Sri Lanka vs India 2nd T20: ಲಂಕಾ ವಿರುದ್ದ 2ನೇ ಚುಟುಕು ಕದನ: ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್

TV9 Digital Desk

| Edited By: Zahir Yusuf

Updated on: Jul 26, 2021 | 10:16 PM

Sri Lanka vs India 2nd T20 Predicted Playing 11: ಚೊಚ್ಚಲ ಬಾರಿ ಅವಕಾಶ ಪಡೆದ ವರುಣ್ ಚಕ್ರವರ್ತಿ 4 ಓವರ್​ನಲ್ಲಿ 28 ರನ್ ನೀಡಿ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹಾಗೆಯೇ ದೀಪಕ್ ಚಹರ್ 2 ವಿಕೆಟ್ ಪಡೆದರೆ ಉಳಿದೆಲ್ಲಾ ಬೌಲರುಗಳು ತಲಾ ಒಂದೊಂದು ವಿಕೆಟ್ ಉರುಳಿಸಿದ್ದರು.

Sri Lanka vs India 2nd T20: ಲಂಕಾ ವಿರುದ್ದ 2ನೇ ಚುಟುಕು ಕದನ: ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್
Sri Lanka vs India 2nd T20
Follow us

ಭಾರತ-ಶ್ರೀಲಂಕಾ ನಡುವಣೆ 2ನೇ ಟಿ20 ಪಂದ್ಯವು ಮಂಗಳವಾರ (ಜುಲೈ. 27) ನಡೆಯಲಿದೆ. ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಜಯಗಳಿಸುವ ಮೂಲಕ ಸರಣಿ ವಶಪಡಿಸಿಕೊಳ್ಳವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ. ಅತ್ತ ಮೊದಲ ಪಂದ್ಯದಲ್ಲೇ ಹೀನಾಯ ಸೋಲನುಭವಿಸಿರುವ ಲಂಕಾ ತಂಡವು 2ನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಆಸೆಯನ್ನು ಜೀವಂತವಿರಿಸಿಕೊಳ್ಳುವ ಇರಾದೆಯಲ್ಲಿದೆ. ಮೊದಲ ಪಂದ್ಯದಲ್ಲಿ ಉಭಯ ತಂಡಗಳ ಬೌಲರುಗಳು ಉತ್ತಮ ಪ್ರದರ್ಶನ ನೀಡಿದರು ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅದರಲ್ಲೂ ಲಂಕಾ ತಂಡ ಕೇವಲ 36 ರನ್​ಗಳಿಗೆ ಕೊನೆಯ 6 ವಿಕೆಟ್​ಗಳನ್ನು ಕಳೆದುಕೊಂಡು ಹೀನಾಯ ಸೋಲನುಭವಿಸಿತು.

ಇತ್ತ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಬ್ಯಾಟ್ಸ್​ಮನ್​ಗಳು ಕೂಡ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಆರಂಭಿಕನಾಗಿ ಚೊಚ್ಚಲ ಬಾರಿ ಕಣಕ್ಕಿಳಿದ ಪೃಥ್ವಿ ಶಾ ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ನಾಯಕ ಶಿಖರ್ ಧವನ್ ಎಚ್ಚರಿಕೆಯ ಆಟದ ಮೂಲಕ 46 ರನ್​ ಕಲೆಹಾಕಿದರು. ಇನ್ನು ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧಶತಕ ಬಾರಿಸಿ ತಂಡದ ಮೊತ್ತ 164ಕ್ಕೆ ತಲುವುವಲ್ಲಿ ಪ್ರಮುಖ ಕಾರಣರಾದರು.

ಇನ್ನೊಂದೆಡೆ ಅನುಭವಿ ಆಟಗಾರರಾದ ಹಾರ್ದಿಕ್ ಪಾಂಡ್ಯ (10) ಹಾಗೂ ಸಂಜು ಸ್ಯಾಮ್ಸನ್​ (27) ಅಬ್ಬರಿಸಲು ವಿಫಲರಾದರು. ಇದಾಗ್ಯೂ ಟೀಮ್ ಇಂಡಿಯಾ ಬೌಲರುಗಳ ಸಾಂಘಿಕ ಪ್ರದರ್ಶನದಿಂದ ಭಾರತ ತಂಡವು ಲಂಕಾವನ್ನು 38 ರನ್​ಗಳಿಂದ ಪರಾಜಯಗೊಳಿಸಿತು. ಮುಖ್ಯವಾಗಿ ಭುವನೇಶ್ವರ್ ಕುಮಾರ್ 4 ವಿಕೆಟ್ ಉರುಳಿಸುವ ಮೂಲಕ ತಮ್ಮ ಅನುಭವವನ್ನು ಧಾರೆಯೆರೆದಿದ್ದರು. ಚೊಚ್ಚಲ ಬಾರಿ ಅವಕಾಶ ಪಡೆದ ವರುಣ್ ಚಕ್ರವರ್ತಿ 4 ಓವರ್​ನಲ್ಲಿ 28 ರನ್ ನೀಡಿ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹಾಗೆಯೇ ದೀಪಕ್ ಚಹರ್ 2 ವಿಕೆಟ್ ಪಡೆದರೆ ಉಳಿದೆಲ್ಲಾ ಬೌಲರುಗಳು ತಲಾ ಒಂದೊಂದು ವಿಕೆಟ್ ಉರುಳಿಸಿದ್ದರು. ಹೀಗಾಗಿ 2ನೇ ಪಂದ್ಯದ ವೇಳೆ ಟೀಮ್ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಕಂಡು ಬರುವುದಿಲ್ಲ ಎಂದೇ ಹೇಳಬಹುದು.

ಇದರ ಹೊರತಾಗಿ ಬದಲಾವಣೆ ಕಂಡು ಬಂದರೂ ಆರಂಭಿಕ ಸ್ಥಾನದಲ್ಲಿ ಬದಲಾಗಬಹುದು. ಏಕೆಂದರೆ ಪೃಥ್ವಿ ಶಾ ಕೊನೆಯ ಏಕದಿನ ಹಾಗೂ ಮೊದಲ ಟಿ20 ಪಂದ್ಯದಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಎಡಗೈ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್ ಹಾಗೂ ರುತುರಾಜ್ ಗಾಯಕ್ವಾಡ್ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಇತ್ತ ನಾಯಕ/ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ಎಡಗೈ ಬ್ಯಾಟ್ಸ್​ಮನ್ ಆಗಿರುವುದರಿಂದ ಇವರಿಬ್ಬರಲ್ಲಿ ಯಾರಿಗೆ ಚಾನ್ಸ್​ ಸಿಗಲಿದೆ ಎಂಬುದೇ ಪ್ರಶ್ನೆ. ಏಕೆಂದರೆ ಲೆಫ್ಟ್-ರೈಟ್ ಕಾಂಬಿನೇಷನ್​ನಲ್ಲಿ ಬಲೈ ಬ್ಯಾಟ್ಸ್​ಮನ್ ರುತುರಾಜ್ ಕೂಡ ಅವಕಾಶ ಪಡೆಯಬಹುದು. ಇಲ್ಲ ಇಬ್ಬರು ಎಡಗೈ ದಾಂಡಿಗರೇ ಕಣಕ್ಕಿಳಿಯಬಹುದು.

ಆದರೆ ಈ ಹಿಂದಿನ ಏಕದಿನ ಸರಣಿಯ ತಂಡದ ಬದಲಾವಣೆಯನ್ನು ಗಮನಿಸಿದರೆ ರಾಹುಲ್ ದ್ರಾವಿಡ್ ಗೆಲುವಿನ ಲಯದಲ್ಲಿರುವ ತಂಡವನ್ನೇ ಮುಂದುವರೆಸುವ ಸಾಧ್ಯತೆಯಿದೆ. ಅದರಂತೆ ಪೃಥ್ವಿ ಶಾ ಅವರಿಗೆ ಮತ್ತೊಂದು ಚಾನ್ಸ್ ನೀಡುವ ಸಾಧ್ಯತೆ ಜಾಸ್ತಿ ಇದೆ. ಅಲ್ಲದೆ ಸರಣಿ ವಶಪಡಿಸಿಕೊಂಡ ಬಳಿಕ ಯುವ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ.

2ನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ: ಶಿಖರ್ ಧವನ್ (ನಾಯಕ) , ಪೃಥ್ವಿ ಶಾ , ಇಶಾನ್ ಕಿಶನ್ (ವಿಕೆಟ್ ಕೀಪರ್) , ಸೂರ್ಯಕುಮಾರ್ ಯಾದವ್ , ಸಂಜು ಸ್ಯಾಮ್ಸನ್ , ಹಾರ್ದಿಕ್ ಪಾಂಡ್ಯ , ಕೃನಾಲ್ ಪಾಂಡ್ಯ , ದೀಪಕ್ ಚಹರ್ , ಭುವನೇಶ್ವರ್ ಕುಮಾರ್ , ಯುಜ್ವೇಂದ್ರ ಚಹಲ್ , ವರುಣ್ ಚಕ್ರವರ್ತಿ

ಟೀಮ್ ಇಂಡಿಯಾ ಸಂಪೂರ್ಣ ತಂಡ: ಶಿಖರ್ ಧವನ್ (ನಾಯಕ) , ಪೃಥ್ವಿ ಶಾ , ಇಶಾನ್ ಕಿಶನ್ (ವಿಕೆಟ್ ಕೀಪರ್) , ಸೂರ್ಯಕುಮಾರ್ ಯಾದವ್ , ಸಂಜು ಸ್ಯಾಮ್ಸನ್ , ಹಾರ್ದಿಕ್ ಪಾಂಡ್ಯ , ಕ್ರುನಾಲ್ ಪಾಂಡ್ಯ , ದೀಪಕ್ ಚಹರ್ , ಭುವನೇಶ್ವರ್ ಕುಮಾರ್ , ಯುಜ್ವೇಂದ್ರ ಚಹಲ್ , ವರುಣ್ ಚಕ್ರವರ್ತಿ, ಮನೀಶ್ ಪಾಂಡೆ , ರಾಹುಲ್ ಚಹರ್ , ಕುಲದೀಪ್ ಯಾದವ್ , ಕೃಷ್ಣಪ್ಪ ಗೌತಮ್ , ನಿತೀಶ್ ರಾಣಾ , ನವದೀಪ್ ಸೈನಿ , ರುತುರಾಜ್ ಗಾಯಕ್ವಾಡ್ , ದೇವದತ್ ಪಡಿಕ್ಕಲ್ , ಚೇತನ್ ಸಕರಿಯಾ

ಇದನ್ನೂ ಓದಿ: Viral Story: ಟ್ರಾಫಿಕ್​ ಪೊಲೀಸ್​ ಮನೆಯಲ್ಲಿ ಚಿನ್ನದ ಟಾಯ್ಲೆಟ್

ಇದನ್ನೂ ಓದಿ: ಈವರೆಗೆ ಟೀಮ್ ಇಂಡಿಯಾ ಪರ ಎಷ್ಟು ಮಂದಿ ಆಡಿದ್ದಾರೆ ಗೊತ್ತಾ?

(Sri Lanka vs India 2nd T20: India’s Predicted Playing XI for 2nd T20I)

ತಾಜಾ ಸುದ್ದಿ

Related Stories

Click on your DTH Provider to Add TV9 Kannada