AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Sri Lanka 2nd T20: ಭಾರತ-ಶ್ರೀಲಂಕಾ 2ನೇ ಟಿ-20 ಪಂದ್ಯ ಎಲ್ಲಿ?, ಯಾವುದರಲ್ಲಿ ನೇರಪ್ರಸಾರ?, ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ

India vs Sri Lanka Live Streaming 2nd T20: ಈಗ ಎರಡನೇ ಟಿ 20 ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಳ್ಳಲು ಭಾರತೀಯ ತಂಡ ತವಕಿಸುತ್ತಿದೆ.

India vs Sri Lanka 2nd T20: ಭಾರತ-ಶ್ರೀಲಂಕಾ 2ನೇ ಟಿ-20 ಪಂದ್ಯ ಎಲ್ಲಿ?, ಯಾವುದರಲ್ಲಿ ನೇರಪ್ರಸಾರ?, ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ
ಉಭಯ ತಂಡದ ನಾಯಕರು
TV9 Web
| Updated By: preethi shettigar|

Updated on: Jul 27, 2021 | 9:31 AM

Share

ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ 20 ಐ ಸರಣಿಯ ಮೊದಲ ಪಂದ್ಯವನ್ನು ಗೆದ್ದ ನಂತರ ಭಾರತ ತಂಡವು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಈಗ ಎರಡನೇ ಟಿ 20 ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಳ್ಳಲು ಭಾರತೀಯ ತಂಡ ತವಕಿಸುತ್ತಿದೆ. ಏಕದಿನ ಸರಣಿಯ ನಂತರ, ಭಾರತೀಯ ಕ್ರಿಕೆಟ್ ತಂಡವು ಈಗ ಟಿ 20 ಸರಣಿಯನ್ನು ಗೆಲ್ಲುವತ್ತ ನೋಡುತ್ತಿದೆ. ಶಿಖರ್ ಧವನ್ ನೇತೃತ್ವದ ಯಂಗ್ ಟೀಮ್ ಇಂಡಿಯಾ ಈ ಪ್ರವಾಸದಲ್ಲಿ ಈವರೆಗೆ ಉತ್ತಮ ಪ್ರದರ್ಶನ ನೀಡಿದೆ, ಆದರೆ ಶ್ರೀಲಂಕಾದ ನಾಯಕ ದಾಸುನ್ ಶಾನಕಾ ಅವರು ತಮ್ಮ ತಂಡವನ್ನು ಸುದಾರಿಸುವ ಅಗತ್ಯವಿದೆ.

ಭಾರತ -ಶ್ರೀಲಂಕಾ 2ನೇ ಟಿ20 ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ? ಭಾರತ -ಶ್ರೀಲಂಕಾ 2ನೇ ಟಿ20 ಮಂಗಳವಾರ- ಜುಲೈ 27 ರಂದು ನಡೆಯಲಿದೆ. ಪಂದ್ಯವು 8 ಗಂಟೆಗೆ ಪ್ರಾರಂಭವಾಗಲಿದೆ.

ಭಾರತ ವಿರುದ್ಧ ಶ್ರೀಲಂಕಾ 2ನೇ ಟಿ20 ಎಲ್ಲಿ ನಡೆಯಲಿದೆ? ಭಾರತ ವಿರುದ್ಧ ಶ್ರೀಲಂಕಾ 2ನೇ ಟಿ20 ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

2ನೇ ಟಿ20 ಪಂದ್ಯವನ್ನು ಯಾವ ಚಾನೆಲ್ ಪ್ರಸಾರ ಮಾಡುತ್ತದೆ? 2ನೇ ಟಿ 20 ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.

2ನೇ ಟಿ20 ಪಂದ್ಯದ ಲೈವ್ ಸ್ಟ್ರೀಮ್ ವೀಕ್ಷಿಸುವುದು ಹೇಗೆ? ಇಂಡಿಯಾ ವರ್ಸಸ್ ಶ್ರೀಲಂಕಾ 2ನೇ ಟಿ 20 ಸೋನಿಲೈವ್ ವೆಬ್‌ಸೈಟ್ ಅಪ್ಲಿಕೇಶನ್​ನಲ್ಲಿ ನೇರ ಪ್ರಸಾರವಾಗಲಿದೆ.

ತಂಡಗಳು ಭಾರತ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ರುತುರಾಜ್ ಗಾಯ್ಕವಾಡ್, ಸೂರ್ಯಕುಮಾರ್ ಯಾದವ್, ಭುವನೇಶ್ವರ್ ಕುಮಾರ್ (ಉಪನಾಯಕ), ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಹಲ್, ರಾಹುಲ್ ಚಹರ್, ಕೆ ಗೌತಮ್, ಕ್ರುನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ನವದೀಪ್ ಸೈನಿ, ಚೇತನ್ ಸಕರಿಯಾ.

ಶ್ರೀಲಂಕಾ: ದಾಸುನ್ ಶಾನಕಾ (ನಾಯಕ), ಧನಂಜಯ ಡಿ ಸಿಲ್ವಾ, ಅವಿಷ್ಕಾ ಫರ್ನಾಂಡೊ, ಭನುಕಾ ರಾಜಪಕ್ಸೆ, ಪಾತುಮ್ ನಿಸ್ಸಂಕ, ಚಾರಿತ್ ಅಸಲಂಕಾ, ವನಿಂದು ಹಸರಂಗ, ಆಶೆನ್ ಬಂಡರಾ, ಮಿನೋಡ್ ಭನುಕಾ, ಲಹಿರು ಉದಾರ, ರಮೇಶ್ ಮೆಂಡೂರ, ಚಮತ್ ಸಂದಕನ್, ಅಕಿಲಾ ದಾನಂಜಯ, ಶಿರನ್ ಫರ್ನಾಂಡೊ, ಧನಂಜಯ ಲಕ್ಷನ್, ಇಶಾನ್ ಜಯರತ್ನ, ಪ್ರವೀಣ್ ಜಯವಿಕ್ರಾಮ, ಅಸಿಥಾ ಫರ್ನಾಂಡೊ, ಕಸುನ್ ರಾಜಿತಾ, ಲಹಿರು ಕುಮಾರ, ಇಸುರು ಉದಾನ.

ಇದನ್ನೂ ಓದಿ: PHOTOS: ಕ್ರಿಕೆಟ್​ ಬಿಟ್ಟು ಫುಟ್ಬಾಲ್ ಆಟಕ್ಕಿಳಿದ ಧೋನಿ! ಮಹೀಗೆ ಸಾಥ್​ ನೀಡಿದ ಶ್ರೇಯಸ್- ರಣವೀರ್ ಸಿಂಗ್

IND vs SL: ಪಂದ್ಯ ಆರಂಭಕ್ಕೂ ಮುನ್ನ ಶ್ರೀಲಂಕಾದ ರಾಷ್ಟ್ರಗೀತೆ ಹಾಡಿದ ಹಾರ್ದಿಕ್ ಪಾಂಡ್ಯ: ವಿಡಿಯೋ ವೈರಲ್