾಟಕ ತಂಡಗಳ ಪರ) ಆಡಿರುವ ಪಡಿಕ್ಕಲ್ 43 ಸರಾಸರಿಯಲ್ಲಿ 1466 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 11 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇವರ ಜೊತೆಗೆ ರುತುರಾಜ್ ಗಾಯಕ್ವಾಡ್​ಗೂ ಅವಕಾಶ ನೀಡಿದರೆ ಅಚ್ಚರಿ ಪಡಬೇಕಿಲ್ಲ.

2ನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:

ಶಿಖರ್ ಧವನ್ (ನಾಯಕ) , ದೇವದತ್ ಪಡಿಕ್ಕಲ್ , ಇಶಾನ್ ಕಿಶನ್ (ವಿಕೆಟ್ ಕೀಪರ್) , ಸೂರ್ಯಕುಮಾರ್ ಯಾದವ್ , ರುತುರಾಜ್ ಗಾಯಕ್ವಾಡ್, ಹಾರ್ದಿಕ್ ಪಾಂಡ್ಯ , ಕೃನಾಲ್ ಪಾಂಡ್ಯ , ದೀಪಕ್ ಚಹರ್ , ಭುವನೇಶ್ವರ್ ಕುಮಾರ್ , ಯುಜ್ವೇಂದ್ರ ಚಹಲ್ , ವರುಣ್ ಚಕ್ರವರ್ತಿ.

ಪಂದ್ಯ ಆರಂಭ: ಟಾಸ್ ಪ್ರಕ್ರಿಯೆ ಸಂಜೆ 7:30ಕ್ಕೆ, ಪಂದ್ಯ ಆರಂಭ ರಾತ್ರಿ 8 ಗಂಟೆಗೆ.

ಮಳೆಯ ಕಾಟವಿದೆಯೇ:

ಇಂದಿನ ಪಂದ್ಯಕ್ಕೆ ಮಳೆಯ ಕಾಟವಿದೆಯೇ ಎಂಬುದನ್ನು ನೋಡುವುದಾದರೆ, ದಿನದ ಒಟ್ಟಾರೆ ಮುನ್ಸೂಚನೆಯ ಹವಾಮಾನವು ಭಾಗಶಃ ಬಿಸಿಲಿನಿಂದ ಕೂಡಿರುತ್ತದೆ. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಆದರೆ, ಪಂದ್ಯಕ್ಕೆ ಮಳೆ ಅಡ್ಡಿಸುವ ಸಾಧ್ಯತೆ ಇಲ್ಲ ಎಂದು ಹವಮಾನ ಇಲಾಖೆ ತಿಳಿಸಿದೆ.

ನೇರ ಪ್ರಸಾರ: ಸೋನಿ ಸಿಕ್ಸ್, ಸೋನಿ ಸಿಕ್ಸ್ ಎಚ್ಡಿ, ಸೋನಿ ಟೆನ್ 3, ಸೋನಿ ಟೆನ್ 3 ಎಚ್ಡಿ ಯಲ್ಲಿ ಪಂದ್ಯವನ್ನು ಲೈವ್ ವೀಕ್ಷಿಸಬಹುದು.

Tokyo Olympics: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೆಕ್ಸ್ ಬ್ಯಾನ್ ಮಾಡಿದ್ದು ಹಾಸ್ಯಾಸ್ಪದ ಎಂದ ಸುಸೆನ್ ಟೈಡ್ಕೆ

India vs Sri Lanka 2nd T20: ಭಾರತ-ಶ್ರೀಲಂಕಾ 2ನೇ ಟಿ-20 ಪಂದ್ಯ ಎಲ್ಲಿ?, ಯಾವುದರಲ್ಲಿ ನೇರಪ್ರಸಾರ?, ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ

(India vs Sri Lanka 2nd T20I weather forecast Will rain hamper penultimate encounter at Colombo check this news)

Follow us on

Related Stories

Most Read Stories

Click on your DTH Provider to Add TV9 Kannada