AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಬಂಗಾಳ ಪರ ಆಡಲು ಇನ್ಮುಂದೆ ಬಂಗಾಳಿ ಕಲಿಯಲೇಬೇಕು: ಖಡಕ್ ಸೂಚನೆ ನೀಡಿದ ಟೀಮ್ ಇಂಡಿಯಾ ಮಾಜಿ ಆಟಗಾರ

Laxmi Ratan Shukla: ಕೋಚ್ ಅವರ ಈ ಕಠಿಣ ನಿರ್ಧಾರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಕಠಿಣ ನಿರ್ಧಾರದಿಂದ ರಾಜ್ಯದ ಆಟಗಾರರಿಗೆ ಅವಕಾಶ ದೊರೆಯಲಿದೆ.

ಪಶ್ಚಿಮ ಬಂಗಾಳ ಪರ ಆಡಲು ಇನ್ಮುಂದೆ ಬಂಗಾಳಿ ಕಲಿಯಲೇಬೇಕು: ಖಡಕ್ ಸೂಚನೆ ನೀಡಿದ ಟೀಮ್ ಇಂಡಿಯಾ ಮಾಜಿ ಆಟಗಾರ
sourav ganguly,Laxmi Ratan Shukla
TV9 Web
| Updated By: ಝಾಹಿರ್ ಯೂಸುಫ್|

Updated on: Jul 26, 2021 | 9:06 PM

Share

ಟೀಮ್ ಇಂಡಿಯಾ (Team India)  ಮಾಜಿ ಆಟಗಾರ, ಪಶ್ಚಿಮ ಬಂಗಾಳ ಅಂಡರ್ 23 ತಂಡದ ಕೋಚ್ ಲಕ್ಷ್ಮಿ ರತನ್ ಶುಕ್ಲಾ ತಮ್ಮ ರಾಜ್ಯದ ಕಿರಿಯ ಕ್ರಿಕೆಟರುಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. 23 ವರ್ಷದೊಳಗಿನ ತರಬೇತುದಾರರಾಗಿ ಹೊಸ ಇನ್ನಿಂಗ್ಸ್ ಅನ್ನು ಆರಂಭಿಸಿರುವ ಲಕ್ಷ್ಮಿ ರತನ್ ಶುಕ್ಲಾ, ತಂಡದಲ್ಲಿ ಇರಬೇಕಾದರೆ ಬಂಗಾಳಿ ಭಾಷೆಯನ್ನು ಕಲಿಯಲೇಬೇಕು ಎಂದು ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ ತಂಡದಲ್ಲಿರುವ ಆಟಗಾರರು ಉದ್ದ ಕೂದಲನ್ನು ಕತ್ತರಿಸಿ ಶಿಸ್ತುಬದ್ಧರಾಗಿರಬೇಕು ಎಂದು ಸೂಚಿಸಿದ್ದಾರೆ.

ಬಂಗಾಳ ಅಂಡರ್ 19 ತಂಡದ ನೂತನ ಕೋಚ್ ಆಗಿ ಆಯ್ಕೆಯಾಗಿರುವ ಲಕ್ಷ್ಮಿ ರತನ್ ಶುಕ್ಲಾ ತಮ್ಮ ಮೊದಲ ಕ್ಯಾಂಪ್​ನಲ್ಲೇ ಯುವ ಆಟಗಾರರಿಗೆ ಶಿಸ್ತಿನ ಪಾಠ ಹೇಳಿಕೊಟ್ಟಿದ್ದಾರೆ. 4 ಗಂಟೆಗಳ ಕಾಲ ನಡೆದ ಈ ಶಿಬಿರದಲ್ಲಿ 60 ಯುವ ಕ್ರಿಕೆಟಿಗರು ಭಾಗವಹಿಸಿದ್ದರು. ಈ ಕ್ರಿಕೆಟಿಗರನ್ನು ಗುಂಪುಗಳಾಗಿ ವಿಂಗಡಿಸಲಾಯಿತು. ಆ ಬಳಿಕ ಮಾತನಾಡಿದ ಲಕ್ಷ್ಮಿ ರತನ್ ಶುಕ್ಲಾ ‘ಉದ್ದ ಕೂದಲು ಹೊಂದಿರುವ ಆಟಗಾರರು ತಕ್ಷಣ ಕೂದಲನ್ನು ಕತ್ತರಿಸಬೇಕಾಗುತ್ತದೆ. ಹಾಗೆಯೇ ತಂಡದ ಒಗ್ಗಟ್ಟಿಗಾಗಿ ಪ್ರತಿಯೊಬ್ಬರು ಬಂಗಾಳಿ ಭಾಷೆ ಕಲಿಯಬೇಕು. ಸೋಷಿಯಲ್ ಮೀಡಿಯಾದಿಂದ ದೂರ ಉಳಿಯುವುದು ಉತ್ತಮ ಎಂದು ಕಿವಿಮಾತು ಹೇಳಿದ್ದಾರೆ.

ಕಿರಿಯ ಆಟಗಾರರ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕಿದ್ದರೆ ಈಗಲೇ ಅವರನ್ನು ಶಿಸ್ತುಬದ್ಧವಾಗಿ ರೂಪಿಸಬೇಕು. ಈ ವಯಸ್ಸಿನಲ್ಲಿ ಅವರನ್ನು ಉತ್ತಮ ಆಟಗಾರರಾಗಿ ರೂಪಿಸುವುದು ಬಹಳ ಮುಖ್ಯ. ಅದಕ್ಕಾಗಿಯೇ ನಾನು ಕಿರಿಯ ಆಟಗಾರರೊಂದಿಗೆ ಕೆಲಸ ಮಾಡಲು ನಿರ್ಧರಿಸಿದ್ದೇನೆ” ಎಂದು ಶುಕ್ಲಾ ಹೇಳಿದ್ದಾರೆ.

ಇದೀಗ ತಂಡದಲ್ಲಿರುವ ಆಟಗಾರರು ಬಂಗಾಳಿ ಭಾಷೆ ಕಲಿಯಲೇಬೇಕು ಎಂದು ಆದೇಶ ಹೊರಡಿಸುವ ಮೂಲಕ ಲಕ್ಷ್ಮೀ ರತನ್ ಶುಕ್ಲಾ ಗಮನ ಸೆಳೆದಿದ್ದಾರೆ. ಕೋಚ್ ಅವರ ಈ ಕಠಿಣ ನಿರ್ಧಾರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಕಠಿಣ ನಿರ್ಧಾರದಿಂದ ರಾಜ್ಯದ ಆಟಗಾರರಿಗೆ ಅವಕಾಶ ದೊರೆಯಲಿದೆ. ಹಾಗೆಯೇ ನಮ್ಮ ಭಾಷೆಯನ್ನು ಪ್ರೀತಿಸುವವರೇ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಲಕ್ಷ್ಮಿ ರತನ್ ಶುಕ್ಲಾ ಟೀಮ್ ಇಂಡಿಯಾ ಪರ 3 ಪಂದ್ಯಗಳನ್ನಾಡಿದ್ದಾರೆ. ಇನ್ನು ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಶುಕ್ಲಾ 47 ಪಂದ್ಯಗಳಿಂದ 405 ರನ್ ಹಾಗೂ 15 ವಿಕೆಟ್ ಪಡೆದಿದ್ದರು. ಲಕ್ಷ್ಮೀ ರತನ್ ಶುಕ್ಲಾ ಅವರು ಸೌರವ್ ಗಂಗೂಲಿ ನಾಯಕತ್ವದಲ್ಲಿ ಬಂಗಾಳ ಪರ ರಣಜಿ ಆಡಿದ್ದರು, ಹಾಗೆಯೇ ಐಪಿಎಲ್​ನಲ್ಲೂ ದಾದಾ ಕ್ಯಾಪ್ಟನ್ಸಿಯಲ್ಲಿ ಕೆಕೆಆರ್​ ಪರ ಕಣಕ್ಕಿಳಿದಿದ್ದರು.

ಇದನ್ನೂ ಓದಿ: ಬಾಲ ನಟಿಯಾಗಿ ಮಿಂಚಿದ್ದ ಚೆಂದುಳ್ಳಿ ಚೆಲುವೆ ಅನಿಕಾ ಈಗ ಹೇಗಿದ್ದಾರೆ ಗೊತ್ತಾ?

ಇದನ್ನೂ ಓದಿ: ಐಫೋನ್ 12 ಮೇಲೆ ಭರ್ಜರಿ ಆಫರ್: 12 ಸಾವಿರ ರೂ. ಕಡಿಮೆಗೆ ಖರೀದಿಸಬಹುದು

(West Bengal U-23 coach Laxmi Ratan Shukla sets strict rules for players)