MS Dhoni: ಮತ್ತೆ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡ ಎಂಎಸ್ ಧೋನಿ
Team India: ಟೀಮ್ ಇಂಡಿಯಾ ಪರ 2019ರ ಐಸಿಸಿ ವಿಶ್ವಕಪ್‌ನ ಸೆಮಿಫೈನಲ್ನಲ್ಲಿ ಧೋನಿ ಕಡೆಯ ಪಂದ್ಯವನ್ನಾಡಿದ್ದರು. ಭಾರತದ ಪರ 90 ಟೆಸ್ಟ್ ಪಂದ್ಯಗಳಿಂದ ಧೋನಿ 4876 ರನ್ ಗಳಿಸಿದ್ದು, ಇದರಲ್ಲಿ 6 ಶತಕ ಮೂಡಿ ಬಂದಿವೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟಿ20 ವಿಶ್ವಕಪ್ ಮೂಲಕ ಕ್ರಿಕೆಟ್ ಕೆರಿಯರ್ಗೆ ಗುಡ್ ಬೈ ಹೇಳಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್-2020 ಮುಂದೂಡಲ್ಪಟ್ಟಿದ್ದರಿಂದ ಎಂಎಸ್ಡಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರಣೆ ವಿದಾಯ ಘೋಷಿಸಿದ್ದರು. ಸದ್ಯ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸಿಎಸ್ಕೆ ಪರ ಆಡುತ್ತಿದ್ದಾರೆ. ಇದಾಗ್ಯೂ ಧೋನಿ ಮತ್ತೊಮ್ಮೆ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಅಭಿಮಾನಿಗಳಲ್ಲಿದೆ. ಈ ಆಸೆಗೆ ಕಿಚ್ಚು ಹಚ್ಚುವಂತೆ ಇದೀಗ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಪ್ರಸ್ತುತ ಭಾರತ ತಂಡದ ರೆಟ್ರೊ ಜೆರ್ಸಿಯಲ್ಲಿ ಎಂಬುದು ವಿಶೇಷ.
ಧೋನಿ ಅವರ ಜೆರ್ಸಿ ಫೋಟೋಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅವರು ಮತ್ತೊಮ್ಮೆ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರಾ ಎಂಬ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡಿದೆ. ಆದರೆ ಧೋನಿ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡಿರುವುದು ಜಾಹೀರಾತುವೊಂದರ ಚಿತ್ರೀಕರಣಕ್ಕಾಗಿ ಎಂಬುದು ವಿಶೇಷ. ಈ ಫೋಟೋದಲ್ಲಿ ಮಾಹೀ ಹೊಸ ಹೇರ್ ಸ್ಟೈಲ್, ಬಿಯರ್ಡ್ ಲುಕ್ನಲ್ಲಿ ಮಿಂಚುತ್ತಿದ್ದಾರೆ. ಹಾಗೆಯೇ ಈ ಜಾಹೀರಾತನ್ನು ಬಾಲಿವುಡ್ ನಿರ್ದೇಶಕಿ ಫರ್ಹಾ ಅಖ್ತರ್ ನಿರ್ದೇಶಿಸಿದ್ದು, ಐಪಿಎಲ್ ಅಥವಾ ಟಿ20 ವಿಶ್ವಕಪ್ ವೇಳೆ ಈ ಜಾಹೀರಾತು ಬಿಡುಗಡೆ ಆಗಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ಪರ ಧೋನಿಯ ಕಂಬ್ಯಾಕ್ನ್ನು ನಿರೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ನಂಬರ್ 7 ಜೆರ್ಸಿಯಲ್ಲಿ ಕೂಲ್ ಕ್ಯಾಪ್ಟನ್ನ್ನು ನೋಡಿ ಖುಷಿಯಾಗಿದ್ದಂತು ಸತ್ಯ.
ಆಗಸ್ಟ್ 15, 2020 ರಂದು ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ತಮ್ಮ ನಿವೃತ್ತಿ ಘೋಷಿಸಿದ್ದರು. ಟೀಮ್ ಇಂಡಿಯಾ ಪರ 2019ರ ಐಸಿಸಿ ವಿಶ್ವಕಪ್‌ನ ಸೆಮಿಫೈನಲ್ನಲ್ಲಿ ಧೋನಿ ಕಡೆಯ ಪಂದ್ಯವನ್ನಾಡಿದ್ದರು. ಭಾರತದ ಪರ 90 ಟೆಸ್ಟ್ ಪಂದ್ಯಗಳಿಂದ ಧೋನಿ 4876 ರನ್ ಗಳಿಸಿದ್ದು, ಇದರಲ್ಲಿ 6 ಶತಕ ಮೂಡಿ ಬಂದಿವೆ. ಹಾಗೆಯೇ 350 ಏಕದಿನ ಪಂದ್ಯಗಳಿಂದ 10 ಶತಕಗಳೊಂದಿಗೆ 10773 ರನ್ ಕಲೆಹಾಕಿದ್ದಾರೆ. ಇನ್ನು 98 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ 2 ಅರ್ಧಶತಕದ ಜೊತೆ 1617 ರನ್ ಬಾರಿಸಿದ್ದಾರೆ.
ಇದನ್ನೂ ಓದಿ: Viral Story: ಟ್ರಾಫಿಕ್ ಪೊಲೀಸ್ ಮನೆಯಲ್ಲಿ ಚಿನ್ನದ ಟಾಯ್ಲೆಟ್
ಇದನ್ನೂ ಓದಿ: ಈವರೆಗೆ ಟೀಮ್ ಇಂಡಿಯಾ ಪರ ಎಷ್ಟು ಮಂದಿ ಆಡಿದ್ದಾರೆ ಗೊತ್ತಾ?
(Former India captain MS Dhoni Wears Number 7 Team India Retro Jersey)